Author: admin

ತುಮಕೂರು: ಮಳೆ ಅವಾಂತರದಿಂದಾಗಿ ವಿದ್ಯುತ್ ಶಾಕ್ ಹೊಡೆದ ಮೃತಪಟ್ಟ  ವ್ಯಕ್ತಿಯ ಕುಟುಂಬಸ್ಥರನ್ನು ಭೇಟಿ ಮಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಮೃತರ ಕುಟುಂಬಕ್ಕೆ  ಸಾಂತ್ವನ ಹೇಳಿ, 6 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಿದರು. ಸರ್ಕಾರದಿಂದ 5 ಲಕ್ಷ ಹಾಗೂ ಮಹಾನಗರ‌ ಪಾಲಿಕೆಯಿಂದ 1 ಲಕ್ಷ ಪರಿಹಾರ ನೀಡಲಾಯಿತು.  ಝೀರೋ ಟ್ರಾಫಿಕ್ ನಲ್ಲಿ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡಿದ ಗೃಹಸಚಿವರು. 20 ನಿಮಿಷಗಳ ಕಾಲ ಮಳೆ ಹಾನಿ ವೀಕ್ಷಿಸಿ ಬಳಿಕ ತೆರಳಿದರು. ಗೃಹಸಚಿವರ ಭೇಟಿ ಹಿನ್ನೆಲೆಯಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.  ಮಹಾನಗರ ಪಾಲಿಕೆ, ಚರ್ಚ್ ಸರ್ಕಲ್, ಕೋಟೆ ಆಂಜನೇಯ ದೇವಾಲಯ ಮುಂಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜಡಿ ಮಳೆಯಲ್ಲಿ ಸಿಲುಕಿದ ಪ್ರಯಾಣಿಕರು ಹಿಡಿಶಾಪ ಹಾಕಿರುವುದು ಕಂಡು ಬಂತು. ತುಮಕೂರಿನ ಎಸ್ ಮಾಲ್, ಅಮಾನಿಕೆರೆ ಹಾಗೂ ಕೋತಿತೋಪು ಬಳಿಯಿರುವ ಮನೆಗಳಿಗೆ ಸಚಿವರು ಭೇಟಿ ನೀಡಿದರು. ಗೃಹ ಸಚಿವರ ಜೊತೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಶಾಸಕ ಜ್ಯೋತಿ ಗಣೇಶ್, ಹಾಗೂ…

Read More

ತುಮಕೂರು: ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ನಂದಿ ಧ್ವಜ,ವೀರಗಾಸೆ ಕಲಾ ಪ್ರದರ್ಶನದ ಜೊತೆಗೆ,ಸಾವಿರಾರು ಸಂಖ್ಯೆಯಲ್ಲಿದ್ದ ಲಿಂಗಾಯಿತ,ವೀರಶೈವ ಸಮುದಾಯದ ಮುಖಂಡರುಗಳು ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು. ಪ್ರತಿಭಟನಾನಿರತ ವೀರಶೈವ,ಲಿಂಗಾಯಿತ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಶಿವಲಿಂಗಸ್ವಾಮೀಜಿ,ಗೊಲ್ಲಹಳ್ಳಿಮಠದ ಶ್ರೀವೀಭವ ವಿದ್ಯಾಶಂಕರ ಸ್ವಾಮೀಜಿ, ಮಾಕನಹಳ್ಳಿ ಮಠದ ಶ್ರೀಗಂಗಾಧರ ಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹರಳೂರು ಮಠದ ಶ್ರೀ ಚನ್ನಬಸವಸ್ವಾಮೀಜಿಗಳು, ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ವೀರಶೈವ, ಲಿಂಗಾಯಿತರು ಸೇರಿದ್ದಾರೆ.ಆದರೆ ಕೇಂದ್ರದ ಪಟ್ಟಿಯಲ್ಲಿ ಇಲ್ಲ.ಇದರಿಂದ ಯುಪಿಎಸ್ಸಿ,ಸೇರಿದಂತೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ವೀರಶೈವ ಲಿಂಗಾಯಿತ…

Read More

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬೆಳಿಗ್ಗೆಯಿಂದ ಗುಡುಗು, ಸಿಡಿಲಿನೊಂದಿಗೆ ಬಿಟ್ಟು ಬಿಡದೆ ಬಿರುಸಿನ ಮಳೆಯಾಗುತ್ತಿದೆ. ಚರಂಡಿಗಳು ಉಕ್ಕಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಜನ, ವಾಹನ ಸಂಚಾರಕ್ಕೆ ಅಡಚಣೆ ಆಗಿದೆ. ಕರಿ ಮೋಡಗಳು ದಟ್ಟೈಸಿದ್ದು, ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಬಿಸಿಲನಾಡು ವಿಜಯಪುರದಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಶಾಲೆ, ಕಾಲೇಜು, ಕಚೇರಿಗೆ ತೆರಳಲು ಮಕ್ಕಳು, ಶಿಕ್ಷಕರು, ನೌಕರರು ಪರದಾಡಿದರು. ಪಂಚಮಿ ಹಬ್ಬದ ಪ್ರಯುಕ್ತ ನಾಗರಕಟ್ಟೆಗೆ ಹಾಲೆರೆದು ಪೂಜೆ ಸಲ್ಲಿಸಲು ಮಹಿಳೆಯರು ತೆರಳಲಾಗದಷ್ಟು ಮಳೆ ಸುರಿಯುತ್ತಿದೆ. ಹೀಗಾಗಿ ಜನರು ಮನೆಯಲ್ಲೇ ನಾಗರ ಪಂಚಮಿ ಆಚರಿಸುತ್ತಿದ್ದಾರೆ. ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿಯಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ದಾವಣಗೆರೆ: ಮುಂಬರುವ ದಿನಗಳಲ್ಲಿ ಕರಾವಳಿಯಲ್ಲಿ ಕೊಲೆಯಾಗಿರುವ ಮಸೂದ್ ಹಾಗೂ ಫಾಜಿಲ್ ಮನೆಗೂ ಭೇಟಿ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯತೆಯೇ ನಮ್ಮ ನಿಲುವಾಗಿದ್ದು, ಯಾರಿಗೂ ಭೇದ-ಭಾವ ಮಾಡುವ ಪ್ರಶ್ನೆಯೇ ಇಲ್ಲ. ಮುಂಬರುವ ದಿನಗಳಲ್ಲಿ ಕರಾವಳಿಯಲ್ಲಿ ಕೊಲೆಯಾಗಿರುವ ಮಸೂದ್ ಹಾಗೂ ಫಾಜಿಲ್ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ. ಇನ್ನು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಪ್ರತಿಭಟನೆಗಳು ಕಡಿಮೆಯಾಗಿದ್ದು, ನಾವು ಈಗಾಗಲೇ ಕಾರ್ಯಾಚರಣೆ ಮಾಡುತ್ತಿರುವುದರಿಂದ ಎಲ್ಲರಿಗೂ ಕೂಡ ವಿಶ್ವಾಸ ಬಂದಿದೆ ಎಂದಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಬೆಂಗಾವಲು ಪಡೆ ವಾಹನ ಅಪಘಾತಕ್ಕೀಡಾಗಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ನ ತಿಪ್ಪೂರು ಬಳಿ ನಡೆದಿದೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನಿನ್ನೆ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಹೆಚ್.ಡಿ.ಕೆ. ಅವರ ಬೆಂಗಾವಲು ವಾಹನ ಕುಣಿಗಲ್ ಬಳಿ ಅಪಘಾತಕ್ಕೀಡಾಗಿದೆ. ನಿನ್ನೆ ತಡರಾತ್ರಿ 1 ಗಂಟೆಗೆ ಈ ಅಪಘಾತ ಸಂಭವಿಸಿದ್ದು, ಎಸ್ಕಾರ್ಟ್ ನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪೊಲೀಸ್ ಸಿಬ್ಬಂದಿ ಮಹೇಶ್, ಆನಂದ್, ಹರೀಶ್ ಎಂಬುವವರು ಗಾಯಗೊಂಡಿದ್ದು, ಗಾಯಾಳು ಸಿಬ್ಬಂದಿಗಳನ್ನು ಆದಿಚುಂಚನಗಿರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಊರುಕೇರಿಯ ಬೀದಿಗಳಲ್ಲಿ ಮನೆ ಬಾಗಿಲುಗಳಿಗೆ ಕತ್ತೆಯನ್ನು ಕರೆತಂದು ಹಸಿಬಿಸಿ ಕತ್ತೆ ಹಾಲನ್ನು ಎಳೆಮಕ್ಕಳಿಗೆ ಕರೆದು ಕೊಡುವ ಕತ್ತೆ ಹಾಲಿನ ವಹಿವಾಟು ಇತ್ತೀಚಿಗೆ ಜನಪ್ರಿಯವಾಗುತ್ತಿದೆ. ಆಂಧ್ರಪ್ರದೇಶದ ಅದಿಲಾಬಾದ್ ಜಿಲ್ಲೆಯ ಸೈಬು ಎಂಬ ಯುವಕ ಹೇಳುವ ಪ್ರಕಾರ ಒಂದು ಲೀಟರ್ ಕತ್ತೆ ಹಾಲಿನ ಬೆಲೆ ₹.10000. ಇವನ ಕಡೆಯ ನಾಲ್ಕಾರು ಕುಟುಂಬಗಳು ಸುಮಾರು ಇಪ್ಪತ್ತು ಕರೇವು ಕತ್ತೆಗಳ ಮಂದೆಯನ್ನು ದಟ್ಟಿದಾವಣಿ ಹಾಕಿಕೊಂಡು, ಕತ್ತೆಗಳ ಮೇಲೆಯೇ ತಮ್ಮ ಸಂಸಾರದ ಅಗತ್ಯ ಗಂತೆಗಬಾಳ ಹೇರುಹಾಕಿಕೊಂಡು ಬೆಂಗಳೂರಿಗೆ ಬಂದು ತಾತ್ಕಾಲಿಕವಾಗಿ ವಸ್ತಿ ಮಾಡಿಕೊಂಡಿದ್ದಾರೆ. ಖಾಲಿ ನಿವೇಶನ ವಿಸ್ತಾರದಲ್ಲಿ ಬಿಡದಿ ಬಿಟ್ಟಿರುವ ಕತ್ತೆಗಳಿಗೆ ಹಾಲಿನ ವಹಿವಾಟಿನಿಂದ ಗಳಿಸುವ ಹಣದಿಂದಲೇ ಹುಲ್ಲು ಹುರುಳಿ ಇಂಡಿ ಹೊಟ್ಟು ಖರೀದಿಸಿ ಮೇಯಿಸುತ್ತಾರೆ. ನಾವು ಕತ್ತೆಹಾಲನ್ನು ಶೆಟ್ಟಿಹಾಲು ಎಂದು ಕರೆಯುತ್ತೇವೆ. ಕತ್ತೆ ಹಾಲು ಕುಡಿದವರಿಗೆ ಸ್ಯಾನೆ ಜೀರ್ಣಶಕ್ತಿ ಬರುತ್ತದೆಯಂತೆ. ನಮ್ಮೂರಿನಲ್ಲಿ ಸುಣ್ಣಕಲ್ಲು ಮಾರಾಟ ಮಾಡುತ್ತಿದ್ದ ಸುಗಾಲಿ(ಬಂಜಾರ)ಯರ ಕತ್ತೆಗಳಿಂದ ಹಾಲು ಹಿಂಡಿಸಿಕೊಂಡು, ನನಗೆ ನನ್ನ ಅಮ್ಮ ಮತ್ತು ಅಜ್ಜಿ ಸುಮಾರು ಒಂದು ತಿಂಗಳ ಕಾಲ ಎರಡೂಟೆ ಶೆಟ್ಟಿ…

Read More

ಮಧುಗಿರಿ: ಕೈಮರ ಮುಖ್ಯ ರಸ್ತೆಯಿಂದ  ತೊಣಚಗೊಂಡನಹಳ್ಳಿ ಗ್ರಾಮದವರೆಗೆ ಹಳ್ಳ ಹರಿಯುತ್ತಿದ್ದು ರಸ್ತೆಯು ನೀರಿನಿಂದ ಮುಳುಗಿದೆ. ಮುಖ್ಯರಸ್ತೆಯಿಂದ ಓಡಾಡಲು ಸಂಚರಿಸಲು ಯತ್ನಿಸಿದ ಊರಿನ ಗ್ರಾಮಸ್ಥರ ವಾಹನಗಳು ಕೊಚ್ಚಿ ಹೋಗಿದ್ದು ಯಾವುದೇ ಪ್ರಾಣಪಾಯ ಇಲ್ಲದೆ ಪಾರಾಗಿದ್ದಾರೆ . ಸುಮಾರು 200 ಮೀಟರ್ ರಸ್ತೆ  ಜಲಾವೃತಗೊಂಡಿದ್ದು, ಕೈಮರದಿಂದ   ರಂಟವಾಳ ಮುಖ್ಯರಸ್ತೆಯಾಗಿದೂ ಆಂಧ್ರ ಗಡಿ ಹೋಗುವ ದಾರಿಯಾಗಿದ್ದು,  ನಾಗೇನಹಳ್ಳಿ ಕೆರೆ ತುಂಬಿ ದೊಡ್ಡೇರಿ ಹೀರೇಕೆರೆ ತುಂಬಿ ಸುತ್ತಮುತ್ತಲಿನ ಕೆರೆಗಳು ತುಂಬಿ ಹಳ್ಳ ಹರಿಯುತ್ತಿವೆ. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz

Read More

ತುರುವೇಕೆರೆ: ತಾಲೂಕು ಪಟ್ಟಣದಲ್ಲಿರುವ ಬೆಮೆಲ್ ಕಾಂತರಾಜ್ ರವರ ಕಚೇರಿಯ ಆವರಣದಲ್ಲಿ ಭಾರತ ಸುವರ್ಣ ಸ್ವಾತಂತ್ರ ನಡಿಗೆ ಕಾಂಗ್ರೆಸ್ ಕಡೆಗೆ ಎಂಬ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನ ಬೆಮೆಲ್ ಕಾಂತರಾಜ್ ರವರು ವಹಿಸಿದ್ದರು. ಪೂರ್ವಭಾವಿ ಸಭೆಗೆ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸಿಎಸ್ ಪುರ ಬ್ಲಾಕ್, ಮಾಯಸಂದ್ರ ಹೋಬಳಿ ದಬ್ಬೇಘಟ್ಟ ಹೋಬಳಿ ದಂಡಿನ ಶಿವರ ಹೋಬಳಿ ಹಾಗೂ ಕಸಬಾ ಹೋಬಳಿಯ ನೂರಾರು ಮುಖಂಡರು ಭಾಗವಹಿಸಿದ್ದರು ಮುಖಂಡರುಗಳು ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುವರ್ಣ ಸ್ವಾತಂತ್ರ್ಯ ನಡಿಗೆ ಕಾಂಗ್ರೆಸ್ ಕಡೆಗೆ ಕಾಲ್ನಡಿಗೆ ರ್ಯಾಲಿಗೆ ಕರೆತರುವ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಶಕ್ತಾನುಸಾರ ಕಾರ್ಯಕರ್ತರುಗಳನ್ನು ಸ್ವಯಂ ಪ್ರೇರಿತವಾಗಿ ಕರೆತೇವೆ ಎಂದು ಒಪ್ಪಿಕೊಂಡರು ಈ ನಡಿಗೆಯ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾಗಿ ಪಟ್ಟಣದ ಗ್ರಾಮ ದೇವತೆ ಉಡಸಲಮ್ಮ ದೇವಿಯ ದೇವಾಲಯದವರೆಗೆ ಕಾಲ್ನಡಿಗೆಯಲ್ಲಿ ಸಾಗಲಾಗುವುದು ಮತ್ತು 75ನೇ ಸುವರ್ಣ ಸ್ವಾತಂತ್ರ ಸಂಭ್ರಮ ದ ನಡಿಗೆ ಕಾಂಗ್ರೆಸ್ ನ ಕಡೆಗೆ ಎಂಬ ಘೋಷಣೆಗಳೊಂದಿಗೆ ಸಾಗುವುದು  ಎಂದು ನಿರ್ಧರಿಸಲಾಯಿತು. ಈ…

Read More

ಕೊಪ್ಪಳ: ಗಂಗಾವತಿ ತಾಲೂಕಿನ ಕಿಷ್ಕಿಂಧೆ ಭಾಗದ ಅಂಜನಾದ್ರಿ ಬೆಟ್ಟವೇ ಹನುಮಂತ ಹುಟ್ಟಿದ ಸ್ಥಳ. ಇದಕ್ಕೆ ರಾಮಾಯಣದಲ್ಲಿನ ಉಲ್ಲೇಖಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ದೇಶದಲ್ಲಿ ಸುಖಾ ಸುಮ್ಮನೇ ಆಂಜನೇಯನ ಜನ್ಮಸ್ಥಳದ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ಬೇರೆಯವರ ವಾದದಲ್ಲಿ ಹುರುಳಿಲ್ಲ. ಅವರ ವಾದಕ್ಕೆ ಪುರಾವೆಗಳಿಲ್ಲ. ನಮ್ಮಲ್ಲಿ ಅನೇಕ ಪುರಾವೆಗಳಿವೆ. ರಾಮಾಯಣದ ಕಿಷ್ಕಿಂಧ ಕಾಂಡದಲ್ಲಿ ಬರುವ ಬೆಟ್ಟದಲ್ಲಿ ಆಂಜನೇಯನ ಜನನವಾಯಿತೆಂದು ಸ್ಪಷ್ಟವಾಗಿದೆ ಎಂದು ವಾದ ಮಂಡಿಸಿದರು. ಬೆಟ್ಟಕ್ಕೆ ಸಾಕಷ್ಟು ಜನ ಯಾತ್ರಿಕರು ಬರುತ್ತಾರೆ. ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು. ಪ್ರಸಾದ ನಿಲಯ, ಯಾತ್ರಿ ನಿವಾಸ, ಪಾರ್ಕಿಂಗ್ ಆಸ್ಪತ್ರೆ ಸೇರಿ ಇತರ ಕಾಮಗಾರಿ ನಡೆಸಲಾಗುವುದು. ಎರಡನೇ ಹಂತದಲ್ಲಿ ರೋಪ್ ವೇ ಮಾಡಲಾಗುವುದು. ಹಂಪಿ, ಮೈಸೂರು ಟೂರಿಸಂ ಸರ್ಕಿಟ್ ಮಾಡಲಾಗುತ್ತಿದೆ. ಅದರಲ್ಲಿ ಹಂಪಿ ಅಕ್ಕಪಕ್ಕದ ಪಾರಂಪರಿಕ ತಾಣಗಳನ್ನು ಒಳಗೊಂಡು ಅಂತಾರಾಷ್ಟ್ರೀಯ ಟೂರಿಸಂ ಸರ್ಕೀಟ್ ಮಾಡಲಾಗುವುದೆಂದು ತಿಳಿಸಿದರು. ಪ್ರವೀಣ್ ಹತ್ಯೆಯಿಂದ ಸಹಜವಾಗಿ ಹಿಂದು ಕಾರ್ಯಕರ್ತರು…

Read More

ಮಧುಗಿರಿ: ಸೋದೇನಹಳ್ಳಿ ಅಂಬೇಡ್ಕರ್ ವಸತಿ ಶಾಲೆ ಜಲದಿಗ್ಬಂಧನವಾದ ಪರಿಣಾಮ ಮೇಲಾಧಿಕಾರಿ ರವರ ಆದೇಶದಂತೆ ಮೂರು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಂಬೇಡ್ಕರ್ ವಸತಿ ಶಾಲೆ ಶಾಲೆಯ ಸುತ್ತ ನೀರು ತುಂಬಿದ್ದು, ಚಂದ್ರಗಿರಿಯ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ ತಿಮ್ಮಯ್ಯನವರು ಭೇಟಿ ನೀಡಿ ಜೆಸಿಬಿ ಮುಖಾಂತರ ನೀರು ಹೊರಗಡೆ ಹಾಕಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಲದಿಗ್ಬಂಧನವಾದ ಹಿನ್ನೆಲೆಯಲ್ಲಿ ಪ್ರಾಂಶುಪಾಲ ರಾಜಶೇಖರ್ ಅವರು, ಮುನ್ನೆಚ್ಚರಿಕೆ ಕ್ರಮವಾಗಿ ಮೇಲಾಧಿಕಾರಿಗಳ ಸೂಚನೆಯಂತೆ ಶಾಲೆಗೆ ಮೂರು ದಿನ ರಜೆ ಘೋಷಿಸಿದ್ದಾರೆ. ತುಮಕೂರು ಜಿಲ್ಲೆಗೆ ಒಳಪಡುವ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾಭ್ಯಾಸಕ್ಕಾಗಿ ಈ ಶಾಲೆಗೆ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಇಲ್ಲಿನ ವಿದ್ಯುತ್ ಕಂಬಗಳು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ: ದೊಡ್ಡೇರಿ ಮಹಾಲಿಂಗಯ್ಯ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More