Subscribe to Updates
Get the latest creative news from FooBar about art, design and business.
- ದೇಶದಲ್ಲಿ ಎಲ್ ಪಿಜಿ ಸಿಲಿಂಡರ್ ಕೊರತೆ: ತುಟಿಬಿಚ್ಚದ ಬಿಜೆಪಿ ಸಂಸದರು: ಡಿ.ಕೆ.ಶಿವಕುಮಾರ್ ವಾಗ್ದಾಳಿ
- LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ 25 ದಿನಗಳ ಅಂತರ ಕಡ್ಡಾಯ!
- ರಾಜ್ಯದ 183 ಗ್ರಾಮಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ
- ನೇಮಕಾತಿಯಲ್ಲಿ ಶೇ.7ರಷ್ಟು ಮೀಸಲಾತಿಗೆ ವಾಲ್ಮೀಕಿ ಸಮುದಾಯ ಒತ್ತಾಯ: ಮಾರ್ಚ್ 11ರಂದು ಪ್ರತಿಭಟನೆ
- ಹಂಪಲಾಪುರ: ಭೂಮಿ ಹಕ್ಕಿಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
- ಗುಬ್ಬಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಸ್ಕಾಂ ಕಚೇರಿ ಮುಂದೆ ರೈತರಿಂದ ಪ್ರತಿಭಟನೆ
- ಒಳ ಮೀಸಲಾತಿ ಜಾರಿಗೆ ಆಗ್ರಹ: ಮಾದರ ಮಹಾಸಭಾವತಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ
- ಔರಾದ್: ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಭೀಮಸೇನರಾವ್ ಸಿಂದೆ ₹2.50 ಲಕ್ಷ ಆರ್ಥಿಕ ನೆರವು
Author: admin
ಪಾವಗಡ: ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಅವಧಿಯಲ್ಲಿ ಎರಡು ಪ್ರತ್ಯೇಕ ಪೋಕ್ಸೋ (POCSO) ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲ ಪ್ರಕರಣ: 3ನೇ ತರಗತಿ ಬಾಲಕಿಯ ಮೇಲೆ ದೌರ್ಜನ್ಯ ತಾಲ್ಲೂಕಿನ ಗ್ರಾಮವೊಂದರ 3ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮನು (23) ಎಂಬ ಯುವಕನನ್ನು ಅರಸೀಕೆರೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಸಿಹಿ ತಿನಿಸು ಕೊಡುವುದಾಗಿ ನಂಬಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಕಿಯ ಕಿರುಚಾಟ ಕೇಳಿದ ನೆರೆಹೊರೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎರಡನೇ ಪ್ರಕರಣ: 8ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ಮತ್ತೊಂದು ಪ್ರಕರಣದಲ್ಲಿ, 8ನೇ ತರಗತಿಯ ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡಿ ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈ ಹಿಂದೆ ಈ ಯುವಕನಿಗೆ ಪೋಷಕರು ಮತ್ತು ಶಿಕ್ಷಕರು ಎಚ್ಚರಿಕೆ ನೀಡಿದ್ದರೂ…
ತುಮಕೂರು: ಸೈಬರ್ ವಂಚಕರ ಜಾಲಕ್ಕೆ ಬಿದ್ದು ಜಿಲ್ಲೆಯ ನಾಗವಲ್ಲಿಯ ವ್ಯಕ್ತಿಯೊಬ್ಬರು ಬರೋಬ್ಬರಿ 7.85 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಆರ್‌ಟಿಒ (RTO) ಹೆಸರಿನಲ್ಲಿ ಬಂದ ನಕಲಿ ಎಪಿಕೆ (APK) ಫೈಲ್ ಕ್ಲಿಕ್ ಮಾಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ನಡೆದದ್ದೇನು? ನಾಗವಲ್ಲಿಯ ನಿವಾಸಿ ರಖೀಬ್ ಅಹ್ಮದ್ ಖಾನ್ ಎಂಬುವವರಿಗೆ ಜನವರಿ 23ರಂದು ಅಪರಿಚಿತ ಸಂಖ್ಯೆಯೊಂದರಿಂದ ‘ಆರ್‌ಟಿಒ ಚಲನ್’ ಹೆಸರಿನ ಲಿಂಕ್ ಇರುವ ಎಪಿಕೆ ಫೈಲ್ ಬಂದಿತ್ತು. ಆರ್‌ಟಿಒಗೆ ಸಂಬಂಧಿಸಿದ್ದು ಎಂದು ನಂಬಿದ ರಖೀಬ್ ಅದನ್ನು ಕ್ಲಿಕ್ ಮಾಡಿದ್ದಾರೆ. ಅಂದೇ ರಾತ್ರಿ ಅವರ ವಾಟ್ಸಾಪ್ ಅಪ್‌ಡೇಟ್ ಕೇಳಿದ್ದು, ಒಟಿಪಿ (OTP) ಪಡೆದು ಅಪ್‌ಡೇಟ್ ಮಾಡಿದ್ದಾರೆ. ಈ ವೇಳೆ 3-4 ಬಾರಿ ಒಟಿಪಿ ಬಂದಿದ್ದರೂ, ಅವರು ಯಾರೊಂದಿಗೂ ಅದನ್ನು ಹಂಚಿಕೊಂಡಿರಲಿಲ್ಲ. ಹಂತ ಹಂತವಾಗಿ ಹಣ ವರ್ಗಾವಣೆ: ಯಾರೊಂದಿಗೂ ಒಟಿಪಿ ಹಂಚಿಕೊಳ್ಳದಿದ್ದರೂ, ಸೈಬರ್ ಖದೀಮರು ರಖೀಬ್ ಅವರ ಮೊಬೈಲ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಜನವರಿ 27ರಂದು ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು…
ಸಾಮಾನ್ಯವಾಗಿ ನಾವು ಮಾಹಿತಿ (Data) ಸ್ಟೋರೇಜ್ ಮಾಡಲು ಮತ್ತು ಮಾಹಿತಿ ತಿದ್ದುಪಡಿ, ಡಿಲೀಟ್, ವಿವಿಧ ಅಪ್ಲಿಕೇಷನ್ ಬಳಸಿ ವಿವಿಧ ಕಾರ್ಯ ನಿರ್ವಹಿಸಲು ಹಾರ್ಡ್ ಡಿಸ್ಕ್ ಬಳಸುತ್ತೇವೆ ಎಂದು ತಿಳಿದುಕೊಂಡಿದ್ದೇವೆ ಅಷ್ಟೇ ಆದರೆ ಅದು ಹೇಗೆ ನಿರ್ಮಾಣ ಆಗಿರುತ್ತದೆ ಮತ್ತು ಹೇಗೆ ಕೆಲಸ ಮಾಡುತ್ತದೆ ಎಂದು ಬಹುಶಃ (ಸಾಮಾನ್ಯ ಜನ) ಯೋಚಿಸಿರುವುದಿಲ್ಲ, ಹಾಗೆ ಯೋಚಿಸಿದ್ದರೂ ಕೆಲವು ಮಂದಿ ಇರಬಹುದು. ನಾನು ಇಲ್ಲಿ ಅದರ ನಿರ್ಮಾಣ ಮತ್ತು ಕಾರ್ಯನಿರ್ವಹಿಸುವ ವಿಧಾನವನ್ನು ಅತ್ಯಂತ ಸರಳವಾಗಿ ವಿವರಿಸಲು ಪ್ರಯತ್ನಿಸಿದ್ದೇನೆ. ಹಾರ್ಡ್ ಡಿಸ್ಕ್ ಬಹುಶಃ ಇದರ ಬಳಕೆ ಇರದ ಕ್ಷೇತ್ರವೇ ಇಲ್ಲ ಎನ್ನಬಹುದು. ಮನೆಯಲ್ಲಿ ಅಧ್ಯಯನದ ದೃಷ್ಟಿಯಿಂದ ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ನಿಂದ ಹಿಡಿದು, ವಾಣಿಜ್ಯ, ವಿಜ್ಞಾನ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಇದರ ಬಳಕೆ ಇದೆ. ನಾವು ಸಾವಿರಾರು ವರ್ಷಗಳ ಹಿಂದೆ ನಮ್ಮ ಋಷಿ ಮುನಿಗಳು ರಾಮಾಯಣ, ಮಹಾಭಾರತ ಮತ್ತು ವೇದೋಪನಿಷತ್ತುಗಳನ್ನು ದೇವ ಭಾಷೆ ಅಥವಾ ಸಂಸ್ಕೃತ ಭಾಷೆಯ ಸಾವಿರ ಸಾವಿರ ಪುಟಗಳಷ್ಟು ಬರೆದಿಡುವ…
ತುಮಕೂರು: ಜಿಲ್ಲೆಯ ಕೊಡಿಗೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಹಿನ್ನೆಲೆ: ಜನವರಿ 16, 2026 ರಂದು ನಿಟ್ರಹಳ್ಳಿಯ ನಿವಾಸಿಯಾದ ವಿನಯ್ ಕುಮಾರ್ ಎನ್.ಕೆ. ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು. ಅವರ ಗೋದಾಮಿನಲ್ಲಿದ್ದ 265 ಅಡಿಕೆ ಚೀಲಗಳಲ್ಲಿ ಸುಮಾರು 40 ಚೀಲ (ಅಂದಾಜು 19 ಕ್ವಿಂಟಾಲ್) ಅಡಿಕೆಯನ್ನು ಕಿಡಿಗೇಡಿಗಳು ತಡರಾತ್ರಿ ಕಳ್ಳತನ ಮಾಡಿದ್ದರು. ಈ ಅಡಿಕೆಯ ಮೌಲ್ಯ ಸುಮಾರು 9,50,000 ರೂ. ಎಂದು ಅಂದಾಜಿಸಲಾಗಿತ್ತು. ಈ ಸಂಬಂಧ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾ ತಂಡ ಮತ್ತು ಕಾರ್ಯಾಚರಣೆ: ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ. (IPS) ರವರ ಮಾರ್ಗದರ್ಶನದಲ್ಲಿ, ಮಧುಗಿರಿ ಉಪ ವಿಭಾಗದ ಡಿವೈಎಸ್ಪಿ ಮಂಜುನಾಥ್ ಜಿ ಹಾಗೂ ಮಧುಗಿರಿ ವೃತ್ತದ ಸಿಪಿಐ ಹನುಮಂತರಾಯಪ್ಪ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪಿಎಸ್ಐ ಶ್ರೀನಿವಾಸ ಪ್ರಸಾದ್…
ತುಮಕೂರು: ಲಂಚ ಪಡೆಯುತ್ತಿದ್ದ ವೇಳೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಚೇತನ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವರದಿಗಳ ಪ್ರಕಾರ, ಠಾಣೆಯ ವಶದಲ್ಲಿ ಇದ್ದ ವಾಹನ ಒಂದನ್ನು ಬಿಡುಗಡೆಗಾಗಿ ಪೊಲೀಸ್ ಸಬ್ ಇನ್ಸೆಕ್ಟರ್ ಚೇತನ್ ರವರು ಬೆಂಗಳೂರು ಮೂಲದ ವಕೀಲರೊಬ್ಬರಿಗೆ 40,000 ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಾಗಾಗಿ ವಕೀಲರು ಲೋಕಾಯುಕ್ತ ಪೊಲೀಸರ ಮೊರೆ ಹೋದ ಕಾರಣ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರು ಲೋಕಾಯುಕ್ತ ಟ್ರ್ಯಾಪ್ ಬಿದ್ದಿದ್ದಾರೆ. ಕಳೆದ ರಾತ್ರಿ 11:30 ಸಂದರ್ಭದಲ್ಲಿ ತುಮಕೂರಿನ ಕ್ಯಾತ್ಸಂದ್ರ ಬಳಿಯ ನಮಸ್ತೆ ತುಮಕೂರು ಹೊಟೇಲ್ ಬಳಿ ರೂ. 40,000 ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದೇ ಸಂದರ್ಭದಲ್ಲಿ ಪಿಎಸ್ ಐ ಚೇತನ್ ಹಾಗೂ ಹೋಟೆಲ್ ನ ಸಿಬ್ಬಂದಿ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ದಾಳಿಯಲ್ಲಿ ರೆಡ್ ಹ್ಯಾಂಡಾಗಿ ಬಲೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ತುಮಕೂರು ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…
ಬೆಂಗಳೂರು: ಸ್ಯಾಂಡಲ್ ವುಡ್‌ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಶೀಘ್ರದಲ್ಲೇ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಪತ್ನಿ ಧನ್ಯತಾ ಅವರೊಂದಿಗೆ ಜೀವನದ ಹೊಸ ಹಂತಕ್ಕೆ ಕಾಲಿಡುತ್ತಿರುವ ನಟ, ತಮ್ಮ ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಧನಂಜಯ್, ತಾನು ತಂದೆಯಾಗುತ್ತಿರುವ ವಿಷಯ ಇನ್‌ಸ್ಟಾಗ್ರಾಮ್‌ಗೂ (Instagram) ತಿಳಿದಂತಿದೆ ಎಂದು ತಮಾಷೆಯಾಗಿ ಹೇಳಿದ್ದಾರೆ. “ಈಗ ಇನ್‌ಸ್ಟಾಗ್ರಾಮ್ ಓಪನ್ ಮಾಡಿದರೆ ಸಾಕು, ಮಗುವಿಗೆ ಸಂಬಂಧಿಸಿದ ರೀಲ್ಸ್‌ಗಳೇ ಬರುತ್ತವೆ. ನಾನು ತಂದೆಯಾಗುತ್ತಿರುವ ವಿಚಾರ ಆಲ್ಗರಿದಮ್‌ಗೆ ಕೂಡ ಗೊತ್ತಾಗಿಬಿಟ್ಟಿದೆ” ಎಂದು ನಗುತ್ತಾ ತಿಳಿಸಿದ್ದಾರೆ. ಈ ಹೊಸ ಜವಾಬ್ದಾರಿ ಮತ್ತು ಜೀವನದ ಸುಂದರ ಬದಲಾವಣೆಯನ್ನು ಬಹಳ ಖುಷಿಯಿಂದ ಎಂಜಾಯ್ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಧನಂಜಯ್ ಮತ್ತು ಧನ್ಯತಾ ದಂಪತಿಗಳ ಈ ಸಂತಸದ ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮತ್ತು ಸಿನಿ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಧನಂಜಯ್ ಅವರು ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ವೈಯಕ್ತಿಕ ಜೀವನದ ಈ ಸುಂದರ ಕ್ಷಣಗಳನ್ನು ಸಂಭ್ರಮಿಸುತ್ತಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ…
ಬೆಂಗಳೂರು: ರಾಜ್ಯದ ರೈತರಿಗೆ ಹಾಗೂ ಭೂ ಮಾಲೀಕರಿಗೆ ಕಂದಾಯ ಇಲಾಖೆಯು ಮಹತ್ವದ ಸುದ್ದಿಯೊಂದನ್ನು ನೀಡಿದೆ. ಜಮೀನಿನ ಮೂಲ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ಅವರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡುವ ‘ಪೌತಿ ಖಾತೆ’ ಪ್ರಕ್ರಿಯೆಯನ್ನು ಸರ್ಕಾರ ಈಗ ಅತ್ಯಂತ ಸರಳಗೊಳಿಸಿದೆ. ಇದಕ್ಕಾಗಿ ಕಂದಾಯ ಇಲಾಖೆಯು ‘ಇ-ಪೌತಿ’ (e-Pouthi) ಎಂಬ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದೆ. ಮನೆ ಬಾಗಿಲಿಗೆ ಸೇವೆ: ಇನ್ಮುಂದೆ ಪೌತಿ ಖಾತೆ ಮಾಡಿಸಲು ರೈತರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಗ್ರಾಮ ಆಡಳಿತಾಧಿಕಾರಿಗಳೇ (VA) ನೇರವಾಗಿ ರೈತರ ಮನೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಆಧಾರ್ ಜೋಡಣೆ ಕಡ್ಡಾಯ: ಪಹಣಿಗಳಿಗೆ (RTC) ಆಧಾರ್ ಸಂಖ್ಯೆಯನ್ನು ಜೋಡಿಸುವ ಮೂಲಕ ಮೃತ ಮಾಲೀಕರ ಜಮೀನನ್ನು ಸುಲಭವಾಗಿ ಗುರುತಿಸಿ, ವಾರಸುದಾರರಿಗೆ ಹಕ್ಕು ವರ್ಗಾವಣೆ ಮಾಡಲಾಗುತ್ತಿದೆ. ದಾಖಲೆಗಳ ಸರಳೀಕರಣ: ಮರಣ ಪ್ರಮಾಣಪತ್ರ ಪಡೆಯಲು ವಿಳಂಬವಾಗುವ ಸಂದರ್ಭದಲ್ಲಿ, ವಾರಸುದಾರರ ಅಫಿಡವಿಟ್ ಮತ್ತು ಗ್ರಾಮ ಆಡಳಿತಾಧಿಕಾರಿಯವರ ‘ಮಹಜರ್’ ವರದಿ ಆಧಾರದ ಮೇಲೆ ಪೌತಿ ಖಾತೆ ನೀಡಲು ಅವಕಾಶ ನೀಡಲಾಗಿದೆ. ಇ-ಪೌತಿ…
ಬೆಂಗಳೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಸಂಜೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಘಟನೆಯ ಹಿನ್ನೆಲೆ: ಹಣ ಹೂಡಿಕೆ ವಂಚನೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ನೆರವು ನೀಡಲು ಮತ್ತು ಅವರನ್ನು ಬಂಧಿಸದಿರಲು ಇನ್ಸ್‌ಪೆಕ್ಟರ್ ಗೋವಿಂದರಾಜು ಒಟ್ಟು 5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಈಗಾಗಲೇ 1 ಲಕ್ಷ ರೂಪಾಯಿಗಳನ್ನು ಪಡೆದಿದ್ದ ಅವರು, ಬಾಕಿ ಇರುವ 4 ಲಕ್ಷ ರೂಪಾಯಿಗಳನ್ನು ಸ್ವೀಕರಿಸಲು ಮೈಸೂರು ರಸ್ತೆಯ ಸಿಎಆರ್ (CAR) ಮೈದಾನಕ್ಕೆ ಬಂದಿದ್ದರು. ಲೋಕಾಯುಕ್ತ ಟ್ರ್ಯಾಪ್: ದೂರುದಾರರಿಂದ ಹಣ ಪಡೆಯುತ್ತಿದ್ದಂತೆಯೇ ಸಂಚು ರೂಪಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಗೋವಿಂದರಾಜು ಅವರನ್ನು ಸುತ್ತುವರಿದು ವಶಕ್ಕೆ ಪಡೆದರು. ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಮೈದಾನದಲ್ಲಿ ಹೈಡ್ರಾಮಾ: ಲೋಕಾಯುಕ್ತ ಪೊಲೀಸರು ತನ್ನನ್ನು ಹಿಡಿಯುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಗೋವಿಂದರಾಜು ಮೈದಾನದಲ್ಲೇ ರಂಪಾಟ…
ಕೊರಟಗೆರೆ: ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಜೆಟ್ಟಿ ಅಗ್ರಹಾರ ಗ್ರಾಮಯ ಅಧ್ಯಕ್ಷ ಸಿ.ಡಿ.ಪ್ರಭಾಕರ್ ಹಾಗೂ ಅಭಿವೃದ್ಧಿ ಅಧಿಕಾರಿ ರಂಗನರಸಯ್ಯ ನೇತೃತ್ವದಲ್ಲಿ ಪಂಚಾಯತಿ ವ್ಯಾಪ್ತಿಯ ವಿಶೇಷ ಚೇತನರ ಸಭೆ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಸಿ.ಡಿ.ಪ್ರಭಾಕರ್ ಮಾತನಾಡಿ, ವಿಶೇಷ ಚೇತನರ ಅಧಿನಿಯಮ 1995ರ ಕಾಯಿದೆಯಡಿ ವಿಶೇಷ ಚೇತನರಿಗೆ ನೀಡಬೇಕಾದ ಸೌಲಭ್ಯಗಳು, ಅನುದಾನ ಮೀಸಲು ಬಳಕೆ, ಸಬಲೀಕರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸ್ಪಷ್ಟವಾಗಿ ತಿಳಿಸಿದರು. ಅನುದಾನದಲ್ಲಿ ಶೇ.3ರಷ್ಟನ್ನು ವಿಶೇಷ ಚೇತನರ ಸಬಲೀಕರಣಕ್ಕೆ ಮೀಸಲಿಡಬೇಕು. ಕ್ರಿಯಾ ಯೋಜನೆ ರೂಪಿಸಿ ಅನುದಾನವನ್ನು ಸದ್ಬಳಕೆ ಮಾಡಿಕೊಡಬೇಕು. ಸರ್ಕಾರವು ಅಂಗವಿಕಲರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಬೇಕು. ಪಡಿತರ ವಿತರಣೆಯಲ್ಲಿ ಅಂಗವಿಕರಿಗೆ ಮೊದಲ ಆದ್ಯತೆ ನೀಡಬೇಕು. ಬಸ್‌ಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಆಸನಗಳನ್ನು ವಿಕಲಚೇತನರಿಗೆ ಒದಗಿಸಲು ನಿರ್ವಾಹಕರು ನೆರವಾಗಬೇಕು. ಅಂಗವಿಕಲರ ವಸತಿ ನಿಲಯದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಬಸ್ ನಿಲ್ದಾಣದಲ್ಲಿ ಪೆಟ್ಟಿ ಅಂಗಡಿಗಳನ್ನು ಹಾಕಿಕೊಳ್ಳಲು ಅನುಮತಿ ನೀಡಿದರೆ ಅವರು ಸಹ ನಮ್ಮಂತೆಯೇ ಬದುಕು ಕಟ್ಟಿಕೊಂಡು ಜೀವನ ಸಾಗಿಸಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಸರಸ್ವತಮ್ಮ…
ಗದಗ: ಜಿಲ್ಲೆಯ ಪ್ರಸಿದ್ಧ ಐತಿಹಾಸಿಕ ತಾಣವಾದ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನ ಕಾರ್ಯದ ವೇಳೆ ಅಚ್ಚರಿಯ ಘಟನೆಯೊಂದು ಸಂಭವಿಸಿದೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಎದುರು ಉತ್ಖನನ ನಡೆಯುತ್ತಿದ್ದಾಗ ಜೀವಂತ ಹಾವೊಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಕ್ತಿ ಮತ್ತು ಕುತೂಹಲ ಮೂಡಿಸಿದೆ. ನಡೆದದ್ದೇನು? ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಭೂಮಿಯನ್ನು ಅಗೆಯುವಾಗ ವಿಶೇಷ ಪ್ರಭೇದದ ಹಾವೊಂದು ಕಾಣಿಸಿಕೊಂಡಿದೆ. ಉತ್ಖನನ ನಡೆಯುತ್ತಿದ್ದ ಜಾಗದಲ್ಲೇ ಹಾವು ಚಲಿಸುತ್ತಿರುವುದನ್ನು ಗೋಳಪ್ಪ ಕೋಳಿವಾಡ ಎಂಬ ಸ್ಥಳೀಯ ಗ್ರಾಮಸ್ಥರು ಮೊದಲು ಗಮನಿಸಿದರು. ತಕ್ಷಣವೇ ಅವರು ಉತ್ಖನನ ಕಾರ್ಯದ ಮೇಲ್ವಿಚಾರಕರಿಗೆ ಮಾಹಿತಿ ನೀಡಿದರು. ಸುರಕ್ಷಿತ ರಕ್ಷಣೆ: ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಉತ್ಖನನ ಸಿಬ್ಬಂದಿ ಮತ್ತು ಸ್ಥಳೀಯರು, ಹಾವಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ಅದನ್ನು ರಕ್ಷಿಸಿದರು. ಬಳಿಕ ಹಾವನ್ನು ಸುರಕ್ಷಿತವಾಗಿ ಸಮೀಪದ ಕಾಡಿನ ಪ್ರದೇಶಕ್ಕೆ ಬಿಡಲಾಗಿದೆ. ಗ್ರಾಮಸ್ಥರ ನಂಬಿಕೆ: ಈ ಘಟನೆ ಗ್ರಾಮಸ್ಥರಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ. ಹಳೆಯ ದೇವಸ್ಥಾನಗಳ ಉತ್ಖನನ ವೇಳೆ ಹಾವು ಕಾಣಿಸಿಕೊಂಡರೆ ಅಲ್ಲಿ…