Author: admin

ಪುತ್ತೂರು: ನಿಶ್ಚಿತಾರ್ಥ ನಿಗದಿಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಮುಂಡ್ಯ ಕರಂಟಿಯಡ್ಕದಲ್ಲಿ ನಡೆದಿದೆ. ಇಲ್ಲಿನ ಸುಳ್ಯಪದವು ಶಬರಿ ನಗರದ ನಿವಾಸಿ ರವಿರಾಜ್ ಪೂಜಾರಿ(31)  ಆತ್ಮಹತ್ಯೆಗೆ ಶರಣಾಗಿರುವ ಯುವಕನಾಗಿದ್ದು,  ರವಿರಾಜ್ ಪ್ರೀತಿಸುತ್ತಿದ್ದ ಯುವತಿಯ ಜೊತೆಗೆ ಮದುವೆಯಾಗಲು ಪೋಷಕರು ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ರವಿರಾಜ್ ಕುಂದಾಪುರ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದು, ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದರು. ಯುವತಿಯ ಮನೆಯವರು ಕೂಡ ಮದುವೆಗೆ ಒಪ್ಪಿಗೆ ನೀಡಿದ್ದರು. ಮದುವೆ ಮಾತುಕತೆ ನಡೆಸಲು ರವಿರಾಜ್ ಮನೆಗೆ ಯುವತಿಯ ಕಡೆಗೆ ಬರಲು ಮುಂದಾಗಿದ್ದರು ಎನ್ನಲಾಗಿದೆ. ಈ ನಡುವೆ ರವಿರಾಜ್ ಮನೆಯಲ್ಲಿ ಆತನ ಒಪ್ಪಿಗೆಯಿಲ್ಲದೆ ಬೇರೆ ಯುವತಿಯೊಂದಿಗೆ ನಿಶ್ಚಿತಾರ್ಥ ನಿಗದಿ ಮಾಡಿದ್ದರಿಂದ ನೊಂದ ರವಿರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಕೆಂಚನಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇವರ ಜೊತೆಗಿದ್ದ ಮತ್ತೋರ್ವ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವರದಿಯಾಗಿದೆ. ಅಬ್ದುಲ್ಲಾ(21) ಹಾಗೂ ತನ್ವೀರ್(20) ಮೃತಪಟ್ಟ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ವಿದ್ಯಾರ್ಥಿಗಳು ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಸೆಲ್ಫಿ ತೆಗೆಯುತ್ತಿದ್ದ ಯುವಕ ಮಾತ್ರ ಬಚಾವಾಗಿದ್ದಾನೆ ಎಂದು ವರದಿಯಾಗಿದೆ. ಇನ್ನೂ ಮೃತದೇಹಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ರವಾನಿಸಲಾಗಿದ್ದು, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತಿಪಟೂರು: ತಾಲೂಕು ಆಡಳಿತ ವತಿಯಿಂದ ನಗರದ ತಾಲೂಕು ಮಿನಿ ವಿಧಾನಸೌಧದಲ್ಲಿ ಕನಕದಾಸರ 534ನೇ ಜಯಂತೋತ್ಸವ ಕಾರ್ಯಕ್ರಮವನ್ನು ಇಂದು ಆಚರಿಸಲಾಯಿತು‌. ಈ ಕಾರ್ಯಕ್ರಮದಲ್ಲಿ ತಹಾಸಿಲ್ದಾರ್ ಚಂದ್ರಶೇಖರ್, ನಗರಸಭೆ ಆಯುಕ್ತ ಉಮಾಕಾಂತ್,  ಮಾಜಿ ನಗರಸಭಾ ಸದಸ್ಯ ಲೋಕೇಶ್, ರವಿಕುಮಾರ್ ಸೇರಿದಂತೆ ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ತುಮಕೂರು: ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವ ಸೈನ್ಯ ಹಾಗೂ ಚಲವಾದಿ ಮಹಾಸಭಾ ವೇದಿಕೆ ವತಿಯಿಂದ 534ನೇ  ಕನಕದಾಸರ ಜಯಂತೋತ್ಸವವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಇದೇ ವೇಳೆ ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿಯ ಜಿಲ್ಲಾ ಅಧ್ಯಕ್ಷ  ಎನ್.ಕೆ.ನಿಧಿ ಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ. ಎನ್. ರಾಮಯ್ಯ, ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾ ಅಧ್ಯಕ್ಷರು ಗೋವಿಂದರಾಜ್ ಕೆ., ವಕೀಲರಾದ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಕಾರ್ಮಿಕ ಘಟಕದ ಜಿಲ್ಲಾ ಅಧ್ಯಕ್ಷರು ಎಚ್.ಬಿ.ರಾಜೇಶ್, ದಲಿತ ಸಂಘರ್ಷ ಸಮಿತಿ ನಗರ ಅಧ್ಯಕ್ಷರು ಲಕ್ಷ್ಮೀನಾರಾಯಣ ಎಸ್.ಅಖಿಲ ಭಾರತ ಡಾಕ್ಟರ್ ಅಂಬೇಡ್ಕರ್ ಪ್ರಚಾರ ಸಮಿತಿ ನಗರ ಅಧ್ಯಕ್ಷರು ಮನು ಟಿ ದಲಿತ ಸಂಘರ್ಷ ಸಮಿತಿ ನಾಗರ ಉಪಾಧ್ಯಕ್ಷರು ಮಾರುತಿ ಸಿ ನರಸಿಂಹರಾಜ ಏ.ಡಿ ಅಖಿಲ ಭಾರತ…

Read More

ತಿಪಟೂರು: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರು ವ್ಯಾಪಾರ ಮಾಡುವ ಸ್ಥಳಗಳಲ್ಲಿ ಈರುಳ್ಳಿ ಚೀಲಗಳನ್ನು ಇಟ್ಟು ವ್ಯಾಪಾರಕ್ಕೆ ತೊಂದರೆ ನೀಡಲಾಗುತ್ತಿದೆ ಎಂದು ಇಲ್ಲಿನ ವ್ಯಾಪಾರಿಗಳು ಆರೋಪಿಸಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಅವರು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಕೇಳಿ ಬಂದಿದೆ. ರೈತರು ತಾವು ಬೆಳೆದ ಬೆಳೆಗಳನ್ನು ತಂದು ವ್ಯಾಪಾರ ಮಾಡುತ್ತಿರುವ ಸ್ಥಳದಲ್ಲಿ ಕೊಳೆತ ಈರುಳ್ಳಿಗಳನ್ನು ರಾಶಿ ಹಾಕಲಾಗಿದ್ದು, ಇದರಿಂದಾಗಿ ವ್ಯಾಪಾರ ಮಾಡಲು ಅನಾನುಕೂಲವಾಗಿದೆ. ಈರುಳ್ಳಿ ಕೊಳೆತು ದುರ್ವಾಸನೆ ಹರಡಿದ್ದು, ಮಾರುಕಟ್ಟೆಗೆ ಆಗಮಿಸುತ್ತಿರುವ ಗ್ರಾಹಕರು ಕೂಡ ಛೀ. ಥೂ ಎನ್ನುವಂತಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಿನೇ ದಿನೇ ಮಧ್ಯವರ್ತಿಗಳ ಕಾಟ ಕೂಡ ಹೆಚ್ಚಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿದ್ದು, ಇನ್ನೊಂದೆಡೆ ವ್ಯಾಪಾರ ಮಾಡಲು ಕೂಡ ಅನಾನುಕೂಲ ಸೃಷ್ಟಿಯಾಗುತ್ತಿರುವುದರಿಂದಾಗಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಅವ್ಯವಸ್ಥೆಯ ಸಂಬಂಧ ಎಪಿಎಂಸಿ ಅಧ್ಯಕ್ಷ ದಿವಾಕರ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದು, ತಕ್ಷಣವೇ ಈ…

Read More

ಸಿರಾ: ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಅವರು ಇಂದು ಶಿರಾ ಬಿಜೆಪಿ ಕಾರ್ಯಾಲಯದಲ್ಲಿ  ಕನಕ ಜಯಂತಿ ಆಚರಣೆ ಮಾಡಿದರು. ಕನಕದಾಸರ ಭಾವ ಚಿತ್ರಕ್ಕೆ ಹೂವಿನ ಹಾರ ಅರ್ಪಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕನಕದಾಸರಿಗೆ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಮಹಿಳಾ ಕಾರ್ಯಕರ್ತರು ಮುಂತಾದವರು ಹಾಜರಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಗದಗ: ಇಂದು ಮುಂಜಾನೆ ಲಿಂಗೈಕ್ಯರಾದ ಗದಗ ಜಿಲ್ಲೆ ಗಜೇಂದ್ರಗಡದ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಅಭಿನವ ಅನ್ನದಾನೇಶ್ವರ ಡಾ.ಸಂಗನಬಸವ ಮಹಾಸ್ವಾಮಿಗಳ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪಡೆದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್ ಇದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:  97417 17700

Read More

ಮಧುಗಿರಿ: ಹಂಸಲೇಖ ಅವರ ಹೇಳಿಕೆ ಬೆಂಬಲಿಸಿ ‘ಜೈ ಭೀಮ್’ ಯುವಕರ ಸಂಘ ಮುದ್ದೇನೇರಳೆಕೆರೆ ವತಿಯಿಂದ ಇಲ್ಲಿನ ಅಂಬೇಡ್ಕರ್ ಭವನದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿ ಸಾಂಕೇತಿಕ ಧರಣಿ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಸಂಘಟನೆಯ ಮುಖಂಡರು, ಬಹುಸಮಾಜದ ಉಳಿವಿಗಾಗಿ ನೆಲ ಮೂಲ ಸಂಸ್ಕೃತಿ ಯ ಉಳಿವಿಗಾಗಿ ಹಾಗೂ ನಮ್ಮ ಅಸ್ಮಿತೆಗಾಗಿ ಸಮಾಜದ ನಡುವೆ ಸಂಘರ್ಷ ಅನಿವಾರ್ಯ ಎಂದರು. ಸಮಾಜದ ಕ್ರಾಂತಿಯ ಕಿಡಿಯನ್ನು ಹತ್ತಿಕ್ಕಿ ಮೂಲೆಗುಂಪು ಮಾಡುವ ಕೆಲಸವನ್ನು ಕೆಲವು ಸಾಂಪ್ರದಾಯಿಕ ಮನುವಾದಿಗಳು ಮಾಡುತ್ತಿದ್ದಾರೆ. ಇಂತಹ ಒಳ ಸಂಚಿನ ವಿರುದ್ಧ ಜಾಗೃತಿಗೊಳ್ಳದಿದ್ದರೆ, ಇದು ನಮ್ಮ ಅವಸಾನಕ್ಕೆ ಕಾರಣವಾದೀತು ಎಂದು ಜಾಗೃತಿ ಮೂಡಿಸಲಾಯಿತು. ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ, ಒಳಸಂಚಿನ ಕಾಣದ ಕೈಗಳ ವಿರುದ್ಧ ಹೋರಾಡಲೇ ಬೇಕಾಗಿದೆ. ನಮ್ಮ  ಊರಿನಲ್ಲಿಯೂ ಕ್ರಾಂತಿಯ ಕಿಡಿ ಇದೆ ಎನ್ನುವುದನ್ನು ತೋರಿಸಬೇಕಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು. ಈ ವೇಳೆ ಸಂಘದ ಮುಖಂಡರಾದ ತಿಪ್ಪೇಸ್ವಾಮಿ, ಮೋಹನ್, ರಾಜು, ಕುಪೆಂದ್ರ, ಸಿದ್ದು, ವೆಂಕಟ್, ಅಶ್ವತ್, ಪರಮಾತ್ಮ, ಮಂಜು, ಕುಮಾರ್,ಶಿವು, ದನಂಜಿ, ನಾಗೇಶ್…

Read More

ಬೆಂಗಳೂರು: ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 45.31 ಲಕ್ಷ ರೂಪಾಯಿಗಳನ್ನು ವಂಚಿಸಿರುವ ಘಟನೆ ನಡೆದಿದ್ದು, ಇದೀಗ ಘಟನೆ ಸಂಬಂಧ ವರ್ತೂರು ನಿವಾಸಿ ಮಹಿಳೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಇನ್‌ ಸ್ಟಾಗ್ರಾಮ್ ಆ್ಯಪ್‌ ನಲ್ಲಿ ಸಂತ್ರಸ್ತ ಮಹಿಳೆ ಖಾತೆ ಹೊಂದಿದ್ದು, ಈ ಖಾತೆಗೆ ರಿಕ್ವೆಸ್ಟ್ ಕಳುಹಿಸಿದ್ದ ಆರೋಪಿ ಅಲೆಕ್ಸ್ ಎರಿನ್, ತಾನೊಬ್ಬ ಅಂತರರಾಷ್ಟ್ರೀಯ ಹಡಗಿನ ಕ್ಯಾಪ್ಟನ್ ಎಂಬುದಾಗಿ ಪರಿಚಯಿಸಿಕೊಂಡಿದ್ದ. ನಂತರ, ಇಬ್ಬರೂ ಪರಸ್ಪರ ಚಾಟಿಂಗ್ ಮಾಡಲಾರಂಭಿಸಿದ್ದರು. ಇನ್ನೂ ನಮ್ಮ ಸ್ನೇಹದ ನೆನಪಿಗಾಗಿ ಉಡುಗೊರೆ ಕಳುಹಿಸುವುದಾಗಿ ಹೇಳಿದ್ದ ಆರೋಪಿ, ಅದನ್ನು ಸ್ವೀಕರಿಸುವಂತೆ ಕೋರಿದ್ದ. ಅದಕ್ಕೆ ಮಹಿಳೆ ಒಪ್ಪಿಗೆ ಸೂಚಿಸಿದ್ದರು ಎನ್ನಲಾಗಿದೆ. ಸೆ.30ರಂದು ಮಹಿಳೆಗೆ ಕರೆ ಮಾಡಿದ್ದ ಮತ್ತೊಬ್ಬ ಆರೋಪಿ, ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದು, ವಿದೇಶದಿಂದ ಬೆಲೆಬಾಳುವ ಡೈಮಂಡ್ ಉಡುಗೊರೆ ಬಂದಿರುವುದಾಗಿ ಹೇಳಿದ್ದಾನೆ. ಜೊತೆಗೆ ಕೆಲ ಶುಲ್ಕ ಪಾವತಿಸುವಂತೆ ಹೇಳಿದ್ದ. ಶುಲ್ಕ ತುಂಬದಿದ್ದರೆ, ಜೈಲು ಶಿಕ್ಷೆಯಾಗುವುದಾಗಿಯೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆರೋಪಿಗಳ ಮಾತು ನಂಬಿದ ಮಹಿಳೆ…

Read More

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಂಟಾಗಿರುವ ಹಾನಿಗಳ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯಗಳಿಗೆ ರಸ್ತೆಗಳ ದುರಸ್ತಿಗೆ ಲೋಕೋಪಯೋಗಿ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಬಸವರಾಜ ಬೊಮ್ಮಾಯಿ ಅವರು ತಕ್ಷಣವೇ 500 ಕೋಟಿ ರೂ. ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಗೆ ಆದೇಶ ನೀಡಿದ್ದಾರೆ. ಮಳೆಯಿಂದಾದ ಹಾನಿಗಳು: ಜೀವ ಹಾನಿ; 24, ಸಂಪೂರ್ಣ ಮನೆ ಹಾನಿ; 658, ಭಾಗಶಃ ಮನೆ ಹಾನಿ; 8,495, ಜಾನುವಾರು ಸಾವು; 191, ಕೃಷಿ ಬೆಳೆ ಹಾನಿ; 5 ಲಕ್ಷ ಹೆಕ್ಟೇರ್, ತೋಟಗಾರಿಕೆ ಬೆಳೆ; 30,114 ಹೆಕ್ಟೇರ್, ರಸ್ತೆ ಹಾನಿ; 2,203 ಕಿ.ಮೀ., ಸೇತುವೆಗಳು; 165, ಶಾಲೆಗಳು; 1,225, ಪ್ರಾಥಮಿಕ ಆರೋಗ್ಯ ಕೇಂದ್ರ; 39, ವಿದ್ಯುತ್ ಕಂಬ; 1,674, ವಿದ್ಯುತ್ ಟ್ರಾನ್ಸ್ ಫಾರ್ಮರ್; 278 ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಪ್ರತಿವಲಯಕ್ಕೆ ರೂ.25 ಲಕ್ಷ ಬಿಡುಗಡೆ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ವಸ್ತುಸ್ಥಿತಿ ಆಧಾರಿತ ವರದಿ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ರಸ್ತೆ…

Read More