Subscribe to Updates
Get the latest creative news from FooBar about art, design and business.
- ಸರಗೂರು | ಪಟ್ಟಣ ಪಂಚಾಯತ್ ಜೆಡಿಎಸ್ ಸದಸ್ಯೆ ಕಾಂಗ್ರೆಸ್ ಗೆ ಸೇರ್ಪಡೆ
- ಕಸಬಾ ವಿಎಸ್ ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಗುಂಡಿನಪಾಳ್ಯ ಜಿ.ಸಿ.ರಮೇಶ್ ಅವಿರೋಧ ಆಯ್ಕೆ
- ಕರ್ತವ್ಯ ಲೋಪ: ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ, ಕಾಡುಪ್ರಾಣಿಗಳ ಹಾವಳಿ ತಡೆಗೆ ಡಿಎಸ್ ಎಸ್ ಒತ್ತಾಯ
- ಚನ್ನಗುಂಡಿ ಕಾಲೋನಿಯ ಆಶ್ರಮ ಶಾಲೆ ಪದವಿ ಪೂರ್ವ ಶಿಕ್ಷಣದವರೆಗೆ ಮೇಲ್ದರ್ಜೆಗೆ ಏರಿಸಲಾಗಿದೆ: ಶಾಸಕ ಅನಿಲ್ ಚಿಕ್ಕಮಾದು
- ವಿದ್ಯಾರ್ಥಿಗಳಿಗೆ ಶಿಕ್ಷಕರು ಹೃದಯವಂತಿಕೆಯಿಂದ ಶಿಕ್ಷಣ ನೀಡಬೇಕು: ಬಿ.ಅಬ್ದುಲ್ ರಹಮಾನ್
- ಕಪಿಲ ನದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ: ಶಾಸಕ ಅನಿಲ್ ಚಿಕ್ಕಮಾದು
- ಕಣ್ಣಿನ ಉಚಿತ ತಪಾಸಣಾ ಶಿಬಿರ: ಸರಿಯಾದ ಸಮಯಕ್ಕೆ ಕಣ್ಣು ತಪಾಸಣೆ ಅಗತ್ಯ: ಮುರುಳಿಧರ ಹಾಲಪ್ಪ
- ಲಂಚಕ್ಕೆ ಕೈಯೊಡ್ಡಿದ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತರ ಬಲೆಗೆ!
Author: admin
ಮನೆಗಳು ಜಲಾವೃತಗೊಳ್ಳುತ್ತಿದ್ದು, ಇದರಿಂದಾಗಿ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗುವ ಭೀತಿ ಎದುರಿಸುತ್ತಿದ್ದಾರೆ. ಹುಳಿಯಾರು ಕೆರೆ ಕೋಡಿ ಬೀಳಲು ಕ್ಷಣ ಗಣನೆ ಆರಂಭವಾಗಿದ್ದು, ಕೆರೆ ಕೋಡಿ ಹರಿದರೆ ಇಲ್ಲಿನ ಜನರ ಬದುಕು ಸಂಕಷ್ಟಕ್ಕೆ ಸಿಲುಕಲಿದೆ. ಹುಳಿಯಾರು ಕೆರೆ ಅಂಗಳದಲ್ಲಿ ಮನೆಯ ಕಟ್ಟಿ ಜೀವನ ಸಾಗಿಸುತ್ತಿರುವವರಿಗೆ ಕಳೆದ ಎರಡು ದಶಕಗಳಿಂದಲೂ ಈ ರೀತಿಯ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು, ಮಳೆಯಿಂದ ಹುಳಿಯಾರು ಕೆರೆ ತುಂಬಿದಂತೆಲ್ಲ, ಕೆರೆ ಅಂಗಳದಲ್ಲಿರುವ ಮನೆಗಳೆಲ್ಲ ಜಲಾವೃತಗೊಳ್ಳುತ್ತಿದೆ. ದಿನೇ ದಿನೇ ಜಲಾವೃತಗೊಳ್ಳುತ್ತಿರುವ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಾಗದೆ, ಸ್ಥಳಾಂತರಗೊಳ್ಳಲು ಬೇರೆಡೆ ಸ್ಥಳವು ಇಲ್ಲದೆ, ಕೆರೆ ಅಂಗಳದ ನಿವಾಸಿಗಳ ಬದುಕು ಮೂರಾ ಬಟ್ಟೆಯಾಗಿದೆ. ಸರ್ಕಾರ ಕೂಡಲೇ ಇಲ್ಲಿನ ಎಲ್ಲಾ ನಿರಾಶ್ರಿತರಿಗೂ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಲಿ ಎಂಬುದು ಇಲ್ಲಿನ ನಿರಾಶ್ರಿತರ ಒತ್ತಾಯವಾಗಿದೆ. ವರದಿ: ಮಂಜುಸ್ವಾಮಿ ಎಂ.ಎನ್., ತುಮಕೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ತಮ್ಮದಲ್ಲದ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿ ಹಣ ಪಡೆದು ವಂಚಿಸಿದ‍್ಧ ಆರು ಮಂದಿ ವಿರುದ್ಧ ನಗರದ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಎ.1 ಪುಟ್ಟಬುದ್ಧಿ, ಎ.2 ಪುಷ್ಪ, ಎ. 3 ಲಿಂಗಣ್ಣ, ಎ.4 ಮಹದೇವ ಮತ್ತು ಇವರಿಗೆ ಸಹಕರಿಸಿದ ಮುಡಾ ಅಧಿಕಾರಿ ಹರ್ಷವರ್ಧನ್ ಹಾಗೂ ವಕೀಲ ರಾಜೇಶ್ .ಎಂ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 73/20,22ರ ಪ್ರಕಾರ ಭಾರತೀಯ ದಂಡಸಂಹಿತೆ 416, 419,420, ಹಾಗೂ 406ರಡಿ ಪ್ರಕರಣ ದಾಖಲಾಗಿದೆ. ಕೆಂಪಮ್ಮ ಎಂಬುವವರ ಜಮೀನಿಗೆ ನಕಲಿ ದಾಖಲೆ ಸೃಷ್ಠಿಸಿ ಆರೋಪಿಗಳು ಮುಡಾದಿಂದ 98,33,862 ರೂ. ಹಣವನ್ನ ಪಡೆದು ವಂಚಿಸಿದ್ದರು. ಈ ಸಂಬಂಧ ಕೆಂಪಮ್ಮ ದೂರು ನೀಡಿದ್ದರು. ಈ ನಡುವೆ 1ನೇ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಅಶೋಕಪುರಂ ಪೊಲೀಸ್ ಠಾಣೆಗೆ ಸೂಚನೆ ನೀಡಿತ್ತು. ಅದರಂತೆ ಇದೀಗ ಪ್ರಕರಣ…
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇಂದ್ರ ಹವಾಮಾನ ಇಲಾಖೆ ಬೆಂಗಳೂರಿನಲ್ಲಿ 3 ದಿನ ಯೆಲ್ಲೋ ಅಲರ್ಟ್ ಘೋಷಿಸಿದೆ. ಇದರಿಂದ ಬೆಂಗಳೂರಿನ ತಗ್ಗು ಪ್ರದೇಶದ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವಾರು ಬಡಾವಣೆಗಳಿಗೆ ನೀರು ನುಗ್ಗಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು. ಐಟಿ ಹಬ್ ಆಗಿರುವ ಬೆಳ್ಳಂದೂರಿನಲ್ಲಿ ಮನೆಗಳು ಹಾಗೂ ಅಪಾರ್ಟ್ ಮೆಂಟ್ ಗಳಿಗೆ ನೀರು ನುಗ್ಗಿದ್ದು, ಹಲವು ಕಾರುಗಳು ಮುಳುಗಿವೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮನೆಯಲ್ಲಿ ಮಟನ್ ಅಡುಗೆ ಮಾಡುವ ವಿಷಯದಲ್ಲಿ ಆರಂಭವಾದ ಗಂಡ-ಹೆಂಡತಿ ಜಗಳ ಪಕ್ಕದ ಮನೆಯವನ ಕೊಲೆಯಲ್ಲಿ ಅಂತ್ಯವಾದ ವಿಚಿತ್ರ ಘಟನೆ ಮಧ್ಯಪ್ರದೇಶದ ರಾಜಧಾನಿ ಭೂಪಾಲ್ ನಲ್ಲಿ ನಡೆದಿದೆ. ಮಂಗಳವಾರ ಮಾಂಸಹಾರ ಅಡುಗೆ ಮಾಡಬಾರದು ಎಂದು ಪತ್ನಿ ವಾದ ಮಾಡುತ್ತಿದ್ದರೆ, ಗಂಡ ಮಟನ್ ಸಾರು ಮಾಡು ಎಂದು ಪಟ್ಟು ಹಿಡಿದಿದ್ದ. ಈ ವಿಷಯದಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿದ್ದರಿಂದ ನೆರೆಮನೆಯಾದ ಜಗಳ ಬಿಡಿಸಲು ಬಂದಿದ್ದಾನೆ. ಆದರೆ ಕೊನೆಗೆ ಆತನೇ ಬಲಿಯಾಗಿದ್ದಾನೆ. ಹಿಂದೂ ಸಂಪ್ರದಾಯದ ಪ್ರಕಾರ ಹಲವರು ಮಂಗಳವಾರ ಮಂಗಳಕರ ದಿನವೆಂದು ಪರಿಗಣಿಸುತ್ತಾರೆ. ಹೀಗಾಗಿ ಕೆಲವರು ಅಂದು ಮಾಂಸಾಹಾರವನ್ನು ಸೇವಿಸುವುದಿಲ್ಲ. ಈ ಹಿನ್ನೆಲೆ ಮಹಿಳೆ ತನ್ನ ಪತಿಗೆ ಮಾಂಸಾಹಾರ ಮಾಡುವುದು ಬೇಡ ಎಂದು ವಾದಿಸಿದ್ದಾಳೆ. ಇದರಿಂದ ಕೋಪಗೊಂಡ ಪಪ್ಪು ಜಗಳ ಪ್ರಾರಂಭಿಸಿದ್ದಾನೆ. ಗಲಾಟೆ ಕೇಳಿದ ಪಕ್ಕದ ಮನೆಯ ಬಿಲ್ಲು ಎಂಬಾತ ಜಗಳವನ್ನು ಬಿಡಿಸಲು ಹೋಗಿ, ಸಮಸ್ಯೆಯನ್ನು ಇತ್ಯರ್ಥವೇನೋ ಮಾಡಿ ವಾಪಾಸ್ ತನ್ನ ಮನೆಗೆ ಬಂದಿದ್ದಾನೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಪಪ್ಪು ಬಿಲ್ಲುವಿನ ಮನೆಗೆ ಹೋಗಿ ಬಿಲ್ಲುವನ್ನುಹೊಡೆದು…
ಗುರುರಾಯರ ಸನ್ನಿಧಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿಗೆ ಹಣದ ಹರಿವು ಹರಿದು ಬಂದಿದ್ದು, ಸುಮಾರು ಒಂದು ತಿಂಗಳಲ್ಲಿ ಸುಮಾರು 2 ಕೋಟಿ ರೂ. ಸಂಗ್ರಹವಾಗಿ ದಾಖಲೆ ಬರೆದಿದೆ. ಅಕ್ಟೋಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 1,98,17,614 ರೂ. ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 4,40,660 ರೂ. ನಾಣ್ಯಗಳು ಹಾಗೂ 1,93,77,054 ರೂ. ನೋಟುಗಳಿವೆ. ಜೊತೆಗೆ 128 ಗ್ರಾಂ ಬಂಗಾರ, 810 ಗ್ರಾಂ ಬೆಳ್ಳಿ ವಸ್ತುಗಳು ಸಿಕ್ಕಿವೆ. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 18ರವರೆಗಿನ 20 ದಿನಗಳ ಕಾಣಿಕೆ ಸಂಗ್ರವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಮಠಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ, ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಎಣಿಕೆ ಕಾರ್ಯ ಮುಕ್ತಾಯವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…
ಜನಪ್ರಿಯರಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ೨೩ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಬಿಲ್ಡರ್ಸ್ ಜಿಮ್ ಕಟ್ಟಡದ ೨೩ನೇ ಮಹಡಿಯಿಂದ ಹಾರಿ ೫೭ ವರ್ಷದ ಪಾರಸ್ ಪೊರ್ವಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಚಿಂಚೊಪ್ಕೊಳಿ ರೈಲ್ವೆ ನಿಲ್ದಾಣದ ಬಳಿಯ ಶಾಂತಿ ಕಮಲ್ ಹೌಸಿಂಗ್ ಸೊಸೈಟಿ ಕಟ್ಟಡದ ಜಿಮ್ ನ ಬಾಲ್ಕನಿಯಿಂದ ಹಾರಿ ಪಾರಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವೆಂಬರ್ 11 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಂದು ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಚಾಲನೆ ದೊರೆಯಿತು. ಇಂದಿನಿಂದ ನವೆಂಬರ್ 7 ರವರೆಗೆ ರಾಜ್ಯಾದ್ಯಂತ ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ ನಡೆಯಲಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಕೆಲವರು ಕೆಂಪೇಗೌಡರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರೇನು ಚಕ್ರವರ್ತಿನಾ ಅವರಿಗ್ಯಾಕೆ ಅಷ್ಟು ಮಹತ್ವ ಅಂತಾರೆ . ಕೆಂಪೇಗೌಡರು ಎಷ್ಟು ದೊಡ್ಡವರು ಅನ್ನೋದು ಮುಖ್ಯ ಅಲ್ಲ. ಅವರು ಎಂತಹ ಕೆಲಸ ಮಾಡಿದ್ದಾರೆ ಅನ್ನೋದು ಮುಖ್ಯ. ಕೆಂಪೇಗೌಡರಿಂದ ಈ ಬೆಂಗಳೂರು ಸೃಷ್ಠಿಯಾಗಿರುವುದು. ಹಲವು ಸರ್ಕಾರ ಬಂದು ಹೋದರೂ ಕೆಂಪೇಗೌಡರಿಗೆ ಗೌರವ ಸಿಕ್ಕಿಲ್ಲ. ಬಿಎಸ್ ವೈ ಮತ್ತು ಸಿಎಂ ಬೊಮ್ಮಾಯಿ ಕೆಂಪೇಗೌಡರಿಗೆ ಗೌರವ ಸೂಚಿಸಿದ್ದಾರೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಜೆಡಿಎಸ್ ಜೊತೆ ಮುನಿಸಿಕೊಂಡು ಪಕ್ಷದ ತೊರೆಯಲು ಮುಂದಾಗಿದ್ಧ ಶಾಸಕ ಜಿಟಿ ದೇವೇಗೌಡರನ್ನ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಖುದ್ಧು ಅಖಾಡಕ್ಕಿಳಿದು ಮನವೊಲಿಸಿದ್ದಾರೆ. ಈ ಮಧ್ಯೆ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನಡೆಸಿದ ಸಂದಾನ ಯಶ್ವಸಿಯಾಗಿದ್ದು ಜಿಟಿ ದೇವೇಗೌಡರು ಜೆಡಿಎಸ್ ನಲ್ಲೇ ಉಳಿದಿದ್ದಾರೆ. ಇನ್ನೂ ಮೈಸೂರು ಚುನಾವಣಾ ಉಸ್ತುವಾರಿಯನ್ನ ಜಿ.ಟಿ ದೇವೇಗೌಡರಿಗೆ ನೀಡಲಾಗಿದೆ. ಈ ನಡುವೆ ಇಂದು ಚಾಮುಂಡಿ ಬೆಟ್ಟದಲ್ಲಿ ಶಾಸಕ ಜಿ.ಟಿ ದೇವೇಗೌಡರು ಮೈಸೂರು ಭಾಗದ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜಿಟಿ ದೇವೇಗೌಡರು, ಹುಣಸೂರು ಕ್ಷೇತ್ರದಿಂದ ಹರೀಶ್ ಗೌಡ, ಕೆಆರ್ ನಗರ ಶಾಸಕ ಸಾ.ರಾ ಮಹೇಶ್. ಪಿರಿಯಾಪಟ್ಟಣ ಕೆ.ಮಹದೇವ್ , ಟಿ.ನರಸೀಪುರದಿಂದ ಅಶ್ವಿನ್, ಹೆಚ್.ಡಿ ಕೋಟೆಯಿಂದ ಜಯಪ್ರಕಾಶ್ ಸ್ಪರ್ಧೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಮೈಸೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಏಕಕಾಲದಲ್ಲಿ ಏಳು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿಯಾಗಿದೆ. ಸಣ್ಣ ನೀರಾವರಿ ಇಲಾಖೆ ಜೆಇ ರಫೀಕ್ ಮನೆ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಮೂರು ಕಡೆಗಳಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ರಫೀಕ್ ಮಡಿಕೇರಿಯ ಸಣ್ಣ ನೀರಾವರಿ ಇಲಾಖೆಯಲ್ಲಿ ಜೆಇ ಆಗಿದ್ದಾರೆ. ಮಡಿಕೇರಿ ಪಿಡಬ್ಲ್ಯೂಡಿ ಇಇ ನಾಗರಾಜ್ ಮನೆ ಮೇಲೂ ದಾಳಿಯಾಗಿದ್ದು, ಮೈಸೂರಿನಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಪೊಲಿಸರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೆಯೇ ಕುಶಾಲನಗರ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಮನೆ ಮೇಲೂ ದಾಳಿಯಾಗಿದೆ. ಇನ್ಸ್ ಪೆಕ್ಟರ್ ಮಹೇಶ್ ಇಂಟೆಲಿಜೆನ್ಸಿ ವಿಭಾಗಕ್ಕೆ ವರ್ಗಾವಾದರೂ ಹೋಗದೆ ಇದ್ದರು ಎನ್ನಲಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ನೇತೃತ್ವದಲ್ಲಿ ದಾಳಿಯಾಗಿದ್ದು, ಡಿವೈಎಸ್ ಪಿ ಮಾಲತೇಶ್, ಪವನ್, ಸಣ್ಣ ತಮ್ಮಪ್ಪ ಒಡೆಯರ್, ಕೃಣ್ಣಯ್ಯ ನಾಲ್ವರು ಡಿವೈಎಸ್ ಪಿ ಇನ್ಸ್ ಪೆಕ್ಟರ್ ಲೋಕೇಶ್ವರ, ರವಿಕುಮಾರ್, ಶಶಿಕುಮಾರ್, ಉಮೇಶ್, ಜಯರತ್ನ,…
ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಡಿವೈಸ್ನ ಪರಿಸರ ವ್ಯವಸ್ಥೆಯ ಮಾರುಕಟ್ಟೆಗಳಲ್ಲಿ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಟೆಕ್ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ಸ್ಪರ್ಧಾ ಆಯೋಗವು 1,337.76 ಕೋಟಿ ರೂಪಾಯಿಗಳ ದಂಡ ವಿಧಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸ್ಪರ್ಧಾ ಆಯೋಗ , ಗೂಗಲ್ ಪ್ಲೇ ಸ್ಟೋರ್ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ ಮತ್ತು ಆಂಟಿ ಫ್ರಾಗ್ಮೆಂಟೇಶನ್ ಅಗ್ರಿಮೆಂಟ್ ಉಲ್ಲಂಘನೆಗಾಗಿ ದಂಡ ಹಾಕಲಾಗಿದೆ. ಜೊತೆಗೆ, ಗೂಗಲ್ ತನ್ನ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಿಸಿಕೊಳ್ಳುವಂತೆಯೂ ಸೂಚಿಸಿದೆ. ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ ಅಡಿಯಲ್ಲಿ ಗೂಗಲ್ ಮೊಬೈಲ್ ಸೂಟ್ ಅನ್ನು ಕಡ್ಡಾಯವಾಗಿ ಮೊದಲೇ ಇನ್ಸ್ಟಾಲ್ ಮಾಡಬೇಕು. ಅದನ್ನು ಅನ್-ಇನ್ಸ್ಟಾಲ್ ಮಾಡಲು ಯಾವುದೇ ಆಯ್ಕೆಯಿಲ್ಲ. ಆದರೆ, ಸ್ಪರ್ಧಾ ಕಾನೂನನ್ನು ಗೂಗಲ್ ಉಲ್ಲಂಘಿಸುತ್ತಿದೆ ಎಂದು ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz