Author: admin

ಬಾಗಲಕೋಟೆ : ಮಕ್ಕಳ ಕಳ್ಳರೆಂದು ಭಾವಿಸಿ ಜನರು ಕಾರು ಬೆನ್ನತ್ತಿದ್ದು, ತಪ್ಪಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾದ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ. ಮಕ್ಕಳ ಕಳ್ಳರೆಂದು ಭಾವಿಸಿ ಜನರು ಕಾರೊಂದನ್ನು ಬೆನ್ನತ್ತಿದ್ದಾರೆ. ಈ ವೇಳೆ ಭಯಗೊಂಡ ಕಾರಿನವರು ತಪ್ಪಿಸಿಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಬೀಳಗಿಯಿಂದ ಗ್ರಾಮದ ಜನರು ಬೈಕ್ ​​ನಲ್ಲಿ ಕಾರು ಬೆನ್ನತ್ತಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವಾಗ ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದೆ. ಘಟನೆಯಲ್ಲಿ ದೇವರಾಜ ಭಾರತಿ, ಜಯದೀಪ ಜಗದಾಳೆ, ಮೊಹಮ್ಮದ್​ ಇಲಿಯಾಸ್​ಗೆ ಗಾಯಗಳಾಗಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮೊಹಾಲಿ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಟ್ಟು 60 ವಿದ್ಯಾರ್ಥಿನಿಯರು ಸ್ನಾನದ ವಿಡಿಯೋಗಳು ಹರಿದಾಡುತ್ತಿದೆ ಎನ್ನಲಾಗಿದೆ. ಆಘಾತಕಾರಿ ಸಂಗತಿ ಎಂದರೆ ಈ ವಿಡಿಯೋಗಳನ್ನು ಅದೇ ಹಾಸ್ಟೆಲ್ ನ ವಿದ್ಯಾರ್ಥಿನಿ ವಿಡಿಯೋ ಮಾಡಿ ತನ್ನ ಸ್ನೇಹಿತಿಗೆ ಕಳುಹಿಸಿದ್ದಾರೆ. ವಿಡಿಯೊಗಳನ್ನು ಶೇರ್‌ ಮಾಡಿದ್ದ ಸಹ ವಿದ್ಯಾರ್ಥಿನಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿಯರ ವಿಡಿಯೊಗಳನ್ನು ಚಿತ್ರೀಕರಿಸಿದ್ದ ಆಕೆ, ಶಿಮ್ಲಾದಲ್ಲಿರುವ ಯುವಕನಿಗೆ ಕಳುಹಿಸಿದ್ದರು. ಆತ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ ಲೋಡ್ ಮಾಡಿದ್ದ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಯಿಂದ ಮನನೊಂದು 8 ಜನ ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದ್ರೇ ಈ ಬಗ್ಗೆ ಮಾತನಾಡಿರುವ ಮೊಹಾಲಿ ಎಸ್ ಬಂಧಿತ ವಿದ್ಯಾರ್ಥಿನಿ ಬೇರೆ ಯಾವ ವಿದ್ಯಾರ್ಥಿನಿಯರ ವಿಡಿಯೋಗಳನ್ನು ಮಾಡಿಲ್ಲ, ತನ್ನದೇ ವಿಡಿಯೋ ಮಾಡಿ ಸ್ನೇಹಿತನಿಗೆ ಕಳುಹಿಸಿದ್ಧಾಳೆ ಎಂದು ಹೇಳಿದ್ದಾರೆ. ಇದು ಸೂಕ್ಷ್ಮ ವಿಚಾರವಾಗಿದೆ. ನಮ್ಮ ಸಹೋದರಿಯರು ಮತ್ತು…

Read More

ಕೊರಟಗೆರೆ: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧಿ ಮಳಿಗೆಯು ಕೇವಲ ನೆಪಮಾತ್ರಕ್ಕೆ ಇದ್ದಂತಾಗಿದ್ದು, ಬಡ ಜನರಿಗೆ ಸಿಗಬೇಕಾದ ಔಷಧಿಗಳು ಸಿಗದೇ ಮೂರು ತಿಂಗಳಿಂದ ಬಂದ್ ಆಗಿದ್ದು, ಸಾರ್ವಜನಿಕರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಜನೌಷಧಿ ಮಳಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹು ದೊಡ್ಡ ಯೋಜನೆಯಾಗಿದ್ದು, ಜನರಿಗೆ ಸಹಾಯಕವಾಗಿತ್ತು. ಇದೀಗ ಜನೌಷಧಿ ಕೇಂದ್ರ 3 ತಿಂಗಳುಗಳಿಂದ ಮುಚ್ಚಿರುವುದರಿಂದ ಬಡ ಜನರು ದುಬಾರಿ ಹಣ ನೀಡಿ ಖಾಸಗಿ ಔಷಧಿ ಮಳಿಗೆಗಳಿಂದ ಔಷಧಿ ಖರೀದಿಸುವಂತಾಗಿದೆ. ಈ ಕುರಿತಾಗಿ ಸಂಬಂಧ ಪಟ್ಟ ಎಂಎಸ್ ಐಎಲ್ ಅಧಿಕಾರಿಗಳನ್ನು ಕೇಳಿದರೆ, ಬಿ ಫಾರ್ಮ್, ಡಿ ಫಾರ್ಮ್ ಮಾಡಿರುವ ವಿದ್ಯಾರ್ಥಿಗಳು ನಮಗೆ ಸಿಗುತ್ತಿಲ್ಲ ಎಂದು ಉಡಾಫೆ ಉತ್ತರ ಹೇಳುತ್ತಿದ್ದಾರೆ.  ತಮಗೂ ಅದಕ್ಕೂ ಸಂಬಂಧವೇ ಎನ್ನುವಂತಹ ಮನಸ್ಥಿತಿಯನ್ನು ಅಧಿಕಾರಿಗಳು ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಎಂಎಸ್ ಐಎಲ್ ಗುತ್ತಿಗೆದಾರ ಡಿ ಎಲ್ ಓ ಮಂಜುನಾಥ್ ಈ ಬಗ್ಗೆ ಪ್ರತಿಕ್ರಿಯಿಸಿ,  ಸುಮಾರು ಮೂರು ತಿಂಗಳಿಂದ ಮಳಿಗೆಯನ್ನು ಮುಚ್ಚಿದ್ದೇವೆ. ಫಾರ್ಮಸಿ…

Read More

ಕೊರಟಗೆರೆ: ಪ್ರತಿ ತಿಂಗಳ 3ನೇ ಶನಿವಾರದಂದು ಸರ್ಕಾರದ ಅದೇಶದಂತೆ ಆಯ್ದ ಗ್ರಾಮದಲ್ಲಿ ಗ್ರಾಮ ಸಭೆ ನಡೆಸಿ ಗ್ರಾಮಸ್ಥರಿಗೆ ಎಲ್ಲಾ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ವಿವಿಧ ಸವಲತ್ತು ಮತ್ತು ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು. ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ನವಿಲುಕುರಿಕೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು,  ನವಿಲುಕುರಿಕೆ ಗ್ರಾಮ ವಾಸ್ತವ್ಯದಲ್ಲಿ ತಾಲೂಕಿನ ಎಲ್ಲಾ ಇಲಾಖಾ ಅಧಿಕಾರಿಗಳು ಹಾಜರಾಗಿ, ಇಲಾಖೆಯ ವಿವಿಧ ಮಾಹಿತಿಗಳನ್ನು ಹಂಚಿಕೊಂಡು, ಜನರ ಸಮಸ್ಯೆಗಳು ಅಧಿಕಾರಿಗಳ ಮಟ್ಟದಲ್ಲೇ ಪರಿಹರಿಸಲು ಸಾಧ್ಯ ಇದ್ದರೆ ಇಲ್ಲೇ ಪರಿಹರಿಸಿಕೊಳ್ಳಬಹುದು. ದೊಡ್ಡ ಸಮಸ್ಯೆಗಳನ್ನು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಗೆ, ಶಾಸಕರಿಗೆ , ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು. ಚುನಾವಣೆಯಲ್ಲಿ ಮತ ಹಕ್ಕು ಪಡೆದಿರುವ ಜನರು ಈಗ ತಮ್ಮ ಅಧಾರ್ ಕಾರ್ಡ್ ಗೆ ಚುನಾವಣೆ ಗುರುತಿನ ಚೀಟಿಯನ್ನು ಲಿಂಕ್ ಮಾಡಲೇಬೇಕಿದೆ ಹಾಗೂ ಸರ್ಕಾರದ ಪಿಂಚಣಿದಾರರು ತಮ್ಮ ಪಿಂಚಣಿ ಆದೇಶ ಪತ್ರ, ಆಧಾರ್ ಮತ್ತು ಬ್ಯಾಂಕ್…

Read More

ಕೊರಟಗೆರೆ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀ ಗೌತಮ ಬುದ್ಧ ಸಾಮಾಜಿಕ-ಶೈಕ್ಷಣಿಕ-ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಭಾಷಾ ಕಲಿಕಾ ಶಿಬಿರವನ್ನು ಆಯೋಜಿಸಲಾಗಿತ್ತು. ಕೊಡಗೆ ತಾಲೂಕಿನ ಕಸ್ಬಾ ಹೋಬಳಿ ಮತ್ತು ಚೆನ್ನರಾಯನದುರ್ಗ ಹೋಬಳಿಯ ವ್ಯಾಪ್ತಿಯಲ್ಲಿ ಬರುವ ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಕಲಿಕಾ ಉತ್ತೇಜನದ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ವ್ಯವಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿಗಳು ಕನ್ನಡ ಭಾಷಾ ಕಲಿಕಾ ಶಿಬಿರದ ನೇತೃತ್ವ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಆರ್.ನಾಗರಾಜು , ಉಪನ್ಯಾಸಕರಾದ ನಂಜುಂಡಪ್ಪ ಸುಗ್ಗಯ್ಯ, ಡಾ. ರವಿಕುಮಾರ್, ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಗೌತಮ ಬುದ್ಧ ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ.ನಾಗರಾಜು ಎನ್. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕನ್ನಡ ಕೆಲವೊಂದಷ್ಟು ಪಾಠಗಳನ್ನು ಮಾಡುವುದರ ಮೂಲಕ ಕನ್ನಡ ಭಾಷೆಯ ಬಗ್ಗೆ ಅಭಿಮಾನ ತುಂಬುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ…

Read More

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ  ಮದರ್ ಡ್ರೀಮ್ಸ್  ರೂರಲ್ ಮತ್ತು ಅರ್ಬನ್ ಎಜುಕೇಶನ್ ಡೆವಲಮೆಂಟ್ ಸೊಸೈಟಿ ವತಿಯಿಂದ ಸರಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಉಚಿತ ಸಂಜೆ ಪಾಠ ಶಾಲೆ ಕಾರ್ಯಕ್ರಮವನ್ನು ಸುಳ್ಯ ತಾಲೂಕಿನ ಐವರ್ನಾಡಿನ ದೇವಕಾನ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ದೇವರಕಾನದಲ್ಲಿ ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ನವೀನ್ ಸಾರಕೇರೆ ಮಾತನಾಡಿ, ಸಂಸ್ಥೆಯ ಉದ್ದೇಶ ಮಕ್ಕಳ ಜೀವನವನ್ನು ರೂಪಿಸುವಲ್ಲಿ  ಬಹಳ ಯಶಸ್ವಿಯಾಗಲಿ ಎಂದು ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾರಾದ ಪ್ರಮೀಳಾ ಮಾತನಾಡಿ,  ಈ ಸಂಸ್ಥೆಯ ಯೋಜನೆಗೆ ಪೂರ್ಣ ಬೆಂಬಲ ವ್ಯಕ್ತಪಡಿಸಿದರು.  ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಮಹಾಂತೇಶ್ ಡಿ. ಮಾತನಾಡಿ ಎಪಿಜೆ ಅಬ್ದುಲ್ ಕಲಾಂ, ಕುವೆಂಪು, ಸ್ವಾಮಿ ವಿವೇಕಾನಂದರ ರೀತಿ ಮಕ್ಕಳು  ಬೆಳೆಯಲಿ ಎಂದು ಹಾರೈಸಿದರು. ಶಾಲಾ ಮಕ್ಕಳಾದ ಸುಪ್ರಿತಾ ಮತ್ತು ತಂಡದವರು ಓದುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.  ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರಾದ ಸೋಮಪ್ರಸಾದ್ ರೈ ಗೂಡಂಬೆ ಮರ್ಕಂಜ, ಚಂದ್ರಶೇಖರ ಕೆ.ಪಲ್ಲತ್ತಡ್ಕ, ಮಧುಸೂದನ…

Read More

ತಿಪಟೂರು: ತಾಲ್ಲೂಕಿನ ಹಾಲೇನಹಳ್ಳಿ ಗ್ರಾಮದಲ್ಲಿ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ.ವೈ.ಎಸ್ ಪಾಟೀಲ್ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಮಾತನಾಡಿ, ಸರ್ಕಾರಿ ಕೆಲಸಕ್ಕಿಂತ ಸ್ವಯಂ ಉದ್ಯೋಗ ಉತ್ತಮ. ಜ್ಞಾನಕ್ಕಾಗಿ ನಾವು ಓದಬೇಕು, ಸರ್ಕಾರಿ ಕೆಲಸ ಸಿಗುತ್ತದೆಂದು ಓದಿ ನಿರಾಶರಾಗದೇ ಸ್ವಂತ ಉದ್ಯಮ, ಕೃಷಿಯಲ್ಲಿ ತೊಡಗಿಸಿಕೊಂಡು ಸಮೃದ್ಧಿಹೊಂದಿ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಕರೆನೀಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಮಕ್ಕಳು ಅಭಿನಯ ಗೀತೆ ಹಾಡಿದ್ದು, ಎಲ್ಲರ ಕಣ್ಮನ ಸೆಳೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ ತಾಲ್ಲೂಕು ಉಪ ವಿಭಾಗಾಧಿಕಾರಿ ಕಲ್ಪಶ್ರೀ ತಹಶೀಲ್ದಾರ್ ಚಂದ್ರಶೇಖರ್ ನಗರಸಭೆ ಪೌರಾಯುಕ್ತ ಉಮಾಕಾಂತ್ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು  ಅಧಿಕಾರಿ ದಿನೇಶ್ ಮತ್ತಿತರರು ಭಾಗಿಯಾಗಿದ್ದರು .  ವರದಿ: ಆನಂದ್, ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದ್ದು, ಬಿಎಸ್ ವೈ ವಿರುದ್ಧ ಲೋಕಾಯುಕ್ತದಲ್ಲಿ ಎಫ್​ಐಆರ್​ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದ ಮೇರೆಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಂ, ಶಶಿಧರ ಮರಡಿ, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ವಿರುಪಾಕ್ಷಪ್ಪ, ಕೆ.ರವಿ ಅವರ ವಿರುದ್ಧ ಎಫ್​ಐಆರ್ ದಾಖಲಾಗಲಿದೆ. ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಗಳನ್ನು ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ನಗದು ಪಡೆದಿದ್ದಾರೆ. ಜೊತೆಗೆ ಶೆಲ್ ಕಂಪನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ಖಾಸಗಿ ದೂರು ದಾಖಲಿಸಿದ್ದರು. ಆದರೆ ರಾಜ್ಯಪಾಲರು ಪೂರ್ವಾನುಮತಿ ನೀಡದ ಕಾರಣ ಜನಪ್ರತಿನಿಧಗಳ ವಿಶೇಷ ನ್ಯಾಯಾಲಯ ದೂರನ್ನ ವಜಾಗೊಳಿಸಿತ್ತು. ಬಳಿಕ ಟಿ.ಜೆ.ಅಬ್ರಾಹಂ ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಎಫ್​​ಐಆರ್ ದಾಖಲಿಸಲು ಹೈಕೋರ್ಟ್ ಸೂಚಿಸಿತ್ತು.…

Read More

ಮೇಕೆದಾಟು ಪಾದಯಾತ್ರೆ ಇದೀಗ ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ನಾಯಕರು ಪಕ್ಷವನ್ನ ಸಂಘಟಿಸುತ್ತಿದ್ದು ಈ ಮಧ್ಯೆ ಕೆಲಸ ಮಾಡದ ಶಾಸರಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಶಾಸಕರು ಏನು ಮಾಡಬೇಕೆಂದು ಟಾರ್ಗೆಟ್ ನೀಡಲಾಗಿದೆ. ರಣದೀಪ್ ಸುರ್ಜೇವಾಲ ಟಾರ್ಗೆಟ್ ನೀಡಿದ್ದಾರೆ. ಕೆಲಸ ಮಾಡಿದವರಿಗೆ ಯಾಕ್ರಿ ಟಿಕೆಟ್..? ನನಗೆ ನಂಬರ್ ಬೇಕು ನಮ್ಮ ಸರ್ಕಾರ ಬರಬೇಕು. ಶಾಸಕರು ಕೇವಲ ಮದುವೆಗೆ ಅಟೆಂಡ್ ಆಗೋದಲ್ಲ. ಟೇಪ್ ಕಟ್ ಮಾಡಿಕೊಂಡು ಹೋದರೆ ಆಗಲ್ಲ. ಬೂತ್ ಮಟ್ಟದಲ್ಲಿ ಹೋಗ ಕೆಲಸ ಮಾಡಬೇಕು ಹಾಗೆಯೇ ಕೆಲಸ ಮಾಡಿದರೇ ಮಾತ್ರ ಪಕ್ಷ ಸಂಘಟನೆ ಆಗುತ್ತದೆ ಎಂದು ಡಿ.ಕೆ ಶಿವಕುಮಾರ್ ಶಾಸಕರಿಗೆ ಸಲಹೆ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಪಾಂಡವಪುರ ಚಂದ್ರೆ ಗ್ರಾಮದಲ್ಲಿ 35 ಅಡಿ ಆಳದ ನೀರಿಲ್ಲದ ತೆರದ ಬಾವಿಯಲ್ಲಿ ನವಜಾತ ಶಿಶು ಪತ್ತೆಯಾಗಿತ್ತು. ಗಂಡು ಮಗು ಜೀವಂತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನವಜಾತ ಶಿಶುಗೆ ಪಾಂಡವಪುರ ತಾಲ್ಲೂಕಿನ ವೈದ್ಯಾಧಿಕಾರಿಗಳ ತಂಡ ಪ್ರಥಮ ಚಿಕಿತ್ಸೆ ನೀಡಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಿಮ್ಸ್‌ಗೆ ಕಳುಹಿಸಿಕೊಟ್ಟಿದೆ. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಮಿಮ್ಸ್ ಐಸಿಯುನಲ್ಲಿರುವ ಮಗುವಿನ ಆರೋಗ್ಯದ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ ಸಹ ಸಚಿವರ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಜಿಲ್ಲಾಡಳಿತದ ವತಿಯಿಂದ ಮಗುವಿನ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಸ್ಥಳೀಯ ವ್ಯಕ್ತಿಯೊಬ್ಬನನ್ನು ಬಾವಿಗೆ ಇಳಿಸಿ ಮಗು ರಕ್ಷಣೆ ಮಾಡಿದ್ದರು. ಆಗ ಮಗುವಿನ ಪಕ್ಕದಲ್ಲಿ ಹಾವು ಸಹ ಇತ್ತು. ಗ್ರಾಮದ ಮಹಿಳೆಯೊಬ್ಬರು ಮಗುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದಿದ್ದದ್ದರು. ಬಳಿಕ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳಿಸಲಾಗಿತ್ತು.…

Read More