Subscribe to Updates
Get the latest creative news from FooBar about art, design and business.
- ಕಾಡಾನೆ ಹಾವಳಿ ತಡೆಗೆ ‘ಎಐ’ ತಂತ್ರಜ್ಞಾನ: ಅರಣ್ಯ ಇಲಾಖೆಯಿಂದ ಹೊಸ ಪ್ರಯೋಗ
- ಅರಣ್ಯ ಇಲಾಖೆ ಸಿಬ್ಬಂದಿಗೆ ಬಂಪರ್ ಕೊಡುಗೆ: 1 ಕೋಟಿ ರೂ. ಅಪಘಾತ ವಿಮೆ ಘೋಷಿಸಿದ ಸಚಿವ ಈಶ್ವರ ಖಂಡ್ರೆ
- ಭಾರತದಲ್ಲಿ ಜಾತಿಭೇದ ಸೃಷ್ಟಿಸಿದ ಮನುಸ್ಮೃತಿಯನ್ನು ಅಂಬೇಡ್ಕರ್ ಸುಟ್ಟ ದಿನ: ಸರಗೂರಿನಲ್ಲಿ ಅರ್ಥಪೂರ್ಣ ಆಚರಣೆ
- ತಿಪಟೂರು | ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ
- ಗುಬ್ಬಿ: SBI ಬ್ಯಾಂಕ್ ನ ಎಟಿಎಂನಿಂದ ಹಣ ದೋಚಿದ ಕಳ್ಳರು
- ಚಿತ್ರದುರ್ಗ: ಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ಬಸ್: 9ಕ್ಕೂ ಹೆಚ್ಚು ಪ್ರಯಾಣಿಕರ ಸಾವು
- ಶ್ರವಣೂರು: ಪಿಡಿಒ ವಿರುದ್ಧ ಸೂಕ್ತ ಕಾನೂನು ಕ್ರಮದ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟ ಸಂಘಟನೆಗಳು
- ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು
Author: admin
ತುಮಕೂರು: ತಾಲ್ಲೂಕಿನ ಬೆಳ್ಳಾವಿಯಲ್ಲಿ ನ.27 ರಂದು ಸಂಜೆ 4 ಗಂಟೆಗೆ ಬಸ್ ನಿಲ್ದಾಣ, ಬೆಳ್ಳಾವಿ ಇಲ್ಲಿ 538ನೇ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿ ಮತ್ತು 70ನೇ ಕನ್ನಡ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಕನಕ ಯುವಕ ಸಂಘ ಹಾಗೂ ಹಾಲು ಮತ ಮಹಾಸಭಾ ತುಮಕೂರು ಗ್ರಾಮಾಂತರ ಘಟಕ ಇವರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಾಗಿನೆಲೆ ಮಹಾ ಸಂಸ್ಥಾನ ಮಠದ ಶ್ರೀ ನಿರಂಜನಾನಂದಪುರಿ ಸ್ವಾಮಿಗಳು, ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮಿಗಳು, ಶ್ರೀ ರೇವಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ ಒಡೆಯರ್, ಕಾರದೇಶ್ವರ ಮಠದ ಶ್ರೀ ಕಾರದವೀರಬಸವ ಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಮಾಜಿ ವಿ.ಪ.ಸದಸ್ಯರಾದ ಡಾ.ಎಂ.ಆರ್.ಹುಲಿನಾಯ್ಕರ್ ವಹಿಸಲಿದ್ದು, ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಶ್ರೀನಿವಾಸ್ ನೆರವೇರಿಸುವರು. ಬಿಎಂಟಿಸಿ ವಕ್ತಾರ ನಿಖಿತಾಜ್ ಮಾರ್ಯ ಭಾಷಣಕಾರರಾಗಿ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಡಾ.ಎಸ್.ನಾಗಣ್ಣ, ಲಕ್ಷ್ಮೀನರಸಿಂಹರಾಜು, ಟಿ.ಆರ್. ಸುರೇಶ್, ಮೈಲಪ್ಪ, ಸತೀಶ್, ರಘುರಾಂ, ಪುಟ್ಟರಾಜು, ಅನಿಲ್‌ಕುಮಾರ್, ಬಿ.ಸಿ.ಉಮೇಶ್, ಇಂದ್ರಣ್ಣ, ಬಿ.ಎಸ್.ಮಂಜುನಾಥ್, ಗರುಡಪ್ಪ, ಮೂರ್ತಪ್ಪ…
ತಿಪಟೂರು: ನಗರದಲ್ಲಿ ನಡೆದ 96ನೇ ವರ್ಷದ ಸತ್ಯ ಗಣಪತಿ ಮಹೋತ್ಸವ ಹಾಗೂ ಕಲ್ಪೋತ್ಸವ ಕಾರ್ಯಕ್ರವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದರು. ಕಳೆದ ಐದು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಿದ್ದರು. ಮಹೋತ್ಸವದ ಮೆರವಣಿಗೆ, ಧಾರ್ಮಿಕ ಕಾರ್ಯಕ್ರಮಗಳು, ಮನರಂಜನಾ ಹಾಗೂ ಅನ್ನಸಂತರ್ಪಣೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮಹೋತ್ಸವದ ಸಂದರ್ಭದಲ್ಲಿ ನಗರದಾದ್ಯಂತ ಅನ್ನಪ್ರಸಾದ ವಿತರಣೆ, ಆಟಿಕೆ ಮತ್ತು ಭಕ್ತಸಾಮಗ್ರಿಗಳ ಖರೀದಿ ಜೋರಾಗಿದ್ದು, ಅದರ ಪರಿಣಾಮವಾಗಿ ರಸ್ತೆಗಳಲ್ಲಿ ಬಿಸಾಡಿದ ಪ್ಲಾಸ್ಟಿಕ್ ತಟ್ಟೆಗಳು, ಆಟಿಕೆಗಳ ಪ್ಲಾಸ್ಟಿಕ್ ಕವರ್‌ಗಳು, ಮಸುಕಿದ ಹೂವಿನ ಹಾರಗಳು, ಹರಿದುಬಿದ್ದ ಪ್ಲೆಕ್ಸ್ ಬೋರ್ಡ್‌ಗಳು ಮತ್ತು ಇತರೆ ಕಸದ ರಾಶಿ ಕಂಡುಬಂದಿದ್ದವು. ನಗರಸಭೆಯ ಪೌರಕಾರ್ಮಿಕರು ನಿನ್ನೆ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಕಾರ್ಯಪ್ರವೃತ್ತರಾಗಿ ಸಂಜೆವರೆಗೂ ನಿರಂತರವಾಗಿ ಶ್ರಮಿಸಿ, ಸಂಪೂರ್ಣವಾಗಿ ನಗರವನ್ನು ಸ್ವಚ್ಛಗೊಳಿಸಿದರು. ಪ್ರತಿಯೊಂದು ಉತ್ಸವಗಳು ಜಾತ್ರೆಗಳು ನಡೆದ ನಂತರ ನಗರವನ್ನು ಸ್ವಚ್ಛವಾಗಿಡಲು, ನಗರದ ನೈರ್ಮಲ್ಯ ಕಾಪಾಡಲು ರಸ್ತೆಗಿಳಿಯುವ ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಸಮಾಜದಲ್ಲಿ ಗೌರವ ನೀಡಬೇಕಿರುವುದು…
ಸರಗೂರು: ಪಟ್ಟಣದ ಒಂದನೇ ಮುಖ್ಯ ರಸ್ತೆಯ ಎಸ್ ಬಿಐ ಬ್ಯಾಂಕ್ ಪಕ್ಕದಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿ ಖಾತೆದಾರರು ಹಾಗೂ ಪ್ರಗತಿಪರ ಸಂಘಟನೆಗಳು ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಿದರು. ಆರ್ಯ ಈಡಿಗ ಸಮಾಜದ ತಾಲ್ಲೂಕು ಅಧ್ಯಕ್ಷ ಎಸ್.ಎನ್.ನಾಗರಾಜು ಮಾತನಾಡಿ, ಖಾತೆದಾರರ ಹಣವನ್ನು ಲೂಟಿ ಮಾಡಿರುವ ವ್ಯಕ್ತಿ ಯಾವುದೇ ಕ್ರಮ ಕೈಗೊಳ್ಳದೇ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇಲಾಖೆ ತನಿಖಾಧಿಕಾರಿಗಳು, ಆರು ತಿಂಗಳು ಕಳೆದರೂ ಇವರ ಮೇಲೆ ದೂರು ದಾಖಲಿಸಿಲ್ಲ, ಇವರು ಅಂಚೆ ಇಲಾಖೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ದೂರಿದರು. ಖಾತೆದಾರಿಗೆ ಹಣವನ್ನು ವರ್ಗಾವಣೆ ಮಾಡಿಲ್ಲ ಎಂದಾದರೆ ಪಟ್ಟಣವನ್ನು ಬಂದ್ ಮಾಡಿಸಿ ನಂತರ ಅಂಚೆ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕುವ ಮೂಲಕ ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು. ಖಾತೆದಾರರು ಎಲ್ಲಾ ವಯಸ್ಸಾದವರಿಗೆ ಏನಾದರೂ ಸಮಸ್ಯೆಯಾದರೆ ಅಂಚೆ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಕಿಡಿಕಾರಿದ್ದರು. ವಯಸ್ಸಾರು ತಮ್ಮ ಜೀವನಕ್ಕೆ ಇಟ್ಟುಕೊಂಡಿದ್ದ ಹಣವನ್ನು ಅಂಚೆ ಕಚೇರಿ…
ಸರಗೂರು: ತಾಲೂಕಿನ ಹಂಚೀಪುರ ಹಾಗೂ ಹೆಗ್ಗನೂರು ಸಮೀಪ ಆಗಾಗ್ಗೆ ಕಾಣಿಸಿಕೊಂಡು, ಜಾನುವಾರುಗಳನ್ನು ಬಲಿಪಡೆಯುವ ಮೂಲಕ ಅಕ್ಕಪಕ್ಕದ ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದ್ದ ಹುಲಿಯನ್ನು ಮಂಗಳವಾರ ಬೆಳಗಿನ ಜಾವ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮಂಗಳವಾರ ಬೆಳಗ್ಗಿನ ಜಾವ 3 ಗಂಟೆ ಸಮಯದಲ್ಲಿ ಹೆಗ್ಗನೂರು ಸಮೀಪದ ದೇವಲಾಪುರದ ಪುರದಶೆಡ್ಡು ಬಳಿಯ ಅಳಗಂಚಿ ವಲಯದ ಕಾಡಂಚಿನ ಭಾಗದ ಜಮೀನೊಂದರಲ್ಲಿ ಹುಲಿ ಇರುವ ಖಚಿತ ಮಾಹಿತಿ ಮೇರಿಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸುಮಾರು 6–7 ವರ್ಷದ ಗಂಡು ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಹಂಚೀಪುರ ಹಾಗೂ ಹೆಗ್ಗನೂರು ವ್ಯಾಪ್ತಿಯ ಗ್ರಾಮಗಳಲ್ಲಿ ಜಾನುವಾರುಗಳನ್ನು ಈ ಹುಲಿ ಬಲಿ ಪಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ ವಾರದ ಹಿಂದಷ್ಟೇ ಈ ಹುಲಿ ಸಂಚಾರ ಮಾಡಿದ ಫೋಟೋಗಳು ಅರಣ್ಯ ಇಲಾಖೆಯ ಕ್ಯಾಮೆರಾಗೆ ಸೆರೆಯಾಗಿತ್ತು. ಹುಲಿ ಚಿತ್ರ ನೋಡಿ ಆತಂಕಗೊಂಡ ಗ್ರಾಮಸ್ಥರು ಹುಲಿಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಹಂಚೀಪುರದಲ್ಲಿ ರಸ್ತೆ ತಡೆದು ಪ್ರತಿಭಟನೆಯನ್ನೂ ನಡೆಸಿದ್ದರು. ಸ್ಥಳೀಯರ ಒತ್ತಾಯಕ್ಕೆ…
ಕೊರಟಗೆರೆ: ತಾಲ್ಲೂಕಿನ ದಾಸಾಲುಕುಂಟೆ ಸಮೀಪದ ಬೆಟ್ಟದ ಶಂಭೋನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಡಿ.1, 2 ರಂದು ಶ್ರೀ ಹನುಮ ಜಯಂತಿ ಹಾಗೂ ದೇವಾಲಯದ 17 ನೇ ವರ್ಷದ ವಾರ್ಷಿಕೋತ್ಸವ ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವಾಮಿಯ ಉತ್ಸವ ಹಾಗೂ 2ನೇ ವರ್ಷದ ಸೀತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದ್ದು, ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತುಮಕೂರು: ಭಾರತ್ ಸ್ಕೌಟ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷರು (ಗೈಡ್), ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಆಶಾ ಪ್ರಸನ್ನ ಕುಮಾರ್ ರವರು ಸ್ಕೌಟ್ ಸಂಸ್ಥೆಯಲ್ಲಿ ಸಕ್ರಿಯವಾಗಿ ಸತತ 35 ವರ್ಷಗಳಿಂದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸ್ಕೌಟ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು, ಬೆಳವಣಿಗೆಗಳು ಮತ್ತು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಕಾರ್ಯಕ್ರಮಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ರಾಷ್ಟ್ರ ಸಂಸ್ಥೆಯವರು ರಾಷ್ಟ್ರಮಟ್ಟದ ಸಿಲ್ವರ್ ಸ್ಟಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯುವ 75 ರಾಷ್ಟ್ರೀಯ ಜಾಂಬೂರಿಯಲ್ಲಿ ನ.26ರಂದು ರಾಜ್ಯಭವನದಲ್ಲಿ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ರವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ವೇಳೆ ಆಶಾ ಪ್ರಸನ್ನ ಕುಮಾರ್ ಅವರನ್ನು ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್. ಸಿಂಧ್ಯಾ ಅಭಿನಂದಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಕನ್ನಡಿಗರು ಕಾನೂನನ್ನು ರೂಪಿಸಿ ನೀತಿ ಯೋಜನೆ ಜಾರಿಗೆ ತರಬೇಕು : ಚೇತನ್ ಅಹಿಂಸಾ ನೆಲಮಂಗಲ : ಪಟ್ಟಣದ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ಕರ್ನಾಟಕ ರಣಧೀರರ ವೇದಿಕೆಯ 6ನೇ ವರ್ಷದ ವೈಭವ ಕನ್ನಡ ರಾಜ್ಯೋತ್ಸವ ಹಾಗೂ ತಾಯಿ ಭುವನೇಶ್ವರಿಯ ಹಬ್ಬ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 2025 ರ ಹೊಯ್ಸಳ ವಿಶಿಷ್ಟ ಸೇವಾ ಪ್ರಶಸ್ತಿ ಸಮಾರಂಭವು ನಡೆಯಿತು. ತಾಯಿ ಭುವನೇಶ್ವರಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅದ್ದೂರಿ ಕಾರ್ಯಕ್ರಮವನ್ನು ಶ್ರೀ ಪವಾಡ ಬಸವಣ್ಣ ದೇವರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಜಿ, ಕುಂಚಿಟಿಗರ ಮಹಾಸಂಸ್ಥಾನ ಎಲೆರಾಂಪುರ ಮಠದ ಶ್ರೀ ಶ್ರೀ ಹನುಮಂತನಾಥ ಸ್ವಾಮೀಜಿ, ವನಕಲ್ಲು ಮಹಾಸಂಸ್ಥಾನ ಮಠದ ಶ್ರೀ ಶ್ರೀ ಬಸವ ರಮಾನಂದ ಸ್ವಾಮೀಜಿಗಳು ದೀಪ ಬೆಳಗುವ ಮೂಲಕ…
ತುಮಕೂರು: ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ ಹಾಗೂ ಜೀವಂತ ಮೀನು ಮಾರಾಟ ಮಳಿಗೆಗಾಗಿ ಸಹಾಯಧನ ಸೌಲಭ್ಯ ಕಲ್ಪಿಸಲು ಮೀನುಗಾರಿಕೆಯಲ್ಲಿ ತೊಡಗಿರುವ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡ ಎಣ್ಣೆಗೆರೆ ಗ್ರಾಮ ಪಂಚಾಯತಿಯ ದೊಡ್ಡಹುಲ್ಲೇನಹಳ್ಳಿ, ಮತ್ತಿಘಟ್ಟ ಗ್ರಾಪಂ, ಮಾದಾಪುರ, ಬರಕನಾಳು ಗ್ರಾಪಂ, ಹಂದಿಗನಾಡು ಹಾಗೂ ರಾಮನಹಳ್ಳಿ ಗ್ರಾಪಂ, ಜಾಣೇಹಾ, ಶಿರಾ ತಾಲ್ಲೂಕು ರಾಮಲಿಂಗಪುರ ಗ್ರಾಪಂ, ಕುಂಬಾರಹಳ್ಳಿ, ಮಾರಗೊಂಡನಹಳ್ಳಿ, ಗೋಪಾಲದೇವರಹಳ್ಳಿ ಗ್ರಾಪಂ, ಬಟ್ಟಿಗಾನಹಳ್ಳಿ ಸಿದ್ಧಕೋಣ, ಚಿನ್ನೇನಹಳ್ಳಿ ಗ್ರಾಪಂ, ಜೋಡಿದೇವರಹಳ್ಳಿ, ಸಲುಪರಹಳ್ಳಿ: ಪಾವಗಡ ತಾಲ್ಲೂಕು ಪೋತಗಾನಹಳ್ಳಿ ಗ್ರಾಪಂ. ದಳವಾಯಿಹಳ್ಳಿ, ಹೊಸದುರ್ಗ, ಚಿಕ್ಕನಹಳ್ಳಿ ಗ್ರಾಪಂ, ಹನುಮನಬೆಟ್ಟ, ರಂಗಸಮುದ್ರ ಗ್ರಾ.ಪಂ. ರಂಗಸಮುದ್ರ, ಬೆಳ್ಳಿಬಟ್ಟು, ಮರಿದಾಸನಹಳ್ಳಿ ಗ್ರಾಪಂ. ಹನುಮಂತನಹಳ್ಳಿ, ನ್ಯಾಯದಗುಂಟೆ ಗ್ರಾಪಂ. ಹೊಟ್ಟೆಬೊಮ್ಮನಹಳ್ಳಿ, ಮಧುಗಿರಿ ತಾಲ್ಲೂಕು ಹೊಸಕೆರೆ ಗ್ರಾಪಂ, ಬಸವನಹಳ್ಳಿ, ಚಿಕ್ಕದಾಳವಟ್ಟ ಗ್ರಾ.ಪಂ. ವಿಟ್ಲಾಪುರ, ಕೊಡಿಗೇನಹಳ್ಳಿ ಗ್ರಾಪಂ, ಗುಟ್ಟೆ, ಸಿಂಗನಹಳ್ಳಿ ಗ್ರಾ.ಪಂ.…
ತುಮಕೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು, ಸ್ವತಂತ್ರ ಸಂವಿಧಾನ ರಚನೆ ಮಾಡಿಕೊಂಡರೂ ನಗರಗಳು ಮಾತ್ರ ಸ್ವಚ್ಛವಾಗಿಲ್ಲ. ಸಂವಿಧಾನದ ಆಶಯದ ಅಡಿಯಲ್ಲಿ ಕೊಳೆಗೇರಿಗಳು ನವನಗರ ಆಗಬೇಕೆಂದು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ ಪ್ರಕಾಶ್ ಎಂ. ಶೇಟ್ ತಿಳಿಸಿದರು. ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣ ಸಮಿತಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಲಾಗಿದ್ದ `ಮನ-ಮನೆಗೂ ಸಂವಿಧಾನ ಕುರಿತು ಸಂವಾದ ಕಾರ್ಯಕ್ರಮ’ವನ್ನು ಸೋಮವಾರ ಉದ್ಘಾಟಿಸಿದರು. ಕೊಳಗೇರಿ ಎಂಬುದು ಭೌತಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಬದಲಾಗಬೇಕು. ಸಂವಿಧಾನದ ಆಶಯದ ಅಡಿಯಲ್ಲಿ ತಾರತಮ್ಯ ರಹಿತ ಸಮ ಸಮಾಜವನ್ನು ಕಟ್ಟಬೇಕು. ಹಾಗಾಗಿ ಈ ಮನ ಸಂವಿಧಾನ ಕಾರ್ಯಕ್ರಮ ಚಾಲನೆಯಾಗಿದೆ. ಅದರ ಅನುಕೂಲವನ್ನು ಪ್ರತಿಯೊಬ್ಬರು ಪಡೆದುಕೊಂಡು ಸಂವಿಧಾನವನ್ನು ಅರ್ಥೈಸಿಕೊಳ್ಳಬೇಕು. ಹಾಗಾದರೆ ಮಾತ್ರ ಸಂವಿಧಾನಕ್ಕೆ ಸಂವಿಧಾನ ರಚನಕಾರರಿಗೆ ನಾವು ನೀಡುವ ಗೌರವವಾಗುತ್ತದೆ ಎಂದು ತಿಳಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಹಪ್ರಾಧ್ಯಾಪಕ ಡಾ. ನಾಗಭೂಷಣ ಬಗ್ಗನಡು, ಭಾರತದಲ್ಲಿ 3600 ಕ್ಕೂ ಅಧಿಕ ಜಾತಿಗಳಿವೆ. ಸಾಕಷ್ಟು…
ತುಮಕೂರು: ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಒಂದು ಸಾವಿರ ಜನ ಆಟೋ, ಆಂಬುಲೆನ್ಸ್ ಹಾಗೂ ಟ್ಯಾಕ್ಸಿ ಚಾಲಕರಿಗೆ ಉಚಿತವಾಗಿ 10 ಲಕ್ಷ ರೂ. ಮೌಲ್ಯದ ಅಪಘಾತ ವಿಮಾ ಸೌಲಭ್ಯ ನೀಡಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಕ್ಷಿತ್ ಕರಿಮಣ್ಣೆ ತಿಳಿಸಿದ್ದಾರೆ. ನ.30ರಂದು ನಗರದ ಭದ್ರಮ್ಮ ವೃತ್ತದಲ್ಲಿ ಬೆಳಿಗ್ಗೆ 10:30ಕ್ಕೆ ಜನಸೈನ್ಯದಿಂದ ಕನ್ನಡ ರಾಜ್ಯೋತ್ಸವ ಏರ್ಪಡಿಸಲಾಗಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿಗಳು, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯಸಾನಿಧ್ಯದ ಈ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಕನ್ನಡ ಧ್ವಜಾರೋಹಣ ನೆರವೇರಿಸುವರು. ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಎರಿಸ್ವಾಮಿ ಅಧ್ಯಕ್ಷತೆವಹಿಸುವರು ಎಂದು ಹೇಳಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮುಖಂಡರಾದ ಎನ್.ಗೋವಿಂದರಾಜು, ಮುರಳಿಧರ ಹಾಲಪ್ಪ, ಇಟ್ಬಾಲ್ ಅಹ್ಮದ್, ನಗರಪಾಲಿಕೆ ಆಯುಕ್ತ ಅಶ್ವಿಜ, ಎಸ್ಪಿಕೆ.ವಿ.ಅಶೋಕ್, ಡಿವೈಎಸ್ ಪಿ ಚಂದ್ರಶೇಖರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…