Subscribe to Updates
Get the latest creative news from FooBar about art, design and business.
- ದೊಡ್ಡ ಮಳಲವಾಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ: ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ
- ರಾಗಿ ಖರೀದಿ : ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ
- ಮೋದಿ ಅವರು ನನ್ನ ತಬ್ಬಿ ಡಬಲ್ ಕಂಗ್ರಾಜುಲೆಷನ್ ಅಂದರು: ಸಚಿವ ವಿ.ಸೋಮಣ್ಣ
- ಬೆಸ್ಕಾಂ ಇಂದು ವಿವಿಧ ಉಪ ವಿಭಾಗಗಳಲ್ಲಿ ಗ್ರಾಹಕರ ಸಂವಾದ ಸಭೆ
- ಧರ್ಮಸ್ಥಳ ಸಂಸ್ಥೆಯಿಂದ ಶಿರಡಿ ಸಾಯಿಬಾಬಾ ಅನಾಥಾಶ್ರಮ ಕಟ್ಟಡ ಕಾಮಗಾರಿಗೆ 2 ಲಕ್ಷ ರೂ. ದೇಣಿಗೆ
- ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಿ: ಮಲ್ಲಿಕಾ ಬಸವರಾಜು
- ಬೀದರ್: ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಹೋಳಿ ಹಬ್ಬದ ಸಂಭ್ರಮ
- ನೌಬಾದ್ ಪಿಎಚ್ ಸಿಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ: ಸೂರ್ಯಕಾಂತ ಸಾಧುರೆ ಆಗ್ರಹ
Author: admin
ತಿಪಟೂರು: ತಿಪಟೂರು ತಾಲ್ಲೂಕಿನ ಹೋನವಳಿ ಹೋಬಳಿ ಗುರುಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುಗದಹಳ್ಳಿ ಗ್ರಾಮ ದೇವತೆ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಅಭಿವೃದ್ಧಿಗೆ 100000 ರೂ. ಗಳ ಮಂಜೂರಾತಿಯ ಚೆಕ್ಕನ್ನು ಮತ್ತು ರಾಮಮಂದಿರಕ್ಕೆ 65000 ರೂ.ಗಳನ್ನು ಸರ್ಕಾರದ ವತಿಯಿಂದ ಪ್ರಾಥಮಿಕ ಪ್ರೌಢಶಿಕ್ಷಣ ಸಚಿವರಾದ ಬಿಸಿ ನಾಗೇಶ್ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಸದಸ್ಯರು ಉಮಾ ಶಂಕರ್ ಗುರುಗದಹಳ್ಳಿ ಮತ್ತು ಉಮೇಶ್ ಸದಸ್ಯರು ಗುರುಗದಹಳ್ಳಿ ಮತ್ತು ಗ್ರಾಮಸ್ಥ ಮುಖಂಡರು ಹಾಜರಿದ್ದರು ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತಿಪಟೂರು: ತಾಲೂಕಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಪ್ರಾಂಶುಪಾಲರು ವಿತರಿಸಿದರು. ಮತ್ತು ದಿನೇಶ್ ಕುಮಾರ್ ಆರೋಗ್ಯ ಇಲಾಖೆ ಡಿ ದರ್ಜೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಇಂದು ಕಾಲೇಜಿಗೆ ಗ್ರೀನ್ ಬೋರ್ಡ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು. ನಗರಸಭೆ ಅಧ್ಯಕ್ಷರಾದ ರಾಮ್ ಮೋಹನ್ ಮತ್ತು ಡಿ ಗ್ರೂಪ್ ನೌಕರ ದಿನೇಶ್ ಕಾಲೇಜಿನ ಶಿಕ್ಷಕರು ಹಾಜರಿದ್ದರು. ವರದಿ: ಮಂಜು ಗುರುಗದಹಳ್ಳಿ ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ಬಿಜೆಪಿಯಿಂದ ದಲಿತ ಮುಖ್ಯಮಂತ್ರಿ ಎನ್ನುವ ಮಾತು ಅನಗತ್ಯ. ಸಮಾನತೆಯಲ್ಲಿ ನಂಬಿಕೆ ಇಲ್ಲದ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷ ದಲಿತರಿಗೆ ಸಿಎಂ ಪದವಿ ನೀಡುವ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್ ನ ಹಿರಿಯ ನಾಯಕ ಜಿ.ಪರಮೇಶ್ವರ್ ಹೇಳಿದರು. ಭಾನುವಾರ ನಡೆದ ಕಾಂಗ್ರೆಸ್ ಪರಾಮರ್ಶನಾ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯುವರು ರಾಜಕಾರಣದ ದೃಷ್ಠಿಯಿಂದ ದಲಿತ ಸಿಎಂ ಹೆಸರು ಪ್ರಸ್ತಾಪಿಸುತ್ತಿದ್ದಾರೆ. ಕಾಂಗ್ರೆಸ್ ದಲಿತ ನಾಯಕರಿಗೆ ಅವರ ಅರ್ಹತೆ ಆಧಾರದಲ್ಲಿ ಸಂದರ್ಭ ಒದಗಿ ಬಂದಾಗಲೆಲ್ಲ ಉನ್ನತ ಸ್ಥಾನ ಮಾನ ನೀಡಿದೆ. ಮಹಾರಾಷ್ಟ್ರದ ದಲಿತ ನೇತಾರ ಸುಶೀಲ್ ಶಿಂಧೆ ಅವರನ್ನು ರಾಜ್ಯಪಾಲರನ್ನಾಗಿಸಿದ್ದು ಕಾಂಗ್ರೆಸ್ ಎಂದರು. ಮೇದಾವಿ ರಾಜನೀತಿಜ್ಞ ಕೆ.ಆರ್.ನಾರಾಯಣ್ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಸಂವಿಧಾನಕ್ಕೆ ಅಪಮಾನಿಸುವಂತೆ ದಲಿತ ಸಮುದಾಯವನ್ನು ಅನಗತ್ಯವಾಗಿ ಎಳೆದು ತರುವುದು ಬೇಡ ಎಂದು ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417…
ಮತಿಘಟ್ಟ: (ತಿಪಟೂರು ತಾಲ್ಲೂಕು ) ಪುನೀತ್ ರಾಜಕುಮಾರ್ ರವರ ಪುಣ್ಯ ತಿಥಿ ಆಚರಿಸಲಾಯಿತು ಧರ್ಮದರ್ಶಿ ಹಾಗೂ ತಾಲ್ಲೂಕು ಜೆ ಡಿ ಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ ಮತ್ತು ಜೆ ಡಿ ಎಸ್ ಸಿದ್ಧಬಸಪ್ಪ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪುಣ್ಯಾರಾಧನೆ ಅಂಗವಾಗಿ ಅಭಿಮಾನಿಗಳಿಗಾಗಿ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಪುನೀತ್ ಪತ್ನಿ ಅಶ್ವಿನಿ, ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಆಗಮಿಸಿದ್ದಾರೆ. ಈ ವೇಳೆ ಪುನೀತ್ ಪತ್ನಿ ಅಶ್ವಿನಿ ಅಗಲಿದ ಅಪ್ಪುರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಚಿತ್ರದುರ್ಗ: ಹೃದಯಾಘಾತದಿಂದ ಡಿವೈಎಸ್ ಪಿ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ವಾಕಿಂಗ್ ಮುಗಿಸಿ ಮನೆಗೆ ತೆರಳಿದ್ದ ವೇಳೆ ಧೀಡಿರ್ ಕುಸಿದು ಬಿದ್ದಿದ್ದ ಡಿವೈಎಸ್ಪಿ ರಮೇಶ (52) ಅವರನ್ನು ತಕ್ಷಣವೇ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬಸವೇಶ್ವರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಡಿಸಿಆರ್ ಬಿ ಮತ್ತು ಡಿವೈಎಸ್ ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್, 1998 ಬ್ಯಾಚ್ನಲ್ಲಿ ಪೊಲೀಸ್ ಸೇವೆಗೆ ಸೇರಿದ್ದರು. ಸದ್ಯ ಬಸವೇಶ್ವರ ಆಸ್ಪತ್ರೆಗೆ ಎಸ್ಪಿ ಜಿ.ರಾಧಿಕಾ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದ ಹಿನ್ನೆಲೆಯಲ್ಲಿ ಇಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದ್ದು, ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇಂದು ಬೆಳಗ್ಗೆ 11 ಗಂಟೆಯಿಂದಲೇ ಅನ್ನ ಸಂತರ್ಪಣೆ ಆರಂಭವಾಯಿತು. ಒಂದು ಬಾರಿಗೆ ಸುಮಾರು 5 ಸಾವಿರ ಜನರು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. 4 ಸಾವಿರ ಮಾಂಸಾಹಾರಿ ಹಾಗೂ ಒಂದು ಸಾವಿರ ಸಸ್ಯಹಾರಿ ಕೌಂಟರ್ ಗಳನ್ನು ಸಿದ್ಧಪಡಿಸಲಾಗಿದೆ. 2 ಗೇಟ್ ಗಳಲ್ಲಿ 5 ಸಾವಿರ ಕುರ್ಚಿ ಟೇಬಲ್ ಹಾಕಲಾಗಿದೆ. ಇನ್ನೂ ಅನ್ನ ಸಂತರ್ಪಣೆಗೆ ಸಾಗರ ರೀತಿಯಲ್ಲಿ ಅಪ್ಪು ಫ್ಯಾನ್ಸ್ ಆಗಮಿಸುತ್ತಿದ್ದಾರೆ. ಇನ್ನೊಂದೆಡೆ ದೊಡ್ಡ ಜನ ಸಮೂಹವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ಇನ್ನೂ ಅಭಿಮಾನಿಗಳು ಪ್ಯಾಲೇಸ್ ಗ್ರೌಂಡ್ ಗೆ ಸಾಲಾಗಿ ಬರುತ್ತಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು. ಬಳಿಕ ಅಪ್ಪು ಅಭಿಮಾನಿಗಳಿಗೆ ಊಟ ಬಡಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅನ್ನ ಸಂತರ್ಪಣೆಯಲ್ಲಿ ಭಾಗವಹಿಸುತ್ತಿದ್ದಾರೆ. ‘ದೊಡ್ಮನೆ’ ಎಂಬ ಪದಕ್ಕೆ ಅರ್ಥ ಬರುವಂತೆಯೇ ಇಂದು ಲಕ್ಷಾಂತರ ಜನರು ಯಾವುದೇ…
ಸರಗೂರು: ಪುನೀತ್ ನಿಧನವು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡಂತೆ ಬಹಳ ನೋವಾಗುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಹೆಚ್ ಡಿ ಕೋಟೆ ತಾಲ್ಲೂಕಿನ ಪಟ್ಟಣದ ಕೃಷ್ಣಾಪುರ ಗ್ರಾಮದ ಯುವ ಸಮೂಹ ಆಯೋಜಿಸಿದ್ದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪುನೀತ್ ರಾಜ್ಕು ಮಾರ್ ಅವರ ಪುಣ್ಯ ಸ್ಮರಣಾರ್ಥವಾಗಿ ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಪುನೀತ್ ಅವರು ಮಾಡುತ್ತಿದ್ದ ಸೇವೆಯಂತೆ ನೊಂದ ಬಡಜನರಿಗೆ ನೇರವಾಗುವಂತೆ, ತಾಲೂಕಿನ ಎಲ್ಲಾ ಸರ್ವ ಜನಾಂಗದವರ ಜೊತೆಗೂಡಿ ಪಕ್ಷಾತೀತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿಯ ಅದ್ಯಕ್ಷರಾದ. ಹೆಚ್.ಸಿ.ನರಸಿಂಹಮೂರ್ತಿ, ನಾಗನಹಳ್ಳಿ ಪ್ರದೀಪ್, ಪುರಸಭಾ ಸದಸ್ಯರಾದ ಮಧುಕುಮಾರ್, ದಿನೇಶ್, ಜೆಡಿಎಸ್ ಮುಖಂಡರಾದ ಶಿವಯ್ಯ, ಸೋಮುಪಟೇಲ್, ಯುವ ಮುಖಂಡರಾದ ವೆಂಕಿ ಕೋಟೆ , ಮಹೇಂದ್ರ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ:…
ಹಾದನೂರು: ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎತ್ತಿಗೆ ಗ್ರಾಮದಲ್ಲಿ ಕೋತಿಗಳು ಹಾವಳಿಗಳಿಂದ ಮನೆಯ ದಿನಸಿ ಪದಾರ್ಥಗಳನ್ನು ನಾಶವಾಗಿದೆ ಎಂದು ಇಲ್ಲಿನ ಗ್ರಾಮಸ್ಥರು ಆರೋಪಿಸಿದ್ದಾರೆ. ಎತ್ತಿಗೆ ಗ್ರಾಮದಲ್ಲಿ ಕೋತಿಗಳಿಂದ ಜನರು ಭಯ ಪಟ್ಟುವಂತೆ ವಾತಾವರಣ ನಿರ್ಮಾಣವಾಗಿದೆ. ಜನರು ಜಮೀನಿಗೆ ಕೆಲಸ ಮಾಡಲು ಹೋದ ಸಮಯದಲ್ಲಿ ಕೋತಿಗಳು ಮನೆಯ ಚಾವಣಿ ಅಂಚು ತೆಗೆದುಕೊಂಡು ಮನೆಯ ಒಳಗಡೆಯಲ್ಲಿ ಮನೆಯಲ್ಲಿ ಇಂದ ಸಾಮಾನುಗಳನ್ನು ಪದಾರ್ಥ ನಾಶಮಾಡಿ ನಂತರ ಜನರು ಕೋತಿಗಳನ್ನು ಓಡಿಸಲು ಹೋದರೆ ಜನರನ್ನೇ ಓಡಿಸಿಕೊಂಡು ಬರುತ್ತವೆ ಎಂದರು. ಗ್ರಾಮಸ್ಥರು ಸೇರಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಅಲವು ಬಾರಿ ಅರ್ಚಿಯನ್ನು ನೀಡಿದ್ದರು ಕೂಡ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಮಾಧ್ಯಮ ಜೊತೆ ಹೇಳಿಕೊಂಡು. ವರದಿ: ಚಂದ್ರಹಾದನೂರು ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com ವಾಟ್ಸಾಪ್ ಗ್ರೂಪ್ ಸೇರಿ: https://chat.whatsapp.com/E7Brl0d8zXCJogP6c6GRcZ ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700
ತುಮಕೂರು: ದೇಶದ ವಿದ್ಯಾವಂತರಿಗೂ ಕಾನೂನಿನ ಅರಿವಿಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದಿಂದ ನ್ಯಾಯ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಗಾಜಿನ ಮನೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದವರು, ಹೆಣ್ಣು ಮಕ್ಕಳ ಮೇಲೆ ಆಸಿಡ್ ದಾಳಿ ಮಾಡಿದವರನ್ನು ಗಲ್ಲಿಗೇರಿಸುವಂತಹ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು. ನ್ಯಾಯಾಂಗವು ದೇಶದ ಒಳಗಡೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಸರಿಪಡಿಸಲು ಕಾರ್ಯನಿರ್ವಹಿಸುತ್ತಿದೆ. ಜತೆಗೆ ಸರ್ವರಿಗೂ ನ್ಯಾಯದಾನ ದೊರಕಿಸಲು ಕಾನೂನು ಅರಿವು ಮೂಡಿಸುತ್ತಿದೆ. ಎಲ್ಲರಿಗೂ ನ್ಯಾಯ ದೊರಕಿಸಿಕೊಡಲು ಲೋಕ ಅದಾಲತ್ ನಡೆಸಲಾಗುತ್ತಿದೆ. ಈ ಕಾರ್ಯದಲ್ಲಿ ಜಿಲ್ಲೆ ನಾಲ್ಕು…