Author: admin

ತುಮಕೂರು:  ಏಪ್ರಿಲ್ 30 ರಿಂದ  ಮೇ 3ರವರಿಗೆ ದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಖೇಲೋ ಮಾಸ್ಟರ್ ಗೇಮ್ ನಡೆಯಿತು. ಇದರಲ್ಲಿ   ತುಮಕೂರು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು,  2 ಬೆಳ್ಳಿ,  4ಪದಕಗಳೊಂದಿಗೆ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. *ಉದಯ್ ಕುಮಾರ್ ಚಿಕ್ಕಮರಳಿ (ದೈಹಿಕ ಶಿಕ್ಷಣ ಶಿಕ್ಷಕರು ) SBG ವಿದ್ಯಾಲಯ ಮಾಯಸಂದ್ರ ರವರು 1ಬೆಳ್ಳಿ,1 ಕಂಚಿನ *ಗಿರಿಧರ್KS ದೈಹಿಕ ಶಿಕ್ಷಣ ಶಿಕ್ಷಕರು SBg ವಿದ್ಯಾಲಯ ಮಾಯಸಂದ್ರ 1ಬೆಳ್ಳಿ * ಕಿರಣ್ ಕುಮಾರ್ YS SKBRHS ಡಿ ಕಲ್ಕೆರೆ ತುರುವೇಕೆರೆ 2ಕಂಚು * ರಕ್ಷಿತ್ CB ಸಹಶಿಕ್ಷಕರು ಶಂಕರಾನಂದ ಭಾರತಿ ವಿದ್ಯಾಪೀಠ ಕುವೆಂಪು ಪ್ರೌಢಶಾಲೆ ಕುಂತಿಬೆಟ್ಟ ಪಾಂಡುಪುರ ಮಂಡ್ಯ ಜಿಲ್ಲೆ 1ಚಿನ್ನ 3ಕಂಚು *ವೆಂಕಟೇಶ್, ವಿಶ್ವನಾಥ್, ಶ್ರೀಧರ್ಭಾಗ, ಪದಕದೊಂದಿಗೆ ತಾಲೂಕು ಮತ್ತು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುತ್ತಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್…

Read More

ತುಮಕೂರು:ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬಸ್ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾದ ಬಳಿ ನಡೆದಿದೆ. ವೇಗವಾಗಿ ಬಂದ ಬಸ್, ಲಾರಿಗೆ ಡಿಕ್ಕಿ ಹೊಡೆದಿದ್ದು ನಂತರ ಬಸ್ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಅಪಘಾತದ ಭೀಕರತೆಗೆ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy

Read More

545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ ಬಗೆದಷ್ಟು ಬಯಲಾಗ್ತಿದೆ. ಇಷ್ಟು ದಿನ ಜ್ಞಾನಜ್ಯೋತಿ ಶಾಲೆಯ ಸುತ್ತಲೂ ಗಿರಕಿ ಹೊಡೆಯುತ್ತಿದ್ದ ಸಿಐಡಿ ಅಧಿಕಾರಿಗಳು ಮತ್ತೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಕಿಂಗ್‌ಪಿನ್‌ ಆರ್‌ಡಿ ಪಾಟೀಲ್‌ ಅಕ್ರಮದ ಬಗ್ಗೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಆತನ ಹೇಳಿಕೆ ಆಧರಿಸಿ ಹೊರಟಿದ್ದ ಸಿಐಡಿ ಅಧಿಕಾರಿಗಳು ‘ಹೂಕುಂಡಲಿ’ ರಹಸ್ಯವನ್ನು ಭೇದಿಸಿದ್ದು, ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ. ಅಕ್ರಮದ ಕೇಂದ್ರ ಬಿಂದು ಆಗಿದ್ದ ಜ್ಞಾನ ಜ್ಯೋತಿ ಶಾಲೆಯಲ್ಲಿನ ಅಕ್ರಮದ ತನಿಖೆ ನಡೆಸುವ ವೇಳೆ ಸಿಐಡಿ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಯೊಂದು ಲಭ್ಯವಾಗಿದೆ. ಕಲಬುರಗಿಯ ಇನ್ನೊಂದು ಕಾಲೇಜಿನ ಅಕ್ರಮವನ್ನು ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ ಬಾಯ್ಬಿಟ್ಟಿದ್ದಾನೆ. ನಗರದ MS ಇರಾನಿ ಕಾಲೇಜ್‌ನಲ್ಲಿ ನಡೆದ ಅಕ್ರಮದ ಬಗ್ಗೆ ಇಂಚಿಂಚೂ ಮಾಹಿತಿಯನ್ನು ಸಿಐಡಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಕಿಂಗ್‌ಪಿನ್‌ ಆರ್‍ಡಿ ಪಾಟೀಲ್ ತನ್ನ ಅಡಿಟರ್ ಮೂಲಕ ಪರಿಚಯವಾದ ಕಲಬುರಗಿಯ ರಾಜಾಪುರ ಬಡಾವಣೆಯ ನಿವಾಸಿ ಪ್ರಭು ಅನ್ನೋ ಅಭ್ಯರ್ಥಿಗೆ ಬ್ಲೂಟೂತ್ ಮೂಲಕ ಎಂ.ಎಸ್.ಇರಾನಿ ಕಾಲೇಜ್‌ನಲ್ಲಿ ಪರೀಕ್ಷೆ ಬರೆಸಿರುವುದಾಗಿ ಸತ್ಯ ಕಕ್ಕಿದ್ದಾನೆ.…

Read More

ಮಧ್ಯಪ್ರದೇಶ: ಏಕಕಾಲದಲ್ಲಿಯೇ ಮೂವರು ಮಹಿಳೆಯರನ್ನು ವ್ಯಕ್ತಿಯೊಬ್ಬ ಬುಡಕಟ್ಟು ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದಾನೆ. ಈ ಮದುವೆ ನಡೆದಿರುವುದು ಮಧ್ಯಪ್ರದೇಶದ ಭೋಪಾಲ್‌ನ ಮೋರಿ ಫಾಲಿಯಾ ಗ್ರಾಮದಲ್ಲಿ. ಮದುವೆಯಾದ ವ್ಯಕ್ತಿಯ ಹೆಸರು ಮೌರ್ಯ. ಈತ ಭೋಪಾಲ್‍ನಿಂದ ಸುಮಾರು 400ಕಿ.ಮೀ ದೂರದಲ್ಲಿರುವ ನಾನ್‌ಪುರ ಗ್ರಾಮದ ಮಾಜಿ ಸರ್‌ಪಂಚ್‌ ಆಗಿದ್ದ. ಒಂದೇ ಮಂಟಪದಲ್ಲಿ ನಾನಾಬಾಯಿ, ಮೇಳ ಮತ್ತು ಸಕ್ರಿ ಎಂಬ ಮೂವರು ಮಹಿಳೆಯರನ್ನು ವರಿಸಿದ್ದಾನೆ. 2003ರಲ್ಲಿ ನಾನಾಬಾಯಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೌರ್ಯ ಬಳಿಕ ಒಟ್ಟಿಗೆ ವಾಸವಾಗಿದ್ದರು. ಇವರ ಜೊತೆ ಮತ್ತಿಬ್ಬರು ಸಹ ಕಳೆದ 15 ವರ್ಷದಿಂದ ವಾಸವಾಗಿದ್ದರಂತೆ. ಇದೀಗ ಮೌರ್ಯ ಮೂವರನ್ನು ಸಹ ಬುಡಕಟ್ಟು ಪದ್ಧತಿಯ ಪ್ರಕಾರ ಏಕಕಾಲದಲ್ಲಿ ವಿವಾಹವಾಗಿದ್ದಾನೆ. ಈ ಮದುವೆ ಸಮಾರಂಭದಲ್ಲಿ ಮೂವರು ಮಹಿಳೆಯರ ಆರು ಮಕ್ಕಳು ಸಹ ಪಾಲ್ಗೊಂಡಿದ್ದರು. ಸದ್ಯ ಮದುವೆಯ ಫೋಟೋ ಮತ್ತು ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಬುಡಕಟ್ಟು ಜನಾಂಗದ ಪದ್ಧತಿಯ ಪ್ರಕಾರ ವಿಜೃಂಭಣೆಯಿಂದ ವಿವಾಹ ಕಾರ್ಯಕ್ರಮ ನಡೆದಿದೆ. ಇನ್ನು ಮದುವೆಯ ಬಗ್ಗೆ ಮೌರ್ಯ ಮಾತನಾಡಿದ್ದು, “ಈ ಸಂಬಂಧಗಳು…

Read More

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯದ ಉದ್ಘಾಟನೆಗೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಆರ್ ಅಶೋಕ್, ಅರಗ ಜ್ಞಾನೆಂದ್ರ , ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಇತರರು ಉಪಸ್ಥಿತರಿದ್ದರು. ಕರ್ನಾಟಕ ವಿಧಾನ ಪರಿಷತ್ತಿನ ಹಿರಿಯ ಜನತಾದಳ (ಜಾತ್ಯತೀತ) ನಾಯಕ ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದರು. ಮುಂಬರುವ ಚುನಾವಣೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಟಿಕೆಟ್‌ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು. ಇದೀಗ ಪರಿಷತ್ ಟಿಕೆಟ್ ಆಕಾಂಕ್ಷಿ ಮೋಹನ್ ಲಿಂಬಿಕಾಯಿ ಅವರ ವಿರೋಧದ ನಡುವೆಯೂ ಹೊರಟ್ಟಿಗೆ ಬಿಜೆಪಿ ಟಿಕೆಟ್ ನೀಡುವುದನ್ನು ಖಚಿತಗೊಳಿಸಲಾಗಿದೆ. ಈ ವರ್ಷ ಜೂನ್ ಅಥವಾ…

Read More

ನವದೆಹಲಿ: ಒಬ್ಬ ವ್ಯಕ್ತಿ ಗುರಿ ಸಾಧಿಸಲು ನಿರ್ಧರಿಸಿದರೆ ಕಠಿಣ ಪರಿಶ್ರಮ ಪಡಲೇಬೇಕು. ಪ್ರತಿ ವರ್ಷ ಅನೇಕ ಅಭ್ಯರ್ಥಿಗಳು UPSCಯಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅವರು ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗುತ್ತಾರೆ. ಇಂದು ನಾವು ನಿಮಗೆ ಐಎಎಸ್ ಅಧಿಕಾರಿ ನಮಿತಾ ಶರ್ಮಾರ ಯಶಸ್ವಿ ಕಥೆಯನ್ನು ಹೇಳುತ್ತಿದ್ದೇವೆ. ಯುಪಿಎಸ್‌ಸಿಯಲ್ಲಿ ಅವರ ಪ್ರಯಾಣ ಸಾಕಷ್ಟು ಹೋರಾಟದಿಂದ ಕೂಡಿತ್ತು. ಅನೇಕ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ವೈಫಲ್ಯ ಎದುರಿಸಿದ್ರೂ ಅವರು ಎದೆಗುಂದಲಿಲ್ಲ. ಛಲಬಿಡದೆ ತಮ್ಮ ಗುರಿ ಸಾಧಿಸಿದ ಅವರ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ. UPSC ಜರ್ನಿ ತುಂಬಾ ಸವಾಲಿನದ್ದಾಗಿತ್ತು ನಮಿತಾ ಶರ್ಮಾರ ಯುಪಿಎಸ್‌ಸಿ ಪ್ರಯಾಣವು ತುಂಬಾ ಸವಾಲಿನದ್ದಾಗಿತ್ತು. ಇದರಲ್ಲಿ ಅವರು ಅನೇಕ ಬಾರಿ ವಿಫಲರಾಗಬೇಕಾಯಿತು. ನಾಗರೀಕ ಸೇವೆಯಲ್ಲಿ ನಮಿತಾ 5 ಬಾರಿ ಫೇಲ್ ಆಗಿದ್ದು ಗೊತ್ತಾದ್ರೆ ಆಶ್ಚರ್ಯ ಆಗುತ್ತೆ. ಎಷ್ಟೋ ಬಾರಿ ಫೇಲ್ ಆದ ನಂತರ ಹೆಚ್ಚಿನವರು ಭರವಸೆಯನ್ನೇ ಕಳೆದುಕೊಂಡುಬಿಡುತ್ತಾರೆ. ಆದರೆ, ನಮಿತಾ ಅವರು ಐಎಎಸ್ ಅಧಿಕಾರಿಯಾಗಲೇಬೇಕೆಂದು ನಿರ್ಧರಿಸಿದ್ದರು. ಈ ಉತ್ಸಾಹವೇ ಅವರಿಗೆ ದೊಡ್ಡ ಶಕ್ತಿ ನೀಡಿತ್ತು ಮತ್ತು…

Read More

ಬೆಂಗಳೂರು: ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ನೃಪತುಂಗ ಏಕೀಕೃತ ವಿಶ್ವವಿದ್ಯಾಲಯದ ಉದ್ಘಾಟನೆಗೆಂದು ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಸೀಕ್ರೆಟ್‌ ಆಪರೇಷನ್‌ ಮಾಡಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಸಚಿವ ಅಮಿತ್‌ ಶಾ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ರಾಜ್ಯ ರಾಜಕೀಯದ ಕುರಿತಾಗಿ ಪೂರ್ಣ ಮಾಹಿತಿ ಪಡೆದಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ವಿರುದ್ಧ ನಕಾರಾತ್ಮಕವಾಗಿ ಅಭಿಪ್ರಾಯಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಗಂಭೀರ ಕ್ರಮ ಕೈಗೊಂಡಿರುವ ಶಾ ಅವರು ಸೀಕ್ರೆಟ್‌ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಕಳೆದ ದಿನ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬದಲಾವಣೆ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನು ಇದರ ಸಂಪೂರ್ಣ ನಿಯಂತ್ರಣ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿದೆ ಎನ್ನಲಾಗಿದೆ. ಪ್ರಧಾನಿಗಳ ತೀರ್ಮಾನದ ಮೇಲೆ ಸಂಪುಟ ಬದಲಾವಣೆ ವಿಚಾರ ನಿಂತಿದೆ.…

Read More

ರೆಡ್ ರಿವರ್ ಆಫ್ ಡಿ ಸೌತ್ ಸುಮಾರು 2,100 ಕಿಮೀ ಉದ್ದದ ಕೆಂಪು ನದಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ನದಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ನದಿಯು ವಿಚಿತ್ರವಾಗಿದೆ, ಅಂದರೆ, ಈ ನದಿಯ ಬಗ್ಗೆ ಯಾವುದೇ ಊಹೆ ಮಾಡಲಾಗುವುದಿಲ್ಲ. ಕೆಲವೊಮ್ಮೆ ಇದು ತುಂಬಾ ಶಾಂತವಾಗಿರುತ್ತದೆ ಮತ್ತು ಕೆಲವೊಮ್ಮೆ ಈ ನದಿಯೂ ಪ್ರವಾಹದಂತೆ ಹರಿಯುತ್ತದೆ. ಶನಾಯ್-ಟಿಂಪಿಶ್ಕಾ, ಪೆರು ಶನಾಯ್-ಟಿಂಪಿಷ್ಕಾ ನದಿಯನ್ನು ಸಾಮಾನ್ಯವಾಗಿ ‘ಕುದಿಯುವ ನದಿ’ ಎಂದು ಕರೆಯಲಾಗುತ್ತದೆ. ಈ ನದಿಯ ಉಷ್ಣತೆಯು 200 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಹೆಚ್ಚಾಗಿರುತ್ತದೆ. ಭೂಶಾಖದ ಶಕ್ತಿಯೊಂದಿಗೆ ಈ ಅಪಾಯಕಾರಿ ನದಿಯ ನೀರನ್ನು ಸ್ಪರ್ಶಿಸಿದ ತಕ್ಷಣ ಒಬ್ಬ ವ್ಯಕ್ತಿಯು ಸುಟ್ಟ ಅನುಭವವನ್ನು ಪಡೆಯುತ್ತಾನೆ. ಮೆಕಾಂಗ್ ನದಿ ಮೆಕಾಂಗ್ ನದಿಯು 6 ಏಷ್ಯನ್ ದೇಶಗಳ ಮೂಲಕ ಹಾದುಹೋಗುತ್ತದೆ ಮತ್ತು ಅನೇಕ ಮಾರಣಾಂತಿಕ ಪ್ರಾಣಿಗಳಿಗೆ ನೆಲೆಯಾಗಿದೆ. ಈ ನದಿಯಿಂದಾಗಿ ಪ್ರತಿ ವರ್ಷ ಅನೇಕ ಜನರೂ ಪ್ರಾಣ ಕಳೆದುಕೊಳ್ಳುತ್ತಾರೆ. ಅದರ ಅನಿರೀಕ್ಷಿತ ಪ್ರವಾಹವು ಜನರ ಜೀವನವನ್ನು ಕಷ್ಟಕರವಾಗಿಸುತ್ತದೆ. ಅದರೊಳಗೆ ಇರುವ ಮೊಸಳೆಗಳು ಬಹಳ ಅಪಾಯಕಾರಿಯಾಗಿವೆ. ರಿಯೊ…

Read More

ತಿಪಟೂರು: ತಾಲ್ಲೂಕು ಆಡಳಿತದ ವತಿಯಿಂದ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ಎಸ್.ಕೆ ಜಗನ್ನಾಥ್ , ಜಗತ್ತಿಗೆ ಬೆಳಕಾಗಿದ್ದ   ಶ್ರೀ ಬಸವೇಶ್ವರರ ಮಾನವೀಯ  ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು ಸರ್ಕಾರಿ ಸೇವೆ ಮಾಡುವ ನಾವು ಕನಿಷ್ಠ ಸಮಸ್ಯೆಗಳನ್ನು ಒತ್ತು ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ  ಬೆಳಕಾಗಬೇಕು  ಎಂದರು. ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ  889ನೇ ಶ್ರೀ ಬಸವೇಶ್ವರ ಜಯಂತೊತ್ಸವದಲ್ಲಿ ಮಾತನಾಡಿದ ಅವರು,  ಜನರ ಸೇವೆಗಾಗಿ ನೇಮಕಗೊಂಡಿರುವ ನಾವುಗಳು ಶ್ರದ್ಧೆ, ಸಂಯಮ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಪಾಪ ಪುಣ್ಯಗಳನ್ನು ತಮ್ಮ ಕಾಯಕದಲ್ಲೆ ಕಾಣಬಹುದು  ಎಂದು ಸಲಹೆ ನೀಡಿದರು. ಸದರಿ ಕಾರ್ಯಕ್ರಮದಲ್ಲಿ  ಗ್ರೇಡ್ -2 ತಹಸೀಲ್ದಾರ್ ಎಸ್.ಕೆ ಜಗನ್ನಾಥ್, ಸಿ.ಡಿ.ಪಿ.ಒ ಇಲಾಖಾ  ಅಧಿಕಾರಿಗಳಾದ   ಶ್ರೀ ಓಂಕಾರಪ್ಪ, ಬಿ.ಸಿ.ಎಂ. ಇಲಾಖೆಯ ಶ್ರೀಮತಿ ಜಲಜಾಕ್ಷಿ ರವರು,  ಶಿರಸ್ತೇದಾರ್ ಶ್ರೀ ರವಿಕುಮಾರ್, ಪುನೀತ್, ಕೋದಂಡರಾಮು, ರವಿಶಂಕರ್,  ಹಾಗೂ   ಕಚೇರಿ ಸಿಬ್ಬಂದಿವರ್ಗದವರು ಹಾಜರಿದ್ದರು . ವರದಿ: ಆನಂದ ತಿಪಟೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು…

Read More

ಗುಬ್ಬಿ: ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದಲ್ಲಿ ಜಮೀನಿನ ಕೆಲಸ ಮಾಡಲು ತೆರಳಿದ ಇಬ್ಬರು ಕೂಲಿ ಕಾರ್ಮಿಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಜಿ.ಹೊಸಹಳ್ಳಿ ಗ್ರಾಮದಲ್ಲಿ ಶಿವಕುಮಾರ್ ಮತ್ತು ಮಂಜುನಾಥ್ ಒಡೆತನದ ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ಸಮಯದಲ್ಲಿ ಸ್ಥಳೀಯ ನಿವಾಸಿ ಲತಾ ಪ್ರಶಾಂತ್ ಎಂಬುವ ವ್ಯಕ್ತಿ ಹಾಗೂ ಇತರರು ಈ ಜಮೀನು ನಮಗೆ ಸೇರಿದ್ದು ನೀವು ಕೆಲಸ ಮಾಡಲು ಬರುವುದಕ್ಕೆ ಹೇಳಿದವರು ಯಾರು ಎಂದು ಪ್ರಶ್ನಿಸಿ ಕಾರ್ಮಿಕರಾದ ಕೃಷ್ಣ ಮೂರ್ತಿ, ರವಿ ಎಂಬುವ ಏಕ ಏಕಿ ಹಲ್ಲೆ ನಡೆಸಿ ಥಳಿಸಿದ್ದಾರೆ ಎಂದು  ಹಲ್ಲೆಗೆ ಒಳಗಾದ ಕೃಷ್ಣ ಮೂರ್ತಿ ಸಹೋದರ ಆರೋಪಿಸಿದ್ದಾರೆ. ಹಲ್ಲೆಗೊಳಗಾದ ಇಬ್ಬರು ಕಾರ್ಮಿಕರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದು ಹೆಚ್ಚಿನ ಚಿಕಿತ್ಸೆ ಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆ ಕುರಿತು ಗುಬ್ಬಿ ಠಾಣೆಗೆ ದೂರು ಸಲ್ಲಿಸಲಾಗಿದೆ.  ವರದಿ: ಮಂಜುನಾಥ್,  ಗುಬ್ಬಿ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್…

Read More