Author: admin

ಪೆರ್ನಾಜೆ: ಪ್ರತಿಭೆ ಎಲ್ಲರಲ್ಲೂ ಇದೆ ಆದರೆ ಅದಕ್ಕೆ ಸೂಕ್ತ ಪ್ರೋತ್ಸಾಹ ವೇದಿಕೆ ಅಗತ್ಯ ಹಾಗೆ ಜೀವನದಲ್ಲಿ ಹಟ ಛಲ ಇದ್ದರೆ ಏನನ್ನು ಸಾಧಿಸಬಹುದು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು ಜೇನು ಗಡ್ಡ ಬರಹಗಾರರು, ಕಲಾ ನಿರ್ದೇಶಕರು, ಕಲಾ ಪೋಷಕರಾದ ಕುಮಾರ್ ಪೆರ್ನಾಜೆ ಹೇಳಿದರು. ಸ್ವರ ಸಿಂಚನ ಸಂಗೀತ ಶಾಲೆ, ವಿಟ್ಲ ಪಡಿಬಾಗಿಲು ಶಾಖೆಯ ದಶ ಸoಭ್ರಮದಲ್ಲಿ ಡಿ.14ರಂದು ವಿಟ್ಲದ ಜಿಎಲ್ ಆಡಿಟೋರಿಯಂ ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಅವರು, ಬೆಳೆಯುವವರು ಬೆಳೆಯುತ್ತಲೇ ಇರುತ್ತಾರೆ,  ಸ್ವರ  ಸಿಂಚನ ಸಂಗೀತ ಶಾಲೆ ಯಶಸ್ಸಿನತ್ತಸಾಗಲಿ ಎಂದು ಹಾರೈಸಿದರು. ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡಿದರು . ಸ್ವರ ಸಿಂಚನ ಪ್ರಶಸ್ತಿ ಪ್ರದಾನವನ್ನು ಸ್ವೀಕರಿಸಿ ಸಂಸ್ಥೆಗೆ ಶುಭ ಹಾರೈಸಿದರು. ದಶಮಾನೋತ್ಸವ ಸನ್ಮಾನವನ್ನು ಎಲ್.ಎಂ.ಗೋವಿಂದ ನಾಯಕ್ ಪಾಲ್ಹೆಚ್ಚಾರು ಯಕ್ಷಗಾನ ಭಾಗವತರು ಕರಾವಳಿಯ ಗಂಡು ಕಲೆ ಯಕ್ಷಗಾನ ಪ್ರಸಿದ್ಧಿ ಪಡೆದ ಅವರು ಸನ್ಮಾನ ಸ್ವೀಕರಿಸಿ ಸಂಸ್ಥೆಯ ಬಗ್ಗೆ ಹಿತ ನುಡಿದರು. ವಿಟ್ಲ…

Read More

ತುರುವೇಕೆರೆ: ತಾಲೂಕಿನ ವಾಸಿಯಾದ ರವಿಕುಮಾರ್ ಬಿ ಎಸ್ ಬಿನ್ ಸಿದ್ದೇಗೌಡ ಎಂಬುವರ ಜಮೀನಿನಲ್ಲಿದ್ದ ಸುಮಾರು ಮೂರು ಸಾವಿರ ರೂ ಬೆಲೆ ಬಾಳುವ ಗಂಧದ ಮರಗಳ ಕಳ್ಳತನವಾಗಿದ್ದು, ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಆಕ್ಟ್  ಕಲಂ 303(2) ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನೆತ್ತಿದ ಪೊಲೀಸರು ಕೊನೆಗೂ ಗಂಧದ ಮರ ಕಳ್ಳರನ್ನು ತಾಲೂಕಿನ ಗೋಣಿ ತುಮಕೂರು ಗ್ರಾಮದಲ್ಲಿ ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಗಂಧದ ಮರ ಕಳ್ಳತನ ಮಾಡುವವರ ಬಂಧನಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಕುಣಿಗಲ್ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕರಾದ ಓಂ ಪ್ರಕಾಶ್ ರವರ ಮಾರ್ಗಸೂಚನೆ ಮೇರೆಗೆ ತುರುವೇಕೆರೆ ಸಿ ಪಿ ಐ ಲೋಹಿತ್, ಪಿಎಸ್ಐ ಮೂರ್ತಿ ಟಿ. ಪಿಎಸ್ಐ ಮೂರ್ತಿ ಕೆ ವಿ. ಹಾಗೂ ಸಿಬ್ಬಂದಿಗಳಾದ ರಾಜಕುಮಾರ ವಗ್ಗೇರಿ, ನವೀನ್ ಕುಮಾರ್ ಡಿವಿ, ಒಳಗೊಂಡಂತೆ ಅಪರಾಧ ಪತ್ತೆ ತಂಡವನ್ನು ರಚಿಸಿ ಪ್ರಕರಣದಲ್ಲಿ ಭಾಗಿಯಾಗಿದ್ದ ಗಂಧದ ಮರ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು…

Read More

ತುಮಕೂರು: ತುಮಕೂರು ನಗರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 5 ಅಂಗನವಾಡಿ ಕಾರ್ಯಕರ್ತೆ ಹಾಗೂ 22 ಸಹಾಯಕಿಯರ ಹುದ್ದೆಗಳನ್ನು ಗೌರವಧನ ಆಧಾರದ ಮೇಲೆ ಭರ್ತಿ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಂದ ಆನ್‌ಲೈನ್  ಮಹಿಳಾ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ತಮ ಅರ್ಜಿಯನ್ನು 2026ರ ಜನವರಿ 9ರೊಳಗಾಗಿ ಇಲಾಖೆಯ https://kar-nemakaone.kar.nic.in/abcd/ ಮೂಲಕ ವೆಬ್‌ ಸೈಟ್ ವಿಳಾಸದ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂ. ವಾ.ಸಂ. 0816—29553995 ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು  ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More

ಬೆಳಗಾವಿ: ಸರ್ಕಾರದ ಉಪವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳನ್ನು ಕಳೆದ ಎರಡೂವರೆ ವರ್ಷದಲ್ಲಿ ರಾಜ್ಯ ಸರ್ಕಾರವು ಶೇ.80ರಷ್ಟು ವಿಲೇವಾರಿ ಮಾಡಿದ್ದು, ಇನ್ನುಳಿದ ಬಾಕಿ ಪ್ರಕರಣಗಳನ್ನು ಆದಷ್ಟು ಶೀಘ್ರದಲ್ಲೇ ಇತ್ಯರ್ಥಗೊಳಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮೇಲ್ಮನೆಯ ಪ್ರಶೋತ್ತರ ವೇಳೆ ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಎಸಿ ಕೋರ್ಟ್ ನ್ಯಾಯಾಲಯಗಳಲ್ಲಿ 62,857 ಪ್ರಕರಣಗಳು ಬಾಕಿಯಿದ್ದು ಅವುಗಳನ್ನು ಸಮರೋಪಾದಿಯಲ್ಲಿ ವಿಲೇವಾರಿ ಮಾಡಿ 14,324ಕ್ಕೆ ಇಳಿಸಿದ್ದು, ಅವುಗಳನ್ನು ಆದಷ್ಟು ಶೀಘ್ರವಾಗಿ ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು. ಹೆಚ್ಚು ಪ್ರಕರಣಗಳು ಬಾಕಿ ಇರುವ ಜಿಲ್ಲೆಗಳಲ್ಲಿನ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳನ್ನು ಉಪ ವಿಭಾಗಾಧಿಕಾರಿ ವೃಂದಕ್ಕೆ ಸಮಾನಾಂತರ ವೃಂದದ ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಎಸ್ ಅಧಿಕಾರಿಗಳಿಗೆ ಕಾರ್ಯ ಹಂಚಿಕೆ ಮಾಡಿ ಸರ್ಕಾರವು ಆದೇಶ ನೀಡಿದೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…

Read More

ಕೊರಟಗೆರೆ : ಗ್ರಾಮೀಣ ಭಾಗದಲ್ಲಿ ಕುಂಬಾರಿಕೆ ಅಂತಹ ಗುಡಿ ಕೈಗಾರಿಕೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮ್ಮ ಕುಲ ಕಸುಬುಗಳನ್ನ ತರಬೇತಿ ಪಡೆಯುತ್ತಿರುವುದು ಸಂತಸ ತಂದಿದೆ ಎಂದು ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರಮಣಪ್ಪ ತಿಳಿಸಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಗಂಕಾರನಹಳ್ಳಿ ಗ್ರಾಮದಲ್ಲಿ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಕಾರ್ಯಕ್ರಮ ಅಡಿಯಲ್ಲಿ ಚಕ್ರ ಕುಂಬಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂಬಾರ ತರಬೇತಿಯು ಸಾಂಪ್ರದಾಯಕ ಕುಂಬಾರಿಕೆ ಕೌಶಲ್ಯಗಳನ್ನ ಆಧುನಿಕ ಯಂತ್ರಗಳೊಂದಿಗೆ ಸಂಯೋಜಿಸಿ ಮಡಿಕೆ, ಕುಡಿಕೆ, ಅಲಂಕಾರರಿಕ ವಸ್ತುಗಳನ್ನ ತಯಾರಿಸಲು ಕೇಂದ್ರ ಸರ್ಕಾರ ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಕುಂಬಾರ ಸಶಕ್ತಿಕರಣ ಕಾರ್ಯಕ್ರಮವನ್ನ ಜಾರಿಗೆ ತಂದಿದ್ದು, ಅದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಲಕು ಎಂದು ತಿಳಿಸಿದರು. ತರಬೇತಿದಾರ ಸಂಪಂಗಿ ರಾಮಪ್ಪ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೋದ್ಯೋಗ ವಿಕಾಸ್ ಯೋಜನೆಯಡಿ ಗ್ರಾಮೀಣ ಭಾಗ ಬಡತನದಲ್ಲಿರುವ ಕುಂಬಾರ ಸಮುದಾಯಕ್ಕೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಜೀವನ ನಡೆಸಲು ಅನೇಕ ಯೋಜನೆಗಳನ್ನ ಜಾರಿಗೆ ತರಲಾಗಿದೆ.…

Read More

ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ಕುಂ ಹಿ ಅಹಮದ್ ಮತ್ತು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಟಿ ಹೆಚ್ ಓ ರಂಗನಾಥ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀನಾಥ್ ಬಾಬು ಉಪಸ್ಥಿತಿಯಲ್ಲಿ ಪಲ್ಸ್ ಪೋಲಿಯೋ ಕುರಿತು ಪತ್ರಿಕಾ ಮಾಧ್ಯಮಗೋಷ್ಠಿಯನ್ನು ನಡೆಸಲಾಯಿತು. ಇದೇ ವೇಳೆ ಟಿಹೆಚ್ ಓ ರಂಗನಾಥ್ ಮಾತನಾಡಿ, ರಾಜ್ಯದ್ಯಂತ ಡಿಸೆಂಬರ್ 21ನೇ ಭಾನುವಾರದಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ತುರುವೇಕೆರೆ ತಾಲೂಕಿನಲ್ಲೂ ಪಲ್ಸ್ ಪೋಲಿಯೋ ನಿಮಿತ್ತ ತಾಲೂಕಿನಲ್ಲಿ ಸುಮಾರು 90 ಬೂತ್ ಗಳನ್ನು ನಿರ್ಮಿಸಲಾಗಿದ್ದು ಡಿಸೆಂಬರ್ 21 ಭಾನುವಾರ  ಬೆಳಿಗ್ಗೆ 8ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲಿದ್ದು,  ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಪೋಷಕರು ಪಲ್ಸ್ ಪೋಲಿಯ ಲಸಿಕೆಯನ್ನು ಹಾಕಿಸಿ ಎಂದರು. ಜೊತೆಗೆ ತಾಲೂಕಿನಾದ್ಯಂತ ಎಲ್ಲಾ ಬೂತ್ ಗಳಲ್ಲಿ ನಮ್ಮ ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮತ್ತು ಸ್ವಯಂ ಪ್ರೇರಿತ ಕಾರ್ಯಕರ್ತರು ಸೇರಿದಂತೆ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಆರೋಗ್ಯ…

Read More

ತಿಪಟೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಮಹತ್ತರ ಪಾತ್ರವಹಿಸಿದ ಈಡಿಗ ಸಮುದಾಯವನ್ನು ಸರ್ಕಾರ ಕಡೆಗಣಿಸಿದೆ,  ಈಡಿಗ ಸಮುದಾಯವನ್ನು ಕಂಡರೆ ಮುಖ್ಯಮಂತ್ರಿಗಳಿಗೆ ಆಗುತ್ತಿಲ್ಲ ಎಂದು ಈಡಿಗ ಸಮುದಾಯದ ಪೀಠಾಧಿಪತಿ ಡಾ. ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಪಿಸಿದರು. ತಿಪಟೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು,  ವಿರೋಧ ಪಕ್ಷವಾಗಿದ್ದ ಸಂದರ್ಭದಲ್ಲಿ ಅಹಿಂದವನ್ನುಅಪ್ಪಿಕೊಂಡ ಸಿದ್ದರಾಮಯ್ಯ ಆಡಳಿತ ಹಿಡಿದ ನಂತರ ಅಹಿಂದ ವನ್ನು ಕಡೆಗಣಿಸಿದ್ದಾರೆ,  ಸಮುದಾಯದ ಯುವಕರು ಒಗ್ಗಟ್ಟಾಗಿ ಹೋರಾಡಬೇಕಿದೆ ಇಡೀ ಸಮುದಾಯವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿರುವ ಕೆಲವು ಮುಖಂಡರು ಶಾಸಕರು ತಮ್ಮ ವರ್ತನೆಗಳನ್ನು ಬದಲಾಯಿಸಿಕೊಂಡು ಈಡಿಗ ಸಮುದಾಯಕ್ಕೆ ಎಸ್ ಟಿ ಮೀಸಲಾತಿಗೆ ಹೋರಾಡಬೇಕಿದೆ ಎಂದರು. ಸರ್ಕಾರದ ಕಣ್ಣು ತೆರೆಸಲು ಜನವರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠ ಕರದಾಳದಿಂದ ಬೆಂಗಳೂರುವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು, ಅಷ್ಟರೊಳಗೆ ನಮ್ಮ ಸಮುದಾಯದ 18 ಬೇಡಿಕೆಗೆ ಈಡೇರದೆ ಇದ್ದಲ್ಲಿ ಫೆಬ್ರವರಿ 26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಈಡಿಗ ಸಮುದಾಯದ ಮುಖಂಡರಾದ ಎಂ.ಕೆ.ಸ್ವಾಮಿ ,…

Read More

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಸಿದ್ಧ ಜನಪದ ಗಾಯಕ ‘ಮ್ಯೂಸಿಕ್ ಮೈಲಾರಿ’ ಅಲಿಯಾಸ್ ಮೈಲಾರಿಯನ್ನು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಹಿನ್ನೆಲೆ: ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮದಲ್ಲಿ ಮ್ಯೂಸಿಕ್ ಮೈಲಾರಿ ಹಾಡಲು ಬಂದಿದ್ದನು. ಇದೇ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದಲ್ಲದೆ, ಈ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಸಂಬಂಧ ಡಿಸೆಂಬರ್ 14 ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಘಟನೆ ನಡೆದ ಸ್ಥಳ ಮಹಾಲಿಂಗಪುರ ವ್ಯಾಪ್ತಿಗೆ ಬರುವುದರಿಂದ ಪ್ರಕರಣವನ್ನು ಮಹಾಲಿಂಗಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಪೊಲೀಸ್ ಕಾರ್ಯಾಚರಣೆ: ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಮೈಲಾರಿಗಾಗಿ ಬಾಗಲಕೋಟೆ ಪೊಲೀಸರು ಮೂರ್ನಾಲ್ಕು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದರು. ಇಂದು (ಡಿಸೆಂಬರ್ 17) ಬೆಳಿಗ್ಗೆ ಮೈಲಾರಿ ಮಹಾರಾಷ್ಟ್ರದ ಜತ್ತ ಮೂಲಕ ಪರಾರಿಯಾಗಲು ಯತ್ನಿಸುತ್ತಿದ್ದಾಗ…

Read More

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಪಾವತಿಯಲ್ಲಿನ ವಿಳಂಬ ಹಾಗೂ ಸಚಿವರ ತಪ್ಪು ಮಾಹಿತಿಯ ವಿಚಾರ ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಬಾಕಿ ಹಣದ ಕುರಿತು ನಡೆದ ಚರ್ಚೆಯು ವಾಗ್ವಾದಕ್ಕೆ ತಿರುಗಿ, ಅಂತಿಮವಾಗಿ ವಿರೋಧ ಪಕ್ಷಗಳು ಸದನದಿಂದ ಸಭಾತ್ಯಾಗ ಮಾಡಿದವು. ಗೈರಾದ ಸಚಿವೆ ವಿರುದ್ಧ ಆಕ್ರೋಶ: ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯ ಬಗ್ಗೆ ಪ್ರಶ್ನಿಸಿದರು. ಕಳೆದ ಮೂರು ದಿನಗಳಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನಕ್ಕೆ ಗೈರಾಗಿರುವುದನ್ನು ಪ್ರಶ್ನಿಸಿದ ಅಶೋಕ್, “ಸಚಿವರು ಮೊದಲು ಸದನಕ್ಕೆ ಬಂದು ಉತ್ತರ ನೀಡಲಿ. ಎರಡು ತಿಂಗಳ ಹಣ ಎಲ್ಲಿ ಹೋಯಿತು? ಸರ್ಕಾರ ದಿವಾಳಿಯಾಗಿದೆಯೇ ಅಥವಾ ಚುನಾವಣಾ ವೆಚ್ಚಕ್ಕೆ ಹಣ ಬಳಸಲಾಗಿದೆಯೇ?” ಎಂದು ಆಕ್ರೋಶ ಹೊರಹಾಕಿದರು. ಸದನದ ಬಾವಿಗಿಳಿದು ಧರಣಿ: ವಿಪಕ್ಷಗಳ ಗದ್ದಲ ಹೆಚ್ಚಾದಂತೆ ಬಿಜೆಪಿ ಮತ್ತು…

Read More

ತುಮಕೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಡಿ.31 ರಂದು ಬುಧವಾರ ತುಮಕೂರು ಎಂ.ಜಿ. ರಸ್ತೆಯಲ್ಲಿರುವ ಬಾಲ ಭವನದಲ್ಲಿ ನಡೆಯುವ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತ ನೌಕರರ ದಿನಾಚರಣೆಯಲ್ಲಿ ತುಮಕೂರು ತಾಲೂಕು ಮತ್ತು ನಗರದಲ್ಲಿರುವ 80 ವರ್ಷ ತುಂಬಿದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಲಾಗುವುದು. ಹಿಂದೆ ಸನ್ಮಾನ ಕ್ಕೆ ಒಳಪಡದ ವರು ಮಾತ್ರ ಅರ್ಹರು. ಅಂತಹವರು ನಿಗದಿತ ನಮೂನೆಯಲ್ಲಿ ತಮ್ಮ ಬಗ್ಗೆ ಮಾಹಿತಿಯನ್ನು ಸಂಘದ ಕಚೇರಿಗೆ ದಿನಾಂಕ 23.12.2025 ರ ಒಳಗಾಗಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449043055 ನ್ನು ಸಂಪರ್ಕಿಸ ಬೇಕೆಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More