Subscribe to Updates
Get the latest creative news from FooBar about art, design and business.
- ಚುನಾವಣೆಗೆ ನಿಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ, ಸದ್ಯ ಹಾಲು ಮಾರೋ ಕೆಲಸ ಕೊಟ್ಟಿದ್ದಾರೆ: ಡಿ.ಕೆ.ಸುರೇಶ್
- ನಾನೇನು ಎಂಬುದು ಸಿಎಂಗೆ ಚೆನ್ನಾಗಿ ಗೊತ್ತಿದೆ: ಡಿ.ಕೆ.ಶಿವಕುಮಾರ್
- ರಾಜ್ಯ ಸರ್ಕಾರಕ್ಕೆ ಫೋನ್ ಕದ್ದಾಲಿಕೆ ಮಾಡುವ ಅಗತ್ಯವಿಲ್ಲ: ಸಚಿವ ರಾಮಲಿಂಗಾ ರೆಡ್ಡಿ
- ವಿದೇಶಿ ಪ್ರವಾಸಕ್ಕೆ ಹೋಗಿದ್ದ ಶಾಸಕರು ವಾಪಸ್: ಯಾರ್ಯಾರು, ಏನೇನು ಅಧ್ಯಯನ ಮಾಡಿದ್ರು ?
- ಖಮೇನಿ ಹತ್ಯೆ ಹಿನ್ನೆಲೆ ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸುವವರ ವಿರುದ್ಧ ಕಠಿಣ ಕ್ರಮ: ಗೃಹ ಸಚಿವ ಜಿ.ಪರಮೇಶ್ವರ್ ಎಚ್ಚರಿಕೆ
- ಚಿಕ್ಕನಾಯಕನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಶಾಸಕ ಸುರೇಶ್ ಬಾಬು ಸೂಚನೆ
- ನಾಪತ್ತೆಯಾಗಿದ್ದ ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಗಳು ಪತ್ತೆ: ಸ್ವಾಮೀಜಿ ಹೋಗಿದ್ದೆಲ್ಲಿಗೆ?
- ತುಮಕೂರು: ಭೀಮಸಂದ್ರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೂಚನೆ
Author: admin
ಪಡುವಲಕಾಯಿ ಜ್ಯೂಸ್ ನಿಂದ ನಮ್ಮ ದೇಹದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ತೂಕ ಇಳಿಕೆ, ಜೀರ್ಣಕ್ರಿಯೆ, ಹೃದಯ ಸಂಬಂಧಿ ಕಾಯಿಲೆ ಹೀಗೆ ಹಲವು ಬಗೆಯಲ್ಲಿ ಪಡವಲಕಾಯಿ ನಮ್ಮ ಆರೋಗ್ಯಕ್ಕೆ ವರದಾನವಾಗಿದೆ. ಇದರಲ್ಲಿ ಕ್ಯಾಲೋರಿಗಳು ಮತ್ತು ಕೊಬ್ಬಿನಲ್ಲಿ ತುಂಬಾ ಕಡಿಮೆಯಾಗಿದೆ. ಈ ಕಾರಣದಿಂದಾಗಿ, ತೂಕವನ್ನು ನಿಯಂತ್ರಿಸಲು ಇದು ಸಹಕಾರಿಯಾಗಿದೆ. ಪಡವಲಕಾಯಿಯಲ್ಲಿ ಫೈಬರ್ ಮತ್ತು ಶೇ.98 ರಷ್ಟು ನೀರು ಸಮೃದ್ಧವಾಗಿದೆ. ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಇದು ತುಂಬಾ ಸಹಾಯಕವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಪಡವಲಕಾಯಿ ಸಹಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಪಡವಲಕಾಯಿ ರಸವನ್ನು ಸೇವಿಸುವುದರಿಂದ ದೇಹಕ್ಕೆ ಪೋಷಕಾಂಶಗಳು ದೊರೆಯುತ್ತವೆ. ಮಾತ್ರವಲ್ಲದೇ ಕೂದಲಿನ ಆರೈಕೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಪಡವಲಕಾಯಿಯಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಇವೆ. ಇದರ ರಸವನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ. ಪಡವಲಕಾಯಿ ದೇಹದಿಂದ ವಿಷವನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಮೂತ್ರಪಿಂಡಗಳು ಮತ್ತು ಮೂತ್ರಕೋಶಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ…
ನವದೆಹಲಿ : ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ನಾಳೆ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ 7987 ಮತಗಳನ್ನು ಪಡೆದು ಸ್ಪಷ್ಟ ಗೆಲುವು ಸಾಧಿಸಿದರೆ, ತರೂರ್ 1072 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಸುಮಾರು 24 ವರ್ಷಗಳ ನಂತರ ಅವರು ಗಾಂಧಿಯೇತರ ಪಕ್ಷದ ಮೊದಲ ಅಧ್ಯಕ್ಷರಾಗಿದ್ದಾರೆ. ಪಕ್ಷದ ನೂತನ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಐತಿಹಾಸಿಕ ದಿನವಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಮಹಿಳೆಯ ನಗ್ನ ಫೋಟೊ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನ ಬೆಂಗಳೂರಿನ ಈಶಾನ್ಯ ಸಿಎಎನ್ ಪೊಲೀಸರು ಬಂಧಿಸಿದ್ದಾರೆ. ಮಹಂತೇಶ್ ಬಂಧಿತ ಆರೋಪಿ. ಈತ ಮಹಿಳೆಯೊಬ್ಬರ ನಗ್ನ ಫೋಟೊ ಇಟ್ಟುಕೊಂಡು 30 ಲಕ್ಷ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ಧ. ಹಣ ನೀಡದಿದ್ದರೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ಧ. ಬೆದರಿಕೆಗೆ ಮಹಿಳೆ ಸೊಪ್ಪು ಹಾಕದಿದ್ದಾಗ ಕೆಲ ಫೋಟೊ ಕಳುಹಿಸಿದ್ದ. ಈ ಹಿನ್ನೆಲೆಯಲ್ಲಿ ಮಹಿಳೆ ಈ ಸಂಬಂಧ ಈಶಾನ್ಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಪೊಲೀಸರು ಆರೋಪಿ ಮಹಂತೇಶನನ್ನ ಬಂಧಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ದೀಪಾವಳಿ ಹಬ್ಬದ ನಡುವೆಯೇ ಇಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ದೀಪಾವಳಿ ಅಮಾವಾಸ್ಯೆಯಂದೇ ಸೂರ್ಯಗ್ರಹಣ ಸಂಭವಿಸುತ್ತಿದ್ದು ರಾಜ್ಯದ ಹಲವು ದೇವಸ್ಥಾನಗಳಲ್ಲಿ ಇಂದು ಮಧ್ಯಾಹ್ನದ ನಂತರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಇದೀಗ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತಿದ್ದು. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನ ನೋಡಬಹುದು. ಸೂರ್ಯಗ್ರಹಣ ಇಂದು ಸಂಜೆ 4.29ಕ್ಕೆ ಪ್ರಾರಂಭವಾಗಿ ಸಂಜೆ 5.42ಕ್ಕೆ ಕೊನೆಗೊಳ್ಳುತ್ತದೆ. ಭಾರತವಲ್ಲದೆ, ಯುರೋಪ್, ಆಫ್ರಿಕಾ ಖಂಡದ ಈಶಾನ್ಯ ಭಾಗ, ಏಷ್ಯಾದ ನೈಋತ್ಯ ಭಾಗ ಮತ್ತು ಅಟ್ಲಾಂಟಿಕ್‌ನಲ್ಲಿಯೂ ಇದನ್ನು ಕಾಣಬಹುದು. ಸೂತಕದ ಅವಧಿಯು ಸೂರ್ಯಗ್ರಹಣಕ್ಕೆ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಗ್ರಹಣ ಮುಗಿದ ನಂತರ ಸೂತಕ ಕೊನೆಗೊಳ್ಳುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸೂತಕದ ಅವಧಿಯಲ್ಲಿ ಯಾವುದೇ ಮಂಗಳಕರ ಅಥವಾ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಇದು ಹೊಟ್ಟೆಯಲ್ಲಿ…
ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರ ಪತಿ ಜಾನ್ ಷಾ ಸೋಮವಾರ, ಅಂದರೆ ಇಂದು ನಿಧನರಾಗಿರುವುದಾಗಿ ಸಂಸ್ಥೆಯ ವಕ್ತಾರರು ದೃಢಪಡಿಸಿದ್ದಾರೆ. ಈ ವಿಶ್ವಮಾನ್ಯ ಬಯೋಟೆಕ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಅನಾರೋಗ್ಯ ಕಾರಣಗಳಿಂದಾಗಿ ಕಳೆದ ವರ್ಷ ಉಪಾಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಮೃತರ ಅಂತಿಮಸಂಸ್ಕಾರವನ್ನು ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿರುವ ಚಿತಾಗಾರದಲ್ಲಿ ಇಂದು ನಡೆಸಲಾಗುವುದು. ಇವರ ನಿಧನದ ನಿಖರವಾದ ಕಾರಣವನ್ನು ಸಂಸ್ಥೆ ಬಹಿರಂಗಪಡಿಸಿಲ್ಲ. ಜಾನ್ ಷಾ ಅವರು 1949ರಲ್ಲಿ ಜನಿಸಿದರು. 1999ರಿಂದ ಬಯೋಕಾನ್ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದು, ವಿದೇಶ ಪ್ರಮೋಟರ್ ಆಗಿ ಸೇವೆ ಸಲ್ಲಿಸಿದರು. ಜೊತೆಗೆ ಬಯೋಕಾನ್ ಸಮೂಹ ಸಂಸ್ಥೆಗಳ ವಿವಿಧ ಸಲಹಾ ಮಂಡಳಿಗಳಲ್ಲಿಯೂ ಇದ್ದಾರು. ಇವರು ೧೯೯೧ ರಿಂದ ೧೯೯೮ರವರೆಗೆ ಮಧುರಾ ಕೋಟ್ಸ್ ನ ಅಧ್ಯಕ್ಷರಾಗಿದ್ದರು. ಅದಕ್ಕೂ ಮುಂಚೆ ಅವರು ಕೋಟ್ಸ್ ವಿಯೆಲ್ಲಾದಲ್ಲಿ ಮೂರು ದಶಕಗಳ ಕಾಲ ಲ್ಯಾಟಿನ್ ಅಮೇರಿಕ, ಆಫ್ರಿಕಾ ಮತ್ತು ಯೂರೋಪ್ ಗಳಲ್ಲಿ ಹಣಕಾಸು ಹಾಗೂ ಪ್ರಧಾನ ನಿರ್ವಹಣೆಯಲ್ಲಿ ಸೇವೆ ಸಲ್ಲಿಸಿದ್ದರು. ಷಾ ಅವರು 1970ರಲ್ಲಿ…
ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಪಕ್ಷದ ಕೂಸು ಎಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್. ನ್ಯಾ. ನಾಗಮೋಹನ್ ದಾಸ್ ಸಮಿತಿ ಮಾಡಿದ್ದಕ್ಕೆ ಯಶಸ್ಸು ಸಿಕ್ಕಿದೆ. ಕಾಂಗ್ರೆಸ್ ಪಕ್ಷದ ಭಯಕೆ ನ್ಯಾಯ ಒದಗಿಸಬೇಕು ಅನ್ನೋದು. ಎಸ್ ಟಿ ಸಮುದಾಯದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಇಲ್ಲದಿದ್ರೆ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಹೆಚ್ಚಿಸುತ್ತಿದ್ದರು. ಬರೀ ಪೆಫರ್ ನಲ್ಲಿ ಚಾಕಲೇಟ್ ಇಟ್ಟು ಕೊಡಲು ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣೊರೆಸೋ ತಂತ್ರವಷ್ಟೆ ಎಂದು ಟೀಕಿಸಿದರು. ಭಾರತ್ ಜೋಡೋ ಯಾತ್ರೆಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ. ಬಸ್ ಯಾತ್ರೆ ಬಗ್ಗೆ ನಾನೋಬ್ಬನೆ ನಿರ್ಧಾರ ಮಾಡಲು ಆಗಲ್ಲ. ಎಲ್ಲಾ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಮಾಡಬೇಕು. ಎಲ್ಲರ ಜತೆ ಚರ್ಚಿಸಿ ಬಸ್ ಯಾತ್ರೆ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ಮತ್ತೊಂದು ಯಾತ್ರೆ ಮಾಡುತ್ತೇವೆ ಎಂದು ಡಿ.ಕೆ ಶಿವಕುಮಾರ್…
ಗಂಡೆದೆ ಇರುವವರು ಮಾತ್ರ ಮೀಸಲಾತಿ ಕೊಡಲು ಸಾಧ್ಯ. ಆ ಗಂಡೆದೆಯನ್ನ ತೋರಿಸಿದವರು ಸಿಎಂ ಬಸವರಾಜ ಬೊಮ್ಮಾಯಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹಾಡಿ ಹೊಗಳಿದರು. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆರ್.ಅಶೋಕ್, ಸಿಎಂ ಬೊಮ್ಮಾಯಿ ಮೆಂಟಲಿ ಪ್ರಿಪೇರ್ ಆಗಿ ಇದನ್ನ ಮಾಡಿದ್ದಾರೆ. ಚಾಣಕ್ಯ ವಿದ್ಯೆ ಕಲಿತವರು ಸಿಂ ಬೊಮ್ಮಾಯಿ . ಚಾಣಕ್ಯತನದಿಂದ ಜೇನುಗೂಡಿಗೆ ಕಲ್ಲು ಹೊಡೆಯದಂತ ಮೀಸಲಾತಿ ಹೆಚ್ಚಳದ ಬಗ್ಗೆ, ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದರು. ಹಿಂದಿನ ಸರ್ಕಾರಗಳು ಮೀಸಲಾತಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನಮಗೆ ಜೇನುಗೂಡಿಗೆ ಕಲ್ಲು ಹೊಡೆದಂತಾಗುತ್ತದೆ ಎಂದಿದ್ದರು. ಆದರೆ ನಾವು ಎಸ್ ಸಿ ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದೇವೆ. ಗಂಡೆದೆ ಇರುವವರಿಂದ ಮಾತ್ರ ಇದು ಸಾಧ್ಯ ಎಂದು ಸಚಿವ ಅಶೋಕ್ ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ನವದೆಹಲಿ : ವಾಹನಗಳನ್ನು ವೇಗವಾಗಿ ಚಾಲನೆ ಮಾಡಿ ಮೃತಪಟ್ಟವರ ವರದಿ ಬಿಡುಗಡೆ ಮಾಡಿದ್ದು, ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಈ ಕುರಿತಂತೆ ಬಿಡುಗಡೆ ಮಾಡಿರುವ ವರದಿಯಂತೆ , ಕಳೆದ ವರ್ಷ ಅತಿ ವೇಗದ ಚಾಲನೆಯಿಂದ ತಮಿಳುನಾಡಿನ ಬಳಿಕ ಕರ್ನಾಟಕದಲ್ಲಿಯೇ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ತಮಿಳುನಾಡಿನಲ್ಲಿ 11,419 ಮಂದಿ ಸಾವನ್ನಪ್ಪಿದ್ದರೆ ಕರ್ನಾಟಕದಲ್ಲಿ 8,797 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ವರ್ಷ ದೇಶದಲ್ಲಿ ಒಟ್ಟು 4,03,116 ರಸ್ತೆ ಅಪಘಾತಗಳು ಸಂಭವಿಸಿದ್ದು ಈ ಪೈಕಿ 2,40,828 ಪ್ರಕರಣಗಳು ಅತಿ ವೇಗದ ಚಾಲನೆಯಿಂದ ಸಂಭವಿಸಿದೆ. ಕಳೆದ ವರ್ಷ ಕರ್ನಾಟಕದಲ್ಲಿ ಒಟ್ಟು 34,647 ಅಪಘಾತ ಪ್ರಕರಣಗಳು ಸಂಭವಿಸಿದ್ದು,10,038 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ವೇಗದ ಚಾಲನೆಯಿಂದಲೇ 8,797 ಮಂದಿ ಸಾವನ್ನಪ್ಪಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz
ಬೆಳಗಾವಿ : ಕಿತ್ತೂರು ಬಳಿ 1,000 ಎಕರೆ ಕೈಗಾರಿಕಾ ಟೌನ್ ಶಿಪ್ ನಿರ್ಮಿಸಲು ನಿರ್ಧರಿಸಲಾಗಿದ್ದು, ಇದರಿಂದ 50 ಸಾವಿರ ಯುವಕರಿಗೆ ಉದ್ಯೋಗ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಚನ್ನಮ್ಮನ್ನ ಕಿತ್ತೂರಿನ ಕೋಟೆ ಆವರಣದಲ್ಲಿ ಸೋಮವಾರ ಚನ್ನಮ್ಮನ ಕಿತ್ತೂರು ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು , ಚೆನ್ನಮ್ಮನ ಅರಮನೆ ನಿರ್ಮಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 50 ಕೋಟಿ ಕೊಟ್ಟಿದ್ದರು, ನಾವು ಈಗ ಅದನ್ನು 115 ಕೋಟಿ ರೂ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ನಿಮ್ಮೆಲ್ಲರ ಆಶೀರ್ವಾದ, ಚನ್ನಮ್ಮ ಆಶೀರ್ವಾದದಿಂದ ಎರಡು ನೀರಾವರಿ ಯೋಜನೆಗೆ ಅನುಮತಿ ಪಡೆಯಬೇಕಿದೆ. ಕಳಸಾ ಬಂಡೂರಿ ಯೋಜನೆ ಅಂತಿಮ ಹಂತದಲ್ಲಿದೆ. ಅದಕ್ಕೂ ಒಪ್ಪಿಗೆ ಪಡೆದು ಆದಷ್ಟು ಬೇಗ ಕೆಲಸ ಮುಗಿಸುತ್ತೇವೆ ಎಂದರು. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ ಎಂದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಲಂಡನ್: ರಿಶಿ ಸುನಕ್ ಅವರನ್ನು ಯುನೈಟೆಡ್ ಕಿಂಗ್ಡಮ್ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅವರ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 100 ಸಂಸದರ ಬೆಂಬಲವನ್ನು ಗಳಿಸಲು ವಿಫಲರಾಗಿದ್ದರಿಂದ ಅವರು 190 ಕ್ಕೂ ಹೆಚ್ಚು ಸಂಸದರಿಂದ ಚುನಾಯಿತರಾಗಿದ್ದಾರೆ. ಪೆನ್ನಿ ಮೊರ್ಡೌಂಟ್ ಟ್ವೀಟನಲ್ಲಿ ತಾನು ರೇಸ್ನಿಂದ ಹೊರಗುಳಿಯುತ್ತಿದ್ದೇನೆ ಮತ್ತು ಯುಕೆ ಪ್ರಧಾನಿಯಾಗಿ ಸುನಕ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಘೋಷಿಸಿದರು. ಈ ಮೂಲಕ ಸುನಕ್ ಬ್ರಿಟನ್ 57 ನೇ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಇನ್ನು ರಿಷಿ ಸುನಕ್ ಅವರ ಹಿನ್ನೆಲೆ ಗಮನಿಸುವುದ್ದಾರೇ ಪ್ರತಿಷ್ಠಿತ ವಿಂಚೆಸ್ಟರ್ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್, ಆಕ್ಸ್‌ಫರ್ಡ್ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ. ಸದ್ಯ ಹಣಕಾಸು ಸಚಿವ ಹುದ್ದೆಯಲ್ಲಿದ್ದು, 2015ರಲ್ಲಿ ರಿಷಿ ಬ್ರಿಟನ್ ಸಂಸತ್ತನ್ನ ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವರಾದ್ರು. ವಿಶೇಷವೆಂದ್ರೆ, ಕೋವಿಡ್…