Subscribe to Updates
Get the latest creative news from FooBar about art, design and business.
- ಗರ್ಭಿಣಿ ಮಗಳನ್ನೇ ಕೊಂದ ಪಾಪಿ ತಂದೆಗೆ ಗಲ್ಲು ಶಿಕ್ಷೆ ನೀಡಬೇಕೆಂದು ದಲಿತ ಪರ ಸಂಘಟನೆಗಳ ಆಗ್ರಹ
- ಮಹಾರಾಜವಾಡಿಯಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ: ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ
- ಬೀದರ್: ಔರಾದ್ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಸಡಗರ
- ತುಮಕೂರಿನಲ್ಲಿ ಡ್ರೀಮ್ ಡೀಲ್ ಲಕ್ಕಿ ಡ್ರಾ: 53 ಜನರಿಗೆ ಭರ್ಜರಿ ಬಹುಮಾನ
- ನಟರಾಜು ಜಿ.ಎಲ್. ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ: ಸಮಾಜಮುಖಿ ಹೋರಾಟಕ್ಕೆ ಮನ್ನಣೆ
- ತುಮಕೂರು: ಎರಡು ದಿನ ವಿದ್ಯುತ್ ವ್ಯತ್ಯಯ: ವಿವರಗಳಿಗಾಗಿ ಈ ಸುದ್ದಿ ಓದಿ
- ಆರ್ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ
- “ಗಿಲ್ಲಿ ಒಬ್ಬನನ್ನು ಬಿಟ್ಟು ಮನೆಯವರೆಲ್ಲರೂ ನನಗೆ ಅಣ್ಣಂದಿರು” ಎಂದು ವೀಕ್ಷಕರ ತಲೆಗೆ ಹುಳಬಿಟ್ಟ ರಕ್ಷಿತಾ!
Author: admin
ಬೀದರ್: ಜಿಲ್ಲೆಯ ಗ್ರಾಮ ಪಂಚಾಯತಿ ಚುನಾಯಿತ ಅಧ್ಯಕ್ಷರ ಅಧಿಕಾರ ಚಲಾಯಿಸಿದ ಆರೋಪದಡಿ ಔರಾದ್ ತಾಲ್ಲೂಕಿನ ಹೆಡಗಾಪುರ ಗ್ರಾಮ ಪಂಚಾಯತ್ ಪಿಡಿಒ ಮಹಾಲಕ್ಷ್ಮಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ಅವರು ಆದೇಶ ಹೊರಡಿಸಿದ್ದಾರೆ. ‘ಗ್ರಾಮ ಪಂಚಾಯತಿಯ ಸಾಮಾನ್ಯ ಸಭೆಯನ್ನು ಕಾನೂನು ಬಾಹಿರವಾಗಿ/ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ನಿಯಮಗಳನ್ನು ಉಲ್ಲಂಘಿಸಿ ಸಾಮಾನ್ಯ ಸಭೆಯನ್ನು ಜರುಗಿಸಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಜೇಮ್ಸ್ ಅವರು ದೂರು ಸಲ್ಲಿಸಿದ್ದರು. ಪಂಚಾಯತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳದೆ ಅಧ್ಯಕ್ಷೆ, ಪಿಡಿಒ ಇಬ್ಬರೂ ಸೇರಿ ಸರ್ಕಾರದ ಹಣ ಲೂಟಿ ಮಾಡಿರುವುದಾಗಿ ಮತ್ತು ಗ್ರಾ.ಪಂ. ನಡವಳಿಯನ್ನು ಮನಸ್ಸಿಗೆ ಬಂದಂತೆ ಪಾಸು ಮಾಡಿರುವುದಾಗಿ ಹಾಗೂ ಸದರಿ ವಿಷಯದ ಕುರಿತು ವಿಚಾರಿಸಿದಾಗ ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿರುವುದಾಗಿ ಉಪಾಧ್ಯಕ್ಷ ಸೈಯದ್ ಶರಫೋದೀನ್ ಅವರು ದೂರು ಸಲ್ಲಿಸಿದ್ದರು. ಈ ದೂರಿನ್ವಯ ಜಿ.ಪಂ.ಆಡಳಿತ ವಿಭಾಗದ ಸಹಾಯಕ ನಿರ್ದೇಶಕ (ಆಡಳಿತ) ಜಯಪ್ರಕಾಶ…
ಬೆಂಗಳೂರು: ಚಳಿಗಾಲದ ರೇಸ್ ಗಾಗಿ ಬೆಂಗಳೂರು ಟರ್ಫ್ ಕ್ಲಬ್ ಸಿದ್ಧತೆ ನಡೆಸುತ್ತಿದ್ದು, ಕುಣಿಗಲ್ ಗೆ ಸ್ಥಳಾಂತರಗೊಳ್ಳಲು ರಾಜ್ಯ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಬಿಟಿಸಿ ಅಧ್ಯಕ್ಷ ಮಂಜುನಾಥ ರಮೇಶ್ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಕುಣಿಗಲ್ ಗೆ ಸ್ಥಳಾಂತರಗೊಳ್ಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಹೇಳಿದ್ದಾರೆ. ನಾವು ಸರ್ಕಾರದ ಸೂಚನೆಗಳನ್ನು ಪಾಲನೆ ಮಾಡಬೇಕಿದೆ ಎಂದು ಪುಣೆಯ ಪೂನವಲ್ಲಾ ಸ್ಟಡ್ ಫಾರ್ಮ್ಸ್‌ನ ಜವರಾಯ್ ಎಸ್ ಪೂನವಲ್ಲಾ ಅವರು ಹೇಳಿದ್ದಾರೆ. ಇದೇ ವೇಳೆ 2 ವರ್ಷಗಳಲ್ಲಿ ಕುಣಿಗಲ್ ಗೆ ಸ್ಥಳಾಂತರಗೊಳ್ಳುತ್ತಿರುವ ಬಗ್ಗೆಯೂ ಮಾಹಿತಿ ನೀಡಿದರು. ಬಿಟಿಸಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸುಮಾರು 80 ಎಕರೆ ಭೂಮಿಯಲ್ಲಿ ಆರು ಎಕರೆಗಳನ್ನು ಕ್ಲಬ್‌ನ ಆಡಳಿತಾತ್ಮಕ ಕಾರ್ಯಗಳನ್ನು ಮತ್ತು ಇತರ ಚಟುವಟಿಕೆಗಳನ್ನು ನಿರ್ವಹಣೆಗೆ ಬಿಟ್ಟುಕೊಡಲು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆಂದು ತಿಳಿಸಿದರು. ಇದೇ ವೇಳೆ ವಿಂಟರ್ ರೇಸ್ ಕುರಿತಂತೆಯೂ ಮಾಹಿತಿ ನೀಡಿದರು. ಜಿಎಸ್‌ಟಿ 2.0 ಅನುಷ್ಠಾನದ ನಂತರ, ನಾವು ರೇಸ್ ಗಳನ್ನು ನಡೆಸುವ…
ಶಿರಾ: ತಾಲೂಕಿನ ಪ್ರಮುಖ ಬೆಳೆಯಾಗಿರುವ ಶೇಂಗಾ ಮಳೆಯಾಗದ ಹಿನ್ನೆಲೆ ಇಳುವರಿ ಕುಂಠಿತಗೊಂಡಿದೆ. ಪ್ರತಿ ಬಾರಿ ಅತಿವೃಷ್ಠಿ ಮತ್ತು ಅನಾವೃಷ್ಠಿಯಿಂದಾಗಿ ಶೇಂಗಾ ಬೆಳೆಗಾರರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾದರೂ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ಶೇಂಗಾ ಬಿತ್ತನೆ ಕಡಿಮೆಯಾಗಿದೆ. 25,040 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯ ಗುರಿ ಇದ್ದರೂ ಕೇವಲ 15,715 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಅರ್ಧ ಭಾಗ ಮಳೆಯಾಗದ ಕಾರಣ ರೈತರು ಶೇಂಗಾ ಬದಲು ರಾಗಿಯತ್ತ ಒಲವು ತೋರಿದ್ದು, 12,913 ಹೆಕ್ಟೇರ್ ನಲ್ಲಿ ರಾಗಿ ಬಿತ್ತನೆಯಾಗಿದೆ. ಶೇಂಗಾ ಬಿತ್ತನೆಯ ಸಮಯದಲ್ಲಿ ಮಳೆ ಬಂದಿದ್ದು ಬಿಟ್ಟರೆ ನಂತರ ಎರಡು ತಿಂಗಳು ಮಳೆ ಇಲ್ಲದೆ ಗಿಡ ಒಣಗುವಂತಾಗಿತ್ತು. ಕೆಲವೆಡೆ ಎಲೆ ಚುಕ್ಕೆ ರೋಗದಿಂದ ಗಿಡಗಳು ಒಣಗಿ ಅವುಗಳನ್ನು ಕೀಳಲು ಹರಸಾಹಸ ಪಡುವಂತಾಯಿತು. ಈಗಾಗಲೇ ಶೇ 80ರಷ್ಟು ಶೇಂಗಾ ಕಟಾವು ಮುಗಿದಿದೆ. ಅಕ್ಟೋಬರ್ ತಿಂಗಳಲ್ಲಿ ಸತತ ಮಳೆಯಿಂದಾಗಿ ಶೇಂಗಾ ಬಿಡಿಸಲು ಸಾಧ್ಯವಾಗದೆ…
ತಿಪಟೂರು: ಪದವೀಧರರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಈ ಹಿಂದೆ ಹೆಸರು ಸೇರಿಸಿದ್ದರೂ ಮತ್ತೆ ನೊಂದಣಿಗೆ ಅಗತ್ಯವಿದೆ, ತಪ್ಪದೆ ನೋಂದಾಯಿಸಿಕೊಳ್ಳುವಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ತೀರ್ಥ ಕುಮಾರ್ ತಿಳಿಸಿದರು. ತಿಪಟೂರು ತಾಲೂಕು ಸೇರಿದಂತೆ ತುಮಕೂರು ಜಿಲ್ಲೆಯ ಪದವೀಧರರ ನೋಂದಣಿ ಪ್ರಕ್ರಿಯೆ ಕುಂಠಿತವಾಗಿದೆ ಇಡೀ ಜಿಲ್ಲೆಯಲ್ಲಿ ಇದುವರೆಗೂ ಶೇಕಡ 25 ರಿಂದ 35ರಷ್ಟು ಮಾತ್ರ ನೋಂದಣಿಯಾಗಿದೆ ಎಂದು ತಿಳಿಸಿದರು. ನವೆಂಬರ್ 6 ನೋಂದಣಿಗೆ ಕೊನೆಯ ದಿನವಾಗಿದ್ದು ಅಷ್ಟರಲ್ಲಿ ಎಲ್ಲಾ ಪದವೀಧರರು ನೊಂದಣಿ ಮಾಡಿಸಲು ಮನವಿ ಮಾಡಿದ ರುತೀರ್ಥ ಕುಮಾರ ಅವರು ಚುನಾವಣೆ ಆಯೋಗ ಕೊನೆಯ ದಿನಾಂಕವನ್ನು ವಿಸ್ತರಿಸಬೇಕೆಂದು ಮನವಿ ಮಾಡಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ತಿಪಟೂರು: ತಾನು ಬರೆದ ಪತ್ರಕ್ಕೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯನವರು ರಾಜ್ಯ ಸರ್ಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ರಕ್ಷಣಾ ಯೋಜನೆ ಸಹಕಾರ ಇಲಾಖೆಯ ಯಶಸ್ವಿನಿ ಟ್ರಸ್ಟಿಯಾಗಿ ತಾಲೂಕು ಕುಮಾರ ಆಸ್ಪತ್ರೆಯ ವೈದ್ಯ ಡಾ. ಶ್ರೀಧರ್ ನೇಮಕ ಹಿಂಪಡೆದ ಕ್ರಮ ಸ್ವಾಗತ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಬಿ.ಶಶಿಧರ್ ತಿಳಿಸಿದರು. ಯಶಸ್ವಿನಿ ಟ್ರಸ್ಟಿಯನ್ನಾಗಿ ಆರ್ ಎಸ್ ಎಸ್ ಕಾರ್ಯಕರ್ತರನ್ನು ನೇಮಿಸಿ ಆದೇಶ ಹೊರಡಿಸಿದ್ದ ನೇಮಕಕ್ಕೆ ನಮ್ಮ ತಿಪಟೂರು ಕಾಂಗ್ರೆಸ್ ಶಾಸಕ ಕೆ.ಷಡಕ್ಷರಿ ಸಹಕಾರ ನೀಡಿದ್ದು. ಇದು ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿತ್ತು. ಈ ಬಗ್ಗೆ ನಾನು ಬರೆದಿದ್ದ ಪತ್ರಕ್ಕೆ ಸ್ಪಂದಿಸಿದ ಸಿಎಂ ಆದೇಶ ಹಿಂಪಡೆದುಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕ ಬಲ ಹೆಚ್ಚಿಸಿದೆ ಮತ್ತು ಆರ್ ಎಸ್ ಎಸ್ ಅಲ್ಲದೆ ಯಾವುದೇ ವ್ಯಕ್ತಿಯನ್ನು ಟ್ರಸ್ಟಿಯನ್ನಾಗಿ ಮಾಡಿದರೆ ನಮಗೆ ಯಾವುದೇ ತಕರಾರಿಲ್ಲ ಎಂದು ಸಿ.ಬಿ.ಶಶಿಧರ್ ತಿಳಿಸಿದರು. ವರದಿ: ಆನಂದ್, ತಿಪಟೂರು ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ…
ತುಮಕೂರು: ಕೃತಕ ಬುದ್ಧಿಮತ್ತೆಯನ್ನು (ಎ.ಐ.) ಸಾಕಷ್ಟು ಎಚ್ಚರಿಕೆ, ಬುದ್ಧಿವಂತಿಕೆಯಿಂದ ಬಳಸಬೇಕಿದೆ ಎಂದು ಕಂಪ್ಯೂಟರ್ ತಜ್ಞ ಪ್ರೊ.ಕೆ.ಪಿ.ರಾವ್ ಸಲಹೆ ಮಾಡಿದರು. ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರೊ.ಕಮಲಾ ಹಂಪನಾ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಕೃತಕ ಬುದ್ಧಿಮತ್ತೆ ಮತ್ತು ಸಾಹಿತ್ಯ ಕುರಿತು ಮಾತನಾಡಿದರು. ತಂತ್ರಜ್ಞಾನ ಕತ್ತಿಯ ಅಲಗಿನ ಹಾಗೆ. ಅದಕ್ಕೆ ಎರಡೂ ರೀತಿಯ ಬಳಕೆ ಗೊತ್ತಿದೆ. ನಾವು ಅದರ ಧನಾತ್ಮಕ ಆಯಾಮವನ್ನು ನೋಡಬೇಕು. ಕೃತಕ ಬುದ್ಧಿಮತ್ತೆ ಮಾನವ ಜನಾಂಗಕ್ಕೆ ವರವಾಗಿ ಪರಿಣಮಿಸುವಂತೆ ನೋಡಿಕೊಳ್ಳಬೇಕು. ಇದು ಮನುಷ್ಯನ ಉನ್ನತಿಗಾಗಿಯೇ ಹೊರತು, ಅವನತಿಗಾಗಿ ಅಲ್ಲ ಎಂಬುದನ್ನು ಅರಿಯಬೇಕು ಎಂದು ಹೇಳಿದರು. ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ಕೆಲಸಗಳಾಗಿವೆ. ಕನ್ನಡವೂ ಸೇರಿದಂತೆ ಭಾರತದ ಸಾಕಷ್ಟು ಭಾಷೆಗಳಲ್ಲಿ ಆಗಿರುವ ಕೆಲಸ ಏನೇನೂ ಸಾಲದು. ಆ ಬಗ್ಗೆ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು. ಶಾಂತ ಪರಿಸ್ಥಿತಿಯಲ್ಲಿ ಹೊಸತು ಅನ್ವೇಷಣೆ ಆಗುವುದಿಲ್ಲ. ಅದಕ್ಕೆ ಒಂದು ಬಗೆಯ ಸಂಘರ್ಷ ಬೇಕು. ಇದು ಮನುಷ್ಯನ ಸ್ವಭಾವ. ಆದರೆ ಕಂಪ್ಯೂಟರ್‌ಗೆ ಅಂತಹ ಸಮಸ್ಯೆ ಇಲ್ಲ…
ವರದಿ: ಹಾದನೂರು ಚಂದ್ರ ಸರಗೂರು: ತಾಲೂಕಿನಾದ್ಯಂತ ಕಳೆದ ತಿಂಗಳಿಂದ ಕಾಡು ಪ್ರಾಣಿಗಳಿಂದ ದಾಳಿ ಹೆಚ್ಚಾಗಿದ್ದು ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಮತ್ತು ಪ್ರಾಣ ಹಾನಿ ಸಂಭವಿಸಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಎಚ್ಚೆತ್ತುಕೊಳ್ಳದೆ. ಹುಲಿ, ಚಿರತೆ, ಕಾಡಾನೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳದೇ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ವಿರುದ್ಧ ಬಿಜೆಪಿ ತಾಲೂಕು ಘಟಕದ ರೈತ ಮೋರ್ಚಾ ವತಿಯಿಂದ ಸರಗೂರು ಅರಣ್ಯ ವಲಯ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಹಾಗೂ ತಾಲ್ಲೂಕು ಶಾಸಕ ಅನಿಲ್ ಚಿಕ್ಕಮಾದು ವಿರುದ್ಧ ಕಾಡುಪ್ರಾಣಿಗಳಿಂದ ರೈತರಿಗೆ ಆಗುತ್ತಿರುವ ತೊಂದರೆಗೆ ಸಚಿವರು ಹಾಗೂ ಶಾಸಕರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಗೌಡ ಮಾತನಾಡಿ, ಕಳೆದ ಒಂದು ವಾರದಿಂದ ಬಡಗಲಪುರ ಗ್ರಾಮದ ರೈತ ಮೇಲೆ ಹುಲಿ…
ಬೀದರ್: ಜಿಲ್ಲೆಯ ಔರಾದ್, ಹುಮನಾಬಾದ್, ಭಾಲ್ಕಿ ಸೇರಿದಂತೆ ನಾನಾ ಕಡೆ ಮಂಗಳವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಮಳೆ ಸುರಿಯಿತು. ಸೋಮವಾರದಿಂದ ಮೋಡ ಕವಿದ ವಾತಾವರಣವಿದ್ದು, ತಣ್ಣನೆಯ ಗಾಳಿ ಬೀಸುತ್ತಿದೆ. ಸೋಮವಾರ ನಸುಕಿನ ಜಾವ ಕೆಲವೆಡೆ ವರ್ಷಧಾರೆ ಆಗಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೋಡ ಕವಿದ ವಾತಾವರಣ ಇತ್ತು. ನಂತರ ಮಳೆಯ ಕಣ್ಣಾಮುಚ್ಚಾಲೆ ಆಡುತ್ತಿದೆ. ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಭರದಿಂದ ಸಾಗಿದ್ದು, 1.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಈಗಾಗಲೇ ಕೆಲವೆಡೆ ಶೇ.50ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಇನ್ನೂ ಕೆಲವೆಡೆ ಸೋಯಾಅವರೆ ರಾಶಿ ಮಾಡುವ ಕಾರ್ಯ ನಡೆಯುತ್ತಿದೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೀದರ್: ಜಿಲ್ಲಾ ಮಕ್ಕಳ ಕಲ್ಯಾಣ ಇಲಾಖೆ ಬೀದರ್ ಹಾಗೂ ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ಪೋಷಕತ್ವ ಯೋಜನೆ ಜಾರಿಯಲ್ಲಿದೆ. ಆದ್ದರಿಂದ ಬೀದರ್ ಜಿಲ್ಲೆಯ ಜಲವಾಡದ ಅಂಗನವಾಡಿ 5ನೇ ಕೇಂದ್ರದಲ್ಲಿ ಪೋಷಕತ್ವ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಪೋಷಕತ್ವ ಯೋಜನೆ ಅಡಿಯಲ್ಲಿ ಮಗುವಿನ ಪಾಲನೆ ಘೋಷಣೆ ರಕ್ಷಣೆಗಾಗಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಬೋಸ್ಕೋ ಬೆಂಗಳೂರು ಮತ್ತು ಡಾನ್ ಬಾಸ್ಕೋ ಬೀದರ್ ಇವರ ಆದೇಶದ ಮೇರೆಗೆ ಈ ಕಾರ್ಯಕ್ರಮವನ್ನು ಬೀದರ ಜಿಲ್ಲೆಯ ಜನವಡ ಅಂಗನವಾಡಿಯಲ್ಲಿ ಹಮ್ಮಿಕೊಳ್ಳಲಾಯಿತು. ಪೋಷಕತ್ವ ಯೋಜನೆ ಎಂದರೆ, ಜೈವಿಕ ಕುಟುಂಬವಲ್ಲದ ಬೇರೊಂದು ಕುಟುಂಬಕ್ಕೆ ತಾತ್ಕಾಲಿಕ ಅಥವಾ ವಿಸ್ತರಿಸಲ್ಪಟ್ಟ ಅವಧಿಯವರೆಗೆ 2 ವರ್ಷಕ್ಕೆ ಮೀರದ ಅವಧಿಯವರೆಗೆ ಬಾಲ ನ್ಯಾಯ ಕಾಯ್ದೆ 2005ರ ಕಲಂ 44ರ ಪ್ರಕಾರ ಮಗುವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಬೀದರ್ ಜಿಲ್ಲೆಯ ಡಾನ್ ಬೋಸ್ಕೋ ಪೋಷಕತ್ವ ಯೋಜನೆಯ ಸಂಯೋಜಕರಾದ ರಮೇಶ್ ಅವರು…
ತುಮಕೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಆರಂಭದಲ್ಲೇ ‘ನವೆಂಬರ್ ಕ್ರಾಂತಿ’ ಎಂದು ಹೇಳಿಕೆ ನೀಡಿದ್ದ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಇದೀಗ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಮತ್ತೆ ಹೇಳಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ಅಚ್ಚರಿ ಎಂಬಂತೆ ನಡೆಯಬಹುದು ಎಂದಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಸಾಕಷ್ಟು ಸಲ ಅಚ್ಚರಿ ಎನ್ನುವಂತೆ ಮುಖ್ಯಮಂತ್ರಿ ಆಯ್ಕೆ ಮಾಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವ ರೀತಿ ತೀರ್ಮಾನ ಆಗುತ್ತದೆ ಎಂದು ಹೇಳುವುದು ಕಷ್ಟ ಎಂದಿರುವ ಅವರು, ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದ ಸಮಯದಲ್ಲೂ ರಾಜ್ಯದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಅಂತ ಉದಾಹರಣೆ ನೀಡಿದರು.. ಹೈಕಮಾಂಡ್ ತೀರ್ಮಾನದಂತೆ ಮೊಯ್ಲಿ ಮುಖ್ಯಮಂತ್ರಿಯಾದರು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC