Author: admin

ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ  2ನೇ ಖೇಲೋ ಮಾಸ್ಟರ್ ಗೇಮ್ ಗೆ ಕರ್ನಾಟಕದಿಂದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ತುಮಕೂರು ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಕ್ರೀಡಾಪಟುಗಳು 30/04/2022,  3/05/2022 ರಂದು ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ.  ಈ ಒಂದು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರ ವಿವರ  ಈ ಕೆಳಗಿನಂತಿದೆ. *ಉದಯಕುಮಾರ್ ಚಿಕ್ಕಮರಳಿ ದೈಹಿಕ ಶಿಕ್ಷಣ ಶಿಕ್ಷಕರು SBG ವಿದ್ಯಾಲಯ ಮಾಯಸಂದ್ರ * ಗಿರಿಧರ್KS ದೈಹಿಕ ಶಿಕ್ಷಣ ಶಿಕ್ಷಕರು SBG ವಿದ್ಯಾಲಯ ಮಾಯಸಂದ್ರ *ಶ್ರೀಧರ್ H ಸಹಶಿಕ್ಷಕರು NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ *ವೆಂಕಟೇಶ್ T NVSSJCHS ಬ್ಯಾಲಹಳ್ಳಿ ಗೇಟ್ ತುರುವೇಕೆರೆ *ಕಿರಣ್ ಕುಮಾರ್ Y S SKBRHS  ಡಿ ಕಲ್ಕೆರೆ ತುರುವೇಕೆರೆ * ವಿಶ್ವನಾಥ್ B H ಸಹಶಿಕ್ಷಕರು SSRHS ಪುರ ತುರುವೇಕೆರೆ *ರಕ್ಷಿತ್ C B ಸಹಶಿಕ್ಷಕರು ಶಂಕರಾನಂದ ಭಾರತಿ  ವಿದ್ಯಾಪೀಠ ಕುವೆಂಪು ಪ್ರೌಢಶಾಲೆ ಕುಂತಿಬೆಟ್ಟ,ಪಾಂಡವಪುರ ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ…

Read More

ತುರುವೇಕೆರೆ: ಮದುವೆಯಾದ 11ನೇ ದಿನಕ್ಕೆ ನವವಿವಾಹಿತ ಸಾವಿಗೀಡಾಗಿದ್ದು ವಧುವಿನ ಸ್ಥಿತಿ ಚಿಂತಾಜನಕವಾಗಿದೆ.ಮದುವೆ ಸಂಭ್ರಮವಿದ್ದ ಮನೆ ಶೋಕ ಸಾಗರದಲ್ಲಿ ಮುಳುಗಿದ ಘಟನೆ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ನಡೆದಿದೆ. ಅರಸೀಕೆರೆ ತಾಲೂಕು ಕಾಮ್ಲಾಪುರದ ನಂಜುಂಡಯ್ಯ ಅವರ ಪುತ್ರ ಪ್ರಸನ್ನ ಮತ್ತು ಮಂದಾರ ನವದಂಪತಿಗಳು. ಇವರ ಮದುವೆ 10 ದಿನದ ಹಿಂದೆ ನಡೆದಿದ್ದು,ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಪ್ರಸ್ತುತ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿ ಎಂಬಲ್ಲಿಗೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಲಾರಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲೇ ಮೃತಪಟ್ಟಿದ್ದು, ಸಂತೋಷ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಸನ್ನನ ಪತ್ನಿ ಮಂದಾರ ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಅಪಘಾತ ನಡೆದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ತುರುವೇಕರೆ ಪೋಲಿಸ್…

Read More

ದೆಹಲಿ: ಕಲ್ಲಿದ್ದಲು ಅಭಾವದ ಹಿನ್ನೆಲೆಯಲ್ಲಿ ತುರ್ತು ಪೂರೈಕೆಗಾಗಿ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಿ ಕಲ್ಲಿದ್ದಲು ತುಂಬಿದ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.ಬಿಸಿಲು ಪ್ರಮಾಣ ಹೆಚ್ಚಾಗಿರುವುದರಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಲ್ಲಿ ವಿದ್ಯುತ್‌ ಕೊರತೆ ಉಂಟಾಗಿದೆ. ದೆಹಲಿಯಲ್ಲಿ ಕೇವಲ ಒಂದು ದಿನಕ್ಕೆ ಆಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ.ದೇಶದೆಲ್ಲೆಡೆ ಕಲ್ಲಿದ್ದಲು ಪೂರೈಕೆಗೆ ಯಾವುದೇ ಅಡ್ಡಿಯಾಗಬಾರದು ಎಂಬ ಹಿನ್ನೆಲೆಯಲ್ಲಿ ಹಲವು ಪ್ರಮುಖ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಕಲ್ಲಿದ್ದಲು ಪೂರೈಕೆಗಾಗಿ ರೈಲ್ವೆ ಇಲಾಖೆ ಹೆಚ್ಚುವರಿ 1000 ಬೋಗಿಗಳನ್ನು ವ್ಯವಸ್ಥೆ ಮಾಡಿದೆ. ಅಲ್ಲದೇ ಇದು ಅತ್ಯಂತ ವೇಗವಾಗಿ ನಿಗದಿತ ಸ್ಥಳ ತಲುಪಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ.ವಿದ್ಯುತ್‌ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಶೇ.17ರಷ್ಟು ಕಲ್ಲಿದ್ದಲು ಬೇಡಿಕೆ ದಿಢೀರ್‌ ಹೆಚ್ಚಾಗಿರುವುದರಿಂದ ಕಲ್ಲಿದ್ದಲು ಕೊರತೆ ಎದುರಿಸುವಂತಾಗಿದೆ. ದೆಹಲಿಯ ವಿದ್ಯುತ್ ಸಚಿವ ಸತ್ಯೇಂದ್ರ ಜೈನ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ತುರ್ತು ಸಭೆ ನಡೆಸಿದ್ದು, ರಾಷ್ಟ್ರ ರಾಜಧಾನಿಗೆ ವಿದ್ಯುತ್ ಸರಬರಾಜು ಮಾಡುವ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು…

Read More

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಪಾಸ್ ಮಾಡಿಸಲು ಪ್ರಮುಖ ಆರೋಪಿಗಳಾದ ಆರ್‌.ಡಿ. ಪಾಟೀಲ, ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ ಹಾಗೂ ಮಂಜುನಾಥ ಮೇಳಕುಂದಿಗೆ ತಾವು ಒಟ್ಟಾರೆ ₹ 90 ಲಕ್ಷ ಕೊಟ್ಟಿದ್ದಾಗಿ ಬಂಧಿತ ಮೂವರು ಅಭ್ಯರ್ಥಿಗಳು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಐಡಿ ಕಸ್ಟಡಿಯಲ್ಲಿರುವ ಅಭ್ಯರ್ಥಿಗಳಾದ ವಿಶಾಲ್ ಶಿರೂರ ₹ 40 ಲಕ್ಷ ಹಾಗೂ ಎನ್‌.ವಿ. ಸುನೀಲಕುಮಾರ ₹ 40 ಲಕ್ಷ ಹಾಗೂ ಹಯ್ಯಾಳಿ ದೇಸಾಯಿ ₹ 10 ಲಕ್ಷ ಹಣವನ್ನು ಇವರಿಗೆ ನೀಡಿದ್ದಾಗಿ ತಿಳಿಸಿದ್ದಾರೆ. ಆರ್‌.ಡಿ. ಪಾಟೀಲ, ಮಹಾಂತೇಶ ಪಾಟೀಲ ಹಾಗೂ ಮಂಜುನಾಥ ಮೇಳಕುಂದಿ ತಮಗೆ ಶಾಲೆಯ ಮೇಲ್ವಿಚಾರಕಿಯರ ನೆರವು ಪಡೆದು ಬ್ಲೂಟೂತ್ ಮೂಲಕ ಉತ್ತರ ಬರೆಸಿದ್ದಲ್ಲದೇ, ಓಎಂಆರ್‌ ಶೀಟ್‌ನಲ್ಲಿ ಸರಿಯಾದ ಉತ್ತರಗಳನ್ನು ಬರೆಯಲು ಸಹಾಯ ಮಾಡಿದ್ದರು ಎಂಬ ಸಂಗತಿಯನ್ನು ಈ ಅಭ್ಯರ್ಥಿಗಳು ವಿಚಾರಣೆ ವೇಳೆ ತಿಳಿಸಿದ್ದಾಗಿ ಸಿಐಡಿ ಮೂಲಗಳು ಹೇಳಿವೆ. ನಾಲ್ವರಿಗೆ ಹಣ: ‘ಅಭ್ಯರ್ಥಿಗಳು ನೀಡಿದ ಹಣವನ್ನು ಅಣ್ಣ ಮಹಾಂತೇಶ ಪಾಟೀಲ, ದಿವ್ಯಾ ಹಾಗರಗಿ, ಮಂಜುನಾಥ ಮೇಳಕುಂದಿ ಹಾಗೂ ತಾನು ಪಡೆದಿರುವುದಾಗಿ…

Read More

ಅಜಯ್ ದೇವಗನ್, ಸುದೀಪ್ ಕನ್ನಡ-ಹಿಂದಿ ಭಾಷೆ ವಿವಾದಕ್ಕೆ ಅವರೇ ಅಂತ್ಯ ಹಾಡಿದ್ದಾರೆ. ಕನ್ನಡ ಭಾಷೆ ಬಗ್ಗೆ ನನ್ನ ನಿಲುವು ಏನು ಎಂದು ಸಂಸತ್ ಭಾಷಣದಲ್ಲೆ ಗೊತ್ತಾಗುತ್ತೆ. ಈ ಬಗ್ಗೆ ನಾನು ಹೆಚ್ಚು ಮಾತನಾಡಬೇಕಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ರಾಜ್ಯದಲ್ಲಿ ಎದ್ದಿರುವ ಗಲಭೆ, ಗೊಂದಲ ನಡುವೆ ಈ ಹೊಸ ವಿವಾದ ಬೇಡ. ಒಂದು ರಾಷ್ಟ್ರ ಭಾಷೆ ಅನ್ನೊ ಪ್ರಶ್ನೆಯೆ ಬರಲ್ಲ. ಉತ್ತರ ಭಾರತದಲ್ಲಿ ಹಿಂದಿ ಪ್ರಾಮುಖ್ಯತೆ ಇದೆ. ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಇದೆ. ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಕೂಡ ಸುಮ್ಮನೆ ಇರಲ್ಲ. ಇದು ನಮ್ಮ ಸ್ವಾಭಿಮಾನ. ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ. ನಮ್ಮ ಭಾಷೆಗೆ ನಮ್ಮದೆ ಆದಂತಹ ಗೌರವ ಇದೆ. ನಾವು ಎಲ್ಲಾ ಭಾಷೆಯನ್ನ ಗೌರವಿಸುತ್ತೇವೆ. ಆದ್ರೆ ನಮ್ಮ ಭಾಷೆಗೆ ಧಕ್ಕೆಯಾದ್ರೆ ಯಾರು ಸುಮ್ಮನೆ ಇರಲ್ಲ ಎಂದು ಗುಡುಗಿದ್ದಾರೆ. ನಟ ಕಿಚ್ಚ ಸುದೀಪ್ ಹಾಗೂ ಬಾಲಿವುಡ್‌ ನಟ…

Read More

ಕಂಪನಿ ವೆಬ್ ಸೈಟ್ ಡೇಟಾ ಅಳಿಸಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಕಾರಣವಾಗಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಮೂವರು ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಒಳಗಾದ ಅಜಯ್ ಪಾಂಡೆ ಎಂಬಾತ ದೂರು ನೀಡಿದ ಮೇರೆಗೆ ಚೈತನ್ಯ ಶರ್ಮಾ, ವೈಭವ್ ಹಾಗೂ ಅಮಿತ್ ಎಂಬಾತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌. ಪ್ರಕರಣದಲ್ಲಿ ನಾಲ್ವರು ತಲೆಮರೆಸಿಕೊಂಡಿದ್ದಾರೆ‌. ಆರೋಪಿಗಳ ಪೈಕಿ ಚೈತನ್ಯ ಬಾಣಸವಾಡಿಯಲ್ಲಿ ಲ್ಯಾಂಪ್ಸ್ ಕಾರ್ಟ್ ಕಂಪನಿಯ ಮಾಲೀಕನಾಗಿದ್ದ. ಉದ್ಯಮಕ್ಕೆ ವೆಬ್ ಸೈಟ್ ಸಿದ್ದಪಡಿಸುವಂತೆ ಅಜಯ್ ಪಾಂಡೆಗೆ ಸೂಚಿಸಿದ್ದ. ಇದರಂತೆ ಪಾಂಡೆ ವೆಬ್ ಡಿಸೈನ್ ಮಾಡಿಕೊಟ್ಟಿದ್ದ‌.‌‌ ಒಂದು ವರ್ಷ ತರುವಾಯ ನವೀಕರಣ ಹಾಗೂ ವೆಬ್ ನಿರ್ವಹಣೆಗಾಗಿ ಚೈತನ್ಯಗೆ ಹೆಚ್ಚುವರಿ ಹಣ ಕೇಳಿದ್ದ. ಆದರೆ ಹಣ ಚೈತನ್ಯ ಕೊಟ್ಟಿರಲಿಲ್ಲ. ಇದರಿಂದ ಅಸಮಾನಧಾನಗೊಂಡು ವೆಬ್ ಸೈಟ್ ನಲ್ಲಿರುವ ಡೇಟಾ ಅಳಿಸಿ ಕಂಪ್ಲೀಟ್ ಶಟ್ಡೌನ್ ಆಗುವಂತೆ ಪಾಂಡೆ ನೋಡಿಕೊಂಡಿದ್ದ. ಇದರಿಂದ ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಚೈತ್ಯನ ಕೆಂಡಕಾರಿದ್ದ. ಅಲ್ಲದೆ‌ ಒಂದು ವರ್ಷಗಳಿಂದ…

Read More

ಎಲ್ಲೆಲ್ಲೂ ಭಾಷೆಯ ವಿಚಾರ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತದ ಚಿತ್ರಗಳ ವಿರುದ್ಧ ಬಾಲಿವುಡ್‌ ನಟರ ಆಕ್ರೋಶ ಹೆಚ್ಚಾಗುತ್ತಿದೆ. ಆದರೆ ಈ ಹೊತ್ತಲ್ಲೇ ಬಾಲಿವುಡ್‌ ಸ್ಟಾರ್ಸ್‌ ವಿರುದ್ಧ ಐಎಎಸ್ ಅಧಿಕಾರಿಗಳು ಕೂಡ ರೊಚ್ಚಿಗೆದ್ದಿದ್ದಾರೆ. ಈ ಕೋಪಕ್ಕೆ ಕಾರಣ ಮಾತ್ರ ಗುಟ್ಕಾ ಜಾಹೀರಾತು. ಅಜಯ್‌ ದೇವಗನ್‌, ಅಕ್ಷಯ್‌ ಕುಮಾರ್‌ ಹಾಗೂ ಶಾರುಖ್‌ ಖಾನ್‌ ಒಟ್ಟಾಗಿ ನಟಿಸಿರುವ ಪಾನ್‌ ಮಸಾಲ ಜಾಹೀರಾತಿನ ವಿರುದ್ಧ ದಿನದಿಂದ ದಿನಕ್ಕೆ ಆಕ್ರೋಶ ಹೆಚ್ಚಾಗುತ್ತಿದೆ. ಈ ಹೊತ್ತಲ್ಲೇ ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿಯೊಬ್ಬರು ಈ ಮೂವರು ನಟರಿಗೆ ಟ್ವೀಟ್‌ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಅವನೀಶ್‌ ಶರಣ್‌ ಎಂಬ ಪಶ್ಚಿಮ ಬಂಗಾಳದ ಐಎಎಸ್ ಅಧಿಕಾರಿ ಹೀಗೆ ಬಾಲಿವುಡ್‌ ಸ್ಟಾರ್‌ಗಳ ಗುಟ್ಕಾ ಪ್ರೀತಿ ವಿರುದ್ಧ ರೊಚ್ಚಿಗೆದ್ದವರು.ಅವನೀಶ್‌ ಶರಣ್‌ ಕೋಲ್ಕತ್ತಾದ ಹೌರಾ ಸೇತುವೆಯ ಚಿತ್ರವನ್ನು ಟ್ವೀಟ್ ಮಾಡಿ, ಗುಟ್ಕಾ ತಿನ್ನುವವರಿಂದಲೇ ಈ ಸೇತುವೆ ಹಾಳಾಗುತ್ತಿದೆ ಎಂದು ಬರೆದುಕೊಂಡಿದ್ದರು.ಅವನೀಶ್‌ ಶರಣ್‌ ಹಂಚಿಕೊಂಡಿದ್ದ ಫೋಟೋದಲ್ಲಿ ಸೇತುವೆಯ ಮೇಲೆ ಗುಟ್ಕಾ ತಿಂದು,‌ ಸೇತುವೆ ಹಾಳು ಮಾಡಿರುವ ದೃಶ್ಯವಿದೆ.ಅಲ್ಲದೆ ಟ್ವೀಟ್‌ನಲ್ಲಿ ಅಜಯ್‌ ದೇವಗನ್‌,…

Read More

ಹೆಚ್.ಡಿ.ಕೋಟೆ: ಪತ್ರಕರ್ತರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿದ್ದಲ್ಲದೇ ಜೀವ ಬೆದರಿಕೆಯೊಡ್ಡಿದ ಆರೋಪ ಕೇಳಿ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ತಾಲ್ಲೂಕಿನ ಪಟ್ಟಣದ ವಾಯುವಿಹಾರ ಹೋಗಿದ್ದ ಸಮಯದಲ್ಲಿ ಪತ್ರಕರ್ತ ಹಾದನೂರು ದೊಡ್ಡಸಿದ್ದು ಅವರಿಗೆ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗಿರಿಗೌಡ ಮತ್ತು ಕುಟುಂಬದವರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ತಾಲ್ಲೂಕು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘದ  ಸದಸ್ಯರು ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಮತ್ತು ತಹಶೀಲ್ದಾರ್ ರತ್ನಾಂಬಿಕೆಯವರನ್ನು ಭೇಟಿ ಮಾಡಿ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಘಟನೆ ವಿವರ: ಏಪ್ರಿಲ್ ಕಳೆದ 27ರ  ಶುಕ್ರವಾರ ಬೆಳಿಗ್ಗೆ 6:20 ಸಮಯದಲ್ಲಿ ಪತ್ರಕರ್ತ ಹಾದನೂರು ದೊಡ್ಡಸಿದ್ದು,  ತಮ್ಮ ಪತ್ನಿಯೊಂದಿಗೆ ವಾಯುವಿಹಾರಕ್ಕೆ ತೆರಳಿದ ಸಂದರ್ಭ , ಹುಣಸೂರು ಬೇಗೂರು ಹೆದ್ದಾರಿಯ  ಹೆಬ್ಬಳ ಸಮೀಪದ ರಾಜಗೋಪಾಲ್ ಮನೆಯ ಹತ್ತಿರ ಎದುರಾದ…

Read More

ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ರೆ, ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂಸದೆ ಸುಮಲತಾ, ಕಳೆದ ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ‌ ಕಾರಣದಿಂದ ಮುಖಂಡರನ್ನು ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಮುಖಂಡರು ಹಿಂದೆ ಫಂಡ್ ಬಗ್ಗೆ ಕೇಳಿದ್ರು. ಈ ಬಗ್ಗೆ ಪ್ರಸ್ತಾಪ ಮಾಡಲು ಅವರನ್ನು ಸಭೆ ಕರೆದಿದ್ದೇನೆ. ಈ ಸಭೆ ಬಿಜೆಪಿ ಸೇರುವ ಬಗ್ಗೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ. ನನಗೆ ಈಗ ಸದ್ಯಕ್ಕೆ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ, ಈಗ ಈ ಪ್ರಸ್ತಾಪ ಇಲ್ಲ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಜನರು ಏನು ಅಭಿಪ್ರಾಯ ಹೇಳಿದ್ದಾರೆ ಅದನ್ನು…

Read More

ಬೆಲೆಬಾಳುವ ಶ್ರೀಗಂಧದ ಮರವನ್ನ ಕಳ್ಳರ ತಂಡ ತಂಡ ರಾತ್ರೋ ರಾತ್ರಿ, ಕಟಾವು ಮಾಡಿ ಹೊತ್ತೊಕೊಂಡು ಹೀಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ನಡೆದಿದೆ. ಚಿಮ್ಮಡ ಗ್ರಾಮದ ಧರೆಪ್ಪ ಉಳ್ಳಾಗಡ್ಡಿ ಎಂಬುವರ ತೋಟದಲ್ಲಿ ಕೆಲವು ದಿನಗಳ ಹಿಂದೆ ರಾತ್ರಿ ಈ ಘಟನೆ ನಡೆದಿದ್ದು, ಯಾರೂ ಇಲ್ಲದ ಸಮಯದಲ್ಲಿ ಬೃಹತ್ ಗಾತ್ರದ ಶ್ರೀಗಂಧ ಮರವನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಸುಮಾರು 10 ವರ್ಷದ ಶ್ರೀಗಂಧದ ಮರ ಕಳವಾಗಿದ್ದು, ಸ್ಥಳಕ್ಕೆ ದೌಡಾಯಿಸಿದ ಬನಹಟ್ಟಿ ಸಿಪಿಐ ಜೆ. ಕರುಣೇಶಗೌಡ ಪರಿಶೀಲನೆ ನಡೆಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.ಇದೇ ಸಂದರ್ಭ ಕ್ರೈಂ ಪಿಎಸ್‌ ಐ ಪುರಂದರ ಪೂಜಾರಿ, ಅರಣ್ಯಾಧಿಕಾರಿ ಮಲ್ಲೇಶ ನಾವಿ, ಲಕ್ಷ್ಮಣ ಪಾಟೀಲ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿದ್ದಾರೆ. ಈಚೆಗೆ ಗಂಧದ ಮರ ಸೇರಿದಂತೆ ಮನೆಗಳ್ಳತನ ಜಾಸ್ತಿ ನಡೆಯುತ್ತಿದ್ದು, ಕಳ್ಳತನ ಮಾಡುವ ಡಕಾಯಿತಿ ತಂಡವನ್ನು ತಕ್ಷಣವೇ ಪತ್ತೆ ಹೆಚ್ಚುವಂತೆ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ…

Read More