Subscribe to Updates
Get the latest creative news from FooBar about art, design and business.
- ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
- ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
- ಭ್ರಷ್ಟಾಚಾರದ ಆರೋಪ: ಕೋಟಗುಡ್ಡ ಪಂಚಾಯಿತಿಯ ಹಾಲಿ ಮತ್ತು ಮಾಜಿ ಪಿಡಿಒ ಅಮಾನತು
- ಬೆಂಗಳೂರು–ತುಮಕೂರು–ಅರಸೀಕೆರೆ ಮಾರ್ಗದಲ್ಲಿ ನೂತನ ಮೆಮು ರೈಲು ಸಂಚಾರ ಆರಂಭ
- ತುಮಕೂರು ಹಾಲು ಒಕ್ಕೂಟದಿಂದ ಮಿಶ್ರತಳಿ ರಸುಗಳ ಹಾಲು ಕರೆಯುವ ಸ್ಪರ್ಧೆ ಯಶಸ್ವಿ : ಅತಿ ಹೆಚ್ಚು ಹಾಲು ಕರೆದ ರೈತರಿಗೆ 30,000 ನಗದು ಪ್ರಥಮ ಬಹುಮಾನ
- ಮೇ 3 ರಿಂದ 10 ರವರೆಗೆ ಅಂತಾರಾಷ್ಟ್ರೀಯ ಮಹಿಳಾ ಓಪನ್ ಟೆನ್ನಿಸ್ ಚಾಂಪಿಯನ್ ಶಿಪ್: ಗೃಹ ಸಚಿವ ಡಾ.ಜಿ.ಪರಮೇಶ್ವರ್
- ಏ.1ರಂದು ಸಿದ್ದಗಂಗಾ ಮಠಕ್ಕೆ ರಾಷ್ಟ್ರಪತಿ ಭೇಟಿ: ಎಲ್ಲೆಡೆ ಬಂದೋಬಸ್ತ್, ಸಾರ್ವಜನಿಕ ಸಂಚಾರಕ್ಕೆ ಪರ್ಯಾಯ ಮಾರ್ಗ
- 2030ಕ್ಕೆ ಒಲಿಂಪಿಕ್ಸ್ ಆತಿಥ್ಯ ವಹಿಸಲು ಭಾರತ ಶಕ್ತ: ಕೇಂದ್ರ ಸಚಿವ ವಿ.ಸೋಮಣ್ಣ
Author: admin
ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ ಅಕ್ಕಿ, ಔಷಧ, ಹಾಲಿನ ಪುಡಿ ಹೀಗೆ ಅಗತ್ಯ ವಸ್ತುಗಳನ್ನು ಕಳುಹಿಸಿದೆ. ಭಾನುವಾರ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋ ತಲುಪಿದ ಹಡಗು, ಅಗತ್ಯ ವಸ್ತುಗಳನ್ನು ಶ್ರೀಲಂಕಾ ಸರ್ಕಾರಕ್ಕೆ ಹಸ್ತಾಂತರಿಸಿದ್ದು, 9,000 ಮೆಟ್ರಿಕ್ ಟನ್ ಅಕ್ಕಿ, 50 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ 25 ಮೆಟ್ರಿಕ್ ಟನ್ ಗಿಂತ ಹೆಚ್ಚು ಔಷಧಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಲಂಕಾದ ವಿದೇಶಾಂಗ ಸಚಿವ ಜಿಎಲ್ ಪೀರಿಸ್ ಅವರಿಗೆ ಹಸ್ತಾಂತರಿಸಿದರು. ಹಾಲಿನ ಪುಡಿ, ಅಕ್ಕಿ ಹಾಗೂ ಔಷಧ ಸೇರಿದಂತೆ 200 ಕೋಟಿ ರೂ. ಮೌಲ್ಯದ ಮಾನವೀಯ ನೆರವು ನೀಡಲಾಗಿದೆ. ಈ ಸಹಾಯಕ್ಕೆ ತಮಿಳುನಾಡು ಮುಖ್ಯಮಂತ್ರಿಗೂ ಹಾಗೂ ಭಾರತಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ:…
ಪಂಜಾಬ್: 6 ವರ್ಷದ ಮಗು ಕೊಳವೆ ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಹೋಷಿಯಾರ್ ಪುರ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ. ರಿತಿಕ್ ರೋಷನ್ ಎಂಬ 6 ವರ್ಷ ವಯಸ್ಸಿನ ಬಾಲಕ ಆಟವಾಡುತ್ತಿದ್ದ ವೇಳೆ 300 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದು, ಘಟನೆ ಸಂಬಂಧ ಸಂಬಂಧ ಹೊಲದ ಮಾಲೀಕನ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಭಾನುವಾರ ಹೊಲದಲ್ಲಿ ಆಟವಾಡುತ್ತಿದ್ದ ರಿತಿಕ್ ನನ್ನು ನಾಯಿಗಳು ಅಟ್ಟಿಸಿಕೊಂಡು ಬಂದಿದೆ. ಈ ವೇಳೆ ಆತ ಹೆದರಿ, ಸೆಣಬಿನ ಚೀಲ ಮುಚ್ಚಲಾಗಿದ್ದ 9 ಇಂಚಿನ ಅಗಲ ಇರುವ ಕೊಳವೆ ಬಾವಿಯನ್ನು ಹತ್ತಿದ್ದು, ಈ ವೇಳೆ ಮಗು ಕೊಳವೆ ಬಾವಿಯೊಳಗೆ ಕುಸಿದು ಬಿದ್ದಿದ್ದಾನೆ. 7 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಮಗುವನ್ನು ಬಾವಿಯಿಂದ ಹೊರಗೆ ತರಲಾಗಿತ್ತು. ಆದರೆ, ಮಗುವಿನ ಶ್ವಾಸಕೋಶದಲ್ಲಿ ಹೆಚ್ಚು ನೀರು ಪ್ರವೇಶಿಸಿದ್ದರಿಂದ ಮಗು ಉಳಿಯಲಿಲ್ಲ ಎಂದು ಹಿರಿಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಕೋಲಾರ: ಒಂದೂವರೆ ವರ್ಷದ ಮಗುವಿನೊಂದಿಗೆ ತಾಯಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ನಡೆದಿದೆ. ತಾಯಿ ಕೀರ್ತಿ (23), ಹಾಗೂ ಮಗಳು ಯೋಗಾಶ್ರೀ ಮೃತಪಟ್ಟವರಾಗಿದ್ದಾರೆ. ಈ ಆತ್ಮಹತ್ಯೆಗೆ ಕಾರಣ ಏನು ಎಂಬ ಬಗ್ಗೆ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಆರಂಭಿಸಿದ್ದಾರೆ. ಈ ಮಧ್ಯೆ ಕೌಟುಂಬಿಕ ಕಲಹವೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಕೀರ್ತಿಯ ಪತಿ ಸುಧಾಕರ್ ಎಂಬವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯ ಬಳಿಕ ಹೆಚ್ಚಿನ ವಿವರಗಳು ತಿಳಿದು ಬರಬೇಕಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಗುಬ್ಬಿ: ಪೆದ್ದನಹಳ್ಳಿ ದಲಿತ ಯುವಕರ ಹತ್ಯೆಯ ಮುಖ್ಯ ಆರೋಪಿಗಳನ್ನು ರಕ್ಷಣೆ ಮಾಡುವಲ್ಲಿ ಸ್ಥಳೀಯ ಶಾಸಕರು ಮುಂದಾಗಿದ್ದಾರೆ ಹೆಣ್ಣೂರು ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ. ಪೆದ್ದನಹಳ್ಳಿ ಯಲ್ಲಿ ನಡೆದ ಇಬ್ಬರು ದಲಿತ ಯುವಕನ ದಾರುಣ ಹತ್ಯೆಯಲ್ಲಿ ಶಾಮೀಲಾಗಿರುವ ಮುಖ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಆರೋಪಿಸಿದರು. ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ಗ್ರಾಮದಲ್ಲಿ ನಡೆದ ದಲಿತ ಯುವಕರ ಹತ್ಯೆಯನ್ನು ಖಂಡಿಸಿ ಇಂದು ನಗರದ ಪ್ರವಾಸಿ ಮಂದಿರದಿಂದ ಹೊರಟಂತಹ ಕಾಲ್ನಡಿಗೆ ಜಾಥಾ ಹಾಗೂ ತುಮಕೂರು ಚಾಲೋ ಗೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ನಡೆಯುತ್ತಿದ್ದರೂ ಸರ್ಕಾರ ದಲಿತರ ರಕ್ಷಣೆ ಮಾಡಲು ಮುಂದಾಗುತ್ತಿಲ್ಲ ಪೆದ್ದನಹಳ್ಳಿ ಪ್ರಕರಣಗಳು ಗಂಭೀರವಾಗಿ ನಡೆದರೂ ಸಹ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಾಕಷ್ಟು ನಿರ್ಲಕ್ಷ ತಾಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣವು ಇಡೀ ರಾಜ್ಯವನ್ನೇ ಬೆಚ್ಚಿ ಬಿಡಿಸುವಂತಹ ಘಟನೆ ಆಗಿದ್ದರು ಸಹ…
ಪಟ್ನಾ: ರಾಜ್ಯದಲ್ಲಿನ ಸರ್ವಪಕ್ಷಗಳ ಅಭಿಪ್ರಾಯ ಪಡೆದ ಬಳಿಕ ‘ಜಾತಿ’ ಸಮೀಕ್ಷೆ ಕಾರ್ಯವನ್ನು ತಮ್ಮ ಸರ್ಕಾರ ಶೀಘ್ರವೇ ಕೈಗೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ. ಜಾತಿ ಸಮೀಕ್ಷೆಗೆ ಸಂಬಂಧಿಸಿದಂತೆ ಮೇ 27ರಂದು ಸರ್ವಪಕ್ಷಗಳ ಸಭೆ ನಡೆಯುವ ಸಾಧ್ಯತೆಯಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆ ಕುರಿತು ಸರ್ವಪಕ್ಷಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಕ್ರೋಡೀಕರಿಸುತ್ತೇವೆ. ಬಳಿಕ ಈ ಕುರಿತ ಪ್ರಸ್ತಾವನೆಯನ್ನು ರಾಜ್ಯ ಸಂಪುಟದ ಮುಂದಿಡಲಾಗುತ್ತದೆ ಎಂದು ತಿಳಿಸಿದರು. ಮೇ 27ರಂದು ಉದ್ದೇಶಿಸಿರುವ ಸರ್ವಪಕ್ಷಗಳ ಸಭೆಗೆ ಕೆಲವು ಪಕ್ಷಗಳು ಸಮ್ಮತಿಸಿವೆ. ಕೆಲವು ಪಕ್ಷಗಳು ಇನ್ನಷ್ಟೇ ಉತ್ತರ ನೀಡಬೇಕಿದೆ. ಈ ಕುರಿತ ಪ್ರಸ್ತಾವನೆಯನ್ನು ಸಂಪುಟದ ಮುಂದಿಟ್ಟ ಬಳಿಕ, ಜಾತಿ ಆಧಾರಿತ ಸಮೀಕ್ಷೆ ಕಾರ್ಯ ಆರಂಭವಾಗಲಿದೆ ಎಂದು ಹೇಳಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಬೆಂಗಳೂರು: ಶಾಲಾ ಹಾಗೂ ಕಾಲೇಜು ಪಠ್ಯ ಪುಸ್ತಕ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಬಿ.ಸಿ.ನಾಗೇಶ್, ನಮ್ಮ ಸರ್ಕಾರದ ಕೆಲಸಗಳನ್ನು ಸಹಿಸಿಕೊಳ್ಳದೇ ಅನಾವಶ್ಯಕವಾಗಿ ಸುಳ್ಳು ಪ್ರಚಾರ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ದ್ವಿತೀಯ ಪಿಯುಸಿ ಇತಿಹಾಸ ಪಠ್ಯ ಪುಸ್ತಕ ಪರಿಷ್ಕರಣೆಯನ್ನು ರೋಹಿತ್ ಚಕ್ರತೀರ್ಥ ಸಮಿತಿಗೆ ವಹಿಸಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡಿದರು. ಕಳೆದ ವರ್ಷ ಹಲವರು ಕಾರಣಗಳಿಂದ ಶಾಲೆ ಆರಂಭವಾಗಲ್ಲ ಎಂದಿದ್ದರು. ಶಾಲೆ ಪ್ರಾರಂಭ ಎಂದಾಗಲೂ ಕೋವಿಡ್ ನೆಪ ಹೇಳಿದ್ದರು. ಬಡವರ ಪ್ರಾಣದ ಜತೆ ಚೆಲ್ಲಾಟ ಎಂದಿದ್ದರು. ಶಾಲೆಯಲ್ಲಿನ ಬಡ ವಿದ್ಯಾರ್ಥಿಗಳ ವ್ಯಾಸಂಗ ಗಮನಿಸಿ ಸರ್ಕಾರ ಶಾಲೆ ಪ್ರಾರಂಭಿಸಿತು. ಹಿಜಾಬ್ ವಿಚಾರದಲ್ಲಿ ತಗಾದೆ ತೆಗೆದರು. ಅದು ಸರಿಯಾಗಲಿಲ್ಲ. ಕೋರ್ಟ್ ಆದೇಶ ಬಂದಾಗ ಅದನ್ನೂ ಸಹಿಸಲಿಲ್ಲ. ಬೊಮ್ಮಾಯಿ ಸರ್ಕಾರದ ಕೆಲಸಗಳನ್ನು ಸಹಿಸದೇ ವಿರೋಧ ಪಕ್ಷದವರು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…
ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹಿತ 29 ಮಂದಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಕೋವಿಡ್ ಮೂರನೇ ಅಲೆಯ ಸಂದರ್ಭದಲ್ಲಿ ಮೇಕೆದಾಟು ಪಾದಯಾತ್ರೆ ನಡೆಸುವ ಮೂಲಕ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಹಿತ 29 ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಈ ಸಂಬಂಧ ಮೇ 24ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಬೇಕು ಎಂದು 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ನಿಂದ ಸಮನ್ಸ್ ನೀಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಪಟಿಯಾಲ: 1988 ರ ರೋಡ್ ರೇಜ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಸೋಮವಾರ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸಿಧು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ ಭಾರೀ ಭದ್ರತೆಯಲ್ಲಿ ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ. ನವಜೋತ್ ಸಿಧು ಜೈಲಿನಲ್ಲಿ ವಿಶೇಷ ಆಹಾರಕ್ರಮವನ್ನು ಬಯಸಿದ್ದಾರೆ ಎಂದು ಕ್ರಿಕೆಟಿಗ-ರಾಜಕಾರಣಿಯ ವಕೀಲ ಎಚ್ ಪಿಎಸ್ ವರ್ಮಾ ಅವರು ಹೇಳಿದ್ದಾರೆ. ವೈದ್ಯರ ತಂಡ ಆಸ್ಪತ್ರೆಯಲ್ಲಿ ನವಜೋತ್ ಸಿಧು ಅವರ ವಿವರವಾದ ವೈದ್ಯಕೀಯ ಪರೀಕ್ಷೆಯನ್ನು ನಡೆಸುತ್ತದೆ ಎಂದು ಅವರು ತಿಳಿಸಿದರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಅಣೆಕಟ್ಟೆಯನ್ನು ಏರಲು ಯತ್ನಿಸುತ್ತಿದ್ದ 20 ವರ್ಷದ ಯುವಕನೊಬ್ಬ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ನೀರು ಕೆಳಗೆ ಹರಿಯುತ್ತಿದ್ದಂತೆ ಯುವಕ ಅಣೆಕಟ್ಟಿನ ಗೋಡೆಯನ್ನು ಹತ್ತುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅನೇಕ ಜನರು ಅಪಾಯಕಾರಿ ಸಾಧನೆಯನ್ನು ನೋಡುತ್ತಿರುವುದನ್ನು ಕಾಣಬಹುದು. ಅವನು ಸುಮಾರು 25 ಅಡಿ ಎತ್ತರವನ್ನು ತಲುಪಿದ ನಂತರ, ಅವನು ಜಾರಿ ಬೀಳುತ್ತಾನೆ ಮತ್ತು ಹತ್ತಿರದಲ್ಲಿ ಕಾಯುತ್ತಿದ್ದವರು ಬೊಬ್ಬೆ ಹೊಡೆಯುತ್ತಿರುವುದು ಕಂಡು ಬಂದಿದೆ. ಈ ಗೋಡೆಯು ಸುಮಾರು 50 ಅಡಿ ಎತ್ತರವಿದೆ ಎಂದು ಹೇಳಲಾಗಿದೆ. ಜಿಲ್ಲಾಡಳಿತದ ಎಚ್ಚರಿಕೆಯ ಹೊರತಾಗಿಯೂ ಗೋಡೆಯನ್ನು ಏರಲು ಪ್ರಯತ್ನಿಸಿದ ಯುವಕನ ವಿರುದ್ಧ ಈಗ ಪ್ರಕರಣ ದಾಖಲಿಸಲಾಗಿದೆ, ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ದಕ್ಷಿಣಕನ್ನಡ: ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಮತ್ತು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ (66) ಅನಾರೋಗ್ಯದಿಂದ ತಡರಾತ್ರಿ ಸಿಂಗಪುರದಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸಿಂಗಾಪುರಕ್ಕೆ ಚಿಕಿತ್ಸೆಗೆ ತೆರಳಿದ್ದರು. ಉಜಿರೆ ಎಸ್.ಡಿ.ಎಂ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಹಲವು ವರ್ಷಗಳ ಕಾಲ ಡಾ.ಯಶೋವರ್ಮ ಸೇವೆ ಸಲ್ಲಿಸಿದ್ದರು. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಹಲವು ಸಮ್ಮೇಳನಗಳನ್ನು ನಡೆಸಿದ್ದರು. ಮೃತರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ವಿ.ಹೆಗ್ಗಡೆಯವರ ಸಹೋದರರಾಗಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5