Author: admin

ಧಾರವಾಡ, ಸೆಪ್ಟೆಂಬರ್‌, 19: ಮಹಾಮಾರಿ ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಕೃಷಿ ಮೇಳ ನಿಂತು ಹೋಗಿತ್ತು. ಇದೀಗ ಪ್ರತಿಷ್ಠಿತ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಕೃಷಿ ಮೇಳವನ್ನು ಸೆಪ್ಟೆಂಬ 17ರಿಂದ ಆರಂಭಿಸಿದೆ. ಸೆಪ್ಟೆಂಬರ್‌ 20ರವರೆಗೆ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಅದ್ಧೂರಿಯಾಗಿ ಈ ಮೇಳ ನಡೆಯಲಿದೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ದೀಪ ಬೆಳಗುವುದರ ಮೂಲಕ‌ ನಾಲ್ಕು ದಿನಗಳವರೆಗೆ ನಡೆಯುವ ಈ ವರ್ಷದ ಕೃಷಿ ಮೇಳಕ್ಕೆ ಚಾಲನೆ ನೀಡಿದ್ದರು. ‘ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆಗಳು’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಲಾಗಿದ್ದು, ಬೀಜ ಮೇಳದ ಮೂಲಕ ರೈತರ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಕಳೆದ 2-3 ವರ್ಷಗಳಿಂದ ನೆರೆ ಹಾವಳಿ, ಕೋವಿಡ್‌ ಹೊಡೆತದಿಂದ ರದ್ದಾಗಿದ್ದ ಕೃಷಿ ಮೇಳಕ್ಕೆ ಈ ಬಾರಿ ಮತ್ತೆ ಕಳೆ ಬಂದಂತಾಗಿದೆ. ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮಳಿಗೆಗಳು ಕಂಗೊಳಿಸುತ್ತಿವೆ. ನಾಲ್ಕು ದಿನಗಳವರೆಗೂ ನಡೆಯುವ ಈ ಮೇಳದಲ್ಲಿ ಸುಮಾರು 10 ಲಕ್ಷ ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಕೃಷಿ ಹಾಗೂ ಕೃಷಿ ಪೂರಕ…

Read More

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಪಡೆದ ಮೇಲೂ ಸಚಿವ ಸ್ಥಾನ ಸಿಗದಿದ್ದಕ್ಕೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇರವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕ್ಲೀನ್ ಚಿಟ್ ಸಿಕ್ಕಿದರೂ ಮಂತ್ರಿಗಿರಿ ಸಿಗದಿದ್ದಕ್ಕೆ ಅಸಮಾಧಾನವಿದೆ. ಹೀಗಾಗಿ ನಾನು ಸದನಕ್ಕೆ ಹೋಗುತ್ತಿಲ್ಲ. ಮುಚ್ಚುಮರೆ ಇಲ್ಲದೇ ಹೇಳತ್ತೀನಿ ಎಂದರು. ಸಂಪುಟಕ್ಕೆ ಸೇರಿಸಿಕೊಳ್ಳುವುದು ಬಿಡುವುದು ಕೇಂದ್ರದ ನಾಯಕರಿಗೆ ಬಿಟ್ಟಿದ್ದು ನನಗೆ ಕ್ಲೀನ್ ಚಿಟ್ ನೀಡಿದ ಮೇಲೂ ಸಚಿವ ಸ್ಥಾನ ನೀಡಲು ವಿಳಂಬವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ : ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಪತ್ತೆಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದಿದೆ. ಹೊಸೂರ ಗ್ರಾಮದ ಪಾಂಡಪ್ಪ ದುಂಡಪ್ಪ ಜಟಕನ್ನವರ (35)ವರ್ಷದ ಮೃತದೇಹ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಅಪಘಾತ ಎಂಬ ರೀತಿ ಬಿಂಬಿಸಲು ಯತ್ನಿಸಿದ ಶಂಕೆ ವ್ಯಕ್ತವಾಗಿದೆ.ಹೊಸೂರ ಫೂಲ್ ಬಳಿ ಶವ ಬಿಸಾಕಿ ಹೋಗಿರುವ ದುಷ್ಕರ್ಮಿಗಳು ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ. ಕಟಕೋಳ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು,ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಾಮದುರ್ಗ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತಿರುವನಂತಪುರಂ, ಸೆ. 19: ಲಾಟರಿ ಟಿಕೆಟ್ ಖರೀದಿಸಲು 500 ರೂಪಾಯಿ ಕೂಡಿಟಿದ್ದ ತನ್ನ ಮಗನ ಪಿಗ್ಗಿ ಬಾಕ್ಸ್ ಅನ್ನು ಒಡೆದಿದ್ದ ಕೇರಳದ 30 ವರ್ಷದ ಆಟೋ ರಿಕ್ಷಾ ಚಾಲಕ, 25 ಕೋಟಿ ರೂಪಾಯಿಯ ಓಣಂ ಬಂಪರ್ ಲಾಟರಿಯನ್ನು ಗೆದ್ದಿದ್ದಾರೆ. ರಾಜಧಾನಿ ತಿರುವನಂತಪುರಂನ ಗೋರ್ಕಿ ಭವನದಲ್ಲಿ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ವಿಜೇತ ಸಂಖ್ಯೆಯನ್ನು ರಾಜ್ಯ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಆಯ್ಕೆ ಮಾಡಿದರು. “ಆರಂಭದಲ್ಲಿ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಹೆಂಡತಿಗೆ ಎರಡು ಬಾರಿ ಪರೀಕ್ಷಿಸಲು ಕೇಳಿದೆ. ನನ್ನ ನಂಬರ್ ಟಿಜೆ-750605 ಪ್ರಥಮ ಬಹುಮಾನ ಪಡೆದಿದೆ” ಎಂದು ರಾಜಧಾನಿಯ ಶ್ರೀವರಾಹಂ ನಿವಾಸಿ ಕೆ ಅನೂಪ್ ಹೇಳಿದ್ದಾರೆ.ಶನಿವಾರ ರಾತ್ರಿ ಪಜವಂಗಡಿ ಗಣಪತಿ ದೇವಸ್ಥಾನದ ಬಳಿಯ ತಮ್ಮ ಸಂಬಂಧಿಕರೊಬ್ಬರ ಲಾಟರಿ ಸ್ಟಾಲ್‌ನಿಂದ ಆಟೋ ಚಾಲಕ ಕೆ ಅನೂಪ್ ಟಿಕೆಟ್ ಖರೀದಿಸಿದ್ದಾರೆ. “ನನಗೆ ಹಣದ ಕೊರತೆ ಇತ್ತು. ಅದು ನನ್ನ ಮಗನ ಪಿಗ್ಗಿ ಬಾಕ್ಸ್‌ನಿಂದ ಹಣ ತೆಗೆದುಕೊಳ್ಳುವಂತೆ ಮಾಡಿತ್ತು. ಈ ಮೊತ್ತವನ್ನು…

Read More

ಬೆಂಗಳೂರು, ಸೆಪ್ಟೆಂಬರ್ 19: ಪ್ರೀತಿ ಹುಟ್ಟುವುದು ನಂಬಿಕೆಯ ಮೇಲೆಯೇ. ಪ್ರೀತಿಸುವ ಮುಗ್ದ ಮನಸ್ಸುಗಳನ್ನು ಒಬ್ಬರನ್ನೊಬ್ಬರ ನಂಬಿಕೆಯನ್ನಿಟ್ಟು ವಿಶ್ವಾಸವನ್ನು ಹೊಂದಿದ ಮೇಲೆಯ ಪ್ರೀತಿಯ ಹಾದಿಯಲ್ಲಿ ಸಲುಗೆ ಅನ್ನೋದು ಬೆಳೆಯುತ್ತೆ. ಸಲುಗೆ ಬೆಳೆಸಿದ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಅಶ್ಲೀಲ ವಿಡಿಯೋ ಸೆರೆಹಿಡಿದು ಇನ್ಸ್ಟಾದಲ್ಲಿ ಹಾಕಿದ್ದಕ್ಕೆ ಕೊಲೆಯಾಗಿದ್ದಾನೆ. ಪ್ರೀತಿಸಿದ್ದ ಹುಡುಗಿಯ ಮಾನವನ್ನು ಕಾಪಾಡಬೇಕಾಗಿದ್ದು ಪ್ರಿಯಕರನ ಕರ್ತವ್ಯ ಆಗಿರುತ್ತದೆ. ಆದರೆ ಪ್ರೀತಿಸಿದಾಕೆಯ ಅಶ್ಲೀಲ ಫೋಟೋಗಳನ್ನು ಮತ್ತು ವಿಡಿಯೋವನ್ನು ತೆಗೆದುಕೊಂಡಿದ್ದ ಪ್ರಿಯಕರ ಆಕೆಯ ಫೋಟೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿ ವಿಕೃತವಾದ ಆನಂದವನ್ನು ಹೊಂದಿದ್ದ. ಇದರಿಂದ ಪ್ರಿಯಕರನ ಜೊತೆಗೆ ಪ್ರೇಯಸಿ ಜಗಳವನ್ನುಆಡಿದ್ದಳು. ಪ್ರಿಯಕರನ ಕೃತ್ಯದಿಂದ ಬೇಸತ್ತಿದ್ದ ಪ್ರಿಯತಮೆ ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರನನ್ನು ಹತ್ಯೆಗೈದಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟಿನಲ್ಲಿ ನಡೆದಿದೆ. ತನ್ನ ಪ್ರೇಯಸಿಯ ಅಶ್ಲೀಲ ಫೋಟೋವನ್ನು ಇನ್ಸ್ಟಾದಲ್ಲಿ ಹಾಕಿದ್ದ ತಪ್ಪಿಗೆ ಪ್ರೇಯಸಿ ಮತ್ತು ಆಕೆಯ ಸ್ನೇಹಿತರಿಂದ ಡಾ.ವಿಕಾಸ್ ಎಂಬಾತ ಕೊಲೆಯಾಗಿದ್ದಾನೆ. ಪ್ರತಿಭಾ,ಸುಶೀಲ್, ಗೌತಮ್ ಮತ್ತು ಸೂರ್ಯ ಕೊಲೆಗೈದಿರುವ ಆರೋಪಿಗಳಾಗಿದ್ದು. ಮೂವರನ್ನು ಪೊಲೀಸರು…

Read More

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಬಿಡಿಎ ವಸತಿ ಯೋಜನೆ ಕಾಮಗಾರಿಗೆ ಗುತ್ತಿಗೆ ನೀಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈ ಕುರಿತು ನಗರದಲ್ಲಿ ಮಾತನಾಡಿದ ಬಿ. ಎಸ್ ಯಡಿಯೂರಪ್ಪ ಅವರು,ನನಗೆ ನ್ಯಾಯಾಂಗದ ಮೇಲೆ ತುಂಬಾ ವಿಶ್ವಾಸವಿದೆ. ಆದರೆ ನಾನು ಏನು ತಪ್ಪು ಮಾಡಿಲ್ಲ. ಹೀಗಾಗಿ ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಹಾಗೂ ಸಚಿವ ಸೋಮಶೇಖರ್, ಶಶಿಧರ್ ಮುರಳಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಂ ಹಾಗೂ ವಿರೂಪಾಕ್ಷಪ್ಪ ಯಮಕನಮರಡಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಕೋರ್ಟ್‌ ನಲ್ಲಿ ವಿಚಾರಣೆ ನಡೆಯಲಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್…

Read More

ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ದಾಖಲೆ ನೀಡಿದೆ ಇರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ 50 ಕೋಟಿ. ರೂ ಮಾನನಷ್ಟ ಮೊಕದ್ಧಮೆ ಹಾಕುತ್ತೇನೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಮುನಿರತ್ನ, 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದಾರೆ. 1 ವರ್ಷದಿಂದ ಆರೋಪ ಮಾಡುತ್ತಿದ್ದಾರೆ. ಸಿಎಂ ಕರೆದು ಮಾತನಾಡಿದರು. ಇತ್ತೀಚೆಗೆ ಸಿದ್ಧರಾಮಯ್ಯ ಮನೆಗೆ ಹೋಗಿ ಆರೋಪ ಮಾಡಿದ್ಧರು. ಲೋಕಾಯುಕ್ತಗೆ ದಾಖಲೆ ಕೊಡಿ ಎಂದಿದ್ದೇನೆ ಕೆಂಪಣ್ಣ ಎಲ್ಲಿಯೂ ದಾಖಲೆ ನೀಡಿಲ್ಲ. ಕೆಂಪಣ್ಣ ದಾಖಲೆ ಇದ್ದರೇ ಕೊಡಬೇಕು ಇಲ್ಲದಿದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ನವರ ಬಳಿ ಯಾವುದೇ ದಾಖಲೆ ಇಲ್ಲ.ಸದನದಲ್ಲಿ ಸಿದ್ಧರಾಮಯ್ಯ ದಾಖಲೆ ಇಟ್ಟುಕೊಂಡು ಮಾತನಾಡಿಲಿ. ಕೆಂಪಣ್ಣ ಆರೋಪದಿಂದ ನಮಗೆ ಕೆಟ್ಟ ಹೆಸರು ಬಂದಿದೆ. ಕೋ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದೇವೆ ಎಂದು ಸಚಿವ ಮುನಿರತ್ನ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಲಂಡನ್‌, ಸೆ.19: ಬ್ರಿಟನ್‌ನ ದೀರ್ಘಾವಧಿಯ ರಾಣಿಯಾಗಿದ್ದ ರಾಣಿ ಎರಡನೇ ಎಲಿಜಬೆತ್ ಅಂತ್ಯಕ್ರಿಯೆ ಸೋಮವಾರ ವೆಸ್ಟ್‌ಮಿನಿಸ್ಟರ್ ಅಬ್ಬೆಯಲ್ಲಿ ಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆಸಲಾಗುತ್ತದೆ. ರಾಣಿಯ ಉತ್ತರಾಧಿಕಾರಿ, ಆಕೆಯ ಮಗ ಕಿಂಗ್ ಚಾರ್ಲ್ಸ್ III ರ ಆಶಯಕ್ಕೆ ಅನುಗುಣವಾಗಿ, ಅಂತ್ಯಕ್ರಿಯೆಯ ನಂತರ ಒಂದು ವಾರದವರೆಗೆ ಸಾರ್ವಜನಿಕ ಶೋಕಾಚರಣೆಯು ದೇಶಾದ್ಯಂತ ಮುಂದುವರಿಯುತ್ತದೆ. ಅಂತ್ಯಕ್ರಿಯೆಯು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಿ ಒಂದು ಗಂಟೆಯವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. 1965 ರಲ್ಲಿ ರಾಣಿ ಎಲಿಜಬೆತ್ ಅವರ ಮೊದಲ ಪ್ರಧಾನ ಮಂತ್ರಿ ವಿನ್‌ಸ್ಟನ್ ಚರ್ಚಿಲ್ ಅವರ ಮರಣದ ನಂತರ, ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಒಂದು ಗಂಟೆ ಅವಧಿಯ ಅಂತ್ಯಕ್ರಿಯೆ ಸೋಮವಾರ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆಯಲ್ಲಿ ನಡೆಯಲಿದೆ. ವಿಶ್ವ ನಾಯಕರು, ಬ್ರಿಟನ್‌ನ ರಾಜಮನೆತನ, ರಾಜಮನೆತನದ ರಾಜಕೀಯ ಗಣ್ಯರು ಮತ್ತು ಮಿಲಿಟರಿ, ನ್ಯಾಯಾಂಗ ಮತ್ತು ದತ್ತಿ ಸಂಸ್ಥೆಗಳ ಸದಸ್ಯರನ್ನು ರಾಜ್ಯ ಅಂತ್ಯಕ್ರಿಯೆಯಲ್ಲಿ ಸೇರುತ್ತಾರೆ.ಬ್ರಿಟನ್‌ನಾದ್ಯಂತ ಸುಮಾರು 125 ಚಿತ್ರಮಂದಿರಗಳಲ್ಲಿ ಅಂತ್ಯಕ್ರಿಯೆಯನ್ನು ಪ್ರದರ್ಶಿಸಲಾಗುವುದು. ಜೊತೆಗೆ ಉದ್ಯಾನವನಗಳು, ಚೌಕಗಳು ಮತ್ತು ಕ್ಯಾಥೆಡ್ರಲ್‌ಗಳು ಕೂಡ ಅಂತ್ಯಕ್ರಿಯೆ ವೀಕ್ಷಿಸಲು ಬೃಹತ್…

Read More

ಬೆಂಗಳೂರು: ಈ ವರ್ಷದಿಂದಲೇ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆ ಭೋದನೆ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ. ಈ ವಿಚಾರವಾಗಿ ವಿಧಾನ ಪರಿಷತ್‌ ಕಲಾಪದಲ್ಲಿ ಸದಸ್ಯ ಎಂ.ಕೆ.ಪ್ರಾಣೇಶ್ ಧ್ವನಿ ಎತ್ತಿದ್ದರು.ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಮೊದಲು ಇದ್ದ ಆಸಕ್ತಿ ಈಗ ಯಾಕೆ ಇಲ್ಲ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಶಿಕ್ಷಣ ಸಚಿವರು ಉತ್ತರಿಸಿ, ಈ ವರ್ಷದಿಂದಲೇ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy  

Read More

ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್’ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಅಕ್ಟೋಬರ್ ನಲ್ಲಿ ಎಲ್ಲ ಪ್ರಕರಣಗಳ ಚಾರ್ಜ್ ಶೀಟ್ ಆಗುತ್ತದೆ ಐಜಿಪಿ ಪ್ರವೀನ್ ಸೂದ್ ಮಾಹಿತಿ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣ ಸಂಬಂಧದ ಎಲ್ಲ ಪ್ರಕರಣಗಳು ಅಕ್ಟೋಬರ್ ನಲ್ಲಿ ಚಾರ್ಜ್ ಶೀಟ್ ಆಗುತ್ತದೆ. ಆ ನಂತರ ಮರು ಪರೀಕ್ಷೆ ದಿನಾಂಕ ಅನೌನ್ಸ್ ಮಾಡುತ್ತೇವೆ. ಪ್ರಕರಣ ದಾಖಲಾಗಿ 90 ದಿನಗಳಲ್ಲಿ ಚಾರ್ಜ್ ಶೀಟ್ ಆಗಬೇಕು ಆನಂತರ ಪರೀಕ್ಷೆ ದಿನಾಂಕ ಘೋಷಣೆ ಮಾಡುತ್ತೇವೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More