Author: admin

ಸರಗೂರು: ತಾಲೂಕು ಪಂಚಾಯಿತಿ ಯಲ್ಲಿ  ವಿಕಲಚೇತನರಿಗೆ ಸಾಧನಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ    ಟೈಲರಿಂಗ್ ಮೇಷನ್, ಸೊಲರ್ ಲೈಟ್, ವೀಲ್ ಚೇರ್  ತ್ರೀವಿಲ್ ಸೈಕಲ್ , ವಾಟರ್ ಬೇಡ್,  MRಕೀಟ್ ನ್ನು ಶಾಸಕರಾದ ಅನಿಲ್ ಚಿಕ್ಕಮಾಧು ಅವರು ಫಲಾನುಭವಿಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸರಗೂರು ತಾಲೂಕು ಸಂಯೋಜಕರಾದ ಜವರಾಜು ಮಾತನಾಡಿ,   ಶಾಸಕರಿಗೆ ಸ್ವಾಗತ ಕೋರಿ ಶೇಕಡಾ 5ರ ಅನುದಾನದಲ್ಲಿ ತಾಲೂಕು ಪಂಚಾಯಿತಿ ಯಿಂದ  ವಿಕಲಚೇತನರಿಗೆ ಸಾಧನ ಸಲಕರಣೆ ಇಂದು ವಿತರಣೆ ಮಾಡಲಾಗಿದೆ ಹಾಗೂ UDID    ಕಾರ್ಡ್ ಸರಗೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಅಪ್ಲೋಡ್ ಮಾಡುತ್ತಿಲ್ಲ ಇದರಿಂದ ವಿಕಲಚೇತನರ ಗೆ ತೊಂದರೆ ಆಗುತ್ತಿದೆ ತಕ್ಷಣವೇ ಶಾಸಕರು ಇದನ್ನು ಬಗೆಹರಿಸಬೇಕು ಎಂದರು. ಶಾಸಕ ಅನೀಲ್ ಚಿಕ್ಕಮಾದು ಮಾತನಾಡಿ, ವಿಕಲಚೇತನರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನ ದಲ್ಲಿ ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ 5 ಬೈಕ್ ಗಳನ್ನು ವಿತರಣೆ ಮಾಡುತ್ತಿವಿ ಎಂದರು ಈ ಸಂದರ್ಭದಲ್ಲಿ ಸರಗೂರು ತಾಲೂಕು ಪಂಚಾಯಿತಿ ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್…

Read More

ಚಿತ್ರದುರ್ಗ: ಮದುವೆ ಕರೆಯೋಲೆಯಲ್ಲಿ “ಆಶೀರ್ವಾದವೇ ಉಡುಗೊರೆ” ಎಂದು ಬರೆಯುವುದನ್ನು ನೀವು ನೋಡಿರ ಬಹುದು ಆದರೆ, ಇಲ್ಲೊಂದು ವಿವಾಹ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕುಮಾರಣ್ಣನಿಗೆ ಮತ ನೀಡುವುದೇ ನೀವು ಕೊಡುವ ಉಡುಗೊರೆ ಎಂದು ಪತ್ರಿಕೆಯಲ್ಲಿ ಬರೆಸಲಾಗಿದೆ. ಹೌದು…!  ಅಭಿಮಾನಕ್ಕೆ ಎಲ್ಲೆ ಇಲ್ಲ ಅಂತಾರೆ. ಹಲವು ಘಟನೆಗಳು ಸಾಕ್ಷಿಯೂ ಆಗಿದೆ. ಅಂತಹ ಒಂದು ವಿಶೇಷ ಅಭಿಮಾನ ಚಿತ್ರದುರ್ಗದ ಚೆಳ್ಳಕೆರೆಯ ಸ್ನಾತ್ತಕೋತ್ತರ ಪದವಿ ಪಡೆದ ಯುವಕನೊಬ್ಬ ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ 2023 ರ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ರವರಿಗೆ ನೀಡುವ ಮತವೇ ನೀವು ನೀಡುವ ಉಡುಗೊರೆ ಎಂಬ ಸಂದೇಶ ಮುದ್ರಿಸಿ ಆಹ್ವಾನಿಸುತ್ತಿದ್ದಾರೆ. ಸದ್ಯ ಈ ವಿಶೇಷ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸದ್ದು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಪಿ.ಗೌರೀಪುರ ಗ್ರಾಮದ ಪುಟ್ಟಮ್ಮ ನಾಗರಾಜಪ್ಪ ದಂಪತಿಗಳ ಪುತ್ರ ಜಯಕುಮಾರ್ ಇಂತಹದ್ದೊಂದು ವಿಶೇಷ ಮದುವೆ ಆಮಂತ್ರಣ ಹಂಚುತ್ತಿದ್ದಾರೆ. ಮೇ 18 ರಂದು ಮದುವೆ ನಿಶ್ಚಯವಾಗಿದೆ. ಜಯಕುಮಾರ್…

Read More

ಆಧಾರ ರಹಿತ ಸಂತೆ ಭಾಷಣ ಮಾಡುವುದನ್ನು ಬಿಟ್ಟು ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ದಾಖಲೆ ಇದ್ದರೆ ಕಾಂಗ್ರೆಸ್ ನೀಡಲಿ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣವನ್ನು ಬೆಳಕಿಗೆ ತಂದಿದ್ದು ಗೃಹ ಸಚಿವರು, ಅವರನ್ನು ಅಭಿನಂದಿಸಬೇಕಾಗಿದ್ದ ಕಾಂಗ್ರೆಸ್ ಆರೋಪಿಸುತ್ತಿರುವುದು ಸರಿಯಲ್ಲ. ಈ ಹಿಂದೆ ಬಿಟ್ಕಾಯಿನ್ ವಿಚಾರದಲ್ಲಿ ಇದೇ ರೀತಿ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಕೊನೆಗೆ ಅದು ಶೂನ್ಯ ಆಯಿತು ಎಂದು ಟೀಕಿಸಿದರು. ಚುನಾವಣೆ ಗಿಮಿಕ್ ಮಾಡಲು ಇನ್ನೂ ಸಮಯಾವಕಾಶವಿದೆ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬಿಜೆಪಿ ತಟ್ಟೆಯಲ್ಲಿ ನೊಣ ಬಿದ್ದಿದೆ ಎಂದು ಹೇಳಲು ಬರಬೇಡಿ. ಡಬಲ್ ಎಂಜಿನ್ ಸರ್ಕಾರದ ಭಯದಿಂದ ಕಾಂಗ್ರೆಸ್ ಈ ರೀತಿ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು. ಸಚಿವ ಅಶ್ವಥನಾರಾಯಣ ಅವರು ಎಲ್ಲಿಯೂ ಕೂಡ ಮುಖ್ಯಮಂತ್ರಿಯಾಗುವುದಾಗಿ ಹೇಳಲಿಲ್ಲ. ಆದರೂ ಕಾಂಗ್ರೆಸ್ ನಾಯಕರು ಅವರ ಹೆಸರನ್ನು ಉಲ್ಲೇಖಿಸುವುದು ಸರಿಯಲ್ಲ. ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದ್ದು,…

Read More

ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷ, ಇಂಡೋ- ಪೆಸಿಫಿಕ್ನಲ್ಲಿನ ಪರಿಸ್ಥಿತಿ ಮತ್ತು ಭಯೋತ್ಪಾದನೆ ಸೇರಿದಂತೆ ವಿವಿಧ ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ವ್ಯಾಪಕ ಚರ್ಚೆ ನಡೆಸಿದರು. ಮೂರು ರಾಷ್ಟ್ರಗಳ ಯುರೋಪಿಯನ್ ಪ್ರವಾಸದ ಅಂತಿಮ ಹಂತದಲ್ಲಿ ಡೆನ್ಮಾರ್ಕ್ ನಿಂದ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ, ಒಂದು ವಾರದ ಹಿಂದೆ ಪ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅವರೊಂದಿಗೆ ಸಮಾಲೋಚನೆ ನಡೆಸಿ, ಭಾರತ-ಫ್ರಾನ್ಸ್ ನಡುವೆ ಮುಂದಿನ ಹಂತದ ಮಹತ್ವಾಕಾಂಕ್ಷೆಯ ಕಾರ್ಯತಾಂತ್ರಿಕ ಪಾಲುದಾರಿಕೆಯ ಕಾರ್ಯಸೂಚಿಗಳನ್ನು ನಿರ್ಧರಿಸಿದ್ದರು. ರಕ್ಷಣೆ, ಬಾಹ್ಯಾಕಾಶ, ನೀಲಿ ಆರ್ಥಿಕತೆ, ನಾಗರಿಕ ಪರಮಾಣು ಮತ್ತು ಜನರ ನಡುವಿನ ಸಂಬಂಧ ಸೇರಿದಂತೆ ದ್ವಿಪಕ್ಷೀಯ ವಿಷಯಗಳ ಸಂಪೂರ್ಣ ಶ್ರೇಣಿಯ ಕುರಿತು ಮೋದಿ ಮತ್ತು ಮ್ಯಾಕ್ರನ್ ಚರ್ಚೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನನ್ನ ಸ್ನೇಹಿತ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ರನ್ನು ಭೇಟಿಯಾಗಿದ್ದು ಸಂತೋಷವಾಗಿದೆ. ನಾವು ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ.…

Read More

ಉಕ್ರೇನ್ ಯುದ್ಧ ಜಾಗತಿಕ ಪರಿಣಾಮ ಬೀರುವುದರಿಂದ ದಿನನಿತ್ಯದ ಆಹಾರಕ್ಕೆ ಪರದಾಡುವವರ ಸಂಖ್ಯೆಗರಿಷ್ಠ ಮಟ್ಟಕ್ಕೆ ತಲುಪಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತ ಪಡಿಸಿದೆ.ಹವಾಮಾನ ವೈಪರೀತ್ಯಗಳು, ಕೊರೊನಾ ಸಾಂಕ್ರಾಮಿಕದ ಆರ್ಥಿಕ ಪರಿಣಾಮ, ಉಕ್ರೇನ್ ಸಂಘರ್ಷಗಳು ಮೂರು ವಿಷಕಾರಿ ಸಂಯೋಜನೆಯಾಗಿದ್ದು, 2021 ರಲ್ಲಿ 53 ದೇಶಗಳ ಸುಮಾರು 193 ಮಿಲಿಯನ್ ಜನರು ತೀವ್ರ ಆಹಾರ ಕೊರತೆ ಅನುಭವಿಸಿದರು. ಈ ವರ್ಷ ಅದಕ್ಕೆ ಮತ್ತೆ 40 ಮಿಲಿಯನ್ ಜನ ಸೇರ್ಪಡೆಯಾಗಿದ್ಧಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ವಿಶ್ವ ಆಹಾರ ಕಾರ್ಯಕ್ರಮ ಮತ್ತು ಯುರೋಪಿಯನ್ ಯೂನಿಯನ್ ಜಂಟಿಯಾಗಿ ತಯಾರಿಸಿದ ಆಹಾರ ಬಿಕ್ಕಟ್ಟಿನ ಜಾಗತಿಕ ವರದಿಯಲ್ಲಿ ಈ ಅಂಕಿಅಂಶಗಳು ಕಾಣಿಸಿಕೊಂಡಿವೆ.ವರದಿಯ ಪ್ರಕಾರ ಅಫ್ಘಾನಿಸ್ತಾನ, ಕಾಂಗೋ, ಇಥಿಯೋಪಿಯಾ, ನೈಜೀರಿಯಾ, ದಕ್ಷಿಣ ಸುಡಾನ್, ಸಿರಿಯಾ ಮತ್ತು ಯೆಮೆನ್ ಸೇರಿದಂತೆ ಸುದೀರ್ಘ ಸಂಘರ್ಷಗಳನ್ನು ಅನುಭವಿಸುತ್ತಿರುವ ದೇಶಗಳು ಆಹಾರದ ಕೊರತೆ ಅನುಭವಿಸುತ್ತಿವೆ. ದೀರ್ಘಕಾಲದ ಬರ, ಹೆಚ್ಚುತ್ತಿರುವ ಆಹಾರ ಬೆಲೆಗಳು ಮತ್ತು ನಿರಂತರ ಹಿಂಸಾಚಾರದಿಂದಾಗಿ ಸೊಮಾಲಿಯಾ 2022 ರಲ್ಲಿ ವಿಶ್ವದ ಅತ್ಯಂತ…

Read More

ಎರಡು ವರ್ಷ ಪ್ರೀತಿ ಎಂದು ನಾಟಕವಾಡಿ, ಕೊನೆಗೂ ಮದುವೆಯಾಗುವುದಾಗಿ ಹೇಳಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ನಡೆದಿದೆ. ಹನೂರು ತಾಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಮೋಸ ಹೋದಾಕೆ. ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕ ಯುವತಿಗೆ ಕೈಕೊಟ್ಟು ಪರಾರಿಯಾದ ಪ್ರಿಯಕರ. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ.ಮದುವೆಯಾಗು ಎಂದಾಗ ಮೊದಮೊದಲು ಯುವಕ ನಿರಾಕರಿಸಿದ್ದಾನೆ ಎನ್ನಲಾಗಿದೆ. ಬಳಿಕ ನಡೆದ ಪಂಚಾಯಿತಿಯಲ್ಲಿ ಮದುವೆಯಾಗುವುದಾಗಿ ಒಪ್ಪಿ ವಿವಾಹ ನೋಂದಣಿಗಾಗಿ ರಾಮಾಪುರಕ್ಕೆ ತೆರಳುವ ಮಾರ್ಗ ಮಧ್ಯೆಯೇ ಪರಾರಿಯಾಗಿದ್ದಾನೆ. ಸದ್ಯ ಮೋಸ ಹೋದ ಯುವತಿ ರಾಮಾಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದಾಳೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರ ಒಂದೇ ಮಳೆಗೆ ಅಸ್ತವ್ಯಸ್ತವಾದ ಘಟನೆ ನಡೆದಿದ್ದು,  ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರೆ, ಇತ್ತ ಸಾರ್ವಜನಿಕರು ಸರಿಯಾದ ಬಸ್ ತಂಗುದಾಣವಿಲ್ಲದೇ ಪರದಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ರಸ್ತೆಯ ಅವ್ಯವಸ್ಥೆಯ ಬಗ್ಗೆ ನಮ್ಮತುಮಕೂರು ವರದಿ ಮಾಡಿದ ಬಳಿಕ ಫೆಬ್ರವರಿ 6ರಂದು ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ, ರಸ್ತೆ ಡಾಂಬರೀಕರಣ ಮಾಡಿದರೂ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳು ತೊಂದರೆಗೀಡಾಗುವಂತಾಗಿದೆ. ಹಿರಿಯೂರು ತಾಲ್ಲೂಕಿನ ಪ್ರಮುಖ ರಸ್ತೆಗಳಾದ ಹುಳಿಯಾರು ರಸ್ತೆಯಿಂದ ಟಿ.ಬಿ ಸರ್ಕಲ್ ಮಧ್ಯ ಇರುವ ಗಾಂಧಿಸರ್ಕಲ್ ನ ಬಳಿ ಇರುವ ಅಪೋಲೋ ಮೆಡಿಕಲ್ ಬಳಿ ರಸ್ತೆಯಲ್ಲಿ ನೀರು ನಿಂತಿದ್ದು, ರಸ್ತೆ ನದಿಯಂತೆ ಕಂಡು ಬಂತು. ರಸ್ತೆಯ ಗುಂಡಿಗಳಲ್ಲಿ ನೀರು ನಿಂತಿದ್ದು, ಇದನ್ನು ಅರಿಯದೇ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳು ಕಂಡು ಬಂದಿದೆ. ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ಹಿರಿಯೂರು ನಗರದಲ್ಲೇ ಇಂತಹ ನಿರ್ಲಕ್ಷ್ಯ ನಡೆಯುತ್ತಿರುವುದರ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.…

Read More

ನವದೆಹಲಿಯಲ್ಲಿರುವ ಖಾಸಗಿ ಶಾಲೆಗಳು ತಮ್ಮ ಸ್ವಂತ ಅಂಗಡಿಗಳಿಂದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸಲು ಪೋಷಕರನ್ನು ಒತ್ತಾಯಿಸುವಂತಿಲ್ಲ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಪ್ರತಿ ಶಾಲೆಯು ಪುಸ್ತಕಗಳು ಮತ್ತು ಬಟ್ಟೆಗಳನ್ನು ಖರೀದಿಸಬಹುದಾದ ಕನಿಷ್ಠ 5 ಹತ್ತಿರದ ಅಂಗಡಿಗಳ ಪಟ್ಟಿಯನ್ನು ನೀಡಬೇಕಾಗುತ್ತದೆ ಎಂದು ಅವರು ಹಿಂದಿಯಲ್ಲಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಈ ಆದೇಶವನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಇಂದು ಮುಂಜಾನೆ, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎಸ್‌ಸಿಇಆರ್‌ಟಿ) 35 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮನೀಶ್ ಶಿಸೋಡಿಯಾ, ಬಲವಾದ ಸಂಶೋಧನೆ ಮತ್ತು ತರಬೇತಿಯಿಂದಾಗಿ ಕಳೆದ ಏಳು ವರ್ಷಗಳಲ್ಲಿ ನಗರದ ಶಿಕ್ಷಣ ಮಾದರಿ ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ ಎಂದು ಹೇಳಿದರು. ಕಳೆದ ಏಳು ವರ್ಷಗಳಲ್ಲಿ ದೆಹಲಿಯ ಶಿಕ್ಷಣ ಮಾದರಿಯು ಕ್ರಾಂತಿಕಾರಿ ಬದಲಾವಣೆಗಳನ್ನು ಕಂಡಿದೆ.ನಾವು ಹೊಸ ಶಾಲೆಗಳನ್ನು ನಿರ್ಮಿಸಿದ್ದೇವೆ, ಉದ್ಯಮಶೀಲತೆ ಮತ್ತು ದೇಶಭಕ್ತಿಯಂತಹ ಹೊಸ ಪಠ್ಯಕ್ರಮಗಳನ್ನು ಪರಿಚಯಿಸಿದ್ದೇವೆ. ಶಿಕ್ಷಕರು ತರಬೇತಿ ಪಡೆಯಲು ವಿದೇಶಕ್ಕೆ ಕಳುಹಿಸಲಾಗಿದೆ, ಹಾಗಾಗಿ ನಮ್ಮ…

Read More

ತುಮಕೂರು: ಮಳೆಯ ವೇಳೆ ಮರದಡಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬೂದನಹಳ್ಳಿಯಲ್ಲಿ ನಡೆದಿದೆ. 43 ವರ್ಷ ವಯಸ್ಸಿನ ಲಕ್ಷ್ಮಮ್ಮ ಅವರು ಮೃತ ಮಹಿಳೆ ಎಂದು ಗುರುತಿಸಲಾಗಿದ್ದು, ಗುರುವಾರ ತುಮಕೂರಿನ ವಿವಿಧೆಡೆ ಮಳೆ ಸುರಿದಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಮಹಿಳೆ ಮರದ ಕೆಳಗೆ ನಿಂತಿದ್ದ ವೇಳೆ ಸಿಡಿಲು ಬಡಿದಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಕುಣಿಗಲ್ ಶಾಸಕ ಡಾ.ರಂಗನಾಥ್ ಭೇಟಿ ನೀಡಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಘಟನೆ ಸಂಬಂಧ ಹುಲಿಯೂರುದುರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More

ಪಶ್ಚಿಮ ಬಂಗಾಳ: ಕೋವಿಡ್ ಅಲೆ ಮುಗಿದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಗುರುವಾರ ಪಶ್ಚಿಮ ಬಂಗಾಳದಲ್ಲಿ ಹೇಳಿಕೆ ನೀಡಿದ್ದಾರೆ. ಉತ್ತರ ಬಂಗಾಳದ ಸಿಲಿಗುರಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಪೌರತ್ವ ಕಾನೂನು ಕೇಂದ್ರದ ಕಾರ್ಯಸೂಚಿಯಲ್ಲಿ ಮರಳಲಿದೆ. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಸ ಪೌರತ್ವ ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದರು.  ನಾನು ಇಂದು ಉತ್ತರ ಬಂಗಾಳಕ್ಕೆ ಬಂದಿದ್ದೇನೆ. ತೃಣಮೂಲ ಕಾಂಗ್ರೆಸ್ ಸಿಎಎ ಜಾರಿಗೊಳಿಸುವುದಿಲ್ಲ ಎಂದು ವದಂತಿಗಳನ್ನು ಹರಡುತ್ತಿದೆ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ, ಕೋವಿಡ್ ಅಲೆ ಕಡಿಮೆಯಾದ ತಕ್ಷಣ ನಾವು ಈ ನೆಲದ ಮೇಲೆ ಸಿಎಎ ಅನ್ನು ಜಾರಿಗೊಳಿಸುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

Read More