Subscribe to Updates
Get the latest creative news from FooBar about art, design and business.
- ತುಮಕೂರು: 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಶುಭ ಕಲ್ಯಾಣ್
- ಒಳ ಮೀಸಲಾತಿ ಜಾರಿ ಮಾಡದ ಸರ್ಕಾರಕ್ಕೆ ಅಂಬೇಡ್ಕರ್, ಜಗಜೀವನ್ ರಾಂ ಜಯಂತಿ ಆಚರಿಸುವ ಅರ್ಹತೆ ಇಲ್ಲ: ದಲಿತ ಸಂಘರ್ಷ ಸಮಿತಿ ಆಕ್ರೋಶ
- ತಿಪಟೂರು: ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಜಯಂತಿ ಆಚರಣೆ; ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ಕರೆ
- ಕೊರಟಗೆರೆ: ಜನವಸತಿ ಪ್ರದೇಶದಲ್ಲಿ ಕರಡಿ ಪ್ರತ್ಯಕ್ಷ: ಪಟ್ಟಣದ ಜನತೆಯಲ್ಲಿ ಹೆಚ್ಚಿದ ಆತಂಕ
- ಸಿದ್ದಗಂಗಾ ಮಠದಲ್ಲಿ ಸಂಭ್ರಮದ ನಾಮಕರಣ ಮಹೋತ್ಸವ: 119 ಮಕ್ಕಳಿಗೆ ‘ಶಿವಕುಮಾರ’ ನಾಮಕರಣ
- ಎಲ್ ಪಿಜಿ ಸಂಕಷ್ಟ: ವಿದೇಶಾಂಗ ನೀತಿ ಬದಲಿಸಿ ಬೇರೆ ದೇಶಗಳಿಂದ ಅನಿಲ ಆಮದು ಮಾಡಿಕೊಳ್ಳಿ: ಕೇಂದ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
- ಡಾ.ಬಾಬು ಜಗಜೀವನರಾಮ್’ರವರ119ನೇ ಜಯಂತಿ ಆಚರಣೆ
- ತಿಪಟೂರು: ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ: ಕೆ.ಟಿ.ಶಾಂತಕುಮಾರ್ ಎಚ್ಚರಿಕೆ
Author: admin
ಟಾಟಾ ಗ್ರೂಪ್ ಇಲ್ಕರ್ ಆಯ್ಸಿ ಅವರನ್ನು (ಮಾಜಿ ಟರ್ಕಿಷ್ ಏರ್‍ಲೈನ್ಸ್ ಅಧ್ಯಕ್ಷ) ಏಪ್ರಿಲ್ 1 ಅಥವಾ ಅದಕ್ಕಿಂತ ಮೊದಲು ಅನ್ವಯವಾಗುವಂತೆ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಕಾರಿ(ಎಂಡಿ ಮತ್ತು ಸಿಇಒ) ಯಾ ನೇಮಕ ಮಾಡಿದೆ. ಟಾಟಾ ಗ್ರೂಪ್ ಕಳೆದ ತಿಂಗಳು ಭಾರತ ಸರ್ಕಾರದಿಂದ ಸ್ವಾೀಧಿನಪಡಿಸಿಕೊಂಡ ವಿಮಾನಯಾನ ಸಂಸ್ಥೆ ಮುನ್ನೆಡೆಸಲ ಓರ್ವ ಸಾಗರದಾಚೆಯ ಮುಖ್ಯಸ್ಥರನ್ನು ನೇಮಿಸುವ ಯೋಜನೆಗಳ ಅನುಸಾರ ಈ ಬೆಳವಣಿಗೆಯಾಗಿದೆ. ಇಲ್ಕರ್ ಆಯ್ಸಿ ಅವರು 2015ರಿಂದ ಟರ್ಕಿಷ್ ಏರ್ ಲೈನ್ಸ್‍ನ ಅಧ್ಯಕ್ಷರಾಗಿದ್ದರು ಮತ್ತು ಈ ವರ್ಷದ ಜನವರಿ 27ರಂದು ಕೇಂದ್ರ ಸರ್ಕಾರವು ಟಾಟಾ ಸಮೂಹಕ್ಕೆ ಏರ್ ಇಂಡಿಯಾವನ್ನು ಹಸ್ತಾಂತರಿಸಿದ ದಿನ ಆಯ್ಸಿ ಅವರು ರಾಜೀನಾಮೆ ನೀಡಿರುವುದನ್ನು ಟರ್ಕಿಷ್ ಏರ್‍ಲೈನ್ಸ್ ಪ್ರಕಟಿಸಿದೆ. ತಮ್ಮ ವೃತ್ತಿ ಜೀವನದ ಅವಯಲ್ಲಿ ಆಯ್ಸಿ ಅವರು ಇಸ್ತಾಂಬುಲ್‍ನ ಅಂದಿನ ಮೇಯರ್ ರೆಸೆಪ್ ತಯ್ಯಿಪ್ ಎರ್ಡೋಗಾನ್ ಅವರಿಗೆ ಇಸ್ತಾನ್‍ಬುಲ್ ಮಹಾನಗರ ಪಾಲಿಕೆಯಲ್ಲಿ ಸಲಹೆಗಾರರಾಗಿದ್ದರು. ಎರ್ಡೋಗಾನ್ ಅವರು ಟರ್ಕಿಯ ಈ ಮಹಾನಗರದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು.…
ತುಮಕೂರು ರಸ್ತೆಯ ಗೊರಗುಂಟೆ ಪಾಳ್ಯ ಮತ್ತು ನಾಗಸಂದ್ರ ನಡುವಿನ ಮೇಲ್ಸೇತುವೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಎಸ್.ಸುರೇಶ್‍ಕುಮಾರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ. ಕಳೆದ ಎರಡು ತಿಂಗಳಿನಿಂದ ಈ ಭಾಗದಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಸಾಕಷ್ಟು ಸಮಸ್ಯೆಯಾಗಿದೆ. ಇದರ ಬಗ್ಗೆ ಕಳೆದ ಜ.20ರಂದು ನಾನು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದುರಸ್ತಿ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಭಾಗದ ಪ್ರಧಾನ ವ್ಯವಸ್ಥಾಪಕರು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಐಐಎಸ್ ಸಿ ತಜ್ಞರ ಅಭಿಪ್ರಾಯಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದ್ದರು. ಇದು ಬಂದ ಕೂಡಲೇ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿಸಿದ್ದರು. ಆದರೆ, ಸರಿಸುಮಾರು ಒಂದು ತಿಂಗಳಾಗುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪ್ರತಿನಿತ್ಯ ಅನುಭವಿಸುತ್ತಿರುವ ಬವಣೆಯಿಂದಾಗಿ ರೋಸಿ ಹೋಗಿದ್ದಾರೆ.ಸಾರ್ವಜನಿಕರ ಹಿತದೃಷ್ಟಿಯಿಂದ ತಾವು ಕ್ರಮ ಕೈಗೊಂಡು…
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಲನಾಲದ ಎಪ್ಪತ್ತು ಕಣಿವೆಯ ಸೇತುವೆ ಬಳಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಇಲ್ಲಿನ ಸ್ಥಳೀಯರು ನೀರಿನಲ್ಲಿ ಈಜುತ್ತಿದ್ದ ವೇಲೆ ಚಾನಲ್ ನೀರಿನಲ್ಲಿ ಮೃತದೇಹ ತೇಲಿಕೊಂಡು ಬಂದಿದ್ದು, ಈ ವಿಚಾರವನ್ನು ಅವರು ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಹಿರಿಯೂರು ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದು, ಸದ್ಯ ಮೃತರ ಗುರುತು ಪತ್ತೆಗೆ ಮುಂದಿನ ಕ್ರಮ ಜರುಗಿಸಿದ್ದಾರೆ. ವರದಿ: ಮುರುಳಿಧರನ್ ಆರ್., ಹಿರಿಯೂರು ( ಚಿತ್ರದುರ್ಗ ) ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ವಿಜಯಪುರ ಜಿಲ್ಲಾಯ ಸಿಂದಗಿ ವಿಧಾನಸಭೆ ಕ್ಷೇತ್ರದ ಪ್ರಭಾವಿ ಮುಖಂಡ ಹಾಗೂ ನಿವೃತ್ತ ಯೋಧ ಶಿವಾನಂದ ಪಾಟೀಲ್ ಅವರು ತಮ್ಮ ನೂರಾರು ಬೆಂಬಲಿಗರ ಜತೆಯಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಾನಂದ ಪಾಟೀಲ್ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷದ ಧ್ವಜವನ್ನು ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು. ಅವರ ಜತೆಯಲ್ಲಿ ಆ ಕ್ಷೇತ್ರದ ನೂರಾರು ಕಾರ್ಯಕರ್ತರು ಕೂಡ ಪಕ್ಷಕ್ಕೆ ಸೇರ್ಪಡೆಯಾದರು.ನಂತರ ಮಾತನಾಡಿದ ಕುಮಾರಸ್ವಾಮಿ, ಸಿಂದಗಿ ಕ್ಷೇತ್ರ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ನಡುವೆ ಕರುಳಬಳ್ಳಿ ಸಂಬಂಧ ಇದೆ. ದೇವೇಗೌಡರ ಕಾಲದಿಂದ ಸಿಂದಗಿ ಕ್ಷೇತ್ರವನ್ನು ಅತ್ಯುತ್ತಮವಾಗಿ ಪ್ರಗತಿ ಮಾಡಲಾಗಿದೆ. ಗುಳೆ ಹೋಗುತ್ತಿದ್ದ ಅಲ್ಲಿನ ಜನರು ಪಕ್ಕದ ರಾಜ್ಯಗಳಲ್ಲಿ ಕೂಲಿಗಳು ಆಗುವುದನ್ನು ತಪ್ಪಿಸಲು ಶಾಶ್ವತವಾಗಿ ನೀರಾವರಿ ಪರಿಹಾರ ಒದಗಿಸಿದ್ದವರು ಗೌಡರು ಎಂದರು.ಮಾಜಿ ಸಚಿವರಾದ ದಿವಂಗತ ಮನಗೂಳಿ ಮತ್ತು ಗೌಡರ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ತಮ್ಮ ಮಗನಂತೆ ಅವರನ್ನು ಗೌಡರು ಸಲುಹಿದ್ದರು.…
ತುಮಕೂರು : ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರಿನ ಎಸ್‌ವಿಎಸ್ ಪಬ್ಲಿಕ್ ಸ್ಕೂಲ್ ಮುಂದೆ ಪೋಷಕರು ಜಮಾವಣೆಗೊಂಡು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ತುಮಕೂರು ನಗರದ ಎಸ್ ವಿಎಸ್ ಕಾಲೇಜು ಮುಂಭಾಗ ಪೋಷಕರ ಗಲಾಟೆ ಮಾಡಿದರು. ಹಿಜಾಬ್ ಮತ್ತು ಬುರ್ಕಾ ಹಾಕಿದ ಪೋಷಕರನ್ನು ಒಳಗೆ ಬಿಡದೆ ಇದ್ದಿದ್ದಕ್ಕೆ ಪೋಷಕರು ಗಲಾಟೆ ಮಾಡಿದ್ದಾರೆ. ಕಾಲೇಜು ಮುಂದೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಪಿಎಸ್ ಐ ಚಂದ್ರಕಲಾ, ಇನ್ಸ್ ಪೆಕ್ಟರ್ ಮುನಿರಾಜು ಭೇಟಿ ಬಂದೋಬಸ್ತ್ ವ್ಯವಸ್ಥೆ ಮಾಡಿದರು.ಶಾಲೆಯ ಸುತ್ತಮುತ್ತ144 ಸೆಕ್ಷನ್ ಜಾರಿ ಇದೆ. ಇದೇ ರೀತಿ ಮಾಡಿದ್ರೆ ನಾವು ಕೇಸ್ ಹಾಕ್ತಿವಿ ಅಂತಾ ಪೋಷಕರನ್ನು ಪೊಲೀಸರು ಚದುರಿಸಿದರು. ಶಾಲೆಗೆ ವಿದ್ಯಾರ್ಥಿಗಳನ್ನ ಬಿಡೋಕೆ ಅಂತಾ ಪೋಷಕರು ಬಂದಿದ್ದರು. ಅಲ್ಲದೆ ಈ ವೇಳೆ ಪೋಷಕರು ಬುರ್ಕಾ ಹಾಕಿಕೊಂಡು ಬರಬಾರ್ದು ಅಂತಾ ಶಾಲಾ ಆಡಳಿತ ಮಂಡಳಿ ಗಲಾಟೆ ಮಾಡಿದ್ದಾರೆ. ಮಕ್ಕಳು ಶಾಲೆಗೆ ಹಿಜಾಬ್ ಹಾಕಿಕೊಂಡು…
ತುಮಕೂರು: ಕೊವಿಡ್ ನಿಂದ ಮೃತಪಟ್ಟ 22 ಮಂದಿ ಅಸ್ತಿಯನ್ನು ಶ್ರೀರಂಗಪಟ್ಟಣಕ್ಕೆ ರವಾನಿಸಲಾಗಿದ್ದು, ಕೊವಿಡ್ 2ನೇ ಅಲೆಯಲ್ಲಿ ಮೃತಪಟ್ಟ ಒಟ್ಟು 22 ಮಂದಿ ವಾರಸುದಾರರಿಲ್ಲದವರ ಚಿತಾ ಭಸ್ಮವನ್ನು ತುಮಕೂರು ಜಿಲ್ಲಾಡಳಿತದ ವತಿಯಿಂದ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ. 22 ಮಂದಿಯ ಅಸ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಲು ಸಿದ್ಧತೆ ನಡೆಸಲಾಗಿದೆ. ಕೈಲಾಸ ರಥದ ಮೂಲಕ ಶ್ರೀರಂಗಪಟ್ಟಣಕ್ಕೆ ಅಸ್ತಿಯನ್ನು ರವಾನೆ ಮಾಡಲಾಗಿದೆ. ಇನ್ನೂ ಕೊವಿಡ್ 2ನೇ ಅಲೆಯ ಸಂದರ್ಭ ಕಲ್ಕತ್ತಾ, ಬಿಹಾರ್, ಉತ್ತರ ಪ್ರದೇಶ ಮೂಲದವರು ಮೃತಪಟ್ಟಿದ್ದರು. ಆದರೆ, ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು. ಆದರೆ ಅಸ್ತಿ ಸಂಗ್ರಹಕ್ಕೂ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದಲೇ ಚಿತಾ ಭಸ್ಮ ವಿಸರ್ಜನೆಗೆ ಸಿದ್ಧತೆ ನಡೆಸಲಾಗಿದೆ. ವರದಿ: ಉದಯ್ ಕುಮಾರ್, ತುಮಕೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಕಷ್ಟ ಎದುರಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಎಸ್ಕೆಲ ವಿರುದ್ಧ #Boycott_ChennaiSuperKings ಎಂಬ ಅಭಿಯಾನ ಆರಂಭವಾಗಿದೆ. IPL ನಲ್ಲಿ ನಾಲ್ಕು ಬಾರಿ IPL ಟ್ರೋಫಿ ಎತ್ತಿ ಹಿಡಿದಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಚೆನ್ನೈ ಸೂಪರ್ ಕಿಂಗ್ ಮೆಗಾ ಹರಾಜಿನಲ್ಲಿ ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣರನ್ನು ಖರೀದಿಸಿದೆ. ಇದನ್ನು ವಿರೋಧಿಸಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.ಮಹೇಶ್ ತೀಕ್ಷಣ ಸಿಂಹಳೀಯ ಬೌಲರ್ ಎಂಬುದು. 2009ರಲ್ಲಿ ಎಲ್ಟಿಕಟಿಇ ವಿರುದ್ಧದ ಸೇನಾ ಕಾರ್ಯಾಚರಣೆಯ ಸಂದರ್ಭದಲ್ಲಿ ಸಿಂಹಳೀಯ ಸೈನಿಕರು ಶ್ರೀಲಂಕಾದಲ್ಲಿರುವ ತಮಿಳರ ವಿರುದ್ಧ ಯುದ್ಧಾಪರಾಧ ಎಸಗಿದ್ದರು. ಇದರಿಂದ ತಮಿಳುನಾಡು ಮತ್ತು ಶ್ರೀಲಂಕಾ ನಡುವೆ ವೈಮನಸ್ಸಿದೆ.ಇದೀಗ ತಮಿಳುನಾಡು ಮೂಲದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಂಹಳೀಯ ಬೌಲರ್ ಸೇರ್ಪಡೆ ಆಗಿರುವುದನ್ನು ಅಭಿಮಾನಿಗಳು ವಿರೋಧಿಸಲು ಆರಂಭಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್ ಆಗ ತೊಡಗಿದೆ. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್…
ಕನ್ನಡದ ಹಿರಿಯ ನಟಿ ಭಾರ್ಗವಿ ಅವರು ಸೋಮವಾರ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. 84 ವರ್ಷದ ಭಾರ್ಗವಿ ಅವರು ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಕಲಾವಿದೆ ಭಾರ್ಗವಿ ನಾರಾಯಣ ಅವರು ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ 22 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಇವರು ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಕೂಡಾ ಸಕ್ರಿಯರಾಗಿದ್ದು 600ಕ್ಕೂ ಹೆಚ್ಚು ನಾಟಕ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭಾರ್ಗವಿ ಅವರು, ಭಾರ್ಗವಿಯವರು ರಂಗಭೂಮಿಯಲ್ಲಿ ‘ಮೇಕಪ್ ನಾಣಿ’ ಎಂದೇ ಹೆಸರಾಗಿದ್ದ ಬೆಳವಡಿ ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ಕು ಮಕ್ಕಳಿದ್ದಾರೆ. ಭಾರ್ಗವಿಯವರು ಬಿಎಸ್ಸಿ ಮತ್ತು ಇಂಗ್ಲೀಷ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು. ಅವರು ನಾ ಕಂಡ ನಮ್ಮವರು ಕೃತಿ ರಚಿಸಿದ್ದರು. ವರದಿ: ಆಂಟೋನಿ ಬೇಗೂರು ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.…
ಪಾವಗಡ: ಯುವಕರು ದುಶ್ಚಟಕ್ಕೆ ಬಲಿಯಾಗದೆ, ನಿಮ್ಮನ್ನು ಹೆತ್ತು ಹೊತ್ತು ಕಷ್ಟ ಪಟ್ಟು ಸಾಕಿದ ತಂದೆ ತಾಯಂದಿರನ್ನು ಸುಖವಾಗಿ ಜೀವಿಸಲು ಪಣ ತೊಡುವಂತೆ ವೈ. ಎನ್. ಹೊಸಕೋಟೆ. ಪಿ. ಎಸ್. ಐ. ಭಾರತಿ ಯುವ ಸಮುದಾಯವನ್ನು ಜಾಗೃತಿಗೊಳಿಸಿದರು. ಸಂತ ಸೇವಾಲಾಲ್ 283ನೇ ಜಯಂತಿ ಹಾಗೂ ಹೆಲ್ಪ್ ಸೊಸೈಟಿ ವತಿಯಿಂದ ವೈ. ಎನ್ ಹೊಸಕೋಟೆ ಹೋಬಳಿ ಮೆಗಲಪಾಳ್ಯ ದೊಡ್ಡ ಹಟ್ಟಿ ತಾಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಇದೇ ವೇಳೆ ಮನವಿ ಮಾಡಿದರು. ಸಂತ ಸೇವಾಲಾಲ್ ಜಯಂತಿ ಪೂಜಾ ಹಾಗೂ ಶಾಲಾ ಮಕ್ಕಳಿಗೆ ಹೆಲ್ಪ್ ಸೊಸೈಟಿ ವತಿಯಿಂದ ಬ್ಯಾಗ್ ವಿತರಿಸಿ ಮಾತನಾಡಿದ ಸಮಾಜ ಸೇವಕ, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಮಕ್ಕಳು ವಿದ್ಯಾವಂತರಾಗಿ ಶಿಕ್ಷಣ ನೀಡಿದ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು. ಗ್ರಾಮದ ಅಭಿವೃದ್ಧಿಯ…
ತುರುವೇಕರೆ: ಕಳೆದ ಹಲವು ವರ್ಷಗಳಿಂದ ಮಾಯಸಂದ್ರ ಹೋಬಳಿ ಘಟಕದ ಕನ್ನಡ ಸಾಹಿತ್ಯ ಪರಿಷತ್’ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಆರ್.ಜಯರಾಮ್’ರವರನ್ನು ಕ.ಸಾ.ಪ ತುರುವೇಕೆರೆ ಘಟಕದ “ಮಹಾಪೋಷಕ “ರನ್ನಾಗಿ ಆಯ್ಕೆ ಮಾಡಲಾಗಿದೆ. ಮಾಯಸಂದ್ರದ ಕನ್ನಡ ಭವನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷರಾದ ಡಿ.ಪಿ.ರಾಜುರವರು ” ಎನ್.ಆರ್.ಜಯರಾಮ್’ರವರು ಹೋಬಳಿ ಘಟಕದ ಅಧ್ಯಕ್ಷರಾಗಿ ಮಾಡಿದ ಕನ್ನಡ ತಾಯಿಯ ಸೇವೆಯನ್ನು ಗುರುತಿಸಿ ಅವರ ಸೇವೆ ತಾಲ್ಲೂಕಿಗೂ ದೊರೆಯಲಿ ಎಂಬ ಆಶಯದಿಂದ ಅವರಿಗೆ ಈ ಸ್ಥಾನ ನೀಡಲಾಗಿದೆ ” ಎಂದು ತಿಳಿಸಿದರು. ವರದಿ: ವೆಂಕಟೇಶ ಜೆ.ಎಸ್ ( ವಿಕ್ಕಿ ) ಮಾಯಸಂದ್ರ. ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ. ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB