Author: admin

ಬಳ್ಳಾರಿ: ತೀವ್ರ ಮಳೆಯಿಂದಾಗಿ ಮೆಣಸಿನಕಾಯಿ ಗಿಡಗಳು ಹಾನಿಯಾಗಿದ್ದರಿಂದ ನೊಂದ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದೆ‌. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಗಾದಿಲಿಂಗ ಅಲಿಯಾಸ್ ದರೂರು (28) ಎಂದು ಗುರುತಿಸಲಾಗಿದೆ. 5 ಎಕರೆ ಹೊಲವನ್ನು ಗುತ್ತಿಗೆ ಪಡೆದು ಮೆಣಸಿನಕಾಯಿ ಬೆಳೆ ಬೆಳೆದಿದ್ದ ಇವರು, ಪ್ರತಿ ಎಕರೆಗೆ 1.10 ಲಕ್ಷ ರೂ ಖರ್ಚು ಮಾಡಿದ್ದರು. ಇದಕ್ಕಾಗಿ 6 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಮನೆಯನ್ನು ಅಡಮಾನ ವಿಟ್ಟು 4 ಲಕ್ಷ ಮತ್ತು 100 ಕ್ಕೆ 2 ರೂಪಾಯಿಯ ಬಡ್ಡಿ ದರದಂತೆ 2 ಲಕ್ಷ ಕೈಸಾಲ ಪಡೆದಿದ್ದರು ಎನ್ನಲಾಗಿದೆ. ಈ ಬಾರಿ ಸುರಿದ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಇದರಿಂದ ದಿಕ್ಕು ತೋಚದಂತಾಗಿ ಗುರುವಾರ ಮಧ್ಯಾಹ್ನ ಹೆಂಡತಿ- ಮಕ್ಕಳ ಜತೆ ಹೊಲಕ್ಕೆ ಹೋಗಿದ್ದ ಗಾದಿಲಿಂಗ ಅವರನ್ನು ಅಲ್ಲಿಯೇ ಬಿಟ್ಟು, ಏಕಾಂಗಿಯಾಗಿ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ:…

Read More

ದಾವಣಗೆರೆ: ಸಂವಿಧಾನ ದಿನದ ಅಂಗವಾಗಿ ಇಂದು ದಾವಣಗೆರೆಯಲ್ಲಿ ನಡೆದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು, ಮಾತನಾಡಿ, ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ, ಸಂಸದ ಜಿ.ಎಂ ಸಿದ್ದೇಶ್ವರ ಹಾಗೂ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಲಸಿಕೆ ಎರಡನೇ ಡೋಸ್‌ ನೀಡಿಕೆ ಪ್ರಮಾಣ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಮೊದಲ ಡೋಸ್‌ ನೀಡಿಕೆ ಸರಾಸರಿ ಶೇ.90ರಷ್ಟು ಇದೆ. ಎರಡನೇ ಡೋಸ್‌ ಶೇ.57 ರಷ್ಟಿದೆ. ಡಿಸೆಂಬರ್‌ ಕೊನೆಯೊಳಗೆ ಎರಡನೇ ಡೋಸ್‌ ಶೇ.70 ಕ್ಕೆ ತಲುಪಬೇಕು ಎಂದು ಅವರು ಸೂಚನೆ ನೀಡಿದರು. ಕೋವಿಡ್‌ ಲಸಿಕೆ ಅಭಿಯಾನದ ಪ್ರಗತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ಗುರುವಾರ ವಿಡಿಯೊ ಸಂವಾದ ನಡೆಸಿದ ಅವರು, ಎರಡನೇ ಡೋಸ್‌ ಲಸಿಕೆ ಹಾಕುವಲ್ಲಿ ಕಲಬುರಗಿ ಜಿಲ್ಲೆ ಹಿಂದುಳಿದಿದೆ. ಬೆಂಗಳೂರು ನಗರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಎಲ್ಲ ಜಿಲ್ಲಾಧಿಕಾರಿಗಳು ಒಂದು ಗಂಟೆ ಸಮಯವನ್ನು ಲಸಿಕಾ ಕಾರ್ಯಕ್ರಮದ ಪ್ರಗತಿಗೆ ಮೀಸಲಿಡಬೇಕು ಎಂದರು. ಗ್ರಾಮ ಲೆಕ್ಕಿಗರು, ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಅಗತ್ಯ ಬಿದ್ದಲ್ಲಿ ತಹಶೀಲ್ದಾರರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಜನರೊಂದಿಗೆ ನಿತ್ಯ ವ್ಯವಹರಿಸುವ ಸ್ವಯಂ ಸೇವಕರು, ಶಿಕ್ಷಕರು, ಧಾರ್ಮಿಕ ಗುರುಗಳು, ಶಾಲಾ ಶಿಕ್ಷಕರು, ಸಹಕಾರಿ ಸಂಘಗಳ ಕಾರ್ಯದರ್ಶಿಗಳು, ಬ್ಯಾಂಕಿನ ವ್ಯವಸ್ಥಾಪಕರನ್ನು ಬಳಸಿಕೊಂಡು…

Read More

ಬೆಂಗಳೂರು: ವಿದ್ವಾಂಸ, ಪ್ರವಚನಕಾರ ಕೆ.ಎಸ್.ನಾರಾಯಣಾಚಾರ್ಯ (88) ಅವರು ಶುಕ್ರವಾರ ಮುಂಜಾನೆ 2 ಗಂಟೆಗೆ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ನ್ಯೂ ಬಿಇಎಲ್ ರಸ್ತೆಯ ಜಲದರ್ಶಿನಿ ಲೇಔಟ್ ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿದ್ವಾಂಸರೂ, ಭಾರತೀಯ ಸಂಸ್ಕೃತಿಯ ಪ್ರವಚನದ ಹರಿಕಾರರೂ ಆಗಿದ್ದ ಕೆ.ಎಸ್.ನಾರಾಯಣಾಚಾರ್ಯ ಅವರು, ರಾಮಾಯಣಸಹಶ್ರೀ, ಗೀತಾರತ್ನನಿಧಿ, ರಾಮಾಯಣ ಪಾತ್ರ ಪ್ರಪಂಚ, ಅಗಸ್ತ್ಯ, ಶ್ರೀಮಾತೇ ಕುಂತಿ ಕರೆದಾಗ, ಚಾಣಕ್ಯ ನೀತಿ ಸೂತ್ರಗಳು, ಶ್ರೀರಾಮಾವತಾರ ಸಂಪೂರ್ಣವಾದಾಗ, ವನದಲ್ಲಿ ಪಾಂಡವರು, ದಶಾವತಾರ ಸೇರಿದಂತೆ 70ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದರು. ಕನ್ನಡದ ವಿವಿಧ ಪತ್ರಿಕೆ ಮತ್ತು ವಾರಪತ್ರಿಕೆಗಳಿಗೆ ಅಂಕಣಕಾರರಾಗಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಮಂಡ್ಯ: ಭಕ್ತನ ಸೋಗಿನಲ್ಲಿ ಬಂದ ವ್ಯಕ್ತಿಯೋರ್ವ ದೇವಿಯ ತಾಳಿ ಕದ್ದು ಪರಾರಿಯಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಬೀದಿಯಲ್ಲಿರುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ದೇವಾಲಯದಲ್ಲಿ ನಡೆದಿದೆ. ಭಕ್ತನ ಸೋಗಿನಲ್ಲಿ ಬಂದು ಕೆಲವೇ ಕ್ಷಣಗಳಲ್ಲಿ 6 ಗ್ರಾಂ ತೂಕದ ಚಿನ್ನದ ತಾಳಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದು, ಈತ ಪರಾರಿಯಾಗುವವರೆಗೂ ಯಾರಿಗೂ ತಿಳಿಯದಷ್ಟು ಚಾಲಕಿತನದಿಂದೇವಿಯ ಚಿನ್ನವನ್ನು ಎಗರಿಸಿದ್ದಾನೆ. ಮೊದಲಿಗೆ ಕಳ್ಳ ದೇವಿಗೆ ಕೈಮುಗಿದಿದ್ದು, ಆ ಬಳಿಕ ಗರ್ಭಗುಡಿಗೆ ನುಗ್ಗಿ ಚಿನ್ನದ ತಾಳಿ ಕಿತ್ತುಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಬೆಂಗಳೂರು: ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ನಾಗಸೇನಾ ಬುದ್ಧ ವಿಹಾರದಲ್ಲಿ 72ನೇ ಸಂವಿಧಾನ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಬೌದ್ಧ ಧಮ್ಮಾಧಿವೇಶನ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಡಾ.ಎಂ.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಧಮ್ಮಾಧಿವೇಶನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ದೆಹಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ರಾಜೇಂದ್ರ ಪಾಲ್ ಗೌತಮ್,  ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ನಾರಾಯಣ ಸ್ವಾಮಿ, ಹಾಗೂ ವಿವಿಧ ಮಠಾಧಿಪತಿಗಳು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿಯ ರಾಜ್ಯ ಉಪಾಧ್ಯಕ್ಷರಾಗಿ ಹರೀಶ್ ಜಿ. ಕಟ್ಟೆಮನೆ ಅವರನ್ನು ನೇಮಕ ಮಾಡಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಹೆಚ್.ಶಿವಕುಮಾರ್ ಅವರು ಆದೇಶಿಸಿದ್ದಾರೆ. ಹರೀಶ್ ಜಿ. ಕಟ್ಟೆಮನೆ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ, ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದ್ದು, ಸಂಘಟನೆಯನ್ನು ರಾಜ್ಯಾಧ್ಯಕ್ಷರ ಮಾರ್ಗದರ್ಶನದಲ್ಲಿ ಬಲಪಡಿಸಲು ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ನೊಂದವರ ಧ್ವನಿಯಾಗಿ, ದಲಿತರ ಪರವಾದ ಹೋರಾಟದಲ್ಲಿ ಯಶಸ್ವಿಯಾಗಿ ಎಂದು ಹರೀಶ್ ಜಿ. ಕಟ್ಟೆಮನೆ ಅವರಿಗೆ  ಹಾರೈಸಿರುವ ರಾಜ್ಯಾಧ್ಯಕ್ಷರು, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ಡಿ.ಸಿ. ಗೌರಿಶಂಕರ್ ಅವರು ಕೊವಿಡ್ ಲಸಿಕಾ ಅಭಿಯಾನದ ಅಡಿಯಲ್ಲಿ ಶಾಸಕರ ಬಳಗೆರೆ ಶಾಸಕ ಗೌರಿಶಂಕರ್ ನಡೆಸಿದ ಲಸಿಕಾ ಕಾರ್ಯಕ್ರಮದ ವಿರುದ್ಧ ಅನುಮಾನ: ಆರ್ ಟಿಐ ಕಾರ್ಯಕರ್ತರಿಂದ ಗಂಭೀರ ಆರೋಪ ನಿವಾಸದಲ್ಲಿ ಬೃಹತ್ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗಿತ್ತು. ಆದರೆ, ಈ ಲಸಿಕಾ ಕಾರ್ಯಕ್ರಮದ ಬಗ್ಗೆ ಆರ್ ಟಿ ಐ ಕಾರ್ಯಕರ್ತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಆರ್ ಟಿ ಐ ಕಾರ್ಯಕರ್ತ ಗಿರೀಶ್ ರವರು ಗ್ರಾಮಾಂತರ ಶಾಸಕ ಡಿ.ಸಿ. ಗೌರಿಶಂಕರ್ ರವರು ನಡೆಸಿದ ಲಸಿಕ ಅಭಿಯಾನದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ತುಮಕೂರು ಗ್ರಾಮಾಂತರ ಶಾಸಕರು ತುಮಕೂರು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸಲ್ಲಿಸಿರುವ ಮಾಹಿತಿಯನ್ನು ಆರ್ ಟಿ ಐ ಮೂಲಕ ಪಡೆಯಲಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು. ತುಮಕೂರು ಗ್ರಾಮಾಂತರ ಶಾಸಕರು ಖರೀದಿಸಿರುವ ಲಸಿಕೆ ಸಂಬಂಧ ನಮೂದಿಸಲಾಗಿರುವ ಬ್ಯಾಕ್ ಸಂಖ್ಯೆಯನ್ನು ಪರಿಶೀಲಿಸಲಾಗಿ ಈ ಬ್ಯಾಚ್ ಸಂಖ್ಯೆಗೆ ಸಂಬಂಧಿಸಿದ ಲಸಿಕೆ…

Read More

ತುರುವೇಕೆರೆ: ತುಮಕೂರು ಜಿಲ್ಲೆ ತುರುವೇಕರೆ ತಾಲೂಕಿನ ದಬ್ಬೇಘಟ್ಟ ಹೋಬಳಿ ಅರೆಮಲ್ಲೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮದ ವಾಸಿ ಚಿಕ್ಕಮ್ಮ ಲೇಟ್ ವಜ್ರಯ್ಯ ಎಂಬುವರ ಮನೆ ಒಂದು ವಾರದಿಂದ ಸುರಿದ ಮಳೆಯಿಂದಾಗಿ ಹಾನಿಗೀಡಾಗಿದ್ದು ಸುಮಾರು ಎರಡರಿಂದ ಮೂರು ಲಕ್ಷ ಗೃಹಬಳಕೆ ವಸ್ತುಗಳು ಆಹಾರ ಪದಾರ್ಥಗಳು ಹಾನಿಯಾಗಿದೆ. ಚಿಕ್ಕಮ್ಮನವರು ಸುಮಾರು ರಾಜಕೀಯ ಮುಖಂಡರುಗಳು ಸಂಬಂಧಪಟ್ಟ ಇಲಾಖೆಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಯಾವುದೇ ಕೆಲಸ ಮಾಡುತ್ತಿಲ್ಲ ಅವರಿಗೆ ಬೇಕಾದ ರೀತಿಯಲ್ಲಿ ಬೇಕಾದ ಅಂತವರಿಗೆ ಕೆಲಸ ಮಾಡುತ್ತಿದ್ದಾರೆ. ಅಧ್ಯಕ್ಷರು ಕೂಡ ನಮಗೆ ಯಾವುದೇ ಅನುಕೂಲ ಮಾಡುತ್ತಿಲ್ಲ ಎಲ್ಲಾ ಅಧಿಕಾರಿಗಳಿಗೂ ತಿಳಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ರಾಜಕೀಯ ವ್ಯಕ್ತಿಗಳು ಮುಖಂಡರುಗಳು ಅವರಿಗೆ ಬೇಕಾಗಿರುವ ವೋಟು ಕೇಳುವುದಕ್ಕೆ ಮಾತ್ರ ನಮ್ಮ ಮನೆ ಬಳಿ ಬರುತ್ತಾರೆ ಇದ್ದಂತೆ ನಮ್ಮ ಸಮಸ್ಯೆಯನ್ನು ಕೇಳುವವರು ಯಾರು ಇಲ್ಲ ನಮ್ಮ ಕಷ್ಟವನ್ನು ನಾವು ಯಾರಿಗೆ ಹೇಳಿಕೊಳ್ಳಬೇಕು ಮಾನ್ಯ ಮುಖ್ಯಮಂತ್ರಿಗಳೇ ಬಡ ಜನಗಳ ಕಷ್ಟವನ್ನು ಸ್ವಲ್ಪ ನೋಡಿ ಇಂದು ಚಿಕ್ಕಮ್ಮ ನವರು…

Read More

ಸರಗೂರು: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಿ ಮಟಕೇರಿಯ ಆಸ್ಪತ್ರೆಯ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಜನರ ಆರೋಗ್ಯ ಕಾಪಾಡುವುದು ಬಿಡಿ ಇಲ್ಲಿ ಆಸ್ಪತ್ರೆಯ ಆರೋಗ್ಯವನ್ನೇ ಕಾಪಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಇಲ್ಲಿನ ಜನರು ಆರೋಪಿಸುತ್ತಿದ್ದಾರೆ. ಬಿ ಮಟಕೇರಿ ಗ್ರಾಪಂನ ಶಿಕ್ಷಕರ ಭವನ, ವಿವಿಧ ರಸ್ತೆ ಕಾಮಗಾರಿ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಇಲ್ಲಿನ ಶಾಸಕರಾದ ಅನಿಲ್ ಚಿಕ್ಕಮಾದು ಅವರು ಮಾಡಿಸಿದ್ದಾರೆ ಎಂದು ಎಲ್ಲೆಡೆಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಇಲ್ಲಿನ ಆಸ್ಪತ್ರೆ ಸ್ಥಿತಿ ನೋಡಿದರೆ, ಇಲ್ಲಿ ರೋಗಿಗಳು ಬಂದರೆ, ರೋಗ ಕಡಿಮೆಯಾಗುವುದಕ್ಕಿಂತ ಹೆಚ್ಚಾಗಬಹುದು ಎಂಬಂತಾಗಿದೆ ಎಂದು ಸ್ಥಳೀಯ ಮುಖಂಡ ಗೋವಿಂದರಾಜು ಈ ಬಗ್ಗೆ ಅಭಿಪ್ರಾಯಪಟ್ಟರು. ಆಸ್ಪತ್ರೆ ಇಷ್ಟೊಂದು ಹದೋಗತಿಯಲ್ಲಿದ್ದರೂ ಪಂಚಾಯತ್ ಅಧಿಕಾರಿಗಳಾಗಲಿ, ಶಾಸಕರಾಗಲಿ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ತಾಲೂಕಿನ ಕಂದಲಿಕೆ ಹೋಬಳಿಯ ಮಟಕೆರಿ ಗ್ರಾಪಂ ವ್ಯಾಪ್ತಿಯ ಆಸ್ಪತ್ರೆಯ ಸುತ್ತಲೂ ಗಿಡಗಂಟಿಗಳು ಬೆಳೆದಿದ್ದು, ಆಸ್ಪತ್ರೆ ಮುಂಭಾಗದಲ್ಲಿ ನೀರಿನ ಗುಂಡಿಗಳಿದ್ದು, ಕೊಳಚೆ ನೀರಿನಿಂದಾಗಿ ಜನರು ರೋಗಗ್ರಸ್ತರಾಗುವ ಭೀತಿಯಲ್ಲಿದ್ದಾರೆ. ಈ ಸಂಬಂಧ ಪ್ರಾಥಮಿಕ ಆರೋಗ್ಯ ಕೇಂದ್ರದ…

Read More