Subscribe to Updates
Get the latest creative news from FooBar about art, design and business.
- ವಿಕಲಚೇತನರ ಹಿತರಕ್ಷಣೆಗಾಗಿ ಕಾನೂನು ಜಾಗೃತಿ ಮೂಡಿಸುವುದು ಅಗತ್ಯ: ವಕೀಲ ಮಣಿರಾಜು
- ಸರಗೂರು | ದೇವಲಾಪುರ ರಸ್ತೆ ಒತ್ತುವರಿ ತೆರವು: ತಹಶೀಲ್ದಾರ್ ನೇತೃತ್ವದಲ್ಲಿ ಕ್ರಮ
- ರಾಜ್ಯ ಒಲಿಂಪಿಕ್ಸ್ ಕ್ರೀಡಾಕೂಟ: ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಭೇಟಿ, ಪರಿಶೀಲನೆ
- ನರೇಗಾ ಹೆಸರು ಬದಲಾವಣೆ ಖಂಡನೀಯ: ಶಾಸಕ ಎಸ್.ಆರ್. ಶ್ರೀನಿವಾಸ್ ಆಕ್ರೋಶ
- ತಿಪಟೂರು: ದಲಿತರ ಭೂಮಿ ಒತ್ತುವರಿ ಆರೋಪ, ಓಡಾಡಲು ರಸ್ತೆ ಇಲ್ಲದೇ ದಲಿತರು ಕಂಗಾಲು
- ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ
- ಶ್ರವಣೂರು: ಭ್ರಷ್ಟಾಚಾರದ ಆರೋಪ; ಪಿಡಿಒ ವಿರುದ್ಧ ಎರಡನೇ ದಿನವೂ ಮುಂದುವರಿದ ಪ್ರತಿಭಟನೆ
- ತುರುವೇಕೆರೆ: ಚಿರತೆ ಸಿಕ್ಕರೂ ಗ್ರಾಮಸ್ಥರಲ್ಲಿ ದೂರವಾಗದ ಆತಂಕ
Author: admin
ತುಮಕೂರು: ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ತುಮಕೂರು, ಶ್ರೀಮತಿ ನಾಗರತ್ನಮ್ಮ ಅ.ನಾ.ಶೆಟ್ಟಿ ದತ್ತಿ ಕಥಾ ಸ್ಪರ್ಧೆ, ಲಕ್ಷ್ಮಿದೇವಮ್ಮ ಗೋವಿಂದಯ್ಯ ದತ್ತಿ ಕವನ ಸ್ಪರ್ಧೆ ಏರ್ಪಡಿಸಿದ್ದು, ಕಥೆ, ಕವನಗಳನ್ನು ಆಹ್ವಾನಿಸಿರುತ್ತದೆ. ಸ್ಪರ್ಧೆಯಲ್ಲಿ ಆಯ್ಕೆಯಾದ ಕಥೆ ಕವನಗಳಿಗೆ ಮೊದಲ ಬಹುಮಾನ ರೂ. 2,000, ಎರಡನೇ ಬಹುಮಾನ ರೂ. 1,500, ಮೂರನೇ ಬಹುಮಾನ ರೂ. 1000 ನಗದು ಬಹುಮಾನ ಇರುತ್ತದೆ. ಕಥೆ ಆರು ಪುಟ, ಕವನ ಎರಡು ಪುಟ ಮೀರದಂತಿರಲಿ. ಹಾಳೆಯ ಒಂದೇ ಮಗ್ಗುಲಲ್ಲಿ ಬರೆದಿರಬೇಕು/ ಟೈಪ್ ಮಾಡಿರಬೇಕು. ಹೆಸರು, ವಿಳಾಸ, ಫೋನ್ ನಂಬರ್ ಪ್ರತ್ಯೇಕ ಪುಟದಲ್ಲಿ ಬರೆದು ಲಗತ್ತಿಸಿರಬೇಕು. ಸ್ಪರ್ಧೆಯು ತುಮಕೂರು ಜಿಲ್ಲೆಗೆ ಮಾತ್ರ ಸೀಮಿತವಾಗಿರುತ್ತದೆ. ಸ್ಪರ್ಧೆಗೆ ಕಳಿಸುವ ಕಥೆ, ಕವನಗಳು ಈ ಮೊದಲು, ಸಾಮಾಜಿಕ ಜಾಲತಾಣ, ಪತ್ರಿಕೆಗಳನ್ನೂ ಸೇರಿದಂತೆ ಎಲ್ಲಿಯೂ ಪ್ರಕಟವಾಗಿರಬಾರದು. ತೀರ್ಪು ಗಾರರ ತೀರ್ಪು ಅಂತಿಮ. ಬಹುಮಾನಿತ ಕಥೆ ಕವನಗಳನ್ನು ಯಾವಾಗ ಬೇಕಾದರೂ, ಸ್ವರೂಪದಲ್ಲಾದರೂ ಪ್ರಕಟಿಸುವ ಹಕ್ಕು ಲೇಖಕಿಯರ ಸಂಘಕ್ಕೆ ಇರುತ್ತದೆ. ಕವನಗಳ ಕಳಿಸಲು ಕೊನೆಯ ದಿನಾಂಕ 12–01–2026 ಆಗಿರುತ್ತದೆ.…
ಮಧುಗಿರಿ: ಮಧುಗಿರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಡಿಸೆಂಬರ್ 24ರಂದು ಕನ್ನಡ ಭವನದಲ್ಲಿ ಆಯೋಜಿಸಲಾಗಿರುವ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕವಿ ಹಾಗೂ ವಿಮರ್ಶಕ ಕೆ.ಪಿ. ನಟರಾಜು ಅವರು ಆಯ್ಕೆಯಾಗಿದ್ದಾರೆ. ಕೆ.ಪಿ. ನಟರಾಜು ಅವರ ಪರಿಚಯ: ಶಿಕ್ಷಣ: ತಾಂತ್ರಿಕ ಶಿಕ್ಷಣದ ಹಿನ್ನೆಲೆ ಹೊಂದಿದ್ದರೂ, ಕನ್ನಡ ಸಾಹಿತ್ಯದ ಮೇಲಿನ ಆಸಕ್ತಿಯಿಂದ ಕನ್ನಡದಲ್ಲಿ ಎಂ.ಎ.ಪದವಿ ಪಡೆದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಾಷ್ಟ್ರಕವಿ ಕುವೆಂಪು ಅವರ ಚಿಂತನೆಗಳ ಕುರಿತು ಪ್ರೌಢ ಪ್ರಬಂಧ ಮಂಡಿಸಿ ಡಿ.ಲಿಟ್ ಪದವಿ ಪಡೆದಿದ್ದಾರೆ. ಸಾಹಿತ್ಯ ಕೃಷಿ: ಇವರು ಸಾಹಿತ್ಯ ಕ್ಷೇತ್ರದಲ್ಲಿ ದಶಕಗಳಿಂದ ಸಕ್ರಿಯರಾಗಿದ್ದು, ಅನೇಕ ಕವನ ಸಂಕಲನ ಹಾಗೂ ವಿಮರ್ಶಾ ಕೃತಿಗಳನ್ನು ರಚಿಸಿದ್ದಾರೆ. ಪ್ರಶಸ್ತಿ–ಗೌರವಗಳು: ಇವರ ‘ನಿತ್ಯವೂ ನಿನ್ನೊಡನೆ’ ಕವನ ಸಂಕಲನಕ್ಕೆ 2018ರ ಸಾಲಿನ ಪ್ರತಿಷ್ಠಿತ ‘ಕಡೆಂಗೋಡ್ಲು ಶಂಕರಭಟ್ ಕಾವ್ಯ ಪ್ರಶಸ್ತಿ’ ಲಭಿಸಿದೆ. ಅಲ್ಲದೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಇವರು ಭಾಜನರಾಗಿದ್ದಾರೆ. ಡಿಸೆಂಬರ್ 24ರಂದು ನಡೆಯಲಿರುವ ಈ ಸಾಹಿತ್ಯ ಹಬ್ಬಕ್ಕೆ…
ಶಿರಾ: ತಾಲ್ಲೂಕಿನ ಕಳ್ಳಂಬೆಳ್ಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಗುರುವಾರ ನಡೆದಿದೆ. ಕಳ್ಳಂಬೆಳ್ಳ ಗ್ರಾಮದ ನಿವಾಸಿ ಮಧುವನ್ (36) ಕೊಲೆಯಾದ ದುರ್ದೈವಿ. ತುಮಕೂರು ಸಂತೇಪೇಟೆಯ ನಿವಾಸಿಗಳಾದ ಮಹೇಶ್ ಮತ್ತು ಸಮೀರ್ ಎಂಬುವವರೊಂದಿಗೆ ಜಮೀನಿನ ವಿಚಾರವಾಗಿ ಮಧುವನ್ ಗೆ ವಿವಾದವಿತ್ತು ಎನ್ನಲಾಗಿದೆ. ಗುರುವಾರ ಈ ಮೂವರ ನಡುವೆ ಮಾತಿನ ಚಕಮುಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭದಲ್ಲಿ ಆರೋಪಿ ಮಹೇಶ್ ಎಂಬಾತ ಮಧುವನ್ ಮೇಲೆ ಮಚ್ಚಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ಮಧುವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಳಗಾವಿ: ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯು ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬರೋಬ್ಬರಿ 3,450 ಕೋಟಿ ರೂಪಾಯಿಗಳ ವಿವಿಧ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಭಾಗದ ಬಹುಕಾಲದ ಬೇಡಿಕೆಯಾದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಮುಖ ನೀರಾವರಿ ಯೋಜನೆಗಳು: ಬಾಗಲಕೋಟೆ: ಬಾದಾಮಿ ಮತ್ತು ಬೀಳಗಿ ಭಾಗದ ಕೆರೂರು ಏತ ನೀರಾವರಿ ಯೋಜನೆಗೆ 1,503 ಕೋಟಿ ರೂ.ಗಳ ಪರಿಷ್ಕೃತ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ರಾಯಚೂರು: ಮಸ್ಕಿ ತಾಲೂಕಿನ ಪಾಮನಕಲ್ಲೂರು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ 990 ಕೋಟಿ ರೂ.ಗಳ ಯೋಜನೆಗೆ ಚಾಲನೆ ದೊರೆತಿದೆ. ಬೆಳಗಾವಿ: ರಾಯಬಾಗ ಮತ್ತು ಚಿಕ್ಕೋಡಿ ಭಾಗದ ಏತ ನೀರಾವರಿ ಯೋಜನೆಗಳಿಗೆ ಸುಮಾರು 400 ಕೋಟಿ ರೂ. ಮೀಸಲಿಡಲಾಗಿದೆ. ಕೊಪ್ಪಳ: ಯಲಬುರ್ಗಾ ಮತ್ತು ಕುಕನೂರು ತಾಲೂಕಿನ 19 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ 272 ಕೋಟಿ ರೂ.ಗಳ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ನ್ಯಾಯಾಂಗ ಸುಧಾರಣೆ ಮತ್ತು AI ಬಳಕೆ:…
ಸರಗೂರು: ಮುಳ್ಳೂರು ಆಸ್ಪತ್ರೆಗೆ ಎರಡು ಬಾರಿ ಉತ್ತಮ ಆಸ್ಪತ್ರೆ ಪ್ರಶಸ್ತಿ ಬಂದಿದೆ. ಈ ವೈದ್ಯರು ಹಾಗೂ ಸಿಬ್ಬಂದಿಗಳು ಹೆಚ್ಚಿನ ರೀತಿಯಲ್ಲಿ ಬರುವ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ತಿಳಿಸಿದರು. ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾರ್ಟ್ ಸಂಸ್ಥೆ ಮೈಸೂರು, ರೋಟರಿ ಕ್ಲಬ್ ಆಪ್ ಮೈಸೂರು ವೆಸ್ಟ್ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೆಚ್. ಡಿ.ಕೋಟೆ , ಪ್ರಾಥಮಿಕ ಆರೋಗ್ಯ ಕೇಂದ್ರ ಮುಳ್ಳೂರು ಗ್ರಾಮ ಪಂಚಾಯಿತಿ ಮುಳ್ಳೂರು, ಮುಳ್ಳೂರು ಗುರುಪ್ರಸಾದ್ ಜಿ.ಪಿ. ಗ್ರೂಪ್ಸ್ ಬಿಲ್ಡರ್ ಅಂಡ್ ಡೆವಲಪರ್ಸ್ ಮೈಸೂರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಮುಳ್ಳೂರು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಳ್ಳೂರು ಆಸ್ಪತ್ರೆ ಕೋಟೆ ಮತ್ತು ನಂಜನಗೂಡು ತಾಲೂಕಿನ ಮಧ್ಯದಲ್ಲಿದ್ದರು ತಾಲೂಕು ಆಸ್ಪತ್ರೆಗಳಿಗೆ ಸಂಪರ್ಕ ಇಲ್ಲಗೆ ತುರ್ತು ಸೇವೆಗೆ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗುವುದು,.ಸಿಬ್ಬಂದಿಯ ಕೊರತೆ ಇದ್ದು ಮುಂದಿನ ದಿನಗಳಲ್ಲಿ ಎಲ್ಲವು…
ಬ್ಯಾಲ್ಯ: ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಅಪರಾಧ. ರಸ್ತೆ ಸುರಕ್ಷತೆ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸ ಬೇಕಾದ್ದು ನಿಮ್ಮ ಕರ್ತವ್ಯ ಎಂದು ಕೊಡಿಗೇನಹಳ್ಳಿ ಪೊಲೀಸ್ ರಾಣಾಧಿಕಾರಿ ಎಸ್.ಜಿ. ಶ್ರೀನಿವಾಸ ಪ್ರಸಾದ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ನಶ ಮುಕ್ತ ತುಮಕೂರು ಅಭಿಯಾನದ ಪ್ರಯುಕ್ತ ಪುರವರ ಪ್ರೌಢಶಾಲೆ, ಕಾಲೇಜು ಮತ್ತು ಕೋಡ್ಲಾಪುರ ಪ್ರೌಢಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಳ್ಳತನಗಳು ಹೆಚ್ಚು. ಚಳಿಗಾಲದಲ್ಲಿ ಜನತೆಗೆ ಉತ್ತಮ ನಿದ್ದೆ ಬರುತ್ತದೆ. ಹೀಗಾಗಿ ಈ ಸಂದರ್ಭಗಳಲ್ಲಿ ಹೆಚ್ಚು ಕಳ್ಳತನಗಳು ನಡೆಯುತ್ತವೆ. ಆದ್ದರಿಂದ ಪೊಲೀಸ್ ಇಲಾಖೆ ಸೂಚಿಸಿರುವ ನಿಯಮಗಳನ್ನು ಪಾಲಿಸುವುದರ ಜೊತೆಗೆ ಅಪರಾಧ ತಡೆಗಟ್ಟಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಇತ್ತೀಚಿಗೆ ಹೆಚ್ಚಾಗುತ್ತಿರುವ ನಶ ಸಾಮಗ್ರಿಗಳ ಬಳಕೆ, ಅದರಿಂದಾಗುವ ದುಷ್ಪರಿಣಾಮಗಳು, ಸಿಗುವ ಶಿಕ್ಷೆ ಮತ್ತು ಪೋಕ್ಸೋ ಕಾಯಿದೆ, ಹೆಣ್ಣು ಮಕ್ಕಳ ಸುರಕ್ಷತೆ, ಬಾಲ್ಯ ವಿವಾಹ ಕುರಿತು ಇರುವ ಕಾಯ್ದೆಗಳು…
ಗುಬ್ಬಿ: ತಾಲ್ಲೂಕಿನ ಎಂ.ಎಚ್. ಪಟ್ಟಣ ಗೇಟ್ ಬಳಿ ಇರುವ ಹೋಟೆಲ್ ವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪಟ್ಟಣದ ಯಶವಂತ (25) ಎಂಬ ಯುವಕ ಜಿಎನ್ ಬಿ ಸ್ಪಿರಿಟ್ ಆ್ಯಂಡ್ ಸ್ಟೇ ಹೋಟೆಲ್ ಗೆ ಊಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಹೋಟೆಲ್ ಮಾಲೀಕ ಮತ್ತು ಆತನ ಸಹಚರರು ಸೇರಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯ ತೀವ್ರತೆಯಿಂದಾಗಿ ಯಶವಂತ ಅವರ ಕೈಮೂಳೆಗೆ ಗಂಭೀರ ಪೆಟ್ಟು ಬಿದ್ದಿದೆ. ಪ್ರಸ್ತುತ ಅವರು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳು ಯುವಕನಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಮತ್ತು ಸಹಚರರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆ (Atrocity Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ವೀಣಾ…
ಮಧುಗಿರಿ: ತಾಲ್ಲೂಕಿನ ಆಚೇನಹಳ್ಳಿ ಗ್ರಾಮದಲ್ಲಿ ಕಿತ್ತಾಡುತ್ತಿದ್ದ ಜಾನುವಾರುಗಳನ್ನು ಬಿಡಿಸಲು ಹೋಗಿ ಮರ್ಮಾಂಗಕ್ಕೆ ಏಟು ಬಿದ್ದು ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗ್ರಾಮದ ವೆಂಕಟಪ್ಪ ಅವರ ಪುತ್ರ ನಾಗರಾಜು (35) ಮೃತಪಟ್ಟವರು. ಇವರು ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ, ಎರಡು ಜಾನುವಾರುಗಳ ನಡುವೆ ಕಾದಾಟ ಶುರುವಾಗಿದೆ. ಇದನ್ನು ಬಿಡಿಸಲು ಹೋದಾಗ ಜಾನುವಾರು ಮರ್ಮಾಂಗಕ್ಕೆ ತಿವಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ವಿರೋಧ ಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆಯೇ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025’ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಮುಖ್ಯಾಂಶಗಳು: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಈ ವಿಧೇಯಕವನ್ನು ಮಂಡಿಸಿ, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಇದು ಅನಿವಾರ್ಯ ಎಂದು ಸಮರ್ಥಿಸಿಕೊಂಡರು. ಜನಾಂಗೀಯ ನಿಂದನೆ, ಜಾತಿ, ಧರ್ಮ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಈ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ. ಶಿಕ್ಷೆಯ ಪ್ರಮಾಣ: ಈ ಹೊಸ ಕಾಯ್ದೆಯಡಿ ದ್ವೇಷ ಭಾಷಣ ಮಾಡುವವರಿಗೆ ಗರಿಷ್ಠ 7 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶವಿದೆ. ಅಲ್ಲದೆ, ಇದು ಜಾಮೀನು ರಹಿತ ಪ್ರಕರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಪೋಸ್ಟ್ ಮಾಡುವ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ವಿರೋಧ ಪಕ್ಷದ ಆಕ್ರೋಶ: ಬಿಜೆಪಿ ಮತ್ತು…
ಬೀದರ್: ತಾಯಿ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಿಳಿಸಬೇಕು ಎಂದು ಗಾಂಧಿ ಗಂಜ್ ಪೊಲೀಸ್ ಠಾಣೆ ಎಎಸ್ ಐ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ನಗರದ ಸಿ ಎಮ್ ಸಿ ಕಾಲೋನಿಯ ನಿವಾಸಿಯಾದ ಜೀನತ್ (ಪಲ್ಲವಿ) ಮತ್ತು ಮಗ ಹರ್ಪಿತ್ ಪಾಂಚಾಳ್ (3 ವರ್ಷ) ನಾಪತ್ತೆಯಾದ ತಾಯಿ ಮಗು ಆಗಿದ್ದಾರೆ. ಅವರು ಡಿ.15 ರಂದು ಮನೆಯಿಂದ ಹೊರಗಡೆ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಜೀನತ್ 5.3 ಅಡಿ ಎತ್ತರ ಇದ್ದು, ಕೆಂಚನೆ ಬಣ್ಣ, ತೆಳುವಾದ ಶರೀರ ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಮೈಮೇಲೆ ಹಳದಿ ಬಣ್ಣದ ಚೂಡಿದಾರ, ಹಳದಿ ಬಣ್ಣದ ಪೈಜಾಮ ಧರಿಸಿದ್ದರು. ಇವರು ಕನ್ನಡ, ಹಿಂದಿ ಭಾಷೆ ಮಾತನಾಡ ಬಲ್ಲವರಾಗಿದ್ದಾರೆ. ನಾಪತ್ತೆಯಾದ ಮಹಿಳೆ ಹಾಗೂ ಮಗುವಿನ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಸಂಪರ್ಕಿಸುವಂತೆ ಬೀದರ್ ನ ಗಾಂಧಿ ಗಂಜ್ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ. ವರದಿ: ಅರವಿಂದ ಮಲ್ಲೀಗೆ,…