Author: admin

ನಟ ದಿವಂಗತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರು ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿರುವ ಗಂಧದ ಗುಡಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಗಂಧದ ಗುಡಿ ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಪುನೀತ್‌ ರಾಜ್‌ ಕುಮಾರ್‌ ಅವರನ್ನು ತೆರೆಯ ಮೇಲೆ ಕಂಡ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. ಗಂಧದಗುಡಿ ಚಿತ್ರದ ಕುರಿತು ಪ್ರತಿಕ್ರಿಯಿಸಿರುವ ನಟ ಶಿವರಾಜ್ ಕುಮಾರ್, ಬೇರೆ ಸಿನಿಮಾ ನೋಡೋಕು ಇದನ್ನ ನೋಡೋಕು ವ್ಯತ್ಯಾಸವಿದೆ. ತುಂಬಾ ಕಷ್ಟ ಆಗುತ್ತಿದೆ. ಗಂಧದಗುಡಿಯ ಗಂಧ ನಮ್ಮ ಫ್ಯಾಮಿಲಿಗೆ ತುಂಬಾ ಹತ್ತಿರ ಇದೆ. ಈ ಸಿನಿಮಾವನ್ನ ಪ್ರತಿಯೊಬ್ಬರು ನೋಡಲೇಬೇಕು ಎಂದಿದ್ದಾರೆ. ಹಾಗೆಯೇ ಗಂಧದಗುಡಿ ನೋಡುವಾಗ ಅಪ್ಪುವನ್ನ ಕಂಡರೇ ನೋವಾಗುತ್ತೆ. ಗಂಧದಗುಡಿ ಮೂಲಕ ಅಪ್ಪು ಸದಾ ಜೀವಂತವಾಗಿರುತ್ತಾನೆ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ರಾಜ್ಯದಲ್ಲಿ ಸಾರಿಗೆ ಬಸ್ ದರ ಹೆಚ್ಚಳ‌ ಪ್ರಸ್ತಾಪವಿಲ್ಲ. ಸದ್ಯಕ್ಕೆ ಸಾರಿಗೆ ಬಸ್ ದರ ಹೆಚ್ಚಳ‌ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಬಸ್ಸುಗಳ ನಿಯೋಜನೆ ಮಾಡಲು ಆದ್ಯತೆ ನೀಡಲಾಗಿದೆ. ಎಲೆಕ್ಟ್ರಿಕ್ ಬಸ್ಸುಗಳನ್ನು ಸೇವೆಗೆ ಸಮರ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು. ಹಾಗೆಯೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶ್ರೀರಾಮುಲು, ಕಾಂಗ್ರೆಸ್ಸಿನಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಿಲ್ಲ, ಸಿಗುವುದೂ ಇಲ್ಲ. ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ವೇಳೆ ಕಾಡುಗೊಲ್ಲ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ರಾಹುಲ್ ಗಾಂಧಿ ಭೇಟಿ ಮಾಡಿ, ಸಂವಾದಕ್ಕೆ ಮುಂದಾಗಿದ್ದ ಕಾಡುಗೊಲ್ಲರಿಗೆ ತಡೆಯೊಡ್ಡಲಾಗಿದೆ. ಕಾಡುಗೊಲ್ಲರು ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಅಡ್ಡಿಪಡಿಸಲಾಗಿದೆ. ಇದು ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ವಿರೋಧಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮುಂಬೈ : ಹುಡುಗಿಯನ್ನು ಐಟಂ ಎಂದು ಕರೆಯುವುದು ಅವಹೇಳನಕಾರಿಯಾಗಿದ್ದು, ಇದು ಆಕೆಯನ್ನು ಲೈಂಗಿಕವಾಗಿ ಗುರಿಯಾಗಿಸಿ ಅಪಮಾನ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಂಬೈ ವಿಶೇಷ ಕೋರ್ಟ್ ಅಭಿಪ್ರಾಯಪಟ್ಟಿದೆ. ಪ್ರಕರಣ ಒಂದರ ವಿಚಾರಣೆ ವೇಳೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಜೆ.ಅನ್ಸಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಾಲಕಿಗೆ ಕಿರುಕುಳ ನೀಡಿದ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. 2015ರ ಜುಲೈ 14ರಂದು ಮುಂಬೈ ಹೊರವಲಯದಲ್ಲಿ ಯುವಕನೊಬ್ಬ ಹದಿನಾರು ವರ್ಷದ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಆಕೆಗೆ ಐಟಂ ಎಂದು ಕರೆದಿದ್ದಲ್ಲದೆ ಜಡೆಯನ್ನು ಹಿಡಿದು ಎಳೆದಾಡಿ, ಅಪಮಾನ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ವಿಶೇಷ ನ್ಯಾಯಾಲಯದಲ್ಲಿ ಸುಧೀರ್ಘಕಾಲ ವಿಚಾರಣೆ ನಡೆದು ಈಗ ತೀರ್ಪು ಹೊರಬಿದ್ದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಉತ್ತರಪ್ರದೇಶ : ಮನೆಯಲ್ಲಿ ಟೀ ಕುಡಿದು ತೀವ್ರ ಅಸ್ವಸ್ಥಗೊಂಡು ಇಬ್ಬರು ಮಕ್ಕಳು ಸೇರಿ ಐವರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ನಾಗ್ಲಾ ಕನ್ಹೈ ಗ್ರಾಮದಲ್ಲಿ ನಡೆದಿದೆ. ಶಿವಾನಂದನ್ (35), ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ರವೀಂದ್ರ ಸಿಂಗ್, ಶಿವಾಂಗ್ ಮತ್ತು ದಿವಾನ್ಶ್ ಮೃತಪಟ್ಟಿದ್ದರು. ಸೊಬ್ರಾನ್ ಮತ್ತು ಶಿವಾನಂದನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅಲ್ಲಿಯೂ ಇಬ್ಬರೂ ಸಾವನ್ನಪ್ಪಿದರು. ಶಿವಾನಂದನ ಪತ್ನಿ ಭತ್ತದ ಬೆಳೆಗೆ ಸಿಂಪಡಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ್ದಾರೆ. ಇದನ್ನು ಕುಡಿದ ಐವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಪ್ರಸಕ್ತ 2022-23 ನೇ ಸಾಲಿಗೆ ಇಲಾಖೆಯ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆಯಡಿ ಜಿಲ್ಲೆಯ ದೈಹಿಕ ವಿಕಲಚೇತನರಿಂದ ಸೌಲಭ್ಯಕ್ಕಾಗಿ ಶೇಕಡಾ 75 ಅಥವಾ ಹೆಚ್ಚಿನ ಅಂಗವಿಕಲತೆ ಪ್ರಮಾಣ ಹೊಂದಿರುವ ಕನಿಷ್ಠ 20 ವರ್ಷ ಗರಿಷ್ಠ 60 ವರ್ಷ ವಯೋಮಿತಿಗೊಳಪಟ್ಟ ವಿಕಲಚೇತನ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿರುತ್ತದೆ. ದೈಹಿಕ ವಿಕಲಚೇತನರು ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ದ್ವಿ ಪ್ರತಿಯಲ್ಲಿ ಈ ಕೆಳಕಾಣ ಸಿದ ಅಗತ್ಯ ದಾಖಲಾತಿಗಳೊಂದಿಗೆ ದಿನಾಂಕ:-25-11-2022ರ ವರೆಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ತಾಲೂಕಿನ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ (ಎಂ.ಆರ್.ಡಬ್ಲ್ಯೂ.)ರನ್ನು ಅಥವಾ ಕಛೇರಿ ದೂರವಾಣ ಸಂಖ್ಯೆ: 0831-2476097ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಬೆಳಗಾವಿಯ ಇಎಸ್‍ಐಸಿ ಆಸ್ಪತ್ರೆಯ ಕಟ್ಟಡದ ಶಿಥಿಲಾವ್ಯವಸ್ಥೆಯನ್ನು ಪರಿಗಣ ಸಿ, ಕಾರ್ಮಿಕರ ಹಿತದೃಷ್ಠಿಯಿಂದ ಬೆಳಗಾವಿಯಲ್ಲಿ 100 ಹಾಸಿಗೆಗಳ ಇಎಸ್‍ಐಸಿ ಆಸ್ಪತ್ರೆ ನಿರ್ಮಿಸಲು ಅರ್ಹತೆ ಹೊಂದಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಭೂಪೇಂದರ್ ಯಾದವ್ ಅವರು ಪತ್ರದ ಮೂಲಕ ಉತ್ತರ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ. ಕಳೆದ ತಿಂಗಳು ಆಗಸ್ಟ್ 4 ರಂದು ರಾಜ್ಯಸಭೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬೆಳಗಾವಿಯಲ್ಲಿ 100 ಹಾಸಿಗೆಗಳ ಹೊಸ ಆಸ್ಪತ್ರೆಯ ನಿರ್ಮಾಣದ ಕುರಿತು ಪ್ರಸ್ತಾಪಿಸಲಾಗಿತ್ತು. ಅದಕ್ಕೆ ಸಚಿವರು ಪತ್ರದ ಮೂಲಕ ಉತ್ತರ ನೀಡುವುದಾಗಿ ತಿಳಿಸಿದ್ದರು. ಆ ಹಿನ್ನಲೆಯಲ್ಲಿ 94,636 ಕಾರ್ಮಿಕರು ಕಾರ್ಮಿಕ ವಿಮಾ ನಿಗಮದಡಿ ನೊಂದಣ ಯಾಗಿದ್ದಾರೆ. ಇಎಸ್‍ಐಸಿ ಮಾನದಂಡಗಳ ಆಧಾರದ ಮೇಲೆ ಬೆಳಗಾವಿಯಲ್ಲಿ 100 ಹಾಸಿಗೆಗಳ ಇಎಸ್‍ಐಸಿ ಸ್ಥಾಪಿಸಲು ಅರ್ಹತೆ ಹೊಂದಿದೆ ಎಂದು ಆಸ್ಪತ್ರೆಯ ನಿರ್ಮಾಣಕ್ಕೆ ಪೂರಕವಾಗಿ ಸಕಾರಾತ್ಮಕವಾಗಿ ಕೇಂದ್ರ ಸಚಿವರು ಉತ್ತರ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ. ಕರ್ನಾಟಕದ ಬೆಂಗಳೂರಿನಲ್ಲಿ ಎರಡು, ಕಲಬುರಗಿಯಲ್ಲಿ…

Read More

ಮೈಸೂರು: ಮೇಲ್ಜಾತಿಯಲ್ಲಿರುವವರು ಮೀಸಲಾತಿಗೆ ಅರ್ಹರಲ್ಲ, ಅವರಿಗೆ 10% ಮೀಸಲಾತಿ ಕೊಟ್ಟಿದ್ದಾರೆ ಅದು ಸರಿನಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲೆಯ ಹೆಚ್​​.ಡಿ.ಕೋಟೆಯಲ್ಲಿ ನಡೆದ ವಿಶ್ವಕರ್ಮ ಸಮುದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಹಿಂದುಳಿದಿದ್ದಾರೋ ಅವರಿಗೆ ಮಾತ್ರ ಮೀಸಲಾತಿ ಸಿಗಬೇಕು. ಯಾವ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಹೇಳಿ. ಬಸವಣ್ಣ ಅನುಭವ ಮಂಟಪ ಮಾಡಿ ಸಮಾನ ಅವಕಾಶ ಕೊಟ್ಟರು. ಅದಕ್ಕಾಗಿ ನಾವು ಬಸವಣ್ಣರಿಗೆ ಗೌರವ ಕೊಡುತ್ತೇವೆ. ಜಾತಿ ವ್ಯವಸ್ಥೆ ಇರಬಾರದು ಎಲ್ಲರೂ ಮನುಷ್ಯರಾಗಿ ಬದುಕಬೇಕು. ಅಧಿಕಾರ ಸಮಾನವಾಗಿ ಹಂಚಿಕೆಯಾದ್ರೆ ಜಾತಿ ವ್ಯವಸ್ಥೆ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಬಾವಿಯಲ್ಲಿ ನೀರು ಸೇದಲು ಹೋಗುತ್ತಿದ್ದೆ. ಬಾವಿ ಕಸವನ್ನು ಪಕಕ್ಕೆ ತಳ್ಳಿ ನೀರು ಸೇದುತ್ತೇವೆ. ಮತ್ತೆ ಕಸ ಸೇರಿಕೊಳ್ಳುತ್ತದೆ. ಇದೇ ರೀತಿ ಸದ್ಯ ಸಮಾಜ ಆಗಿದೆ. ರಘು ಆಚಾರ ಆರ್ಥಿಕವಾಗಿ ಸಬಲರಾದ ಕಾರಣ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುತ್ತಾನೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ಬೆಳಗಾವಿ: ಊಟ ಮಾಡಿ ಮಲಗಿದ್ದ ಪತ್ನಿಯನ್ನು ಕುಡಿದ ನಶೆಯಲ್ಲಿ ಗಂಡ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ. ಯಲ್ಲವ್ವ ಹಾರೂಗೇರಿ (55) ಮೃತ ದುರ್ದೈವಿ. ಪಾಂಡುರಂಗ ಹಾರೂಗೇರಿ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆ. ಮಹಿಳೆ ಊಟ ಮಾಡಿ ಮಲಗಿದ್ದಾಗ ಮಚ್ಚಿನಿಂದ ಕೊಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಡಲಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಸರಗೂರು : ಸಚಿವ ವಿ.ಸೋಮಣ್ಣ ಮಹಿಳೆಯ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷರಾದ ಮರಿದೇವಯ್ಯ ಎಸ್. ನೇತೃತ್ವದಲ್ಲಿ ಹೆಗ್ಗಡದೇವನ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಪಂಜಿನ ಮೆರವಣಿಗೆ ನಡೆಸಿದರು ಸಂಶೋಧನ ಸಂಘದ ರಾಜ್ಯ ಅಧ್ಯಕ್ಷರಾದ ಮರಿದೇವಯ್ಯ ಮಾತನಾಡಿ, ಶನಿವಾರ ಚಾಮರಾಜನಗರ ಗುಂಡ್ಲುಪೇಟೆಯ ಅಂಗಾರ ಗ್ರಾಮದಲ್ಲಿ ಸಹಾಯ ಕೇಳಲು ಬಂದ ಅಸಹಾಯಕ ದಲಿತ ಮಹಿಳೆಯ ಮೇಲೆ ಹಲ್ಲೆ ಮಾಡಿ ಅವಮಾನ ಮಾಡಿರುವ ಸಚಿವ ಸೋಮಣ್ಣ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದೆ ಮುಖ್ಯಮಂತ್ರಿಗಳು ಸೋಮಣ್ಣನನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ ಕೂಡಲೇ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಸುಮೊಟೊ ಕೇಸ್ ದಾಖಲಿಸಬೇಕು ಹಾಗೂ ನ್ಯಾಯಾಂಗ ತನಿಖೆ ಮಾಡಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಪುರಸಭೆಯ ಸದಸ್ಯರಾದ ಪ್ರೇಮ್ ಸಾಗರ್, ಜೀವಿಕ ರಾಜ್ಯ ಸಂಚಾಲಕರಾದ ಡಾ.ಉಮೇಶ, ಸ್ಟುಡಿಯೋ ಮಧುಸೂದನ್, ಮಹಾನಾಯಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಾನವೀಯಾಕರ್, ಯುವ ಮುಖಂಡ ಅವಿನಾಶ್, ಕೊಹಳ ಬಸವರಾಜು,…

Read More

ತುಮಕೂರು: ಯುಜಿಸಿ ‌ಆದೇಶದ ಮೇರೆಗೆ ಮೈಸೂರು ಮುಕ್ತ ವಿವಿಯ ಜುಲೈ ಆವೃತ್ತಿ ಪ್ರವೇಶಾತಿ ಅಂತಿಮ ದಿನಾಂಕವನ್ನು ಅಕ್ಟೋಬರ್ 31 ಬದಲಾಗಿ ನವೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರಥಮ ವರ್ಷದ ಪ್ರವೇಶಾತಿ ಅಂತಿಮ ಹಂತದಲ್ಲಿದ್ದು ಯುಜಿಸಿ ‌ಆದೇಶದ ಮೇರೆಗೆ ಅಕ್ಟೋಬರ್ 31 ಬದಲಾಗಿ ನವೆಂಬರ್ 15ರ ವರೆಗೆ ಪ್ರವೇಶಾತಿ ಮಾಡಿಕೊಳ್ಳಲಾಗುವುದು. “ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಕೆಎಸ್ ‌ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಶಯ ಎಲ್ಲಾರಿಗೂ ಎಲ್ಲೆಡೆ ಶಿಕ್ಷಣ ಎಂಬುದು, ಅದರ ಅನ್ವಯ ಕೆಲಸದ ಜೊತೆ ಶಿಕ್ಷಣ ಪಡೆಯಬೇಕೆಂಬ ಆಸೆಯಿರುವ ವ್ಯಕ್ತಿಗಳಿಗೆ ಅನುಕೂಲಕರವಾಗುವಂತೆ ಕೆಲಸದ ನಡುವೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗದಿರುವವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಪದವಿಗಳನ್ನು ಪಡೆದುಕೊಳ್ಳಬಹುದು. ಯುಜಿಸಿ ನಿಯಮಾವಳಿ…

Read More