Subscribe to Updates
Get the latest creative news from FooBar about art, design and business.
- ರಾಜ್ಯದ ಜೈಲುಗಳ ಮೇಲೆ ಸರಣಿ ದಾಳಿ: ಮೊಬೈಲ್, ಮಾರಕಾಸ್ತ್ರ ಹಾಗೂ ಗಾಂಜಾ ಪತ್ತೆ
- ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್ನಿಂದ ‘ಸಿಯೆರಾ’ ಕಾರು ಉಡುಗೊರೆ!
- ಕುಣಿಗಲ್ ಸಹಕಾರಿ ರಂಗಕ್ಕೆ ತಾರತಮ್ಯವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ
- ರಾಜ್ಯದಲ್ಲಿ ಹಗರಣಗಳ ಸರಮಾಲೆ, ಆಡಳಿತ ಸತ್ತುಹೋಗಿದೆ: ಸರ್ಕಾರದ ವಿರುದ್ಧ ಬಿ.ಸಿ. ಪಾಟೀಲ್ ಕಿಡಿ
- ಅಯ್ಯಪ್ಪ ಮಾಲೆ ಧರಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಿದ ಆರೋಪ: ಶಿಕ್ಷಕಿ ನೀಡಿದ ಸ್ಪಷ್ಟನೆ ಏನು?
- ’45’ ಚಿತ್ರದ ಟ್ರೇಲರ್ ಬಿಡುಗಡೆ: ಡಿಸೆಂಬರ್ 25ಕ್ಕೆ ‘ಕರುನಾಡ ಚಕ್ರವರ್ತಿ’ ಶಿವರಾಜ್ಕುಮಾರ್, ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಬ್ಬರ!
- ಮಂಡ್ಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹುಟ್ಟುಹಬ್ಬ ಅದ್ದೂರಿ ಆಚರಣೆ, ಸಿಕ್ಕಿದ ಗಿಫ್ಟ್ ಏನು ಗೊತ್ತಾ?
- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರಹಗಾರರಿಂದ ಪ್ರತಿಭಟನೆ
Author: admin
ತುರುವೇಕೆರೆ: ತಾಲ್ಲೂಕು ಮಾಯಸಂದ್ರ ಹೋಬಳಿಗೆ ಸೇರಿದ ಶೆಟ್ಟಿಗೊಂಡನಹಳ್ಳಿ ರೈತರಾದ ಗಂಗನರಸಮ್ಮ ಎಂಬವರಿಗೆ ಸೇರಿದ 14 ಕುರಿ ಮತ್ತು16 ಮೇಕೆಗಳನ್ನು ಕದ್ದೊಯ್ದಿದ್ದಾರೆ. ನಿನ್ನೆ ತಡರಾತ್ರಿ ಸುಮಾರು 2ರಿಂದ 2:30 ರ ಸಮಯದಲ್ಲಿ ಗಂಗನರಸಮ್ಮನವರಿಗೆ ಸೇರಿದ ಕೊಟ್ಟಿಗೆಯಲ್ಲಿದ್ದ ಕುರಿ ಮತ್ತು ಮೇಕೆಗಳನ್ನು ಕಳ್ಳರು ಚಾಣಾಕ್ಷತನದಿಂದ ಕಳವು ಮಾಡಿದ್ದಾರೆ. ಕಳವಿಗೂ ಮೊದಲು ಅಕ್ಕ ಪಕ್ಕದ,ಮನೆಗಳಿಗೆ ಕಳ್ಳರು ಹೊರಗಿನಿಂದ ಚೀಲಕವನ್ನು ಹಾಕಿ. ನಂತರ ಈ ಕೃತ್ಯ ನಡೆಸಿದ್ದಾರೆ . ಈ ಘಟನೆ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಮುಂದಾಗಿದ್ದಾರೆ. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy
ಚಿತ್ರದುರ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯತಿ ಸದಸ್ಯರಾದ ಪಾಪಣ್ಣ, ನಮ್ಮ ದೇಶದಲ್ಲಿ ಎಂದಿಗೂ ಸಹ ಕಂಡು ಅರಿಯದಂತಹ ಭ್ರಷ್ಟಾಚಾರದ ವಾತಾವರಣ ನಿರ್ಮಾಣವಾಗುತ್ತಿದೆ. ಬಡವರು ಕೊಂಡುಕೊಳ್ಳುವ ಅಗತ್ಯ ವಸ್ತುಗಳ ಬೆಲೆ ಏರಿಕೆಗಳು ಸಹ ಏರಿಕೆಯಾಗುತ್ತಲೇ ಇದೆ . ಪೆಟ್ರೋಲ್, ಡಿಸೇಲ್ , ಇಂಧನಗಳ ಬೆಲೆಯು ಸಹ ದಿನಕ್ಕಿಂತ ದಿನ ಗಗನಕ್ಕೇರುತ್ತಲೇ ಇದೆ. ಇದು ಇಂದಿನ ಬಿ ಜೆ ಪಿ ಸರ್ಕಾರದ ದುರಾಡಳಿತದ ವ್ಯವಸ್ಥೆಯಾಗಿದೆ ಎಂದರು. ಹಿರಿಯೂರು ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿರಮೇಶ್ ಮಾತನಾಡಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾದಂತಹ ಕೆ.ಎಸ್. ಈಶ್ವರಪ್ಪ ನವರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿ ಇದ್ದು, ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷದ…
ಹೆಚ್.ಡಿ.ಕೋಟೆ: ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿ ಜಾಥಾದ ಮೇಲೆ ಬಜರಂಗದಳ ನಡೆಸಿದ ದಾಳಿಯ ವಿರುದ್ಧ ತಕ್ಷಣದ ಕ್ರಮಕ್ಕೆ ಸಿಪಿಐ ಮತ್ತು ಪ್ರಗತಿಪರ ಸಂಘಟನೆಗಳು ಒತ್ತಾಯಿಸಿ ತಾಲ್ಲೂಕಿನ ಮಿನಿವಿಧಾನ ಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಬಜರಂಗದಳದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಜೌಡಹಳ್ಳಿ ಜವರಯ್ಯ ಮಾತನಾಡಿ, ಏಪ್ರಿಲ್14ರಂದು ದೇಶಾದ್ಯಂತ ಮಹಾ ಮಾನವತವಾದಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 131 ನೇ ಜಯಂತಿಯನ್ನು ಅಚರಿಸಿದ್ದಾರೆ. ಒಡಿಶಾದ ಬರ್ಗಢ್ ಜಿಲ್ಲೆಯಲ್ಲಿ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ದಲಿತ ಯುವಕರು ನಡೆಸುತ್ತಿದ್ದು ಬೈಕ್ ರ್ಯಾಲಿ ಮೇಲೆ ಬಜರಂಗದಳದ ಅಧ್ಯಕ್ಷ ಭೀಕರ ದಾಳಿ ನಡೆಸಿ ದಲಿತ ಯುವಕರ ಮೇಲೆ ಚಾಕುಗಳು,ಗಾಜಿನ ಬಾಟಲಿಗಳು ಮತ್ತು ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಎಂದರು. ನಂತರ ತಾಲ್ಲೂಕು ಕಾರ್ಯದರ್ಶಿ ಹೆಗ್ಗನೂರು ಪುಟ್ಟಮಾದು ಮಾತನಾಡಿ, ದಾಳಿಕೋರರು ಅಂಬೇಡ್ಕರ್ ಅವರ ಭಾವಚಿತ್ರಗಳಿರುವ ಬ್ಯಾನರ್ ಗಳು ಧ್ವಜಗಳನ್ನು ಹರಿದು ಹಾಕಿ ಅವುಗಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಮತ್ತು ರ್ಯಾಲಿಗೆ…
ತುಮಕೂರು: ರಾಜ್ಯದಲ್ಲಿ ಬಿಜೆಪಿಯ ದುರಾಡಳಿತಕ್ಕೆ ಜನರು ಬೇಸತ್ತಿದ್ದು ಬೆಲೆ ಏರಿಕೆ ಸೇರಿದಂತೆ ಬಿಜೆಪಿಯ ರಾಜಕಾರಣಕ್ಕೆ ಸಾಮಾನ್ಯ ಜನರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಮುಂಬರುವ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಆರ್. ರಾಮಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಕಚೇರಿಯಲ್ಲಿ ನಡೆದ ಜಿಲ್ಲಾ ಕಾರ್ಮಿಕ ವಿಭಾಗದ ಪದಾಧಿಕಾರಿಗಳ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗುತ್ತಿದ್ದು, ಗ್ಯಾಸ್ ಡೀಸೆಲ್-ಪೆಟ್ರೋಲ್ ಕಟ್ಟಡ ಸಾಮಗ್ರಿಗಳ ಬೆಲೆ ದುಸ್ತರವಾಗಿದ್ದು, ಜೀವನ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಜೆಪಿ ಪಕ್ಷ ದುರಾಡಳಿತ ಮತ್ತು ಭ್ರಷ್ಟಾಚಾರಕ್ಕೆ ಸಿಲುಕಿ ನರಳುತ್ತಿದ್ದಾರೆ. ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಅತಿ ಹೆಚ್ಚಿನ ಸಾಮಾನ್ಯ ಜನರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ…
ತುಮಕೂರು: ಜಿಲ್ಲೆಯ ಸಿರಾ ತಾಲ್ಲೂಕಿನ ಮಾಜಿ ಶಾಸಕರು ಹಾಗೂ ಮಾಜಿ ಸಚಿವರಾದ ಟಿ.ಬಿ.ಜಯಚಂದ್ರ ಸಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಜೆ.ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜುಂಜಪ್ಪ ಸ್ವಾಮಿ, ಚಿತ್ರಲಿಂಗೇಶ್ವರ, ಗೊಡ್ಢಗಾಳಮ್ಮದೇವಿ, ಕರಿಯಮ್ಮ ದೇವಿ ಮತ್ತು ಭೂತಪ್ಪ ಸ್ವಾಮಿ ಜಾತ್ರಾ ಮಹೋತ್ಸವದ ಕಾರ್ಯಕ್ರಮಕ್ಕೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾದರು. ಇದೇ ವೇಳೆ ಮುಂಬರುವ 2022ರ ಸಾರ್ವತ್ರಿಕ ಚುನಾವಣೆಯ ಕುರಿತು ಪಕ್ಷ ಸಂಘಟನೆ ಮಾಡುವುದರ ಬಗ್ಗೆ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎನ್.ರಾಜು, ಗೋವಿಂದರಾಜು, ಯುವ ಮುಖಂಡ ಸಂದೀಪ್ ಜಯಚಂದ್ರ,ನಗರಸಭಾ ಸದಸ್ಯ ಶಿವಶಂಕರ್, ಪೆದ್ದರಾಜು, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾರೋಗೆರೆ ಮಹೇಶ್, ಗೌಡಗೆರೆ ಗ್ರಾ.ಪಂ.ಉಪಾಧ್ಯಕ್ಷ ವಿವೇಕ್, ಗೌಡಗೆರೆ ವಸಂತ್, ಹನುಮಂತೆಗೌಡ,ಎಚ್. ಎಲ್.ರಂಗನಾಥ್,ವಾಜರಹಳ್ಳಿ ರಮೇಶ್,ಗ್ರಾ.ಪಂ.ಸದಸ್ಯ ಸಂಕಾಪುರ ಚಿದಾನಂದ್,ಪರಶುರಾಮನಾಯ್ಕ, ಸೇರಿದಂತೆ ಅನೇಕ ಗಣ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು. ವರದಿ: ಮುರುಳಿಧರನ್ ಆರ್ ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ ). ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…
ತುಮಕೂರು: ಮಾಜಿ ಸಚಿವ ಹಾಗೂ ಶಿರಾ ಕ್ಷೇತ್ರದ ಮಾಜಿ ಶಾಸಕರಾದ ಟಿ.ಬಿ.ಜಯಚಂದ್ರ ಅವರು ತೆರಳುತ್ತಿದ್ದ ಕಾರು ಸೋಮವಾರ ರಾತ್ರಿ ಅಪಘಾತಕ್ಕೀಡಾಗಿದ್ದು, ಪರಿಣಾಮವಾಗಿ ಅವರಿಗೆ ತೀವ್ರ ತರಹದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತುಮಕೂರಿನಿಂದ ಸಿರಾಕ್ಕೆ ತೆರಳುತ್ತಿದ್ದ ಜಯಚಂದ್ರರವರ ಟೊಯೋಟಾ ಫಾರ್ಚೂನರ್ ಕಾರು ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಹೈವೇ ರಸ್ತೆಯಲ್ಲಿ ಪಲ್ಟಿಯಾಗಿದ್ದು, ಪರಿಣಾಮವಾಗಿ ಜಯಚಂದ್ರ ಅವರ ಬಲಭುಜಕ್ಕೆ ಗಂಭಿರವಾದ ಏಟು ಬಿದ್ದಿದ್ದು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿರಾ ತಾಲೂಕಿನ ಸಿಬಿ ಬಳಿ ಈ ಅಪಘಾತ ನಡೆದಿದ್ದು, ಕಾರಿನೊಳಗೆ ಸಿಲುಕಿದ್ದ ಜಯಚಂದ್ರ ಅವರನ್ನು ಕಾರಿನ ಗಾಜು ಒಡೆದು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಪಘಾತದ ವೇಳೆ ಕಾರಿನಲ್ಲಿ ಟಿ.ಬಿ ಜಯಚಂದ್ರ ಅವರ ಆಪ್ತ ಸಹಾಯಕ ಹಾಗೂ ಗನ್ ಮ್ಯಾನ್ ಇದ್ದರು ಮಾಜಿ ಸಚಿವರ ಬಲಭುಜಕ್ಕೆ ತೀವ್ರ ಪೆಟ್ಟಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರತ್ಯಕ್ಷದರ್ಶಿ ಸೈಯದ್ ಯಾಸೀರ್, ಮಾಜಿ ಸಚಿವರ ಕಾರು ಅಪಘಾತಕ್ಕೀಡಾದ ಕೂಡಲೇ ಕಾರಿನ ಗಾಜು…
ತುಮಕೂರು: ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮೀಷನ್ ದಂಧೆ ಖಂಡಿಸಿ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಟೌನ್ಹಾಲ್ ವೃತ್ತದಲ್ಲಿ ಜಮಾಯಿಸಿದ ಜಿಲ್ಲಾ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪನವರನ್ನು ಎಫ್ಐಆರ್ನಲ್ಲಿ ಸೇರ್ಪಡೆ ಮಾಡಿ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಪಕ್ಷದ ಮುಖಂಡನಾಗಿದ್ದ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಯನೀಯ ಸ್ಥಿತಿ ಬಿಜೆಪಿ ಸರ್ಕಾರದಲ್ಲಿದೆ. ಇದು ಆ ಪಕ್ಷ ಹಾಗೂ ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದು ಕಿಡಿಕಾರಿದರು. ಭ್ರಷ್ಟಾಚಾರದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪನವರ ಬಗ್ಗೆ ಮುಖ್ಯಮಂತ್ರಿಗಳು ನೀಡುತ್ತಿರುವ…
ಎಚ್.ಡಿ.ಕೋಟೆ: ತಾಲ್ಲೂಕು ಮಟ್ಟದ ಆರೋಗ್ಯ ಮೇಳ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಎಪ್ರಿಲ್ 21 ಗುರುವಾರ ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ತಾಲ್ಲೂಕು ಆರೋಗ್ಯಧಿಕಾರಿ ಟಿ. ರವಿಕುಮಾರ್ ತಿಳಿಸಿದರು. ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಸ್ವಾತಂತ್ರೋತ್ಸವದ 75ನೇ ಅಮೃತ ಮಹೋತ್ಸವದ ಅಂಗವಾಗಿ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದರು. ಶಿಬಿರದಲ್ಲಿ 50 ನುರಿತ ವೈದ್ಯರುಗಳು, ಸುಮಾರು 450 ಸಿಬ್ಬಂದಿಗಳು ತಪಾಸಣಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ಅನಿಲ್ ಚಿಕ್ಕಮಾದು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಸಂತಾನೋತ್ಪತ್ತಿ, ಮಕ್ಕಳ ಆರೋಗ್ಯ, ಹದಿಹರೆಯದವರ ಸಮಗ್ರ ಆರೋಗ್ಯ, ಕುಟುಂಬ ಕಲ್ಯಾಣ, ಗರ್ಭನಿರೋಧಕ ಸೇವೆ, ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ಸಾಂಕ್ರಾಮಿಕ ರೋಗಗಳ ಚಿಕಿತ್ಸೆ, ಸಾಮಾನ್ಯ ಸೇವೆಗಳು, ಭಾರತೀಯ ಚಿಕಿತ್ಸಾ ಪದ್ಧತಿ, ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳು, ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ, ಹರಿವು…
ತುರುವೇಕೆರೆ: ಈ ದೃಶ್ಯ ನೋಡಿದರೆ ನಗಬೇಕೋ, ಅಳಬೇಕೋ ಅಂತ ತಿಳಿಯುತ್ತಿಲ್ಲ. ತಾಲೂಕು ಪಂಚಾಯತ್ ನ ಮುಂಭಾಗದಲ್ಲೇ ಕಸದ ರಾಶಿ ಬಿದ್ದಿದ್ದು, ತಾಲೂಕು ಪಂಚಾಯಿತಿ ಒಳಗಿರುವ ಅಧಿಕಾರಿಗಳ ಹಗಲು ಕುರುಡುತನ ಕಂಡು ಜನರು ಬೇಸತ್ತು ಹೋಗಿದ್ದಾರೆ. ಹೌದು..! ತುರುವೇಕೆರೆ ತಾಲೂಕು ಪಂಚಾಯತ್ ನ ಸಭಾಂಗಣದ ಮುಂದೆಯೇ ಕಸದ ರಾಶಿ ಇದ್ದು, ಸರಿಯಾಗಿ ಕಸ ವಿಲೇವಾರಿ ಮಾಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದೇ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಯುತ್ತಿರುತ್ತದೆ. ಅಧಿಕಾರಿಗಳು ಸಭೆ ನಡೆಸಿ ತಮ್ಮಷ್ಟಕ್ಕೆ ತೆರಳುತ್ತಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಕಸದ ರಾಶಿ ಅಧಿಕಾರಿಗಳ ಕಣ್ಣಿಗೆ ಬೀಳುವುದಿಲ್ಲವೇ? ಏನು ಕೆಲಸ ಮಾಡುತ್ತಿದ್ದಾರೆಂದು ಅಧಿಕಾರಿಗಳು ಸರ್ಕಾರಿ ಸಂಬಳ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೆ ಸ್ವಚ್ಛತೆಯ ಭಾಷಣ ಬಿಗಿಯುವ ಅಧಿಕಾರಿಗಳಿಗೆ ತಾಲೂಕು ಪಂಚಾಯತ್ ಸಭಾಂಗಣದ ಎದುರು ಇರುವ ಕಸದ ರಾಶಿ ಕಾಣದಿರುವುದು 8ನೇ ಅದ್ಭುತವೇ ಸರಿ. ಇನ್ನೂ ದುರಂತದ ವಿಚಾರ ಏನು ಗೊತ್ತಾ? ಶಾಸಕ ಮಸಾಲೆ ಜಯರಾಮ್ ಅವರ ಕಚೇರಿ ಕೂಡ ಇದೇ ಸ್ಥಳದಲ್ಲಿದ್ದು, ಶಾಸಕರೂ…
ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಮುತ್ತಿನ ಅಂಬೆ ದೇವಿಯ ಜಾತ್ರಾ ಮಹೋತ್ಸವವು ಏಪ್ರಿಲ್ 19ರಿಂದ 21ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಗುಡಿಗೌಡ ಚಂದ್ರೇಗೌಡ ಹೇಳಿದರು. ತಾಲೂಕಿನ ಬಾಣಸಂದ್ರ ಗ್ರಾಮದಲ್ಲಿ ಪುರಾತನ ಕಾಲದಿಂದ ನಡೆಯುತ್ತಿರುವ ಶ್ರೀ ಮುತ್ತಿನ ಅಂಬೆ ಗ್ರಾಮದೇವತೆಯ ವಿಜೃಂಭಣೆ ಜಾತ್ರಾ ಮಹೋತ್ಸವದ ಕುರಿತು ಅವರು ಮಾಹಿತಿ ನೀಡಿದರು. ಮಲ್ಲಘಟ್ಟ ಕೆರೆಯಲ್ಲಿ ದೇವತೆಗೆ ಪುಣ್ಯ ಸ್ನಾನ, ಗಿರೀಶ್ ಭಟ್ ವೇದಘೋಷಗಳ ಜೊತೆಗೆ ಊರ ಹಬ್ಬಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರೆಲ್ಲರೂ ಒಗ್ಗೂಡಿ ಗ್ರಾಮದೇವತೆಯ ಹಬ್ಬವನ್ನು ಯಶಸ್ವಿಯಾಗಿ ನಡೆಸುವುದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಊರಿನ ದೇವಸ್ಥಾನದ ವ್ಯವಸ್ಥಾಪಕರಾದ ರಂಗೇಗೌಡ ಬಿ.ಎಂ. ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ವರದಿ: ಸುರೇಶ್ ಬಾಬು ಎಂ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy