Subscribe to Updates
Get the latest creative news from FooBar about art, design and business.
- ಯುವಕರಿಗೆ ತಂತ್ರಜ್ಞಾನ ವ್ಯಸನವಾಗಿದೆ: ಪ್ರೊ.ಎಂ.ವೆಂಕಟೇಶ್ವರಲು
- ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ
- ಜನವರಿ 6ರಿಂದ ಮಧ್ಯಂತರ ವಿದ್ಯುತ್ ವ್ಯತ್ಯಯ
- ನರೇಗಾ ಹಬ್ಬ 2025: ತುಮಕೂರು ಜಿಲ್ಲೆಗೆ 3 ಪ್ರಶಸ್ತಿ
- ಕೌಶಲ್ಯಾಭಿವೃದ್ಧಿ ತರಬೇತಿ : ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ
- ಅದ್ದೂರಿಯಾಗಿ ನೆರವೇರಿದ ಕ್ಯಾಮೇನಹಳ್ಳಿ ಶ್ರೀಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ
- 26 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಡೆಂಗ್ಯೂ ಜ್ವರದಿಂದ ಬಾಲಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಕುಟುಂಬಸ್ಥರಿಂದ ಪ್ರತಿಭಟನೆ
Author: admin
ಸರಗೂರು: ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾದನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಯಶವಂತಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳು ಶಿಥಿಲಗೊಂಡು ತರಗೆಲೆಯಂತೆ ಉದುರುತ್ತಿವೆ. ಪ್ರತಿ ದಿನ ಎರಡು ಮೂರು ಮನೆಗಳು ಕುಸಿದು ಬೀಳುತ್ತಿವೆ ಎನ್ನಲಾಗುತ್ತಿದ್ದು, ಮಳೆಯಿಂದ ಶಿಥಿಲಗೊಂಡಿರುವ ಶಾಲಾ ಕಟ್ಟಡ ಮತ್ತು ಬಸ್ ನಿಲ್ದಾಣ ಇಂದೋ ನಾಳೆಯೋ ಕುಸಿದು ಬೀಳಬಹುದಾದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಆತಂಕದಲ್ಲಿದ್ದಾರೆ. ಇನ್ನೂ ಜಮೀನಿನಲ್ಲಿ ಬೆಳೆದಿರುವ ರಾಗಿ, ಹುರುಳಿ ಇನ್ನಿತರ ಬೆಳೆಗಳಂತು ಜಮೀನಿನಲ್ಲೇ ಕೊಳೆತು ನಾರುತ್ತಿದ್ದು, ರೈತರು ಕೂಡ ಕಂಗಾಲಾಗಿದ್ದಾರೆ. ರೈತರ ಜಾನುವಾರುಗಳ ಪರಿಸ್ಥಿತಿ ಹೇಳತೀರದಂತಾಗಿದೆ. ಕುಟುಂಬದ ಆಹಾರ ಸ್ವಾಲಂಬನೆ ಮತ್ತು ಆಹಾರ ಭದ್ರತೆಗೆ ತುಂಬ ತೊಡಕುಂಟಾಗುತ್ತಿರುವುದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಕೇಂದ್ರೀಕರಿಸಿ ಅಧಿಕಾರಿಗಳು ಮಾನವೀಯತೆಯಿಂದ ಪಾರದರ್ಶಕವಾದ ಪರಿಶೀಲನೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ತಕ್ಷಣವೇ ಗಮನ ಹರಿಸಬೇಕು ಮನೆ ನಿರ್ಮಾಣ ಮಾಡಿಕೊಳ್ಳಲು 10 ಲಕ್ಷ ಪರಿಹಾರ ನೀಡುವುದರ ಜೊತೆಗೆ ಆಹಾರ ಭದ್ರತಗಾಗಿ ಸೂಕ್ತ…
ತುರುವೇಕರೆ: ದ್ವಿಚಕ್ರ ವಾಹನಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನ ಸವಾರರಿಗೂ ತೀವ್ರ ತರಹದ ಗಾಯಗಳಾದ ಘಟನೆ ಮಾಯಸಂದ್ರ ಹೋಬಳಿಯ ಟಿ.ಬಿ.ಕ್ರಾಸ್ ಬಳಿಯ ಜೇವರ್ಗಿ,ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150A ರಲ್ಲಿ ನಡೆದಿದೆ. ಅಪಘಾತದ ತೀವ್ರತೆಗೆ ಎರಡೂ ಬೈಕ್ ಗಳು ಕೂಡ ಜಖಂಗೊಂಡಿದ್ದು, ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿವೆ. ಗಾಯಾಳು ಬೈಕ್ ಸವಾರರನ್ನು ಸಮೀಪದ ಮಾಯಸಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಈ ಪ್ರದೇಶದಲ್ಲಿ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಅಪಘಾತ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದರು. ವರದಿ: ಸುರೇಶ್ ಬಾಬು ಎಂ., ತುರುವೇಕೆರೆ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುರುವೇಕೆರೆ: ನಾದಬ್ರಹ್ಮ ಹಂಸಲೇಖ ಅವರ ತೇಜೋವಧೆಯನ್ನು ಖಂಡಿಸಿ ದಲಿತ ಸಂಘಟನೆಗಳು, ತಾಲೂಕು, ಛಲವಾದಿ ಮಹಾಸಭಾ, ಅಲ್ಪಸಂಖ್ಯಾತ ಘಟಕ, ಪ್ರಗತಿಪರ ಸಂಘಟನೆಗಳು ತುರುವೇಕರೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದವು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಂಸಲೇಖ ಅವರೊಂದಿಗೆ ನಾವಿದ್ದೇವೆ. ಬಾಡು ನಮ್ಮ ಗಾಡು ಎಂದು ಘೋಷಣೆ ಕೂಗಿ ಮಾನವ ಸರಪಳಿ ನಿರ್ಮಿಸಿ ಹಂಸಲೇಖ ಅವರ ಹೇಳಿಕೆಗೆ ಬೆಂಬಲ ಸೂಚಿಸಲಾಯಿತು. ಇದೇ ವೇಳೆ ಮಾತನಾಡಿದ ಮುಖಂಡರಾದ ಚಂದ್ರಯ್ಯನವರು, ನಮ್ಮ ಹೋರಾಟ ಬ್ರಾಹ್ಮಣರ ವಿರುದ್ಧವಲ್ಲ, ಬ್ರಾಹ್ಮಣ್ಯದ ವಿರುದ್ಧವಾಗಿದೆ ಎಂದರು. ಇನ್ನೂ ಇದೇ ವೇಳೆ ಮಾತನಾಡಿದ ಸಿ.ಐ.ಟಿ.ಯು. ಮುಖಂಡ ಸತೀಶ್, ಆಹಾರ ಎನ್ನುವುದು ನಮ್ಮ ಹಕ್ಕು, ಅದನ್ನು ನೀವೇಕೆ ಪ್ರಶ್ನೆ ಮಾಡುತ್ತೀರಿ? ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಸತೀಶ್, ದ.ಸಂ.ಸ. ನಗರ ಘಟಕದ ಬಡಾವಣೆ ಶಿವರಾಜ್, ದಲಿತಮುಖಂಡ, ಟಿ.ಹೆಚ್.ಗುರುದತ್, ಹೊನ್ನೇನಹಳ್ಳಿ ಕೃಷ್ಣಪ್ಪ, ಕುರುಬ ಸಮಾಜದ ತಾಲ್ಲೂಕು ಕಾರ್ಯದರ್ಶಿ ರೇವಣ್ಣ, ತಿಗಳ ಸಮಾಜದ ತಾಲ್ಲೂಕು, ಅಧ್ಯಕ್ಷರಾದ ಟಿ.ಎನ್., ಶಿವಕುಮಾರ್, ತುರುವೇಕೆರೆ ಗುಡಿಗೌಡರಾದ, ತಿಮ್ಮೇಗೌಡ್ರು, ಛಲವಾದಿ ಮಹಾ ಸಭಾದ ರಾಮಣ್ಣ, ಪುರರಾಮಚಂದ್ರು,…
ಹೆಚ್.ಡಿ.ಕೋಟೆ: ತಾಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಪ್ರತಿಷ್ಠಾಪನಾ ಮಹೋತ್ಸವ ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಹೆಚ್.ಡಿ.ಕೋಟೆ ತಾಲೂಕಿನ ಕಂಚಮ್ಮಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಗೊಂಡಿರುವ ಶ್ರೀ ಆದಿಶಕ್ತಿ ಮಲೆಯಾಳದಮ್ಮ ಶ್ರೀ ಜಗನ್ಮಾತೆ ಭದ್ರಮಹಾಕಾಳಿ ಅಮ್ಮ ದೇವಿಯವರ ಸ್ಥಿರ ಮೂರ್ತಿಗಳ ಅಷ್ಟಬಂಧನ ಪ್ರತಿಷ್ಠಾಪನಾ ಮಹೋತ್ಸವ ಶನೇಶ್ವರಸ್ವಾಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ದೇವಸ್ಥಾನದ ಗುಡ್ಡಪ್ಪ ಕುಮಾರಸ್ವಾಮಿ ನೇತೃತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಬಳಿದು ನಾನಾ ಬಗೆಯ ಹೂವುಗಳಿಂದ ಸಿಂಗಾರಿಸಲಾಗಿತ್ತು. ದೇವಸ್ಥಾನದ ದ್ವಾರಗೋಪುರದ ಬಳಿ ತಳಿರು-ತೋರಣಗಳಿಂದ ಮಧುವಣಗಿತ್ತಿಯಂತೆ ಅಲಂಕೃತಗೊಳಿಸಲಾಗಿತ್ತು. ಮುಂಜಾನೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರ ಸ್ಥಿರ ಮೂರ್ತಿಗಳ ಅಷ್ಠ ಬಂಧನ ಪ್ರಾಣ ಪ್ರತಿಷ್ಠಾಪಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಯಿಂದ ಅಮ್ಮನವರ ಕಳಶದೊಂದಿಗೆ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನ ಬಳಿಗೆ ಕರೆತರಲಾಯಿತು. ಮಂಗಳವಾದ್ಯಗಳು ಮೊಳಗಿದವು. ರಾಜು ಮತ್ತು ತಂಡದಿಂದ ವೀರಗಾಸೆ ನೃತ್ಯ…
ಸರಗೂರು: ಬಿ.ಮಟಕೇರಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಸಂವಿಧಾನ ಸಮರ್ಪಣೆ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೂಪಬಾಯಿ ಮಲ್ಲೇಶ್ ನಾಯಕ, ಉಪಾಧ್ಯಕ್ಷರಾದ ದೇವದಾಸ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅದಿಧಿಕಾರಿಯಾದ ಅಮ್ಜದ್ ಪಾಷ, ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಮಂಜುನಾಥ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕರಾದ ಕೂಡಗಿ ಗೋವಿಂದ ರಾಜು ಹಾಗೂ ಜೈಭೀಮ್ ಅಖಿಲ ಭಾರತ ದಲಿತ ಹೋರಾಟ ಸಮಿತಿ ಅಧ್ಯಕ್ಷರಾದ ಶಿವಕುಮಾರ್ ಬಿ.ಮಟಕೆರೆ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತಿಪಟೂರು:ರಾಗಿ ಹಾಗೂ ಇತರ ಬೆಳೆ ಬೆಳೆದ ರೈತರು ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿದ್ದು, ಅವರಿಗೆ ಸೂಕ್ತ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಕಾಂಗ್ರೆಸ್ ನ ಮಾಜಿ ತಾಲೂಕು ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಅವರು ಹೇಳಿದ್ದಾರೆ. ತಾಲ್ಲೂಕಿನಲ್ಲಿ ಸಾವಿರಾರು ಎಕರೆ ರಾಗಿ ಹಾಗೂ ಇತರೆ ಬೆಳೆ ಬಿತ್ತನೆ ಮಾಡಿರುವ ನಡುವೆಯೇ ಅಕಾಲಿಕ ಮಳೆಯಾಗಿದ್ದು, ಪರಿಣಾಮವಾಗಿ ಶೇ.80ರಷ್ಟು ಬೆಳೆ ನಾಶವಾಗಿದೆ. ರಾಗಿ ಬೆಳೆ ಮಳೆಯಿಂದ ನೆಲಕಚ್ಚಿದೆ. ರಾಗಿ ಮೊಳಕೆ ಬರುತ್ತಿದೆ. ಹಾಗಾಗಿ ಜಾನುವಾರುಗಳಿಗೆ ಕನಿಷ್ಠ ಮೇವು ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು. ತೋಟಗಾರಿಕೆ ಬೆಳೆಗಳು, ತರಕಾರಿ, ಸೊಪ್ಪು, ಹೂವು, ಸಂಪೂರ್ಣ ನೆಲಕಚ್ಚಿದೆ. ಆರೆ ಸರ್ಕಾರ 2.5 ಎಕರೆ ಎಂದರೇ 1 ಹೆಕ್ಟೇರ್ ಗೆ ಕೇವಲ 6,800 ರೂ. ಗಳ ಪರಿಹಾರಧನ ನೀಡುವುದಾಗಿ ತಿಳಿಸಿದೆ. ಇದು ಬಹಳ ಕನಿಷ್ಠ ಪರಿಹಾರವಾಗಿದ್ದು, ಪೆಟ್ರೋಲ್, ಡೀಸೆಲ್ ಕೂಡ ಬೆಲೆ ಗಗನಕ್ಕೇರಿದೆ. ರೈತರಿಗೆ ನೀಡಲು ತಿಳಿಸಿರುವ ಸಹಾಯಧನ ಉಳುಮೆಗೂ ಸಾಲದಾಗಿದೆ. ಆದ್ದರಿಂದ ಕೂಡಲೆ ಸರ್ಕಾರ ಹೆಚ್ಚೆತ್ತುಕೊಂಡು ಪರಿಹಾರ ಧನವನ್ನು…
ತಿಪಟೂರು: ನಿರುದ್ಯೋಗಿ ಯುವಕ ಯುವತಿಯರಿಗೆ ಡಿಸೆಂಬರ್ 4ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಈ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರತಿಷ್ಠಿತ 80 ಕಂಪನಿಗಳು ಭಾಗವಹಿಸಲಿವೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಟಿ ಶಾಂತಕುಮಾರ್ ತಿಳಿಸಿದರು. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಕಂಪನಿಗಳ ಸಹಾಯದೊಂದಿಗೆ ಡಿ.4ರಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ನಿರುದ್ಯೋಗಿ ಯುವಕ, ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ನಮ್ಮ ದೇಶದಲ್ಲಿ ಸುಮಾರು ಶೇ.40ರಷ್ಟು ಯುವಕರಿದ್ದು, ಸೂಕ್ತವಾದ ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಆದ ಕಾರಣ ನಿರುದ್ಯೋಗಿಗಳ ಕಷ್ಟ ನೀಗಿಸಲು ಕಳೆದ ಕೆಲವು ವರ್ಷಗಳ ಹಿಂದೆ ಬೃಹತ್ ಉದ್ಯೋಗ ಮೇಳವನ್ನು ಮಾಡಿದ್ದೆ. ಈ ಬಾರಿಯೂ ಸಹ ಒಕ್ಕಲಿಗರ ಸಮುದಾಯ ಭವನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಸುಮಾರು ಐದು ಸಾವಿರ ಯುವಕ-ಯುವತಿಯರಿಗೆ ಉದ್ಯೋಗ ಸಿಗುವ ಅವಕಾಶವಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ. ಸಮಾಜ ಸೇವಕ ಕೆ.ಟಿ.ಶಾಂತಕುಮಾರ್, ಶಿವಪ್ರಸಾದ್…
ಮೈಸೂರು: ತಾಯಾಣೆಗೂ ನಾನು ಮತ್ತು ಅಪ್ಪು ಎಂದಿಗೂ ಜಗಳವಾಡಿಲ್ಲ, ನೋವಿನ ಜೊತೆ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಿವರಾಜ್ ಕುಮಾರ್ ಭಾವುಕ ನುಡಿಗಳನ್ನಾಡಿದರು. ನಗರದ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಳುವುದರಿಂದ ಅಪ್ಪುವನ್ನು ಕಳೆದುಕೊಂಡು ಬಿಡುತ್ತೇವೆ. ಅವನನ್ನು ಜೊತೆಯಲ್ಲಿಟ್ಟುಕೊಂಡು ಬದುಕಬೇಕು. ಅಪ್ಪು ಕಣ್ಣುಗಳು ಇವತ್ತು ಸಮಾಜ ನೋಡುತ್ತಿವೆ. ಇಡೀ ಕರುನಾಡಿನ ನೈತಿಕ ಬೆಂಬಲ ನಮ್ಮ ಕುಟುಂಬಕ್ಕೆ ಸಿಕ್ಕಿದೆ ಎಂದು ಅವರು ಹೇಳಿದರು. ಶಕ್ತಿಧಾಮವನ್ನು ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಎರಡು ಮೂರು ವಾರದಲ್ಲಿ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಚಿಕ್ಕಮಗಳೂರು: ಎಗ್ ರೈಸ್ ತಿಂದ ದುಡ್ಡನ್ನು ಕೇಳಿದ್ದಕ್ಕೆ ಮೂವರು ನಡು ರಸ್ತೆಯಲ್ಲಿಯೇ ಎಗ್ ರೈಸ್ ಅಂಗಡಿ ಮಾಲೀಕ ಹಾಗೂ ಅಕ್ಕಪಕ್ಕದವರೊಂದಿಗೆ ಮಾರಾಮಾರಿ ನಡೆಸಿರುವ ಘಟನೆ ನಗರದ ಸಾರಿಗೆ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆದಿದೆ. ತಾಲೂಕಿನ ಸಗನೀಪುರದ ಯುವಕರು ಹಲ್ಲೆ ನಡೆಸಿದವರು ಎಂದು ಹೇಳಲಾಗಿದ್ದು, ಎಗ್ ರೈಸ್ ತಿಂದ ಬಳಿಕ ಹಣ ಕೊಡುವ ವಿಚಾರದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಈ ವೇಳೆ ಫೈಬರ್ ಚೇರ್, ಮರದ ರೀಪರ್, ಎಗ್ ರೈಸ್ ಮಾಡುವ ಬಾಂಡ್ಲಿ ಸೇರಿದಂತೆ ಕೈಗೆ ಸಿಕ್ಕಿದ ವಸ್ತುಗಳಿಂದ ಯುವಕರು ಹಲ್ಲೆ ನಡೆದಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಯುವಕರು ಮದ್ಯ ಅಥವಾ ಗಾಂಜಾದ ಮತ್ತಿನಲ್ಲಿದ್ದರು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿದ್ದಾರೆ. ನಾವೇನು ಮಾಡುತ್ತಿದ್ದೇವೆ ಎನ್ನುವುದೇ ಯುವಕರಿಗೆ ಗೊತ್ತಿರಲಿಲ್ಲ. ಮನುಷ್ಯತ್ವವೇ ಇಲ್ಲದಂತೆ ವರ್ತಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಮಧುಗಿರಿ: ನನ್ನ ಸೋಲಿಗೆ ಕಾರಣರಾದವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಶುಕ್ರವಾರ ಮನವಿ ಮಾಡಿಕೊಂಡರು. ಜೆಡಿಎಸ್ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಆಗಿರುವ ನೋವು ಸರಿಪಡಿಸಲು ನಿಮಗೆ ಇದೊಂದು ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸುವಂತೆ ಮಾಡಿದರು. ಕೆಲವರು ರಾಜಕೀಯ ಷಡ್ಯಂತ್ರ ಮಾಡಿ ಸೋಲಿಗೆ ಕಾರಣರಾದರು. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ನನ್ನ ಸೋಲಿಗೆ ಕಾರಣರಾದವರಿಗೆ ಉತ್ತರ ಕೊಡಬೇಕು ಎಂದು ದೇವೇಗೌಡರು ಹೇಳಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700