Author: admin

ಚಿತ್ರದುರ್ಗ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿಗಳು ನಿರೀಕ್ಷಣಾ ಜಾಮೀನು ಕೋರಿ ಕೋರ್ಟಗೆ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶ್ರೀಗಳ ಪರ ವಕೀಲರು ಚಿತ್ರದುರ್ಗದ ಎರಡನೇ ಸೆಷನ್ಸ್ ಕೋರ್ಟ ಅರ್ಜಿ ಸಲ್ಲಿಸಿದ್ದು, ಅರ್ಜಿ ಸ್ವೀಕರಿಸಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ 1ಕ್ಕೆ ನಿಗದಿಪಡಿಸಿದೆ. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ಮುರುಘಾ ಶ್ರೀಗಳು ತಳ್ಳಿ ಹಾಕಿದ್ದು, ನನ್ನ ವಿರುದ್ಧ ಪಿತೂರಿ ನಡೆದಿದೆ. ಇದೇನು ಹೊಸದಲ್ಲ, ಕಳೆದ 15 ವರ್ಷದಿಂದ ಪಿತೂರಿ ನಡೆಯುತ್ತಿದೆ. ನಮ್ಮ ಮಠ ನ್ಯಾಯ ದೇಗುಲದಂತಿತ್ತು. ಇದೀಗ ಮಠದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಸಿರು ನಿಶಾನೆ ತೋರಿಸಿದೆ. 3 ದಿನ ಗಣೇಶ ಕೂರಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಗಾಗಿ 6 ಹಿಂದುಪರ‌ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಸಮಿತಿ ಗಣೇಶ ಪ್ರತಿಷ್ಠಾಪನೆ ಅವಕಾಶ ಮಾಡಿಕೊಡುವಂತೆ ವರದಿ‌ ನೀಡಿತ್ತು. 6 ಸಂಘಟನೆಗಳಲ್ಲಿ ಒಂದು ಸಂಘಟನೆಗೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ. ಮೂರು ದಿನಗಳ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ಹುಬ್ಬಳ್ಳಿ ಮೇಯರ್ ಈರೇಶ್ ಅಂಚಟಗೇರಿ ತಿಳಿಸಿದ್ಧಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು : ರಾಜ್ಯದಲ್ಲಿ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಮಳೆ ಹೊಡೆತಕ್ಕೆ ಐವರು ಬಲಿಯಾಗಿದ್ಧಾರೆ. ಬೆಂಗಳೂರಿನಿಂದ ರಾಯಚೂರುವರೆಗೂ 15ಕ್ಕೂ ಹೆಚ್ಚು ಜಿಲ್ಲೆಗಳು ತತ್ತರವಾಗಿದೆ. ಕಳೆದ ರಾತ್ರಿ ಬೆಂಗಳೂರು ಸೇರಿ ಹೊರವಲಯದಲ್ಲಿ ಭಾರೀ ಮಳೆಯಾಗಿದೆ. ರಾಮನಗರ, ಚನ್ನಪಟ್ಟಣ ಕುಂಭದ್ರೋಣ ಮಳೆಗೆ ಕಂಗಾಲ್​​​ ಆಗಿದ್ದು, ಇನ್ನೂ ನಾಲ್ಕು ದಿನ ರಾಜ್ಯದಲ್ಲಿ ಇದೇ ಪರಿಸ್ಥಿತಿಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತರಬೇತಿ ಸಂಸ್ಥೆಯಲ್ಲಿ 18 ರಿಂದ 45 ವಯಸ್ಸಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ/ಯುವತಿಯರಿಗಾಗಿ 30 ದಿನಗಳ ಮೊಬೈಲ್ ಪೋನ್ ದುರಸ್ಥಿ ಮತ್ತು ಕೃಷಿಯ ಜೊತೆಗೆ 10 ದಿನಗಳ ಲಾಭದಾಯಕ ತರಕಾರಿ ಬೆಳೆ ಹಾಗೂ ನರ್ಸರಿ ಮಾಡುವುದರ ಬಗ್ಗೆ ಸಪ್ಟೆಂಬರ್ ತಿಂಗಳಿನಲ್ಲಿ ಯಚಿತ ತರಬೇತಿ ನೀಡಲಾಗಿದ್ದು, ಸಪ್ಟೆಂಬರ್ 05 ರೊಳಗಾಗಿ ತಮ್ಮ ಹೆಸರು, ವಿಳಾಸಗಳನ್ನು ನೊಂದಾಯಿಸಿ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯು ಸ್ವ-ಉದ್ಯೋಗ ಪ್ರಾರಂಭಿಸಿ, ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಲಿದ್ದು, ತರಬೇತಿ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ. ಮೊದಲು ಬಂದವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಕೌಶಲ್ಯ, ಸಾಫ್ಟ್ ಸ್ಕೀಲ್ಸ್, ಯೋಗ ತರಬೇತಿ ಹಾಗೂ ಬ್ಯಾಂಕಿಂಗ್, ಸರಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಬಗೆಗಿನ ಮಾಹಿತಿಯನ್ನು ಉಚಿತವಾಗಿ ನೀಡಲಾಗುವುದು. ತರಬೇತಿಯಲ್ಲಿ ಭಾಗವಹಿಸಲು ಆಸಕ್ತರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ, ಹಳಿಯಾಳ, ಉತ್ತರ…

Read More

ತುಮಕೂರು : ಪದೇ ಪದೇ ಚಡ್ಡಿಯಲ್ಲಿ ಬಾಲಕನೊಬ್ಬ ಮೂತ್ರ ಮಾಡಿಕೊಳ್ಳುತ್ತಿದ್ದ ಅನ್ನುವ ಕಾರಣಕ್ಕೆ ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗವನ್ನು ಬೆಂಕಿಕಡ್ಡಿಯಿಂದ ಸುಟ್ಟಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ಮೂರುವರೆ ವರ್ಷದ ಬಾಲಕ ಪದೇ ಪದೇ ಚಡ್ಡಿಯಲ್ಲಿ ಮೂತ್ರ ಮಾಡಿಕೊಳ್ಳುತ್ತಿದ್ದ. ಹೀಗಾಗಿ ವಿದ್ಯಾರ್ಥಿಯನ್ನು ಗದರಿಸಲು ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ಸೇರಿ ಬಾಲಕನ ಗುಪ್ತಾಂಗವನ್ನು ಬೆಂಕಿ ಕಡ್ಡಿಯಿಂದ ಸುಟ್ಟಿದ್ದಾರೆ. ಬಾಲಕನ ಗುಪ್ತಾಂಗ ಮತ್ತು ತೊಡೆಯ ಬಳಿ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಸುದ್ದಿ ತಿಳಿದ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಗೆ ನೋಟಿಸ್ ನೀಡಿ ತಪ್ಪೋಪ್ಪಿಗೆ ಪತ್ರ ಪಡೆದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy  

Read More

ಚಿತ್ರದುರ್ಗ: ಸ್ಕೂಟರ್ ಗೆ ವಾಹನವೊಂದು ಡಿಕ್ಕಿಯಾದ ಪರಿಣಾಮ ಸ್ಕೂಟರ್ ಧಗಧಗನೆ ಹೊತ್ತಿ ಉರಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಪ್ರಧಾನ ರಸ್ತೆಯಾದ ಅರಣ್ಯ ಇಲಾಖೆಯ ಬಳಿ ನಡೆದಿದೆ. ಹಿರಿಯೂರು ನಗರದ ಟಿ.ಬಿ.ಸರ್ಕಲ್ ನಿಂದ ಗಾಂಧಿ ಸರ್ಕಲ್ ಗೆ ಬರುತ್ತಿದ್ದಂತಹ ಸ್ಕೂಟರ್ ಗೆ ಎದುರಿನಿಂದ ಬಂದ ವಾಹನವೊಂದು  ಡಿಕ್ಕಿಯಾಗಿತ್ತು. ಅಪಘಾತದ ವೇಳೆ  ಸ್ಕೂಟರ್ ಗೆ ಬೆಂಕಿ ಹತ್ತಿಕೊಂಡಿದ್ದು,  ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಕೂಟರ್ ನಲ್ಲಿದ್ದ ಮಹಿಳೆಯ ಬಲಗೈಗೆ  ಹಾಗೂ ತಲೆಗೆ ಏಟು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಿರಿಯೂರು ತಾಲ್ಲೂಕಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡ ಮಹಿಳೆಯು ಇದೀಗ  ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ವರದಿ: ಮುರುಳಿಧರನ್ ಆರ್. ಚಿತ್ರದುರ್ಗ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ತುಮಕೂರು ಗ್ರಾಮಾಂತರದ ಊರುಕೆರೆ ಗ್ರಾಮದಲ್ಲಿ ಊರುಕೆರೆ ಕೋಡಿ ಹರಿದಿದ್ದು, ಪರಿಣಾಮವಾಗಿ  ಕೆರೆ ನೀರು ರಸ್ತೆ, ಗದ್ದೆ, ತೋಟ,  ಜಮೀನುಗಳಿಗೆ ಹರಿದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿನ ಮುಖ್ಯ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಇದೇ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ರಾತ್ರಿ ಸುರಿದ ಭಾರೀ ಮಳೆಗೆ ಕೆರೆಕೋಡಿ ಹರಿದಿದ್ದು, ಕೆರೆ ಕೋಡಿ ಹರಿದಿರುವುದನ್ನು ನೋಡಲು ಜನರು ಆಗಮಿಸುತ್ತಿದ್ದಾರೆ. ಒಂದೇ ರಾತ್ರಿಗೆ ಕೆರೆ ಕೋಡಿ ಹರಿದಿದೆ. ಎಲ್ಲ ಹೊಲ ತೋಟಗಳಿಗೆ ನೀರು ತುಂಬಿ ಬಿಟ್ಟಿದೆ. ರೋಡಿನ ಮೇಲೆಯೇ ನೀರು ಹೋಗ್ತಾ ಇದೆ.  ಹೂಳುಗಳನ್ನು ಸರಿಯಾಗಿ ತೆಗೆಯದ ಪರಿಣಾಮ ರಸ್ತೆಗೆ ನೀರು ನುಗ್ಗಿದೆ.  ಸರ್ಕಾರದವರು ಬಂದು ಹೂಳು ತೆಗೆದು ನೀರು ಹೋಗಲು ವ್ಯವಸ್ಥೆ ಮಾಡಿದರೆ ಮಾತ್ರ ನೀರು ರಸ್ತೆಗೆ ಬರೋದನ್ನು ತಡೆಯಲು ಸಾಧ್ಯ ಎಂದು ನಮ್ಮತುಮಕೂರಿಗೆ  ರೇವಣರುದ್ರಪ್ಪ ಎಂಬವರು ಪ್ರತಿಕ್ರಿಯಿಸಿದರು. ಊರುಕೆರೆ  ಗ್ರಾಮದ ಕೆರೆ ಕೋಡಿ ಹರಿದು ಸುಮಾರು 32 ವರ್ಷಗಳೇ ಆಗಿದ್ದವು.  ಹಿಂದೆ ಇದ್ದ ಹಳ್ಳಗಳು ಮುಚ್ಚಿ ಹೋಗಿವೆ, ಸುತ್ತ ಮುತ್ತ ಮರಗಿಡಗಳು ಬಂದು ನೀರು…

Read More

ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಬಣಗಾರ ಹಳ್ಳಿ ಮತ್ತು ಪೆಮ್ಮನಹಳ್ಳಿ ಮಾರ್ಗದಲ್ಲಿ ಸೇತುವೆ ಕುಸಿದು ಕಾರಣ.ಸುಮಾರು 40 ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ಎರಡು ಕಡೆಯಿಂದಲೂ ಸಂಚಾರ ಸ್ಥಗಿತಗೊಂಡಿದ್ದು, ಪೇಮ್ಮೇನಹಳ್ಳಿ ಶಾಲಾ ಮಕ್ಕಳು ನಾಲ್ಕು ದಿನದಿಂದ ಶಾಲೆಗೆ ಬರದೆ ಸೇತುವೆ ಬಳಿ ಬಂದು ಮನೆಗೆ ವಾಪಸ್ ಹೋಗುತ್ತಿರುವ ಘಟನೆ ನಡೆದಿದೆ. ಹಿರಿಯರು ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ಮುಖಂಡ ರವಿ ಯಾದವ್, ಒಂದುವಾರದಿಂದ ಮಕ್ಕಳು ಶಾಲೆಗೆ ಹೋಗುತ್ತಿಲ್ಲ, ಸೇತುವೆ ಕೊಚ್ಚಿ ಹೋಗಿದೆ, ತುಂಬಾನೇ ರಭಸದಿಂದ ನೀರು ಹರಿಯುತ್ತಿದೆ. ಮಕ್ಕಳನ್ನು ರಭಸವಾಗಿ ಹರಿಯುತ್ತಿರುವ ಹಳ್ಳ ದಾಟಿಸುವುದು ತುಂಬಾನೆ ಅಪಾಯಕಾರಿ. ಈ ವಿಚಾರಅರಿತು ಮಕ್ಕಳ ಪೋಷಕರು ಶಾಲೆಗೆ ಕಳುಹಿಸುತ್ತಿಲ್ಲ. ನಮ್ಮ ಊರಿಗೆ ಇದುವರೆಗೂ ಯಾವ ಅಧಿಕಾರಿಗಳು ಸಹ ಬಂದಿಲ್ಲ. ದಯಮಾಡಿ ಸಂಬಂಧಪಟ್ಟ ಇಲಾಖೆಯವರು ಬಂದು ಇಲ್ಲಿರುವ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಮಾಧ್ಯಮ ಮೂಲಕ ತಮ್ಮ ಅಳಲು ತೋಡಿಕೊಂಡರು. ಶಾಲಾ ಮಕ್ಕಳು ಮಾತನಾಡಿ, ಶಾಲೆಗೆ ಹಾದುಹೋಗುವ ದಾರಿ…

Read More

ತುಮಕೂರು: ನಗರದ 1ನೇ ವಾರ್ಡ್ ವ್ಯಾಪ್ತಿಗೆ ಸೇರುವ ಪ್ರಸ್ತುತ ತಿಮ್ಮಲಾಪುರ ಕೆರೆಯಲ್ಲಿ ಸುಮಾರು 15 ಹಂದಿಜೋಗಿ ನಿವೇಶನ/ವಸತಿ ರಹಿತ ಕುಟುಂಬಗಳು ವಾಸವಿರುವ ಗುಡಿಸಲುಗಳಿದ್ದು, ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗುಡಿಸಲುಗಳು ಜಲಾವೃತವಾಗಿವೆ. ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ವಸತಿ ರಹಿತ ಗುಡಿಸಲು ನಿವಾಸಿಗಳ ಪಾಡು ಹೇಳತೀರದಂತಾಗಿದೆ. ಇನ್ನೊಂದೆಡೆ ಮಳೆಯ ಕಾರಣ ಕೂಲಿ ಸಿಗದೇ ಜನರು ಸಂಕಷ್ಟಕ್ಕೀಡಾಗಿದ್ದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮಾಡಿದ್ದ ಮನವಿಯ ಮೇರೆಗೆ ವರಮಹಾಲಕ್ಷ್ಮಿ ಹಬ್ಬದ ಈ ದಿನದಂದು ಸದರಿ ಸ್ಥಳಕ್ಕೆ ಪಾಲಿಕೆ ಆಯುಕ್ತೆ ರೇಣುಕಾ ಹಾಗೂ ಸಿಬ್ಬಂದಿ ಮತ್ತು ಒಂದನೇ ವಾರ್ಡ್ ನ ಕಾರ್ಪೊರೇಟರ್ ಇಂದ್ರ ಕುಮಾರ್ ಮತ್ತು ಸ್ನೇಹಿತರು ಹಾಗೂ ಸಿಬ್ಬಂದಿ ಭೇಟಿ ನೀಡಿ ಪಾಲಿಕೆಯ JCB ಯಂತ್ರದಿಂದ ಜಾಗದಲ್ಲಿ ಸ್ವಚ್ಛ ಮಾಡಿಸುವುದರೊಂದಿಗೆ ಪ್ರತಿ ಕುಟುಂಬಕ್ಕೆ ಒಂದೊಂದು ಟಾರ್ಪಾಲ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಹೊಸ ಸಮಸ್ಯೆ ಸೃಷ್ಟಿಯಾಗಿದ್ದು, ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಲ್ಲಿ…

Read More

ಪಾವಗಡ: ತಾಲ್ಲೂಕಿನ ನಿಡಗಲ್ಲು ಹೋಬಳಿಯ ಸಿ.ಕೆ.ಪುರ ಗ್ರಾಮದ ಹನುಮಂತ ದೇವರ ಕೆರೆಯು ಕಳೆದ 18 ವರ್ಷಗಳಲ್ಲಿ 2 ನೇ ಬಾರಿ ಕೋಡಿ ಹರಿಯುತ್ತಿದ್ದು, ಶಾಸಕರಾದ ವೆಂಕಟರಮಣಪ್ಪ ಹಾಗೂ ಸಿ.ಎನ್.ಆನಂದರಾವ್  ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ನಂತರ ಮಾತನಾಡಿದ ಅವರು,  ಈ ಕೆರೆ ಕೊಡಿ ಬಿದ್ದು ಸುಮಾರು18 ವರ್ಷಗಳಾಗಿದೆ. ಈ ಊರಿನ ಗ್ರಾಮಸ್ಥರಿಗೆ ಎಲ್ಲರಿಗೂ ಒಳ್ಳೆಯದಾಗಲಿ ರೈತರು ಜಮೀನುಗಳಲ್ಲಿ ಎಲ್ಲರೂ ಬೆಳೆ ಬೆಳೆಯಲು ಇಂದು ನಾನು ಶುಭ ಹಾರೈಸುತ್ತೇನೆ ಎಂದು ತಿಳಿಸಿದರು. ಶಾಸಕರಾದ ವೆಂಕಟರಮಣಪ್ಪನವರು ಮಾತನಾಡಿ, 2018ರಲ್ಲಿ ಕೆರೆ ಕೋಡಿ ಬಿದ್ದಿದ್ದು, ಆಗ ಬಂದು ನಾನು ಈ ಕೆರೆಗೆ ಬಾಗಿನ ಅರ್ಪಿಸಿದ್ದೆ. ಇಂದು ಈ ಕೆರೆ ಕೊಡಿ ಬಿದ್ದಿರುವುದರಿಂದ ನನಗೆ ಸಂತೋಷವಾಗಿದೆ. ಸಿ.ಕೆ.ಪುರ ಕೆರೆ, ಬ್ಯಾಡನೂರ ಕೆರೆ, ಇವೆಲ್ಲ ನೀರು ಸೇರಿ ಪಳವಳ್ಳಿ ಕೆರೆಗೆ ನೀರು ಹೋದರೆ,  ಆ ಕೆರೆ ಸಹ ಕೋಡಿ ಬೀಳುತ್ತದೆ. ತುಂಬಿದ ಕೆರೆ ಕಟ್ಟೆಗಳಿಗೆ , ಕೃತಜ್ಞತಾ ಅರ್ಪಣಾ ಮನೋಭಾವದಿಂದ ಪೂಜೆ ಸಲ್ಲಿಸುವುದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ ಎಂದರು.…

Read More