Author: admin

ತಮಿಳುನಾಡಿನ ತಿರುಪ್ಪೂರ್‌ ನಲ್ಲಿ ಇಬ್ಬರು ರೈತರು ಸೇರಿದಂತೆ ಏಳು ಜನರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆಯನ್ನು ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ನಾಲ್ಕು ದಿನಗಳ ಹಿಂದೆ ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆ ಹೊಲದ ಬಳಿಯಿದ್ದ ವರದರಾಜನ್ ಮತ್ತು ಮಾರನ್ ಎಂಬ ಇಬ್ಬರು ರೈತರ ಮೇಲೆ ದಾಳಿ ಮಾಡಿತ್ತು. ರೈತರನ್ನು ರಕ್ಷಿಸಲು ಯತ್ನಿಸಿದ ಇತರ ಮೂವರಿಗೆ ಗಾಯಗಳಾಗಿವೆ.ಗ್ರಾಮಸ್ಥರ ಪ್ರಕಾರ, 60 ವರ್ಷದ ವರದರಾಜನ್ ಜನವರಿ 24 ರಂದು ಮುಂಜಾನೆ ತನ್ನ ಜಮೀನಿಗೆ ಹೋದಾಗ ಚಿರತೆ ಅವನ ಮೇಲೆ ಧಾಳಿ ನಡೆಸಿ ಭುಜವನ್ನು ಕಚ್ಚಿತ್ತು. ಎಲ್ಲರೂ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿರತೆಯನ್ನ ಸೆರೆ ಹಿಡಿದು ಬೋನಿಗೆ ಹಾಕುವ ಪ್ರಯತ್ನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗೂ ಗಾಯಗಳಾಗಿವೆ. ಚಿರತೆ ಚಲನವಲನದ ಮೇಲೆ ನಿಗಾ ಇಡಲು ಅಧಿಕಾರಿಗಳು 10 ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿತ್ತು, ಕತ್ತಲಲ್ಲಿ ಒಂಟಿಯಾಗಿ ಓಡಾಡದಂತೆ ಜನರಿಗೆ ಮನವಿ ಮಾಡಿದ್ದರು.ಅಮ್ಮಾಪಾಳ್ಯಂ ಬಳಿ ಪ್ರಾಣಿಯನ್ನು ಪತ್ತೆಹಚ್ಚಲಾಗಿದೆ. ಚಿರತೆಯನ್ನು ಅಣ್ಣಮಲೈ ಅರಣ್ಯಕ್ಕೆ ಬಿಡಲು ಅರಣ್ಯಾಧಿಕಾರಿಗಳು…

Read More

ಗುಬ್ಬಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುಬ್ಬಿ ತಾಲ್ಲೂಕು ಕಲ್ಲೂರು ಗ್ರಾಮದಲ್ಲಿ ಇಂದು SCS ಸಾಮಾನ್ಯ ಸೇವಾ ಕೇಂದ್ರವನ್ನು ಸಮಾಜ ಸೇವಕರಾದ ಜೈ ಮಾರುತಿ ಮೆಡಿಕಲ್ ಮಾಲೀಕ ಕೆ.ಟಿ.ಸೋಮಶೇಖರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈಗಾಗಲೇ ಹಲವಾರು ಸೇವೆಗಳನ್ನು ಗ್ರಾಮೀಣ ಭಾಗಕ್ಕೆ ನೀಡುತ್ತಿರುವುದು ಪ್ರಶಂಸನಿಯವಾಗಿದೆ. ಹೀಗೆ ಗ್ರಾಮೀಣ ಮಟ್ಟದಲ್ಲಿ ಸಂಘಟನೆ ಮಾಡಿ, ಹಲವಾರು ಗುಂಪುಗಳನ್ನು ಮಾಡಿ ಮಹಿಳಾ ಸ್ವಾವಲಂಬನೆಗೆ ಒತ್ತು ನೀಡಿ ಬಡ ಕುಟುಂಬಗಳ ಅಭಿವೃದ್ಧಿಗೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಮೂಲಕ ಸಾಲ ಕೊಡಿಸಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದೆ. ಇದೀಗಸಾಮಾನ್ಯ ಸೇವಾ ಕೇಂದ್ರವನ್ನು ನೀಡುವುದರ ಮೂಲಕ ಸರ್ಕಾರದ ಹಲವಾರು ಯೋಜನೆಗಳನ್ನು ಪಡೆಯಲು ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿದ್ದಾರೆ. ಸ್ಥಳೀಯ ಗ್ರಾಮಸ್ಥರು ಹಾಗೂ ಅಕ್ಕ ಪಕ್ಕ ಗ್ರಾಮಸ್ಥರು ಈ ಸೇವೆಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಅವರು ಸಲಹೆ ನೀಡಿದರು ಈ ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ರೇಣುಕಾ, ಸೇವಾ ಪ್ರತಿನಿಧಿ ನೇತ್ರಾವತಿ, ಸೇವಾಕೇಂದ್ರದ ನಿರ್ವಾಕರಾದ  ರಂಜಿತ…

Read More

ಸರಗೂರು: ಬಿಜೆಪಿ ಸರ್ಕಾರ ಅನುದಾನ ನೀಡುವ ವಿಚಾರದಲ್ಲಿ ಸಾಕಷ್ಟು ತಾರತಮ್ಯ ಮಾಡಿದ್ದು, ನಮ್ಮ ಹಿಂದುಳಿದ ತಾಲ್ಲೂಕಿಗೆ ಅನುದಾನವನ್ನು ನೀಡದೆ,  ನಂಜುಂಡಪ್ಪರವರ ವರದಿಯನ್ನು ಗಾಳಿಗೆ ತೂರಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಬೇಸರ ವ್ಯಕ್ತಪಡಿಸಿದರು. ಸರಗೂರು ತಾಲ್ಲೂಕಿನ ವ್ಯಾಪ್ತಿಯ ಪಟ್ಟಣದ 11ನೇ ಮತ್ತು 5ನೇ ವಾರ್ಡಿನ ಶಾಲಾ ಕಟ್ಟಡ ನಿರ್ಮಾಣ, ಹಳಿಯೂರು, ಲಿಂಗೇನಹಳ್ಳಿ, ವಲ್ಲಹಳ್ಳಿ ರಸ್ತೆ, ಕಾಡಬೇಗೂರು ಲಂಬಾಣಿ ತಾಂಡ ಸಂಪರ್ಕ ರಸ್ತೆ, ಕೆಂಚನಹಳ್ಳಿ ರಸ್ತೆ ಅಭಿವೃದ್ಧಿ, ಕೆಂಪನಹಾಡಿ ಮತ್ತು ಗಂಡತ್ತೂರು ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ಸುಮಾರು 5ಕೋಟಿ 87ಲಕ್ಷದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಪಂಚಾಯಿತ್ ರಾಜ್ಯ ಇಲಾಖೆಯ ಅನುಧಾನದ ಸುಮಾರು 40 ಲಕ್ಷದ ಅಭಿವೃದ್ಧಿ ಕಾಮಗಾರಿಗಳು ಮತ್ತು ಶಾಸಕರ ಅನುದಾನದ 5 ಲಕ್ಷ ವೆಚ್ಚದ ಸಮುದಾಯ ಭವನ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಿಂದುಳಿದ ತಾಲ್ಲೂಕಾದ ನಮ್ಮ ಕ್ಷೇತ್ರಕ್ಕೆ ಅನುದಾನದ ಹಂಚಿಕೆಯ ವಿಚಾರವಾಗಿ ಸಾಕಷ್ಟು ತಾರತಮ್ಯ ಮಾಡುತ್ತಿದೆ.  ನಮ್ಮ ಕ್ಷೇತ್ರದಲ್ಲಿ ಸುಮಾರು…

Read More

ಪಾವಗಡ:  ತಾಲ್ಲೂಕು ನಿಡಗಲ್ಲು ಹೋಬಳಿ ಚನ್ನಕೇಶವಫುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಪ್ರಾಥಮಿಕ ಮತ್ತು  ಪ್ರೌಢಶಾಲಾ ದೈಹಿಕ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದ  ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಮಪ್ಪ ಹಾಗೂ ದೈಹಿಕ ಶಿಕ್ಷಣ ವಿಷಯ ಪರಿವೀಕ್ಷರಾದ ಚಿದಾನಂದ ಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಚಿದಾನಂದ ಸ್ವಾಮಿ,  ಸುಮಾರು ಎರಡು ವರ್ಷಗಳ ಕಾಲ ಶಾಲೆಯ ಮಕ್ಕಳು ವಿವಿಧ ಚಟುವಟಿಕೆಗಳನ್ನು ದೂರ ಇದ್ದರು. ಈಗ ಮಕ್ಕಳು ಶಾಲೆಗೆ ಬರುತ್ತಿದ್ದಾರೆ.  ಹೀಗಾಗಿ ಶಿಕ್ಷಕರಿಗೆ ಇದೊಂದು ಸವಾಲಾಗಿದೆ. ವಿದ್ಯಾರ್ಥಿಗಳನ್ನು ಚಟುವಟಿಕೆಯಲ್ಲಿರುವಂತೆ ಮಾಡಬೇಕಿದೆ ಎಂದು ಅವರು ಇದೇ ವೇಳೆ ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಯ ಟಿ.,  ಕರಿಯಣ್ಣ ಕೆ.ಪಿ., ಚಂದ್ರಶೇಖರ ರಾವ್ ಸಂಪನ್ಮೂಲ ವ್ಯಕ್ತಿ  ಹರೀಶ್. ನರಸಿಂಹ ಮೂರ್ತಿ, ತಿಮ್ಮನಾಯ್ಕ ರಾಜ್ಯ ಸಂಘದ ಜಿಲ್ಲಾ ಸಂಘದ ತಾಲ್ಲೂಕು ಸಂಘದ ಎಲ್ಲಾ  ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ವರದಿ:…

Read More

ಹಿರಿಯೂರು: ಅಂಬೇಡ್ಕರ್ ಫೋಟೋ ತೆರವುಗೊಳಿಸಿ ಅವಮಾನಿಸಿದ ರಾಯಚೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಲ್ಲಿಕಾರ್ಜುನ ಗೌಡ ಮೇಲೆ ರಾಷ್ಟ್ರ ದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ, ಭಾರತೀಯ ದಲಿತ ಸಂಘರ್ಷ ಸಮಿತಿ ಹಿರಿಯೂರು ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ‌  ಪತ್ರ ಸಲ್ಲಿಸಿತು. ಜನವರಿ 26 ರಂದು ಗಣರಾಜ್ಯೋತ್ಸವದ ದಿನ ರಾಯಚೂರು ಕೋರ್ಟ್ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವಕ್ಕೆ ರಾಯಚೂರು ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಲ್ಲಿಕಾರ್ಜುನ ಗೌಡ ( ಲಿಂಗಾಯಿತ ಗೌಡ ) ರವರು ತಮ್ಮ ವೃತ್ತಿ ಗೌರವಕ್ಕೆ ಅವಮಾನ ಮಾಡಿದ್ದಲ್ಲದೆ, ಸಂವಿಧಾನ ಕ್ಕೆ ಮತ್ತು ಭಾರತ ರತ್ನ ಮಹಾನಾಯಕ ಬಾಬಾ ಸಾಹೇಬ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ನ್ಯಾಯಾಧೀಶರ ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಸಂಘಟನೆಯ ಮುಖಂಡರು,  ತಹಶೀಲ್ದಾರರ  ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿ ಕಾರ್ಜುನ ಗೌಡ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಆಹೋರಾತ್ರಿ , ಧರಣಿ ಸತ್ಯಾಗ್ರಹವನ್ನು…

Read More

ಪಾವಗಡ: ತಾಲ್ಲೂಕು ನಿಡಗಲ್ಲು ಹೋಬಳಿಯ ವ್ಯಾಪ್ತಿಗೆ ಬರುವ ಸಿ.ಕೆ.ಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ವತಿಯಿಂದ 73ನೇ ಗಣರಾಜ್ಯೋತ್ಸವವನ್ನು ಕೋವಿಡ್ ನಿಯಮಾನುಸಾರ ಸರಳವಾಗಿ ಆಚರಣೆ ಮಾಡಲಾಯಿತು. ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚನೆ ಮಾಡುವ ಮೂಲಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಮಪ್ಪ ಎ., ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮಮ್ಮ ಹಾಗೂ ಸಿ.ಕೆ.ಪುರ ಕೆ.ಇ.ಬಿ.ಇಲಾಖೆಯ ಜೂನಿಯರ್ ಇಂಜಿನಿಯರ್‌,  ರಾಜಶೇಖರ ಇವರುಗಳು ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಸಿ.ಕೆ.ಪುರ.ಸರ್ಕಾರಿ  ಶಾಲೆಯ ವಿದ್ಯರ್ಥಿಗಳು  ರಾಷ್ಟ್ರ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಹಬ್ಬಗಳ ಆಚರಣೆಯ ಮಹತ್ವದ ಬಗ್ಗೆ ಎಸ್. ಡಿ.ಎಂ.ಸಿ. ಅಧ್ಯಕ್ಷರಾದ ರಾಮಪ್ಪ ಮಾತನಾಡಿ,  ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ರಾಷ್ಟ್ರ ನಮ್ಮದು. ಇಲ್ಲಿ ಹಲವಾರು  ರಾಷ್ಟ್ರೀಯ ನಾಯಕರ ಪರಿಶ್ರಮದಿಂದಾಗಿ ನಾವು ಇಂದು ಗಣರಾಜ್ಯ ಪಡೆದು ಸ್ವತಂತ್ರವಾಗಿ ಬದುಕುತ್ತಿದ್ದೇವೆ. ಅದಕ್ಕೆ ಹಲವಾರು ಸ್ವಾತಂತ್ರ ಹೋರಾಟಗಾರರು ಕಾರಣ ಅದರಲ್ಲಿ ದೇಶದ ಭದ್ರತೆಗೆ ಬುನಾದಿ ಹಾಕಿದ  ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧೀಜಿ ಅವರ…

Read More

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಫ್ಯಾನ್‌ ಗೆ ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಲು ಬಿಎಸ್‌ವೈ ಮೊಮ್ಮಗಳು ಕಠಿಣ ಹೆಜ್ಜೆ ಇಟ್ಟಿದ್ದಾಳೆ.  ಪದ್ಮಾವತಿ ಅವರ ಪುತ್ರಿ ಸೌಂದರ್ಯ (30) ವೃತ್ತಿಯಲ್ಲಿ ವೈದ್ಯೆಯಾಗಿದ್ದು, ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು ಬಳಿಯ ಫ್ಲಾಟ್‌ ನಲ್ಲಿ ಸೌಂದರ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅವರು 2018 ರಲ್ಲಿ ಡಾ.ನೀರಜ್ ಅವರನ್ನು ವಿವಾಹವಾದರು ಮತ್ತು ದಂಪತಿಗೆ ಒಂದು ಮಗುವಿದೆ. ಡೋರ್‌ ಬೆಲ್‌ ಮಾಡಿದ ವೇಳೆ ಸೌಂದರ್ಯ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ಮನೆಯ ಕೆಲಸಗಾರ ಡಾ.ನೀರಜ್‌ ಗೆ ಕರೆ ಮಾಡಿದ್ದು, ಈ ವೇಳೆ ಘಟನೆ ಬೆಳಕಿಗೆ ಬಂದಿದೆ.    ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್…

Read More

ಸರಗೂರು: ತಾಲೂಕಿನ ಹಂಚಿಪುರ ಗ್ರಾಮ ಪಂಚಾಯಿತಿಯಲ್ಲಿ ದಸ್ ಕಾ ದಮ್ ಸ್ವಚ್ಛತಾ ಹರ್ ದಮ್ ಅಭಿಯಾನದ ಕಾರ್ಯಕ್ರಮ ನಡೆಯಿತು. 73ನೇ ಗಣರಾಜ್ಯೋತ್ಸವಅಂಗವಾಗಿ ಓಡಿಎಫ್ ಪ್ಲಸ್ ಕುರಿತು ಹಂಚಿಪುರ ಗ್ರಾ. ಪಂ. ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಬೇಜವಾಬ್ದಾರಿಯುತವಾಗಿ ಬಳಸುವುದಿಲ್ಲ ಹಾಗೂ ಬಳಸಿದ ಪ್ಲಾಸ್ಟಿಕ್ ನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ ಎಂದು ಪ್ರಮಾಣ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಎಲ್ಲಾ ಗೌರವ ಸದಸ್ಯರುಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮ್ ಮೆಂಟ್ ನ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಸಿಬ್ಬಂದಿಯಾದ ರಾಮ್ ಪ್ರಸಾದ್ ರವರು, ಶಿವಲಿಂಗ್ ಹ್ಯಾಂಡ್ ಪೋಸ್ಟ್ ಜೈರಾಮ್, ದೇವರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವರದಿ: ಚಂದ್ರ ಹಾದನೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

ಗುಡಿಸಿಲಿನ ಮೆಲೆ ಕಲ್ಲಿದಲು ಸಾಗಿಸುತ್ತಿದ್ದ ಟ್ರಕ್  ನಿಯಮತ್ರಣ ತಪ್ಪಿ ಬಿದ್ದ ಕಾರಣ ಮೂವರು ಅಪ್ರಾಪ್ತ ಸೋದರಿಯರು  ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಕಲ್ಲಿದ್ದಲು ಇಳಿಸುತ್ತಿದ್ದಾಗ  ಕಂಟೈನರ್  ಟ್ರಕ್  ವಾಲಿ ಸ್ಥಳದಲದಲಿ ಮಲಗಿದ್ದ ಮೂವರು ಸೋದರಿಯರ ಮೇಲೆ ಬಿದ್ದಿದ್ದೆ. ಪರಿಣಾಮ ಮೂವರೂ ಬಾಲಕಿಯರೂ ಸ್ಥಳದಲೆ ಸಾವನ್ನಪ್ಪಿದ್ದಾರೆ. ಬಾಲಕೀಯರ ಪೋಷಕರು  ಇಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.  ಇಟ್ಟಿಗೆ ಬಟ್ಟಿ ಸುಡಲು ಕಲ್ಲಿದ್ದಲನ್ನ  ಇಳಿಸಲಾಗುತ್ತಿತ್ತು.  ಮೃತ  ಬಾಲಕಿಯರು 3 ರಿಮದ 7 ವರ್ಷದವರಾಗಿದ್ದಾರೆ. ಇಟ್ಟಿಗೆ ಭಟ್ಟಿ ಮಾಲಿಕರಾದ ಗೋಪಿನಾಥ್  ಟ್ರಕ್ ಚಾಲಕ ತೌಫಿಕ್ ಶೇಖ್  ಎಂಬುವವರನ್ನ ಬಂದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತಿದ್ದ ದಂಪತಿಗಳಿಗೆ  ನಾಲ್ವರು ಮಕ್ಕಳಿದ್ದು ಮೂರು ಮಕ್ಕಳು ಗುಡಿಸಿಲಿನಲ್ಲಿ ಮಲಗಿದ್ದರು.  2 ವರ್ಷದ ಮಗುವನ್ನ ಗುಡಿಸಿಲಿನಿಂದ ದೂರದ ಮರಕ್ಕೆ ತೊಟ್ಟಿಲು ಕಟ್ಟಿ ಮಲಗಿಸಿದ್ದರು. ಈ ಮಗು ದೂರ ಇದ್ದ ಕಾರಣ ಬದುಕುಳಿದಿದೆ.. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ…

Read More

ಬೆಂಗಳೂರು:   ಕುಡಿದ ಮತ್ತಿನಲ್ಲಿ ಧಾರವಾಡದ ಮಾಜಿ ಸಂಸದನ ಪುತ್ರನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಧಾರವಾಡ ಮಾಜಿ ಎಂಪಿ ಮಂಜುನಾಥ್ ಪುತ್ರ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆ ನಡೆಸಲಾಗಿದೆ. ಊಟಕ್ಕೆ ಕರೆದು ಬೆಂಗಳೂರಿನ ಸೂಜಿ ಕ್ಯೂ ಕ್ಲಬ್ ನಲ್ಲಿ ಹಲ್ಲೆ ಮಾಡಲಾಗಿದೆ  ಎಂದು ಚಂದ್ರಶೇಖರ್, ಚೇತನ್ ಹೆಗಡೆ ,ಪ್ರಶಾಂತ್ ರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ. ಜನವರಿ 23 ರಂದು ಚಂದ್ರಶೇಖರ್ ಅವರನ್ನು ಚೇತನ್ ಹೆಗಡೆ, ಪ್ರಶಾಂತ್ ರೆಡ್ಡಿ, ಶಿವಾಜಿನಗರದ ಸೂಜಿ ಕ್ಯೂ ಕ್ಲಬ್ಗೆ ಊಟಕ್ಕೆ ಆಹ್ವಾನಿಸಿದ್ದರಂತೆ. ಅಲ್ಲಿಗೆ ಹೋದ ನಂತರ  ಊಟಕ್ಕೆ ಆರ್ಡರ್ ಮಾಡುವ ವೇಳೆ ಚಂದ್ರಶೇಖರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರಂತೆ. ಬಳಿಕ ಚಂದ್ರಶೇಖರ್ ಗೆ ಕಾಪಾಳಕ್ಕೆ ಹೊಡೆದು ನಾನು ಊಟ ಹಾಕಿದ್ದೀನಿ ತಿನ್ನೋ ಎಂದು ಧಮ್ಕಿ  ಹಾಕಿದ್ದಾರೆ ಎಂದು  ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ. ಅಲ್ಲಿಂದ ತಪ್ಪಿಸಿಕೊಳ್ಳಲು  ಚಂದ್ರಶೇಖರ್  ಹೊಯ್ಸಳಕ್ಕೆ ಕರೆ ಮಾಡಿದ್ದು, ವಿಧಾನಸೌಧ ಠಾಣೆಗೆ  ದೂರು ನೀಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ…

Read More