Subscribe to Updates
Get the latest creative news from FooBar about art, design and business.
- ಶಾಸಕ ಅನಿಲ್ ಚಿಕ್ಕಮಾದು ಅಭಿವೃದ್ಧಿ ಕಾರ್ಯ ಸಹಿಸಲಾಗದೇ ವಿರೋಧ ಪಕ್ಷಗಳಿಂದ ಟೀಕೆ: ಪ.ಪಂ. ಸದಸ್ಯ ಶ್ರೀನಿವಾಸ ಕಿಡಿ
- ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಿ: ಶಾಸಕ ಅನಿಲ್ ಚಿಕ್ಕಮಾದು ಕಿವಿಮಾತು
- ಸಾಲಬಾಧೆಯಿಂದ ರೈತ ಆತ್ಮಹತ್ಯೆ: ಮೃತ ರೈತ ರಮೇಶ್ ಮನೆಗೆ ತಾಲ್ಲೂಕು ಆಡಳಿತ ಭೇಟಿ
- ಚಿಕ್ಕನಾಯಕನಹಳ್ಳಿ: ರೋಡ್ ರೋಲರ್ ಹರಿದು ಬೈಕ್ ಸವಾರ ದುರ್ಮರಣ
- ರೈತರ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಉತ್ತಮ ಮಾರ್ಗ: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಸಲಹೆ
- ಕರ್ನಾಟಕದಲ್ಲಿ ಹಿಂದಿ ಭಾಷೆ ಕಡ್ಡಾಯವಲ್ಲ; SSLC ಒಟ್ಟು ಅಂಕಗಳಲ್ಲಿ ಕಡಿತ: ಸಿಎಂ ಸಿದ್ದರಾಮಯ್ಯ ಘೋಷಣೆ
- ಎಲ್ ಐಸಿ ಗೋಲ್ಡನ್ ಜ್ಯೂಬಿಲಿ ಫೌಂಡೇಶನ್ ನಿಂದ ಶ್ರೀ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ₹4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ
- ಸವಾಲುಗಳು ಸಾಧನೆಯ ಹಾದಿಗೆ ಅಡ್ಡಿಯಾಗಬಾರದು: ಅಂಧ ಕ್ರಿಕೆಟ್ ಪಟು ದೀಪಿಕಾ ಟಿ.ಸಿ.
Author: admin
ಒಡಿಶಾ:ಕುಡಿತದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮೂವರು ಮಕ್ಕಳನ್ನು ಕೊಂದು ಬಾವಿಗೆ ಎಸೆದಿರುವ ಘಟನೆ ಒಡಿಶಾದ ಸುಂದರ್ಗಢ ಜಿಲ್ಲೆಯ ಕೊಯಿಡಾ ಪೊಲೀಸ್ ವ್ಯಾಪ್ತಿಯ ಕುಲಾ ಗ್ರಾಮದಲ್ಲಿ ನಡೆದಿದೆ. ಆರೋಪಿಯ ಪಾಂಡು ಮುಂಡ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯಾಗಿದ್ದು ಈತ ಕೂಲಿ ಕಾರ್ಮಿಕನಾಗಿದ್ದಾನೆ. ಈತ ಶನಿವಾರ ರಾತ್ರಿ ಕುಡಿದು ಮನೆಗೆ ಬಂದು ಕ್ಷುಲ್ಲಕಾರಣಕ್ಕೆ ಹೆಂಡತಿ ದುಬುಲಿ ಮುಂಡಾ ಅವರೊಂದಿಗೆ ಜಗಳವಾಡಿದ್ದು, ಕೋಪ ಅತೀರೇಕ್ಕೆ ಏರೀದ್ದು ಆರೋಪಿಯು ಮೊದಲು ಕೊಡಲಿಯಿಂದ ಪತ್ನಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದನು.ಆದರೆ ಭಯಗೊಂಡ ಪತ್ನಿ ಆರೋಪಿಯ ಕೈಯಿಂದ ತಪ್ಪಿಸಿಕೊಂಡು ಮನೆಯ ಸಮೀಪದ ಪೊದೆಗಳಲ್ಲಿ ಅವಿತುಕೊಂಡಳು. ಈ ವೇಳೆ ಆರೋಪಿಯು 5 ವರ್ಷದ ಮಗಳು ಸೀಮಾ, 2 ವರ್ಷದ ಮಗ ರಾಜು, ಎರಡು ತಿಂಗಳ ಮಗು ಮೇಲೆ ಹಲ್ಲೆ ನಡೆಸಿ ಕೊಂದಿದ್ದಲ್ಲದೇ, ಅವರನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾನೆ.ಭಾನುವಾರ ಬೆಳಗ್ಗೆ ದುಬುಲಿ ಹೊರ ಬಂದು ಮಕ್ಕಳನ್ನು ಹುಡುಕಿದ್ದಾಳೆ. ಈ ವೇಳೆ ಎಷ್ಟು ಹುಡುಕಿದರೂ ಮಕ್ಕಳು ಕಾಣಲಿಲ್ಲ. ಬಾವಿಯ ಬಳಿ ಬಿದ್ದಿದ್ದ ತನ್ನ ಮನೆಯ ಹೊದಿಕೆ…
ಬೆಂಗಳೂರು, ಸ್ವಯಂ ಘೋಷಣೆಯ ಆಧಾರಿತ ಭೂ ಪರಿವರ್ತನೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎರಡು ಮೂರು ದಿನಗಳಲ್ಲಿ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡುವ ತಿದ್ದುಪಡಿಗೆ ಸರ್ಕಾರ ಮುಂದಾಗಿರುವ ಬಗ್ಗೆ ರೈತರು ಆಕ್ರೋಶಗೊಂಡಿದ್ದು ಭೂ ಪರಿವರ್ತನೆ ತಿದ್ದುಪಡಿ ಮಾಡಿದಲ್ಲಿ ಉಗ್ರ ಹೋರಾಟ ಮಾಡುವ ಬಗ್ಗೆ ರೈತರು ತಿಳಿಸಿದ್ದಾರೆ. ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಪರಿಚ್ಛೇದ 95 ರಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಿದೆ. ಈ ತಿದ್ದುಪಡಿ ಪ್ರಕಾರ ಯಾವುದೇ ಬಳಕೆಗಾಗಿ ಸ್ವಯಂ ಘೋಷಣೆಯನ್ನು ನೀಡುವ ಮೂಲಕ ಕೃಷಿ ಭೂಮಿಯ ಮಾಲೀಕರು ತಮ್ಮ ಭೂಮಿಯನ್ನು ಕೃಷಿಯೇತರ ಕಾರ್ಯಕ್ಕೆ ಬಳಕೆ ಮಾಡಲು ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಈಗಿರುವ ನಿಯಮದಂತೆ ಭೂ ಪರಿವರ್ತನೆಯ ಅರ್ಜಿಯನ್ನು ಕಂದಾಯ ಇಲಾಖೆ ಜಿಲ್ಲಾಧಿಕಾರಿಗಳ ಮೂಲಕ ಯೋಜನಾ ಪ್ರಾಧಿಕಾರಕ್ಕೆ ರವಾನಿಸುತ್ತದೆ. ಅಲ್ಲಿಂದ ಎಲ್ಲಾ ಭೂಸ್ಸಾಧಿನ ಅಧಿಕಾರಿಗಳು, ತಹಶೀಲ್ದಾರ್, ರೆವಿನ್ಯೂ ಇನ್‍ಸ್ಪೆಕ್ಟರ್ ಮೂಲಕ ಕೊನೆಯದಾಗಿ ಗ್ರಾಮ ಲೆಕ್ಕಾಕಾರಿಗೆ ಅರ್ಜಿ ತಲುಪುತ್ತದೆ.…
ನವದೆಹಲಿ: ಮುಸ್ಲಿಂಮರು ಮೇ ಒಂದರಂದು ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲು ನಿರ್ಧರಿಸಿದ್ದರು. ಆದರೆ ಚಂದ್ರನ ದರ್ಶನವಾಗದ ಕಾರಣ ಈದ್-ಉಲ್-ಫಿತರ್ ಅನ್ನು ಮೇ 3 ರಂದು ಆಚರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಿಲಾಲ್ ಸಮಿತಿಗಳು ಈದ್-ಉಲ್-ಫಿತರ್ ಅನ್ನು ಮಂಗಳವಾರ ಆಚರಿಸಲು ನಿರ್ಧರಿಸಿದ್ದು, ಈ ಕುರಿತು ಮಾಹಿತಿ ನೀಡಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಚಂದ್ರನ ದರ್ಶನವಾಗಿಲ್ಲ ಎಂದು ತಿಳಿದುಬಂದಿದೆ. ಇಸ್ಲಾಂ ಧರ್ಮದವರ ಪ್ರಕಾರ ಜನರು ಅಲ್ಲಾಹನಿಂದ ಶಾಂತಿ ಮತ್ತು ಆಶೀರ್ವಾದ ಪಡೆಯಲು ಧನ್ಯವಾದಗಳನ್ನು ಅರ್ಪಿಸಲು ಇಡೀ ತಿಂಗಳನ್ನು ಮೀಸಲಿಡುತ್ತಾರೆ. ರೋಜಾ ಎಂದು ಕರೆಯಲ್ಪಡುವ ಉಪವಾಸವು ಸಾಮಾನ್ಯವಾಗಿ ರಂಜಾನ್ನ 30ನೇ ದಿನದಂದು ಅರ್ಧಚಂದ್ರನ ರಾತ್ರಿಯ ಆಚರಣೆಗಳೊಂದಿಗೆ ಕೊನೆಗೊಳ್ಳುತ್ತವೆ. ಈದ್ ಹಬ್ಬವನ್ನು ಇಸ್ಲಾಮಿಕ್ ಕ್ಯಾಲೆಂಡರ್ ನ ಹತ್ತನೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಇದನ್ನು ಶವ್ವಾಲ್ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ರಂಜಾನ್ ಕೊನೆಯಲ್ಲಿ ತಿಂಗಳ ಉಪವಾಸವನ್ನು ಮುರಿಯುವ ಹಬ್ಬ ಎಂದೂ ಕರೆಯುತ್ತಾರೆ. . ರಂಜಾನ್ನ ಕೊನೆಯ ದಿನವಾದ…
ಮೈಸೂರು: ಪಿಎಸ್ ಐ ಪರೀಕ್ಷೆ ಹಗರಣವನ್ನು ಸರಿಯಾದ ರೀತಿಯಲ್ಲಿ ತನಿಖೆಮಾಡಬೇಕು ಈ ಹಗರಣವು ಕೇವಲ ಕಲುಬುರ್ಗಿಗೆ ಮಾತ್ರ ಸೀಮಿತವಾಗಬಾರದು.ಈವಿಷಯಕ್ಕೆ ಸಂಬಂಧಿಸಿದಂತೆ ಸರಿಯಾದ ಸರ್ಕಾರ ರೀತಿಯಲ್ಲಿ ತನಿಖೆ ನಡೆತಯುತ್ತಿಲ್ಲ ಕೇವಲ ಒಂದೇ ಪರೀಕ್ಷಾ ಕೇಂದ್ರದ ಬಗ್ಗೆ ಎಫ್ಐಆರ್ ಮಾಡಿದ್ದಾರೆ, ಬೇರೆ ಬೇರೆ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಬೆಂಗಳೂರಿನ ಪರೀಕ್ಷಾ ಕೇಂದ್ರಗಳ ಮೇಲೆ ತನಿಖೆಯಾಗಬೇಕು. ಪರೀಕ್ಷಾ ಅಭ್ಯರ್ಥಿಗಳು ಹಲವು ಪರೀಕ್ಷಾ ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಆದರೆ ತನಿಖೆ ಮಾತ್ರ ನಡೆಯುತ್ತಿಲ್ಲ ಎಂದರು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಮರು ಪರೀಕ್ಷೆ ಮಾಡಬೇಕೆಂದಿರುವ ಸರ್ಕಾರ 545 ಮಂದಿಯ ಒಎಂಆರ್ ಶೀಟ್ ತರಿಸಿಕೊಂಡಿದ್ದಾದರೂ ಯಾಕೆ? ಇಲ್ಲಿ ಸರ್ಕಾರದ ದಡ್ಡತನ ಎದ್ದು ಕಾಣುತ್ತಿದ್ದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಜನರನ್ನು ಬಂಧಿಸಿದೆ? ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದರು. ಮೈಸೂರಿನಲ್ಲಿ ಮಾತನಾಡಿದ…
ದೆಹಲಿ: `ಕೊವಿಡ್ ಲಸಿಕೆ ಪಡೆಯುವಂತೆ ಯಾವುದೇ ವ್ಯಕ್ತಿಯನ್ನು ಒತ್ತಾಯಿಸಬಾರದುʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋವಿಡ್ ಸಾರ್ವಜನಿಕ ಹಿತಾಸಕ್ತಿಯಲ್ಲಿ ಸರ್ಕಾರವು ಜನರನ್ನು ಜಾಗೃತಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೋಗವನ್ನು ತಡೆಗಟ್ಟಲು ನಿರ್ಬಂಧಗಳನ್ನು ವಿಧಿಸಬಹುದು. ಆದರೆ, ಲಸಿಕೆಯನ್ನು ಪಡೆಯಲು ಮತ್ತು ಯಾವುದೇ ರೀತಿಯ ವಿಶೇಷ ಔಷಧವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ವ್ಯಾಕ್ಸಿನೇಷನ್ ಅಗತ್ಯದ ಬಗ್ಗೆ ಕೆಲವು ಸರ್ಕಾರಗಳು ವಿಧಿಸಿರುವ ನಿರ್ಬಂಧಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಸುಪ್ರೀಂ ಕೋರ್ಟ್ ಸಾರ್ವಜನಿಕರು ಮತ್ತು ವೈದ್ಯರೊಂದಿಗೆ ಮಾತನಾಡಿದ ನಂತರ ವರದಿಯನ್ನು ಪ್ರಕಟಿಸಲು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಕೇಂದ್ರ ಸರ್ಕಾರವನ್ನು ಕೇಳಿದೆ. ಲಸಿಕೆ ಪರಿಣಾಮ ಮತ್ತು ದುಷ್ಪರಿಣಾಮಗಳ ಬಗ್ಗೆ ಸಂಶೋಧನಾ ಸಮೀಕ್ಷೆ ಇರಬೇಕು. ಕೇಂದ್ರ ಸರ್ಕಾರದ ಕೋವಿಡ್ ಲಸಿಕೆ ನೀತಿಯನ್ನು ಸೂಕ್ತವೆಂದು ವಿವರಿಸಿದ ಸುಪ್ರೀಂ ಕೋರ್ಟ್, ಲಸಿಕೆ ಹಾಕಿಸಿಕೊಳ್ಳಬೇಕೆ ಅಥವಾ ಬೇಡವೇ ಎಂಬುದು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ನಿರ್ಧಾರ ಎಂದು ಸ್ಪಷ್ಟಪಡಿಸಿದೆ. ಯಾವುದೇ ಲಸಿಕೆ ಪಡೆಯಲು ಯಾರನ್ನೂ ಒತ್ತಾಯಿಸಲಾಗುವುದಿಲ್ಲ ಎಂದಿದೆ. ಕೊರೋನಾ ಸೋಂಕಿನ ಹರಡುವಿಕೆ…
ಬೆಂಗಳೂರು: ಹಿರಿಯ ಗಾಯಕ ಹಾಗೂ ಪ್ರಾಧ್ಯಾಪಕ ಡಾ.ರಾಜಶೇಖರ ಮನಸೂರ ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಪಂ. ಮಲ್ಲಿಕಾರ್ಜುನ ಮನಸೂರ ಅವರ ಪುತ್ರರಾಗಿರುವ ಡಾ. ರಾಜಶೇಖರ ಮನಸೂರ ಅವರು ಜೈಪುರ ಅತ್ರೌಲಿ ಘರಾಣೆ ಸಂಗೀತದ ಮೇರು ಗಾಯಕರಾಗಿದ್ದರು.ಇಂಗ್ಲೆಂಡ್ ನಲ್ಲಿ ಶಿಕ್ಷಣ ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು. ಆಲ್ ಇಂಡಿಯಾ ರೇಡಿಯೊದ ಉನ್ನತ ಶ್ರೇಣಿಯ ಕಲಾವಿದರಾಗಿದ್ದ ಇವರು ಬಹಳಷ್ಟು ಪ್ರಮುಖ ವೇದಿಕೆಯಲ್ಲಿ ಕಛೇರಿ ನೀಡಿದ್ದಾರೆ. ಇವರ ಗಾಯನದ ಧ್ವನಿಮುದ್ರಿಕೆಗಳನ್ನು ಭೋಪಾಲ್ ನಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಮನುಕುಲ ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಹಿರಿಯೂರು: ಮೇ 1 ವಿಶ್ವದಾದ್ಯಂತ ಕಾರ್ಮಿಕರ ದಿನಾಚರಣೆ ಆಚರಿಸುತ್ತಿದ್ದು, ಇದೇ ಸಂದರ್ಭದಲ್ಲಿ ಕನ್ನಡದ ಚಲನಚಿತ್ರ ನಟಿ, ನಿರ್ಮಾಪಕಿ, ಹಾಗೂ ಇಂದಿರಾ ಗಾಂಧಿ ಅಭಿಮಾನಿಗಳ ವೇದಿಕೆಯ ರಾಜ್ಯಧ್ಯಕ್ಷರಾದ ಮುನಿರತ್ನ ಯಾದವ್ ಅವರು ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿ ಕಾರ್ಮಿಕರ ದಿನಾಚರಣೆಯ ಶುಭಾಶಯ ತಿಳಿಸಿದರು. ಇದೇ ಸಂದರ್ಭದಲ್ಲಿ ಇಂದಿರಾ ಗಾಂಧಿಯವರ ಮಹತ್ವವಾದ ಸಾದನೆಗಳು ಕಾರ್ಮಿಕರಿಗೆ ಸಿಗಬೇಕಾಗಿರುವಂತಹ ಪಿ ಎಫ್ ಇ ಎಸ್ ಐ ಯಂತಹ ಕಾರ್ಮಿಕರಿಗೆ ಸಿಗಬೇಕಾಗಿರುವ ಮೂಲಭೂತ ಸೌಕರ್ಯಗಳು ಸಹ ಇಂದಿನ ದುರಾಡಳಿತ ಬಿ ಜೆ ಪಿ ಸರ್ಕಾರದಲ್ಲಿ ಮುಳುಗಿಹೋಗಿರುವುದು ನಿಜಕ್ಕೂ ಸಹ ಇದು ಅಮಾನವೀಯ ವಿಷಯವಾಗಿದೆ ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿರು. ಇಂದಿನ ದಿನಗಳಲ್ಲಿ ರೈತರು ಮತ್ತು ಕಾರ್ಮಿಕರು ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ಹಾಗೂ ಕನಿಷ್ಟ ತಿಂಗಳ ವೇತನವು ಸಹ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ ಹಾಗಾಗಿ ಅವರು ಜೀವನ ನಿರ್ವಾಹಣೆ ಹೇಗೆ ಸಾಧ್ಯ , ಇಂದಿನ ದಿನಗಳಲ್ಲಿ ಈ ಬಿ ಜೆ ಪಿ ಸರ್ಕಾರದ ಆಡಳಿತದಿಂದ ಕಾರ್ಮಿಕರಿಗೆ ಯಾವುದೆ ತರಹದ ಸವಲತ್ತುಗಳು…
ಚಿತ್ರದುರ್ಗ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಸಮಿತಿ ವತಿಯಿಂದ ತಾಯಿಟೊಣಿ ಗ್ರಾಮ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಗ್ರಾಮ ಶಾಖೆ ಉದ್ಘಾಟನೆ ಮತ್ತು ಭಾರತರತ್ನ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಆಚರಿಸಲಾಯಿತು. ತಾಯಿಟೊಣಿ ಗ್ರಾಮದ S.C. ಮತ್ತುS.T. ಸಮುದಾಯದವರು ಹಾಗೂ ರೆಡ್ಡಿ ಸಮುದಾಯದವರು ಒಟ್ಟಾಗಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ರಾಮಚಂದ್ರ.ಕೆ ಜಿಲ್ಲಾ ಗೌರವ ಅಧ್ಯಕ್ಷರಾದ ತಿಪ್ಪೇಸ್ವಾಮಿ.ಪಿ.ಎಮ್.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಸ್.ವೃಷಬೆಂದ್ರಬಾಬು.ಬಿ.ರೊಪ್ಪ ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಣ್ಣ.ಟಿ.ಸಿ ಹಿರಿಯೂರು ತಾಲ್ಲೂಕು ಕಾರ್ಯಾಧ್ಯಕ್ಷರಾದ ರಾಘವೇಂದ್ರ.ಆರ್.ಗ್ರಾಮಸ್ಥರಾದ ಪ್ರಹ್ಲಾದ ರೆಡ್ಡಿ ಕುಬೇಂದ್ರ ರೆಡ್ಡಿ ಮೋಹನ್ ರೆಡ್ಡಿ ರಘು ರೆಡ್ಡಿ ಮಂಜುನಾಥ್ ರೆಡ್ಡಿ ಬಾಬು ರಾಜೇಂದ್ರ ಪ್ರಸಾದ್ ಟಿ.ಸಿ.ನಾಗೇಂದ್ರ.ಟಿ.ಸಿ ಪಂಚಾಕ್ಷರಿ ಎ.ಯಲ್ಲಪ್ಪ ಪ್ರಶಂತ್ ನಿವೃತ್ತ ಪೊಲೀಸ್ ಹೊನ್ನೂರಪ್ಪ ಟಿ ಮತ್ತು ಮುಂತಾದ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆಡೆಸಿಕೊಟ್ಟರು . ವರದಿ: ಮುರುಳಿಧರನ್ ಆರ್., ಹಿರಿಯೂರು. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು…
ತುಮಕೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಮಿಕರ ದಿನಾಚರಣೆ ಅಂಗವಾಗಿ ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವಿಭಾಗದ ವತಿಯಿಂದ ಸುಮಾರು 200 ಜನ ಪದಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಹೊರಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆರ್. ರಾಮಕೃಷ್ಣ ಹಾಗೂ ಮಾಜಿ ಶಾಸಕರು ಡಾ.ರಫೀಕ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಪ್ರಯಾಣಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೆಪಿಸಿಸಿ ಕಾರ್ಮಿಕರ ವಿಭಾಗದ ವಿ.ಎಸ್.ಸೈಯದ್ ದಾದಾಪೀರ್, ಅಬ್ದುಲ್ ರಹೀಮ್ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕರ ವಿಭಾಗ ಹಾಗೂ ಕಾರ್ಮಿಕರ ವಿಭಾಗದ ಜಿಲ್ಲಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ವರದಿ: ಎ.ಎನ್.ಪೀರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5
ಪಾವಗಡ : ಹಿಂದೂ ಮುಸ್ಲಿಂ ಎಂದಿಗೂ ಸಹೋದರರಿದ್ದಂತೆ ನಾವೆಲ್ಲ ಭಾರತೀಯರು, ಪಾವಗಡದ ಅಳಿಯನಾಗಿ ಇಂದು ಪವಿತ್ರವಾದ ರಂಜಾನ್ ಹಬ್ಬದ ಪ್ರಯುಕ್ತ ಹೆಲ್ಪ್ ಸೊಸೈಟಿ ವತಿಯಿಂದ ಮಹಿಳೆಯರಿಗೆ ಸೀರೆ ಹಾಗೂ ದಿನಸಿ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಿ ನನ್ನ ಕೈ ಇಂದ ವಿತರಿಸುತ್ತಿರುವುದು ನನಗೆ ತುಂಬಾ ಖುಷಿ ಉಂಟಾಗುತ್ತಿದೆ ಎಂದು ಖ್ಯಾತ ತೆಲುಗು ಚಿತ್ರ ನಟ ಸಾಯಿರಾಮ್ ಶಂಕರ್ ಅಭಿಪ್ರಾಯಪಟ್ಟರು. ಪಾವಗಡ ಪಟ್ಟಣದ ಹೆಲ್ಪ್ ಸೊಸೈಟಿ ಕಚೇರಿಯಲ್ಲಿ ಇಂದು ರಂಜಾನ್ ಪ್ರಯುಕ್ತ ಸುಮಾರು 50ಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರಿಗೆ ಸೀರೆ ಹಾಗೂ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡುತ್ತ ಹೆಲ್ಪ್ ಸೊಸೈಟಿ ಸಂಸ್ಥೆ ಮೂಲಕ ಮಾನಂ ಶಶಿಕಿರಣ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಇಮ್ರಾನ್,ಮಾತನಾಡುತ್ತ ಪ್ರತಿವರ್ಷ ಎಲ್ಲಾ ಹಬ್ಬ ಹರಿದಿನಗಳಿಗೆ ಸಹಾಯ ಹಸ್ತ ನೀಡುತ್ತಿರುವ ಹೆಲ್ಪ್ ಸೊಸೈಟಿ ಮತ್ತಷ್ಟು ಸೇವಾ ಕಾರ್ಯ ನಡೆಸಲು ಭಗವಂತ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಈ ಸರಳ ಕಾರ್ಯಕ್ರಮದಲ್ಲಿ…