Author: admin

ಪಿಎಸ್‌’ಐ ನೇಮಕಾತಿ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳ ಬೇಟೆ ಮುಂದುವರೆದಿದೆ. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಜಿಲ್ಲೆಯ ಅಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಆರೋಪಿ ರಚನಾ ಎಂಬಾಕೆಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಚನಾ ಪಿಎಸ್‌’ಐ ನೇಮಕಾತಿ ಪರೀಕ್ಷೆಯಲ್ಲಿ ಮಹಿಳಾ ಕೋಟಾದಲ್ಲಿ ಮೊದಲ ರ್ಯಾಂಕ್ ಪಡೆದಿದ್ದರು. ರಚನಾ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ಆರೋಪಿ ರಚನಾ ನಾಪತ್ತೆಯಾಗಿ ಮಹಾರಾಷ್ಟ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಲೆ ಮರೆಸಿಕೊಂಡಿದ್ದರು. ರಚನಾ ಪತ್ತೆಯಾಗಿ ಬಲೆ ಬೀಸಿದ್ದಂತ ಸಿಐಡಿ ಅಧಿಕಾರಿಗಳು ಇದೀಗ ಕಲಬುರ್ಗಿಯ ಅಳಂದದ ಹಿರೋಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಲಬುರ್ಗಿಯ 5ನೇ ಜೆಎಂಎಫ್ ಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಇಂದು ರಾತ್ರಿ ಬೆಂಗಳೂರಿಗೆ ಸಿಐಡಿ ಪೊಲೀಸರು ಆರೋಪಿ ರಚನಾ ಕರೆತರೋ ಸಾಧ್ಯತೆ ಇದೆ. ರಚನಾ ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಿವಾಸಿಯಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…

Read More

ಚಿತ್ರದುರ್ಗ: ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ . ಇತ್ತ ಮಠದ ಆಡಳಿತಾಧಿಕಾರಿ ಬಸವರಾಜನ್ ವಿರುದ್ಧವೂ ಅತ್ಯಾಚಾರ ಯತ್ನ ಪ್ರಕರಣ ದಾಖಲಾಗಿದೆ. ಇದರ ನಡುವೆ ಮುರುಘಾ ಶ್ರೀಗಳ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ರೀಗಳು ಸಲಹಾ ಸಮಿತಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮುರುಘಾಶ್ರೀ, ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದು ಆಪ್ತರೆದುರು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಲಹಾ ಸಮಿತಿ ಸಭೆಯಲ್ಲಿ ಭಕ್ತರು, ವಕೀಲರು, ವಿವಿಧ ಸಮಾಜಗಳ ಮುಖಂಡರು ಸೇರಿ ಹಲವರು ಭಾಗಿಯಾಗಿದ್ರು. ಸಲಹಾ ಸಮಿತಿ ಸಭೆ ಬಳಿಕ ಮಾತನಾಡಿದ ಮುಖಂಡರು, ನೇರವಾಗಿ ಮಾಜಿ ಶಾಸಕ ಬಸವರಾಜನ್ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ್ದಾರೆ. ಆದರೆ ಮುರುಘಾಶ್ರೀ, ಸಭೆಯಲ್ಲಿ ತಮ್ಮ ಆಪ್ತರೆದುರು ನಾನು ಸಮರಕ್ಕೂ ಸಿದ್ಧ, ಸಂಧಾನಕ್ಕೂ ಸಿದ್ಧ ಎಂದಿದ್ದಾರೆ. ತಪ್ಪು ಒಪ್ಪಿಕೊಂಡು ಬಂದರೆ ಕ್ಷಮಿಸಿ ಸಂಧಾನ ಮಾಡೋಣ. ಕಾನೂನು ಸಮರಕ್ಕೆ ಸೈ ಅಂದ್ರೆ ಕಾನೂನು ಮೂಲಕವೇ ಹೋರಾಟ…

Read More

ದೆಹಲಿ : ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಪ್ರಕರಣ ಸಂಬಂಧಿಸಿದ ಗೋವಾ ಪೊಲೀಸರಿಂದ ಪಬ್‌ ಓನರ್‌, ಡ್ರಗ್ ಪೆಡ್ಲರ್ ಬಂಧಿಸಲಾಗಿದೆ. ಬಂಧಿತ ಕ್ಲಬ್ ಮಾಲೀಕನನ್ನ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಬಾತ್​​ರೂಮ್​ನಲ್ಲಿ ಮಾದಕ ವಸ್ತು ಸಿಕ್ಕಿದೆ. ಸೋನಾಲಿ ತಮ್ಮ ಸಹಾಯಕರ ಸಹಾಯದಿಂದ ಡ್ರಗ್ ಪಡೆದುಕೊಂಡಿದ್ದಳು. ಡ್ರಗ್ ಪಡೆದ ನಂತರ ಅವರು ಇಬ್ಬರ ಭುಜವನ್ನ ಹಿಡಿದುಕೊಂಡು ಕ್ಲಬ್​ನಲ್ಲಿ ನಡೆದಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ತನಿಖೆಯನ್ನ ಆರಂಭಿಸಿದ್ದೇವೆ ಎಂದು ಗೋವಾ ಪೊಲೀಸರು ಮಾಹಿತಿ ನೀಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ಕೊರಟಗೆರೆ: ತಾಲ್ಲೂಕಿನ ಗೊರವನಹಳ್ಳಿ -ತೀತಾ ಗ್ರಾಮಗಳ ಮಧ್ಯೆ ಹಾದು ಹೋಗಿರುವ ತೀತಾ ಜಲಾಶಯದ ಕೋಡಿ ಹಳ್ಳಕ್ಕೆ ನಿರ್ಮಿಸಿರುವ ರಸ್ತೆಯ ಸೇತುವೆ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದೆ. ಕೊರಟಗೆರೆಯಿಂದ ದೊಡ್ಡಬಳ್ಳಾಪುರ ರಸ್ತೆ ಇದಾಗಿದ್ದು, ತಾಲ್ಲೂಕಿನಲ್ಲಿ ಸುರಿದ ಅತಿಯಾದ ಮಳೆ ಹಾಗೂ ತೀತಾ ಜಲಾಶಯವು ಕೋಡಿ ಬಿದ್ದು ನೀರು ರಸ್ತೆಯ ಮೇಲೆ ಹರಿದು, ಸೇತುವೆಯಲ್ಲಿ ಕುಸಿತ ಕಂಡು ಬಂದಿದೆ. ಇದರಿಂದ ಕೋಳಾಲ ಮಾರ್ಗವಾಗಿ ಗೊರವನಹಳ್ಳಿ ಲಕ್ಷ್ಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಮಾವತ್ತೂರು ದೊಡ್ಡಸಾಗ್ಗೆರೆ ಸುತ್ತಮುತ್ತಲ ಭಾಗದ ಜನರು ಕೊರಟಗೆರೆಗೆ ಪ್ರಯಾಣಿಸಲು ತೀವ್ರ ತೊಂದರೆ ಉಂಟಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಿದೆ. ಕೂಡಲೇ ಕುಸಿದಿರುವ ಸೇತುವೆಯನ್ನು ದುರಸ್ಥಿಗೊಳಿಸಿ ಈ ಭಾಗದ ಜನರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಂಪರ್ಕಿಸುವ ಈ ರಸ್ತೆಯ ಸೇತುವೆ ಕುಸಿದಿರುವ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನಯ್ಯ ಭೇಟಿ ನೀಡಿ ಪರಿಶೀಲಿಸಿ ಆದಷ್ಟು ಬೇಗ…

Read More

ತುಮಕೂರು: ಪಟ್ಟಣದ ಚಿಲುಮೆ ಪೊಲೀಸ್ ಸಮುದಾಯದ ಭವನದಲ್ಲಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಹುಲ್ ಕುಮಾರ್ ಶಹಪೂರ್ ವಾಡ್, ರವರ ಮಾರ್ಗದರ್ಶನದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಗರದ ಎಲ್ಲಾ ಸಮುದಾಯದ ಮುಖಂಡರುಗಳನ್ನು ಹಾಗೂ ಗಣೇಶ ಮೂರ್ತಿಯನ್ನು  ಪ್ರತಿಷ್ಟಾಪನೆ ಮಾಡುವ ಮುಖಂಡರವರನ್ನ ಕರೆಸಿ  ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶಾಂತಿ ಸಭೆ ನಡೆಸಲಾಯಿತು. ಗಣಪತಿ ಕೂರಿಸಲು ಯಾವ ಯಾವ  ರೀತಿಯಲ್ಲಿ ಕ್ರಮ ಅನುಸರಿಸಬೇಕೆಂದು ತಿಳಿಸಲಾಯಿತು.ಈ ಸಭೆಯಲ್ಲಿ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾನ್ಯ ನಗರ ಶಾಸಕರು,ಪೊಲೀಸ್ ಅಧಿಕ್ಷಕರು, ಹೆಚ್ಚವರಿ ಪೊಲೀಸ್ ಅದೀಕ್ಷಕರು, ಮಹಾನಗರಪಾಲಿಕೆಯ ಕಮಿಷನರ್ ರವರು, ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆಯ ಮುಖ್ಯಸ್ಥರು, ಹಾಗೂ ಬೇರೆ ಬೇರೆ ಇಲಾಖೆಯ ಮುಖ್ಯಸ್ಥರು ಭಾಗವಹಿಸಿದರು, ನಗರ ಡಿಎಸ್ಪಿ ಶ್ರೀನಿವಾಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ನಗರದ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು. ಅನುಮತಿ ಇಲ್ಲದೆ ಯಾವುದೇ ಫ್ಲೆಕ್ಸ್ ಅಳವಡಿಸುವಂತಿಲ್ಲ,  ಸ್ಥಳೀಯ ಠಾಣೆಯಲ್ಲಿ ಫ್ಲೆಕ್ಸ್ ಡಿಸೈನ್ ಅನುಮತಿ ಕಡ್ಡಾಯ, ಕಾನೂನು ಭಂಗ ತರುವಂತಹ ಯಾವ ಫ್ಲೆಕ್ಸ್ ಗಳಿಗೂ…

Read More

ತುಮಕೂರು: ಇಲಾಖೆ ಪರ್ಮಿಷನ್ ತೆಗೆದುಕೊಂಡು ಮದರಸ ನಡೆಯುತ್ತಿದೆ. ಹೇಗೆ ಬೇರೆ ಬೇರೆ ಶಾಲೆಗಳ ಪರಿಸ್ಥಿತಿಗಳನ್ನ ಅವಲೋಕನ ಮಾಡ್ತೀವೋ ಹಾಗೇ ಮದರಸ ಕೂಡ ಮಾಡ್ತೀವಿ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಗಳ ಬಗ್ಗೆ ಪೋಷಕರಿಂದ ದೂರು ಇತ್ತು. ಅಲ್ಲಿ ಬೇರೆ ಬೇರೆ ವಿಷಯಗಳನ್ನ ಕಲಿಸುತ್ತಿಲ್ಲ ಅಂತಾ ದೂರು ಇತ್ತು. ಹಾಗಾಗಿ ಅಧಿಕಾರಿಗಳು ಹೋಗಿ ಚೆಕ್ ಮಾಡಿದ್ದಾರೆ. ವಸ್ತುಸ್ಥಿತಿ ಅರಿಯಲು ಅಧಿಕಾರಿಗಳನ್ನ ಕಳಿಸಿದ್ದೇನೆ ಎಂದರು. ಮದರಸದ ಮಕ್ಕಳನ್ನು ಇತರೆ ಮಕ್ಕಳ ಸಮಾನಕ್ಕೆ ತರಲು ಪ್ರಯತ್ನಿಸುತ್ತೇವೆ. 20 ಸಾವಿರ ಅಂಗನವಾಡಿಗಳಲ್ಲಿ ಎನ್.ಇ.ಪಿ. ಜಾರಿ ತರುತ್ತೇವೆ. ಮದರಸದಿಂದ ಬಂದ ವಿದ್ಯಾರ್ಥಿಗಳಿಗೆ ಗುಣಮಟ್ಟ ಇಲ್ಲಾ ಅಂತಾ ಮಕ್ಕಳು ಹೇಳಿಕೊಳ್ತಿದ್ದರು. ಮೇಲಿನ ತರಗತಿ ಪಾಠ ಅರ್ಥ ಆಗಲ್ಲ ಅಂತಾ ಹೇಳುತ್ತಿದ್ದರು ಎಂದು ಬಿ.ಸಿ.ನಾಗೇಶ್ ಹೇಳಿದರು. ವರದಿ: ರಾಜೇಶ್ ರಂಗನಾಥ್ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ತುಮಕೂರು: ನಮ್ಮ ಅವಧಿಯಲ್ಲಿ ಯಾವುದೇ ಕಮೀಷನ್ ಇರಲಿಲ್ಲ. ಹಾಗೆ ಇದ್ದಿದ್ದು ಹೌದಾದರೇ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಮೀಷನ್ ಇದ್ದಿದ್ದು ಹೌದಾದರೇ ಮುಖ್ಯಮಂತ್ರಿಗಳು ನ್ಯಾಯಾಂಗ ತನಿಖೆ ಮಾಡಿಸಲಿ. ನ್ಯಾಯಾಂಗ ತನಿಖೆ ಆದರೆ ಎಲ್ಲಾ ಸತ್ಯಗಳು ಆಚೆ ಬರುತ್ತೆ ಎಂದರು. ಎಂಥೆಂಥಾ ಸೂಸೈಡ್ ಕೇಸ್ ಗಳಿಗೆ ನಿಮ್ಮ ಹತ್ರ ಸರ್ಕಾರ ಇದೆ ಅಂತೇಳಿ ಬಿ-ರಿಪೋರ್ಟ್ ಹಾಕ್ತೀರಾ. ಎಲ್ಲವನ್ನೂ ಮುಚ್ಚಾಕ್ತೀರಾ ಎಂದ ಅವರು, ಮೈತ್ರಿ ಸರ್ಕಾರದಲ್ಲೂ ಕಮಿಷನ್ ದಂಧೆ ಇತ್ತು ಅನ್ನೋ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ಇದರ ಬಗ್ಗೆ ನನಗೆ ಗೊತ್ತಿಲ್ಲಾ, ಇದು ಅವರನ್ನೇ ಕೇಳಿ. ಕುಮಾರಸ್ವಾಮಿ ಒಪ್ಪಿಕೊಂಡ್ರು ಅಂತಾ ನಮಗೂ ಅವರಿಗೂ ಸಂಬಂಧ ಇಲ್ಲ ಎಂದರು. ಕೆ.ಹೆಚ್ ಮುನಿಯಪ್ಪ, ಸುಧಾಕರ್ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಜಿಲ್ಲೆ ವಿಚಾರದಲ್ಲಿ ಏನೋ ಭೇಟಿಯಾಗಿದ್ದಾರೆ. ಮುನಿಯಪ್ಪ ಅವರು ನಮ್ಮ ಪಾರ್ಟಿಯ ದೊಡ್ಡ ಲೀಡರ್, ವರ್ಕಿಂಗ್ ಕಮಿಟಿ…

Read More

ಕಲಬುರಗಿ: ಪೊಲೀಸರಿಂದ ತಪ್ಪಿಸಿಕೊಳ್ಳೋ ಭರದಲ್ಲಿ ಜಿಲ್ಲಾ ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿದ್ದು ಆರೋಪಿ ಮೃತಪಟ್ಟ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮುನ್ನಾ ಅಲಿಯಾಸ್ ಶೇಖ್ ಸೋಹೆಲ್ ಮೃತ ಆರೋಪಿ. ದರೋಡೆ ಪ್ರಕರಣದಲ್ಲಿ ಈತನನ್ನು ಬ್ರಹ್ಮಪೂರ ಪೊಲೀಸರು. ಕೋರ್ಟ್​ಗೆ ಹಾಜರಿಪಡಿಸುವ ಪೂರ್ವದಲ್ಲಿ ಕೋವಿಡ್ ತಪಾಸಣೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ತಪಾಸಣೆಗೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಕೋವಿಡ್ ತಪಾಸಣೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಈತ. ಆಸ್ಪತ್ರೆಯ ಮೂರನೇ ಮಹಡಿ ಹತ್ತಿ ತಪ್ಪಿಸಿಕೊಳ್ಳುವ ವೇಳೆ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ.ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಳಗಾವಿ: ನಗರದ ಗಾಲ್ಫ್ ಮೈದಾನದಲ್ಲಿ ಪತ್ಯಕ್ಷಗೊಂಡಿದ್ದ ಚಿರತೆಯನ್ನು ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಹಿಡಿಯುವ ನಿರತಂತರ ಪ್ರಯತ್ನದಲ್ಲಿ ತೊಡಗಿದ್ದಾರೆ.ಈಗಾಗಲೇ ಮೂರು ಬಾರಿ ಕಾಣಿಸಿಕೊಂಡಿರುವ ಚಿರತೆಯನ್ನು ಹಿಡಿಯಲು ತಂತ್ರಗಾರಿಕೆ ಹೂಡಿದ್ದಾರೆ. ಸಿದ್ಧಪಡಿಸಿದ ಮಾಸ್ಟರ್ ಪ್ಲಾನ್​ನಂತೆ ಇಂದು 350 ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕಾರ್ಯಾಚರಣೆಗೆ ಇಳಿಯಲಿದ್ದಾರೆ. 250 ಎಕರೆ ಪ್ರದೇಶದಲ್ಲಿ ಸುಮಾರು 350 ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಕಾಲದಲ್ಲಿ ಕೋಬಿಂಗ್ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಕೋಬಿಂಗ್ ಕಾರ್ಯಾಚರಣೆ ಅಂದರೆ, ಒಂದು ಕಡೆಯಲ್ಲಿ ಬಲೆಯನ್ನು ಹಾಕಿ ಇನ್ನೊಂದು ಕಡೆಯಿಂದ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿ ಚಿರತೆಯನ್ನು ಬಲೆಗೆ ಹಾಕುವ ಪ್ಲಾನ್ ಅನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಗಾಲ್ಫ್ ಮೈದಾನದ ತಡೆಗೋಡೆ ಸುತ್ತ ಸುಮಾರು ಮೂರು ಕಿ.ಮೀ. ವರೆಗೆ ಬಲೆಯನ್ನು ಹಾಕಲಾಗಿದೆ. ಹನುಮಾನ್ ನಗರ, ಜಾಧವ್ ನಗರ ಭಾಗದ ಕಡೆಗಳಲ್ಲಿ ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಬಲೆ ಹಾಕಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…

Read More

ಗದಗ: ನನಗೂ ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿ ಆಗುವ ಯೋಗ್ಯತೆ ಇದೆ ಅಂತ ಅರಣ್ಯ ಖಾತೆ ಹಾಗೂ ಆಹಾರ ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಅವರು ಮಾತನಾಡಿದ ಅವರು , 9 ಬಾರಿ ಶಾಸಕನಾಗಿ ನಾನು ಆಯ್ಕೆ ಆಗಿದ್ದು, ರಾಜ್ಯದ ಹಿರಿಯ ರಾಜಕಾರಣಿಯಾಗಿದ್ದೇನೆ ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು. ಇನ್ನೂ 15 ವರ್ಷ ನನ್ನ ರಾಜಕೀಯ ಜೀವನ ಇದೆ ಅಂತ ಹೇಳಿದರು. ಇನ್ನೂ ಇದೇ ವೇಳೆ ಅವರು ರಾಜ್ಯ ಸರ್ಕಾರದ 40% ಕಮೀಷನ್ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸುತ್ತ, ಕೆಂಪಯ್ಯ ಯಾರು ಎಂಬುದು ಗೊತ್ತಿಲ್ಲ ಅಂತ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More