Subscribe to Updates
Get the latest creative news from FooBar about art, design and business.
- ಮಧುಗಿರಿ: ಎರಡು ವರ್ಷದ ಚಿರತೆ ಸೆರೆ
- ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ಕನಕದಾಸರ ಕೊಡುಗೆ ಅಪಾರ: ಪ.ಪಂ. ಅಧ್ಯಕ್ಷ ಶಿವಕುಮಾರ್
- ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಗೆ ತೀರ್ಮಾನ: ಸಿಎಂ ಸಿದ್ದರಾಮಯ್ಯ
- ಅಪ್ರಾಪ್ತೆ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರನ ಬಂಧನ
- ಬೈಕ್ ಟಾಕ್ಸಿ ಚಾಲಕನಿಂದ ಮಹಿಳೆಗೆ ಲೈಂಗಿಕ ಕಿರುಕುಳ
- ಕಸದಿಂದ ವಿದ್ಯುತ್ ಉತ್ಪಾದಿಸುವ ಘಟಕ ನಿರ್ಮಾಣ: ಡಾ.ಜಿ.ಪರಮೇಶ್ವರ್
- ಚಿಕ್ಕನಾಯಕನಹಳ್ಳಿ: ತುಳುನಾಡಿನ ಪಂಜುರ್ಲಿ ದೈವಕ್ಕೆ ಭಕ್ತಿ ಸಮರ್ಪಣೆ
- ಮಧುಗಿರಿ | ಜೀತ ವಿಮುಕ್ತರಿಗೆ ಪುನರ್ ವಸತಿ ಕಲ್ಪಿಸಲು ಒತ್ತಾಯಿಸಿ ಪ್ರತಿಭಟನೆ!
Author: admin
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕರ್ನಾಟಕ ಸಮೃದ್ಧಿ ಜನಸೇವಾ ವೇದಿಕೆಯ ಯುವ ಕಣ್ಮಣಿ , ಯುವ ಘಟಕದ ಅಧ್ಯಕ್ಷರಾಗಿದ್ದ ಸಿ.ಟಿ.ವಸಂತ್ ಕುಮಾರ್ ನಾಯಕ ಅವರ ಸವಿ ನೆನಪಿಗಾಗಿ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕುರಿತು ನಮ್ಮ ತುಮಕೂರು ಜೊತೆಗೆ ಮಾತನಾಡಿದ ತಾಲ್ಲೂಕು ನಗರದ ಘಟಕದ ಅಧ್ಯಕ್ಷರಾದ ಅಪ್ಸರ್ ಪಾಷಾ ಅವರು, ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಕೋರಿದರು. ಕರ್ನಾಟಕ ಸಮೃದ್ದಿ ಜನಸೇವಾ ವೇದಿಕೆಯ ಯುವ ಘಟಕದ ಅಧ್ಯಕ್ಷರಾದ ಸಿ.ಟಿ.ವಸಂತ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ನಮ್ಮೆಲ್ಲರ ದೌರ್ಬಲ್ಯದ ಸಂಗತಿಯಾಗಿದೆ. ಸಿ.ಟಿ.ವಸಂತ್ ಕುಮಾರ್ ನಾಯಕ ರವರು ಪ್ರತಿಯೊಂದು ಸ್ಪರ್ಧೆಯಲ್ಲೂ ಮುಂದಿದ್ದರು. ಇಂತಹ ಯುವ ಪ್ರತಿಭೆಗಳು ಇಂದು ನಮ್ಮೆಲ್ಲರನ್ನು ಅಗಳಿರುವುದು ನಿಜಕ್ಕೂ ಸಹ ದುರ್ದೈವದ ವಿಷಯವಾಗಿದೆ ಎಂಬುದಾಗಿ ಬೇಸರ ವ್ಯಕ್ತಪಡಿಸಿದರು. ಸಿ.ಟಿ.ವಸಂತ್ ಕುಮಾರ್ ನಾಯಕ ಅವರು, ಕಳೆದ ತಿಂಗಳುಗಳ ಹಿಂದೆಯಷ್ಟೇ ಬೈಕ್ ಅಪಘಾತದಲ್ಲಿ ನಿಧನ ಹೊಂದಿದ್ದು, ಅವರ ಸವಿ ನೆನಪಿಗಾಗಿಯೇ ಈ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಈ ಕ್ರಿಕೆಟ್ ಪಂದ್ಯಾವಳಿಯನ್ನು…
ತುರುವೇಕೆರೆ: ತಾಲ್ಲೂಕು ಆಡಳಿತದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿಗಳಾದ ರೇಣು ಕುಮಾರ್ ರವರು ಧ್ವಜಾರೋಹಣ ನೆರವೇರಿಸಿ ತಾಲೂಕಿನ ಜನತೆಗೆ ಸ್ವಾತಂತ್ರೋತ್ಸವದ ಶುಭಾಶಯ ಕೋರಿದರು. ಇದೇ ವೇಳೆ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ, ಪೋಲಿಸ್ ಇಲಾಖೆಯಿಂದ ಕವಾಯತು, ಗೃಹರಕ್ಷಕ ದಳದಿಂದ ಪಥಸಂಚಲನ ನಡೆಯಿತು. ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಸಾಲ ಜಯರಾಮ್ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪಥ ಸಂಚಲ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ತಹಸಿಲ್ದಾರರು ವಂದನೆ ಸ್ವೀಕರಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ರಾಜಕೀಯದ ಗಣ್ಯರು ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು. ವರದಿ: ಸುರೇಶ್ ಬಾಬು, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ತಿಪಟೂರು: ಕಲ್ಪತರು ಕ್ರೀಡಾಂಗಣದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸಲಾಯಿತು.ತಿಪಟೂರು ಉಪವಿಭಾಗಾಧಿಕಾರಿ ಕಲ್ಪಶ್ರೀ ಧ್ವಜಾರೋಹಣ ನೆರವೇರಿಸಿ ಪೋಲಿಸ್ ತುಕಡಿ, ಗೃಹರಕ್ಷಕದಳ ಎನ್.ಸಿ.ಸಿ ತುಕ್ಕಡಿ , ಸ್ಕೌಟ್ಸ್ ತುಕ್ಕಡಿ ಸೇರಿದಂತೆ ವಿವಿಧ ಶಾಲಾ ತಂಡಗಳಿಂದ ಧ್ವಜವಂದನೆ ಸ್ವೀಕರಿಸಿದರು. ಇದೇ ವೇಳೆ ಮಾತನಾಡಿದ ಅವರು, ದೇಶದ ಲಕ್ಷಾಂತರ ಜನರಲ್ಲಿ ದೇಶ ಪ್ರೇಮದ ಕಿಚ್ಚನ್ನು ಹೊತ್ತಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಚಳುವಳಿ, ದಂಡಿಯಾತ್ರೆ, ಅಸಹಕಾರ ಚಳುವಳಿ , ಕ್ವಿಟ್ ಇಂಡಿಯಾ ಸತ್ಯಾಗ್ರಹದಂತಹ ಸಾವಿರಾರು ಹೋರಾಟಗಳು ಬ್ರಿಟಿಷ್ ಸರ್ವಾಧಿಕಾರಿ ಆಡಳಿತವನ್ನು 1947 ರ ಆಗಸ್ಟ್ 15 ರಂದು ಕೊನೆಗಾಣಿಸಿತು. ಲಕ್ಷಾಂತರ ಜನ ಧೀಮಂತ ನಾಯಕರು ತ್ಯಾಗ ಬಲಿದಾನದ ಮೂಲಕ ಅಪರಿಮಿತ ಶ್ರಮದ ಮೂಲಕ ಈ ಸುದಿನವನ್ನು ನಮ್ಮ ಪಾಲಿಗೆ ಬಿಟ್ಟುಹೋಗಿದ್ದಾರೆ . ಸ್ವಾಮಿ ವಿವೇಕಾನಂದರು ‘ ಏಳಿ , ಎದ್ದೇಳಿ , ಗುರಿ ಮುಟ್ಟುವ ತನಕ ನಿಲ್ಲದಿರಿ ‘ ಎಂಬ ಘೋಷಣೆಯೊಂದಿಗೆ ಯುವ ಸಮುದಾಯವನ್ನು ಹುರಿದುಂಬಿಸಿದರು ಎಂದರು. ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ…
ತುರುವೇಕೆರೆ: ತಾಲೂಕಿನ ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ಜಾಬಿರ್ ಉಸೇನ್ ಹಾಗೂ ಸದಸ್ಯರಾದ ಸಂದೇಶ್ ರವರು , ಸ್ವಾತಂತ್ರ್ಯ ಎಂಬುದು ನಮ್ಮ ಭಾರತ ದೇಶ ಹೆಮ್ಮೆಪಡುವ ವಿಷಯ. ದೇಶಕ್ಕಾಗಿ ಹೋರಾಟ ಮಾಡಿದ ಹೋರಾಟಗಾರರನ್ನು ಸ್ಮರಿಸಿ ಗೌರವಿಸಿ ಅವರ ಧ್ಯೇಯ ಪಾಲಿಸುವ ಮೂಲಕ ಆತ್ಮ ನಿರ್ಭರ ಭಾರತ ನಿರ್ಮಾಣ ಆಗಬೇಕು ಎಂದರು. ಹಾಲಿ ಅಧ್ಯಕ್ಷರಾದ ಜಾಬಿರ್ ಹುಸೇನ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸು, ಕರವಸೂಲಿಗಾರ ಬಾಲ ಕುಮಾರ್ , ಕಾರ್ಯದರ್ಶಿ ಸಿ .ಡಿ.ವೆಂಕಟಾಚಲ ಮೊದಲಾದವರು ಈ ವೇಳೆ ಇದ್ದರು. ವರದಿ: ಸುರೇಶ್ ಬಾಬು, ತುರುವೇಕೆರೆ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಧುಗಿರಿ: ಮಧುಗಿರಿ ತಾಲೂಕು ಆಡಳಿತದ ವತಿಯಿಂದ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ನಡೆಯಿತು. ತಾಲೂಕು ದಂಡಾಧಿಕಾರಿಗಳಾದ ಸೋಮಪ್ಪ ಕಡಕೋಳ ಧ್ವಜಾರೋಹಣ ನಡೆಸಿ ತಾಲೂಕಿನ ಜನತೆಗೆ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ಕೋರಿದರು. ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ಪೋಲಿಸ್ ಇಲಾಖೆ ವತಿಯಿಂದ ಕವಾಯತು, ಗೃಹರಕ್ಷಕ ದಳದಿಂದಲೂ ಪಥಸಂಚಲನ ನಡೆಯಿತು. ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ವಿ.ವೀರಭದ್ರಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪಥ ಸಂಚಲ ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ತಹಶೀಲ್ದಾರರು ವಂದನೆಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ರಾಜಕೀಯದ ಗಣ್ಯರು, ಶಿಕ್ಷಕರು ಮಕ್ಕಳು ಪಾಲ್ಗೊಂಡಿದ್ದರು. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಸರಗೂರು: ತಾಲ್ಲೂಕಿನ ರಾಷ್ಟ್ರೀಯ ಹಬ್ಬದ ಆಡಳಿತ ವತಿಯಿಂದ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು. ತಹಸೀಲ್ದಾರ್ ಚೆಲುವರಾಜು ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ತಹಸೀಲ್ದಾರ್ ಚೆಲುವರಾಜು ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಮೂರು ದಿನಗಳ ಕಾಲ ಪ್ರತಿ ಮನೆ ಮನೆಗೂ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದರು. ಜಾಥಾದಲ್ಲಿ ತಾಲ್ಲೂಕಿನ ಅಧಿಕಾರಿಗಳು, ಪಟ್ಟಣದ ಎಲ್ಲಾ ಶಾಲೆಯ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಚೆಲುವರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್.ಕಬಿನಿ ಉಪಾವಿಭಾಗ ನೀರಾವರಿ ಇಲಾಖೆ ಅಧಿಕಾರಿ ಉಷಾ.ಪಪಂ ಮುಖ್ಯಾಧಿಕಾರಿ ಬಿ.ಜಿ. ಸತೀಶ್, ಕೃಷಿ ಇಲಾಖೆ ಅಧಿಕಾರಿ ಮಹೇಶ್ ಕುಮಾರ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರು ಮಲ್ಲೇಶ್, ಪಪಂ ಸದಸ್ಯರು ಎಸ್ ಎಲ್ ರಾಜಣ್ಣ, ಶ್ರೀನಿವಾಸ್, ಹೇಮವತಿರಮೇಶ್, ವಿರೇಶ್, ದಿವ್ಯನವೀನ್, ಚೈತ್ರಸ್ವಾಮಿ, ಉಮಾರಾಮಚಂದ್ರ, ಚಲುವಕೃಷ್ಣ, ಉಪತಹಸೀಲ್ದಾರ್…
ಮಧುಗಿರಿ: ಇತಿಹಾಸ ಪ್ರಸಿದ್ಧ ಏಷ್ಯಾದ ಪ್ರಥಮ ಏಕಶಿಲಾ ಬೆಟ್ಟದಲ್ಲಿ 12 ಬೆಟಾಲಿಯನ್ ಕೆ ಎಸ್ ಆರ್ ಪಿ ತಂಡ ಮತ್ತು ಮಧುಗಿರಿಯ ತಾಲೂಕು ಆಡಳಿತ ಅಧಿಕಾರಿಗಳ ತಂಡ ಇಂದು ಮಧುಗಿರಿ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ರಾಷ್ಟ್ರೀಯತೆಯ ಭಕ್ತಿಯನ್ನು ತೋರಿದ್ದಾರೆ. 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ಪ್ರಯುಕ್ತ ತ್ರಿವರ್ಣ ಧ್ವಜವನ್ನು ಎತ್ತರದ ಪ್ರದೇಶದಲ್ಲಿ ಹಾರಿಸುವುದು ದೇಶದ ಹೆಮ್ಮೆ ಮತ್ತು ತಿರಂಗ ಧ್ವಜದ ಗೌರವ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತದೆ. ಈ ಬಗ್ಗೆ ಮಾತನಾಡಿದ ಕೆ ಎಸ್ ಆರ್ ಪಿ 12ನೇ ಬೆಟಾಲಿಯನ್ ಇನ್ಸ್ಪೆಕ್ಟರ್ ಹರೀಶ್, ನಮ್ಮ 12ನೇ ಬೆಟಾಲಿಯನ್ ಪ್ರತಿವಾರವೂ ಒಂದೊಂದು ಟ್ರಕ್ಕಿಂಗ್ ಪ್ರದೇಶಗಳಿಗೆ ಹೋಗುತ್ತೇವೆ. ಅದರಂತೆ ಇಂದು ಸ್ವತಂತ್ರ ಮಹೋತ್ಸವದ ಅಂಗವಾಗಿ ಮಧುಗಿರಿ ಏಕಶಿಲಾ ಬೆಟ್ಟಕ್ಕೆ ಏರಿ ತಿರಂಗ ಧ್ವಜವನ್ನು ಕೇಂದ್ರ ಸರ್ಕಾರದ ಆಗ್ನೇಯದ ಅತಿ ಎತ್ತರದಲ್ಲಿ ಹಾರಿಸಿದ್ದು ಖುಶಿ ತಂದಿದೆ. ಇದರ ಸಾರಥ್ಯವನ್ನು ವಹಿಸಿದ್ದ ಹಾಗೂ ನಮ್ಮೆಲ್ಲರಿಗೂ ಇಂತಹ ಅವಕಾಶವನ್ನು ಕೊಟ್ಟಿದ್ದಕ್ಕೆ ಅಸಿಸ್ಟೆಂಟ್ ಕಮಂಡೆಂಟ್ ಪಟೇಲ್ ಬಿಸಿ…
ಅಪಾರ್ಟ್ ವೊಂದರ ಹತ್ತನೇ ಮಹಡಿಯಿಂದ ಸಾಫ್ಟ್ವೇರ್ ಕಂಪನಿ ಉದ್ಯೋಗಿ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ತ್ರಿದೀಪ್(30) ಮೃತಪಟ್ಟ ಸಾಫ್ಟ್ವೇರ್ ಕಂಪನಿ ಉದ್ಯೋಗಿ. ಬೆಳ್ಳಂದೂರಿನ ಗ್ರೀನ್ ಶೋಭಾ ಡೈಸಿ ಅಪಾರ್ಟ್ಮೆಂಟ್ನಲ್ಲಿ ತ್ರಿದೀಪ್ ವಾಸವಾಗಿದ್ದರು. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ತ್ರಿದೀಪ್ 10ನೇ ಮಹಡಿಯಿದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಬೆಳ್ಳಂದೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನಕಲಿ ಮದ್ಯಸೇವನೆಯಿಂದ ಆರು ಮಂದಿ ಸಾವನ್ನಪ್ಪಿ ಹಲವರು ಅಸ್ವಸ್ಥಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಭೂಲ್ಪುರ್ ಗ್ರಾಮದಲ್ಲಿ ನಡೆದಿದೆ.ಮೃತರನ್ನು ಭೂಲ್ಪುರ್ ನಿವಾಸಿಗಳಾದ ಕಾಮೇಶ್ವರ್ ಮಹತೋ, ರಾಮ್ಜೀವನ್, ರೋಹಿತ್ ಸಿಂಗ್, ಕಾಪುಸಿಂಗ್, ಗರ್ಕಾವೋದಾ ಗ್ರಾಮದ ಮಹಮ್ಮದ್ ಅಲ್ಲಾವುದ್ದೀನ್ ಖಾನ್ ಎಂದು ಗುರುತಿಸಲಾಗಿದೆ. ನಕಲಿ ಮದ್ಯಸೇವನೆಯಿಂದ ಇನ್ನೂ ಹಲವರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಮಚ್ಚನಪುರ ಗ್ರಾಮದ ಮಹಿಳೆಯಿಂದ ಮದ್ಯ ಖರೀದಿಸಿ ಸೇವನೆ ಮಾಡಿದ ಬಳಿಕ ವಾಂತಿ-ಭೇದಿ ಶುರುವಾಗಿತ್ತು ಎಂದು ರಾಮನಾಥ್ ಎಂಬುವವರು ತಿಳಿಸಿದ್ದು, ತಕ್ಷಣ ಅವರನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಹಾರದಲ್ಲಿ ನಕಲಿ ಮದ್ಯ ಸೇವನೆಯಿಂದ ಇದು ಎರಡನೆ ಅವಘಡವಾಗಿದ್ದು, ಆ.4ರಂದು ಬೆಳ್ಳಿ ಮತ್ತು ಮೇಕರ್ ಪೊಲೀಸ್ ಠಾಣೆ ವ್ಯಾಪ್ತಿ ಹಳ್ಳಿಗಳಲ್ಲಿ ಮದ್ಯ ಸೇವಿಸಿ 13 ಜನ ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ದೃಷ್ಟಿ ಕಳೆದುಕೊಂಡಿದ್ದರು. ಏ.2016ರಿಂದ ಬಿಹಾರದಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿಷೇಸಲಾಗಿತ್ತು.ಈ ನಡುವೆ ನಕಲಿ ಮದ್ಯದ…