Subscribe to Updates
Get the latest creative news from FooBar about art, design and business.
- ಡಿಸೆಂಬರ್ 31ರಂದು ಸಿರಿಧಾನ್ಯ ಪಾಕ ಸ್ಪರ್ಧೆಗೆ ಅರ್ಜಿ: ವಿಜೇತರಿಗೆ ನಗದು ಬಹುಮಾನ | ಯಾರೆಲ್ಲ ಭಾಗವಹಿಸಬಹುದು?
- ಚಾಮರಾಜನಗರ: ಗ್ರಾಮದ ಬಳಿ ಐದು ಹುಲಿಗಳ ಪ್ರತ್ಯಕ್ಷ; ಆತಂಕದಲ್ಲಿ ಜನತೆ, ನಿಷೇಧಾಜ್ಞೆ ಜಾರಿ
- ಹುಸಿ ಬಾಂಬ್ ಇ–ಮೇಲ್ ಬೆದರಿಕೆ ಸಂದೇಶ: ಸರಗೂರು ತಾಲೂಕು ಕಚೇರಿಯಲ್ಲಿ ಬಾಂಬ್ ನಿಷ್ಕ್ರಿಯದಳ ಪರಿಶೀಲನೆ
- ಸಿದ್ದಗಂಗಾ ಶ್ರೀಗಳ ಮಿಂಚಿನ ಸಂಚಾರ ಸ್ಫೂರ್ತಿದಾಯಕ : ಸಸ್ಯಾಂದೋಲನ ನಡೆಸಲು ಎಂ.ಶಿವಕುಮಾರ್ ಮನವಿ
- ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಭಕ್ತರು ಶ್ರೀಮಠದ ಆಸ್ತಿ : ಶ್ರೀ ಸಿದ್ಧಲಿಂಗ ಮಹಾ ಸ್ವಾಮೀಜಿ
- ದರ್ಶನ್ ಇಲ್ಲದಿದ್ದಾಗ ಕೆಲವರು ಮಾತನಾಡುತ್ತಾರೆ, ಉದ್ವೇಗಕ್ಕೆ ಒಳಗಾಗಬೇಡಿ: ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಸಂದೇಶ
- ಹುಬ್ಬಳ್ಳಿ: ಅಂತರ್ಜಾತಿ ವಿವಾಹವಾಗಿದ್ದ ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆ!
- ಬಂಜಾರ ಭವನ ಉದ್ಘಾಟನೆ: ಏಪ್ರಿಲ್ ನಲ್ಲಿ ಸಾಮೂಹಿಕ ವಿವಾಹ: ಜಿಲ್ಲಾಧ್ಯಕ್ಷ ನಾರಾಯಣ ನಾಯ್ಕ ಡಿ.
Author: admin
ತುಮಕೂರು: ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ರಾಜ್ಯ ರೈತ ಸಂಘ , ಸಿ.ಐ.ಟಿ.ಯು , ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೆಂಗಳೂರಿನ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ , ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್ , ಯುದ್ಧ್ ವೀರಸಿಂಗ್ ಮತ್ತು ರೈತರ ಮೇಲೆ ಬಿ.ಜೆ.ಪಿ .ಗೂಂಡಾಗಳು ಹಲ್ಲೆಯನ್ನು ಖಂಡಿಸಿ , ಪ್ರತಿಭಟನೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಜಮಾವಣೆಗೊಂಡು, ರಾಷ್ಟ್ರೀಯ ಹೆದ್ದಾರಿ 151 ಎ ಮೂಲಕ ಕಾಲ್ನಡಿಗೆ ಜಾಥಾ ಮೂಲಕ ಸಾಗಿದ ಪ್ರತಿಭಟನಾಕಾರರು ಬಿ.ಜೆ.ಪಿ. ಗೂಂಡಾಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ಘೋಷಣೆಗಳನ್ನು ಕೂಗುತ್ತಾ, ಆಕ್ರೋಶವನ್ನು ಹೊರಹಾಕಿದರು . ಬಳಿಕ ತಾಲೂಕು ತಹಸಿಲ್ದಾರ್ ರವರ ಕಚೇರಿ ಬಳಿ ಬಂದು ತಹಶೀಲ್ದಾರ್ ನಯೀಮ್ ಉನ್ನಿಸಾ ಅವರಿಗೆ ಮನವಿ ಪತ್ರ ನೀಡಿದರು. ಈ ವೇಳೆ ಮಾತನಾಡಿದ ರೈತ ಸಂಘಟನೆಯ ತಾಲೂಕು ಅಧ್ಯಕ್ಷರಾದ ಶ್ರೀನಿವಾಸಗೌಡ , ಇದು ಕೇವಲ ರಾಷ್ಟ್ರೀಯ ರೈತ ಮುಖಂಡ ಟಿಕಾಯತ್ ರವರಿಗೆ ಮಸಿ ಬಳಿದುದ್ದಲ್ಲ, ದೇಶದ ರೈತರ ಹೋರಾಟದ ಮೇಲೆಯೇ…
ಕೋಲ್ಕತ್ತಾ: ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಿದ ಬಳಿಕ ಅಸ್ವಸ್ಥಗೊಂಡಿದ್ದ ಗಾಯಕ ಕೃಷ್ಣಕುಮಾರ್ ಕುನ್ನಾಥ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೃಷ್ಣಕುಮಾರ್ ಕುನ್ನತ್ ಬಳಿಕ ಅಸ್ವಸ್ಥರಾಗಿದ್ದರು. ಅವರುನ್ನು ನಗರದ ಸಿಎಂಆರ್ ಐ ಆಸ್ಪತ್ರೆಗೆ ಕರೆತರುತ್ತಿದ್ದಾಗಲೇ ಸಾವನ್ನಪ್ಪಿದರು. ಕೆಕೆ ಎಂದು ಹೆಚ್ಚು ಪರಿಚಿತರಾಗಿದ್ದ ಕೃಷ್ಣಕುಮಾರ್ ಕುನ್ನಾಥ್ ಅವರು ತಮ್ಮ 53 ನೇ ವಯಸ್ಸಿನಲ್ಲಿ ನಿಧನರಾದರು. ಮೂರು ದಶಕಗಳ ಕಾಲ ತಮ್ಮ ಸಂಗೀತ ವೃತ್ತಿಜೀವನದಲ್ಲಿ, ಕೆಕೆ ಭಾರತೀಯ ಸಂಗೀತ ಪ್ರೇಮಿಗಳಿಗೆ ಯಾರೂನ್ ದೋಸ್ತಿಯಂತಹ ಅನೇಕ ಹಿಟ್ ಗಳನ್ನು ನೀಡಿದರು. ವರದಿ: ಮುರುಳಿಧರನ್ ಆರ್. ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಶಿವಮೊಗ್ಗ: ಶಿವಮೊಗ್ಗದ ನಿರ್ಣಯ ನಮಗೆ ಅನ್ವಯ ಆಗಲ್ಲ. ಅವರದ್ದೇ ಬೇರೆ, ನಮ್ಮದೇ ಬೇರೆ ರೈತ ಸಂಘಟನೆ. ಅವರು ನನ್ನನ್ನು ಹೇಗೆ ಉಚ್ಚಾಟಿಸೋಕೆ ಬರುತ್ತೆ. ಅವರು ಅವರ ಸಂಘಟನೆಯವರನ್ನು ಉಚ್ಚಾಟಿಸಬಹುದು. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಮಾಧ್ಯಮವೊಂದರ ಜೊತೆಗೆ ಮಾತನಾಡಿದ ಅವರು, ಯಾರೂ ತಲೆಮಾಸಿದವರು ನನ್ನ ತೇಜೋವಧೆ ಮಾಡಿದ್ರು. ಹೆಣ್ಣುಮಗಳ ಸೀರೆ ಸರಿಯಿಲ್ಲ ಅಂತ ಹೇಳಿಕೊಳ್ತಾರೆ. ಹಾಗಂತ ಅವರ ಸೀರೆ ಸರಿಯಿದ್ಯಾ ನೋಡಬೇಕಲ್ಲ. ಈ ಕೋಡಿಹಳ್ಳಿ ಇಂತದ್ದಕ್ಕೆಲ್ಲ ಹೆದರೋದಿಲ್ಲ ಎಂದರು. ನನ್ನನ್ನು ಯಾರೂ ಉಚ್ಛಾಟನೆ ಮಾಡಲು ಬರಲ್ಲ. ರೈತ ಸಂಘದ ಅಧ್ಯಕ್ಷನಾಗಿ ನಾನೇ ಮುಂದುವರೆಯುತ್ತೇನೆ. ಎಲ್ಲಾ ಪದಾಧಿಕಾರಿಗಳ ಬೆಂಬಲ ನನಗಿದೆ. ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸೋದು ರೈತರಿಗೆ ಮಾತ್ರ ಸೇರಿದ್ದು ಎಂದು ಅವರು ಇದೇ ವೇಳೆ ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ತಿಪಟೂರು: ಕಂದಾಯ ಇಲಾಖೆ ಮತ್ತು ತಾಲೂಕು ಆಡಳಿತ, ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ “ಜಿಲ್ಲಾಧಿಕಾರಿಗಳ ನಡೆ -ಹಳ್ಳಿ ಕಡೆ” ಸಾರ್ವಜನಿಕ ಮತ್ತು ರೈತರ ಕುಂದುಕೊರತೆ ಗ್ರಾಮ ಭೇಟಿ ಮತ್ತು ವಾಸ್ತವ್ಯ ಕಾರ್ಯಕ್ರಮ ತಿಪಟೂರು ತಾಲೂಕು, ಕಿಬ್ಬನಹಳ್ಳಿ ಹೋಬಳಿ, ಜಕ್ಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿಗಳು ಚಂದ್ರಶೇಖರ್ ಗ್ರಾಮ ಭೇಟಿ ಸಂದರ್ಭದಲ್ಲಿ ತಾಲೂಕು ಆಡಳಿತ ವ್ಯಾಪ್ತಿಗೆ ಒಳಪಡುವ ಎಲ್ಲಾ ಇಲಾಖೆಯ ವತಿಯಿಂದ 113 ಅರ್ಜಿಗಳನ್ನು ಸಾರ್ವಜನಿಕರು ನೀಡಿದ್ದು, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸುಮಾರು 152 ಅರ್ಜಿಗಳನ್ನು ಸಾರ್ವಜನಿಕರು ನೀಡಿದ್ದು, ಆದಷ್ಟು ಅರ್ಜಿಗಳನ್ನು ಕಾರ್ಯಕ್ರಮದ ಸ್ಥಳದಲ್ಲಿ ಇತ್ಯರ್ಥ ಮಾಡಿ, ಉಳಿಕೆ ಅಹವಾಲುಗಳನ್ನು ಪರಿಶೀಲನೆ ಮಾಡಿ ತಕ್ಷಣವೇ ಇತ್ಯರ್ಥ ಮಾಡುತ್ತೇವೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಎತ್ತಿನಹೊಳೆ ಹೋರಾಟ ಸಮಿತಿ ಉಪಾಧ್ಯಕ್ಷರಾದ ಬಿ ಬಿ ಸಿದ್ದಲಿಂಗಮೂರ್ತಿ ಮಾತನಾಡಿ ರೈತರು ಬದುಕಲು ನೀರು ಮುಖ್ಯ ಆದರೆ ತಿಪಟೂರು ತಾಲ್ಲೂಕಿನಲ್ಲಿ ಹೇಮಾವತಿ ನೀರು ಹರಿದು…
ಮಧುಗಿರಿ: ಕಳಪೆ ರಸ್ತೆ ಕಾಮಕಾರಿಯನ್ನು ಪ್ರಶ್ನಿಸಿದ ಸಾರ್ವಜನಿಕರ ಜೊತೆಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿದ ಘಟನೆ ಮಧುಗಿರಿ ತಾಲೂಕು ಐಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಸರ್ ಐ. ಡಿ. ಹಳ್ಳಿ ಮಾರ್ಗವಾಗಿ ಜನಕಲೋಟಿ ಗ್ರಾಮಕ್ಕೆ ಸುಮಾರು 1 ಕೋಟಿ ವೆಚ್ಚದಲ್ಲಿ 6 ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣವಾಗಿದ್ದು ತುಂಬಾ ಕಳಪೆಯಿಂದ ಕೂಡಿದೆ. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಥಳ ತನಿಖೆಗೆ ಆಗಮಿಸಿದ್ದು, ಈ ವೇಳೆ ಪಿಡಬ್ಲ್ಯೂಡಿ ಅಧಿಕಾರಿಗಳು ಸಾರ್ವಜನಿಕರ ಜೊತೆಗೆ ಏಕ ವಚನದಲ್ಲೇ ಮಾತನಾಡಿದ್ದು, ಉದ್ಧಟತನದಿಂದ ವರ್ತಿಸಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಯೊಬ್ಬರು, ನೀವು ಏನು ಮಾಡಿಕೊಳ್ಳುತ್ತೀರಿ ಮಾಡ್ಕೊಳ್ಳಿ, ಹೋಗೋಲೇ ಎಂದು ಏಕ ವಚನದಲ್ಲೇ ನಿಂದಿಸಿ ಕಾರು ಹತ್ತುತ್ತಿದ್ದು, ಈ ವೇಳೆ ಕಾರಿಗೆ ಅಡ್ಡ ನಿಂತ ಸಾರ್ವಜನಿಕರು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಂಗಳೂರು: ಕುವೆಂಪು ಅವರನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥನನ್ನು ಕೂಡಲೇ ಬಂಧಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಈಗಿರುವ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ಮತ್ತು ಪರಿಷ್ಕೃತ ಪಠ್ಯ ಪುಸ್ತಕವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಎದುರಿನ ಮೆಟ್ರೋ ಸ್ಟೇಷನ್ ಬಳಿ ಎ.ಪಿ.ರಂಗನಾಥ್ ಅವರ ನೇತೃತ್ವದಲ್ಲಿ ನ್ಯಾಯವಾದಿಗಳಿಂದ ಪ್ರತಿಭಟನೆ ನಡೆಯಿತು. ರಾಷ್ಟ್ರ ಕವಿ ಕುವೆಂಪು ಅವರನ್ನು ಅಪಮಾನಿಸಿರುವ ರೋಹಿತ್ ಚಕ್ರತೀರ್ಥನನ್ನು ತಕ್ಷಣವೇ ಬಂಧಿಸಬೇಕು. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ತಕ್ಷಣವೇ ರದ್ದು ಮಾಡಬೇಕು. ಸಂವಿಧಾನದ ಆಶಯಗಳಿಗೆ ಪೂರಕವಾಗಿರುವ ಪ್ರೊ.ಬರಗೂರು ರಾಮಚಂದ್ರಪ್ಪ ಸಮಿತಿಯು ರೂಪಿಸಿರುವ ಪಠ್ಯಪುಸ್ತಕವನ್ನು ಅಳವಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಇವತ್ತಿನ ಪ್ರತಿಭಟನಾ ಸಭೆಯಲ್ಲಿ ಖ್ಯಾತ ವಕೀಲರಾದ ಸಿ.ಎಚ್.ಹನುಮಂತರಾಯ, ಡಾ.ಸಿ.ಎಸ್. ದ್ವಾರಕಾನಾಥ್, ಎ.ಎಸ್.ಪೊನ್ನಣ್ಣ, ಬಿ.ಟಿ.ವೆಂಕಟೇಶ್, ಎ.ಪಿ.ರಂಗನಾಥ್, ಗಂಗಾಧರಯ್ಯ, ವಕೀಲರ ಪರಿಷತ್ ಸದಸ್ಯರಾದ ಶಿವಕುಮಾರ್, ಕೋಟೇಶ್ವರ ರಾವ್, ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳಾದ ಹರೀಶ್, ಮಾಜಿ ಪದಾಧಿಕಾರಿಗಳಾದ ರಮೇಶ್, ಗಿರೀಶ್, ಮಮತಾ, ವಕೀಲರಾದ ಕೆ.ಬಿ.ಕೆ.ಸ್ವಾಮಿ,…
ಡಿವೈಡರ್‍ಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್ ಟ್ರಕ್‍ಗೆ ಗುದ್ದಿದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ಜನರು ದುರಂತ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಭರೇಲಿ ಜಿಲ್ಲೆಯಲ್ಲಿ ನಡೆದಿದೆ. ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇಂದು ಮುಂಜಾನೆ ತಮ್ಮ ಊರಾದ ಫಿಲ್‍ಬಿಟ್‍ಗೆ ಆ್ಯಂಬುಲೆನ್ಸ್‍ನಲ್ಲಿ ಹಿಂದಿರುಗುತ್ತಿದ್ದಾಗ ಲಖನೌ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಆ್ಯಂಬುಲೆನ್ಸ್ ಮೊದಲು ಡಿವೈಡರ್‍ಗೆ ಡಿಕ್ಕಿ ಹೊಡೆದು ನಂತರ ಎದುರಿಗೆ ಬರುತ್ತಿದ್ದ ಟ್ರಕ್‍ಗೆ ಗುದ್ದಿದೆ. ಪರಿಣಾಮ ಚಾಲಕ ಹಾಗೂ ಒಂದೇ ಕುಟುಂಬದ ಆರು ಮಂದಿ ಸೇರಿದಂತೆ ಏಳು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ವರದಿ ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲಾಯಲ್ಲಿ ಭಾನುವಾರ ಪತನಗೊಂಡ ತಾರಾ ಏರ್‍ಲೈನ್‍ವಿಮಾನದ ಅವಶೇಷಗಳ ಬಳಿ ಎಲ್ಲಾ 22 ಮೃತ ದೇಹವನ್ನು ಪತ್ತೆಮಾಡಿ ವಶಪಡಿಸಿಕೊಂಡಿರುವುದಾಗಿ ನೇಪಾಳ ಸೇನೆ ತಿಳಿಸಿದೆ. ಪ್ರವಾಸಿ ನಗರವಾದ ಪೋಖರಾದಿಂದ ಮುಸ್ತಾಂಗ್ ಜಿಲ್ಲಾಯಲ್ಲಿ ಪತನಗೊಂಡ ವಿಮಾನದ ಅವಶೇಷಗಳ ಸ್ಥಳದಲ್ಲಿ ಇಂದು ತಮ್ಮ ಶೋಧ ಕಾರ್ಯಾಚರಣೆಯನ್ನು ಪೊನರಾರಂಭಿಸಿ ಕೊನೆಯ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. 12 ಮೃತ ದೇಹಗಳನ್ನು ಅಪಘಾತದ ಸ್ಥಳದಿಂದ ಕಠ್ಮಂಡುವಿಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ನಾರಾಯಣ ಸಿಲ್ವಾಲ್ ಟ್ವೀಟ್ ಮಾಡಿದ್ದಾರೆ. ತಡ ರಾತ್ರಿಯ ವೇಳೆಗೆ, ರಕ್ಷಣಾ ಪಡೆಗಳು ಅಪಘಾತದ ಸ್ಥಳದಿಂದ 21 ಶವಗಳನ್ನು ಹೊರತೆಗೆದಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎಎನï) ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಕೊನೆಯ ದೇಹವನ್ನು ಪಡೆಯಲು ಅವರು ತಮ್ಮ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಮತ್ತು ಪ್ರಧಾನ ಮಂತ್ರಿ ಶೇರ್ ಬಹದ್ದೂರ್ ದೇವುಬಾ ವಿಮಾನ ಅಪಘಾತದಲ್ಲಿ ಸಿಬ್ಬಂದಿ…
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲಾಯಲ್ಲಿ ತಡರಾತ್ರಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್‍ನಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಭದ್ರತಾ ಪಡೆಗಳು ಉಗ್ರರ ವಿರುದ್ದ ಕಾರ್ಯಾಚರಣೆಯನ್ನು ಆರಂಭಿಸಿದ್ದು ,ನೆನ್ನೆ ತಡರಾತ್ರಿ ಪುಲ್ವಾಮಾ ಜಿಲ್ಲಾಯ ಅವಂತಿಪೋರಾ ಪ್ರದೇಶದ ರಾಜ್ಪೋರಾದಲ್ಲಿ ಎನ್ಕೌಂಟರ್ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಸ್ಥಳದಿಂದ ಎರಡು ಎಕೆ ರೈಫಲ್‍ಗಳು ಮತ್ತು ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಕಾಶ್ಮೀರ ವಲಯದ ಏಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿ ಹತರಾಗಿರುವ ಉಗ್ರರು ಸರ್ಕಾರಿ ನೌಕರರು ಸೇರಿದಂತೆ ನಾಗರಿಕರನ್ನು ಟಾರ್ಗೆಟ್ ಮಾಡಿ ಹತ್ಯ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಹತರಾದ ಭಯೋತ್ಪಾದಕರನ್ನು ತ್ರಾಲ್ನ ಶಾಹಿದ್ ರಾರ್ಥ ಮತ್ತು ಶೋಪಿಯಾನ್ ಉರ್ಮ ಯೂಸುಫ್ ಎಂದು ಗುರುತಿಸಲಾಗಿದೆ. ಇತರ ಭಯೋತ್ಪಾದಕ ಜೊತೆಗೆ,ಮ?ಮೃತ ಶಾಹಿದ್ ಅರಿಪಾಲನ್‍ನಲ್ಲಿ ಶಕೀಲಾ ಎಂಬ ಮಹಿಳೆ ಮತ್ತು ಲುರ್ಗಾಮ್ ತ್ರಾಮನ್‍ನಲ್ಲಿ ಸರ್ಕಾರಿ ಉದ್ಯೋಗಿ ಜಾವಿದ್ ಅಹ್ಮದ್ ಹತ್ಯೆಯಲ್ಲಿ ಭಾಗಿಯಾದ್ದಾನೆ ಎಂದು ತಿಳಿಸಿದ್ದಾರೆ. ವರದಿ ಆಂಟೋನಿ ಬೇಗೂರು…
IPL 2022 ಅನೇಕ ಯುವ ಆಟಗಾರರಿಗೆ ಬಹಳ ಸ್ಮರಣೀಯವಾಗಿತ್ತು. ಈ ಸೀಸನ್ ನಿಂದಾಗಿ ಭಾರತ ತಂಡಕ್ಕೆ ಬಹಳಷ್ಟು ಹೊಸ ಆಟಗಾರರು ಸೇರ್ಪಡೆಯಾಗುವ ನಿರೀಕ್ಷೆಯಿದೆ. ಐಪಿಎಲ್‌ನ ಈ ಋತುವಿನಲ್ಲಿ, ಇಲ್ಲಿವರೆಗಿನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದೆ. ಆದರೆ, ತಂಡದ ಯುವ ಆಟಗಾರನೊಬ್ಬ ತನ್ನ ಸ್ಫೋಟಕ ಆಟದ ಮೂಲಕ ಎಲ್ಲರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆಟಗಾರ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾದ ಭಾಗವಾದರೂ ಆಶ್ಚರ್ಯವಿಲ್ಲ. ಶೀಘ್ರದಲ್ಲೇ ಈ ಆಟಗಾರನಿಗೆ ಅವಕಾಶ ನೀಡಲಿರುವ ರೋಹಿತ್ : ಟೀಂ ಇಂಡಿಯಾ ಬಲಿಷ್ಠ ಬ್ಯಾಟಿಂಗ್ ಶಕ್ತಿಯನ್ನು ಹೊಂದಿದೆ ಎನ್ನಲಾಗಿದೆ. ಇದಕ್ಕೆ ಇನ್ನಷ್ಟು ಶಕ್ತಿ ತುಂಬಲು ಮುಂದಿನ ದಿನಗಳಲ್ಲಿ ರೋಹಿತ್ ಶರ್ಮಾ 19 ವರ್ಷದ ತಿಲಕ್ ವರ್ಮಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಬಹುದು. ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ತಿಲಕ್ ವರ್ಮಾ ತಮ್ಮ ಆಟದಿಂದ ಎಲ್ಲರ ಮನ ಗೆದ್ದಿದ್ದಾರೆ. ಈ ಸೀಸನ್ ನಲ್ಲಿ ತಿಲಕ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಬಹಳಷ್ಟು…