Subscribe to Updates
Get the latest creative news from FooBar about art, design and business.
- ‘ಗರ್ಭಿಣಿನೂ ಇಲ್ಲ, ಮಹಿಳೆಯೂ ಇಲ್ಲ… ಕಾರಿನಲ್ಲಿ ಒಬ್ಬರೇ ಇದ್ದಿದ್ದು!’: ಝೀರೋ ಟ್ರಾಫಿಕ್ ಪ್ರತಿಭಟನೆಯ ಅಸಲೀಯತ್ತು ಬಿಚ್ಚಿಟ್ಟ ಬೆಂಗಳೂರು ಪೊಲೀಸರು
- ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಜೂನ್ 3 ರಂದು ವಿಧಾನಸೌಧ ಸುತ್ತಮುತ್ತಲಿನ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ
- ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಕಾಂಗ್ರೆಸ್ ಮುಖಂಡ ಒತ್ತಾಯ
- ಮಿಡಿಗೇಶಿ: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಯುವಕ ಪ್ರಾಣಾಪಾಯದಿಂದ ಪಾರು!
- ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ಮಾಹಿತಿಗೆ ಸೂಚನೆ
- ಸಾರಿಗೆ ಬಲಪಡಿಸಲು ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಿ: ಕೆ.ಎನ್.ರಾಜಣ್ಣ ಕರೆ
- ತಿಪಟೂರು ರೋಟರಿ ಕ್ಲಬ್ ನ ಪಬ್ಲಿಕ್ ಇಮೇಜ್ ಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
Author: admin
ಬೀದರ್: ಭಾರತೀಯ ವಾಯುಪಡೆ ಬೀದರನ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ನಿಂದ ಬೀದರ ಕೋಟೆಯ ಮೇಲೆ ಶುಕ್ರವಾರ ಆಕರ್ಷಕ ಏರ್ ಶೋ ನಡೆಯಿತು. ಸೂರ್ಯಕಿರಣ ಟೀಂ ಲೀಡರ್ ಗ್ರುಪ್ ಕ್ಯಾಪ್ಟನ್ ಗುರುಪ್ರಿತಸಿಂಗ್ ದಿಲ್ಲೋನ್ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ರೀತಿಯಲ್ಲಿ ಆಕರ್ಷಕ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಮಂತ್ರಮುಗ್ದರನ್ನಾಗಿಸಿದವು. ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ. ಪರಸ್ಪರ ಒಂದಾನೊಂದು ಎದುರಿಗೆ ಕ್ರಾಸಿಂಗ್. ಬ್ಯಾರಲ್ ರೋಲ್. ರಾಷ್ಟ್ರೀ ಧ್ವಜ ಕೇಸರಿ. ಬಿಳಿ. ಹಸಿರು ಬಣ್ಣಗಳು ಹಾಗೂ ಹೃದಯದ ಚಿತ್ರಗಳನ್ನು ಬಿಡುಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಮೂಲಕ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. ಕೆಲವೊಂದು ಸಲ ಒಂಟಿಯಾಗಿ. ಜೋಡಿಯಾಗಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳು ಆಕಾಶದಲ್ಲಿ ಯಾವ ದಿಕ್ಕಿನಿಂದ ವಿಮಾನಗಳು ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು. 1996 ರಲ್ಲಿ ಆರಂಭಿಸಲಾದ ಸೂರ್ಯಕಿರಣ ಏರೋಬ್ಯಾಟಿಕ್ ಟೀಂ ವಿಮಾನಗಳು ಇಲ್ಲಿಯವರೆಗೆ ಭಾರತ ಮಾತ್ರವಲ್ಲದೆ ಶ್ರೀಲಂಕಾ. ಸಿಂಗಾಪುರ್. ದುಬೈ ಸೇರಿದಂತೆ ಇತರೆ…
ಪಾವಗಡ: ಶ್ರಾವಣ ಮಾಸದಲ್ಲಿ ಪಾವಗಡದ ಶನಿಮಹಾತ್ಮ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತದೆ. ಅದರಂತೆ ಈ ವರ್ಷವೂ ಕಳೆದ ಮೂರು ವಾರಗಳಿಂದ ಶ್ರೀ ಸ್ವಾಮಿಯ ದರ್ಶನ ಭಾಗ್ಯಕ್ಕಾಗಿ ಕರ್ನಾಟಕವಲ್ಲದೆ ಅಂತರಾಜ್ಯಗಳಿಂದ ಭಕ್ತ ಸಮೂಹ ಕಿಕ್ಕಿರಿದು ಬಂದಿದ್ದು ಸಾಕ್ಷಿಯಾಗಿದೆ. ನಂಬಿ ಬಂದ ಭಕ್ತರ ಬದುಕಿನಲ್ಲಿ ಅನೇಕ ಅಚ್ಚರಿಗಳನ್ನು ಮೂಡಿಸುತ್ತಿರುವ ಶನಿಮಹಾತ್ಮ ಮತ್ತು ಶೀತಲಾಂಬ ತಾಯಿಯ ಲೀಲೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಬರುವಿಕೆ ಹೆಚ್ಚಳವಾಗುತ್ತಿದೆ. ಇಲ್ಲಿ ವಿಶೇಷವಾಗಿ ನವಗ್ರಹ ಹೋಮ, ಚಂಡಿಕ ಹೋಮ ಇನ್ನಿತರೆ ಪೂಜಾ ಕೈಂಕರ್ಯ ಕಂಡ ಭಕ್ತರು ಪುನೀತರಾಗುತ್ತಿದ್ದಾರೆ. ಇನ್ನು ಶೀತಲಾಂಬಿಕೆ ಪೂಜೆ ಮಾಡಿದರೆ ಮದುವೆ ಆಗದವರಿಗೆ ಕಂಕಣ ಬಲ ಮನಶಾಂತಿ ನೆಮ್ಮದಿ ಕರುಣಿಸುತ್ತಾಳೆ ಎಂಬ ನಂಬಿಕೆ ಅಚಲವಾಗಿದೆ. ಮತ್ತೊಂದು ವಿಶೇಷ ಅಂದ್ರೆ ಬಂದಂತಹ ಭಕ್ತರಿಗೆ ಎಲ್ಲಿಯೂ ಸಮಸ್ಯೆಯಾಗದಂತೆ ಎಸ್ ಎಸ್ ಕೆ ಸಂಘದವರು ಜಾಗೃತವಾಗಿ ಮೂಲಭೂತ ಸೌಕರ್ಯಗಳಾದ ಪ್ರಸಾದ, ಕೊಠಡಿ, ದರ್ಶನ ಸೌಲಭ್ಯ ನಿರ್ವಹಣೆ ಮಾಡುತ್ತಿರುವುದು ಮೆಚ್ಚುಗೆ ವ್ಯಕ್ತವಾಗಿದೆ. ಎಸ್ ಎಸ್ ಕೆ ಸಂಘದ ಅಧ್ಯಕ್ಷರು ಆನಂದರಾವ್ ಅವರು…
ವಿವೇಕಾನಂದ. ಎಚ್. ಕೆ. ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ನಗದು ಹಣವನ್ನು ಹಂಚಿಕೆ ಮಾಡುತ್ತಿದ್ದರು. ಅಲ್ಲಿ ಸುಮಾರು 40 – 50 ವಿವಿಧ ಕೆಲಸಗಾರರು ಸೇರಿದ್ದರು. ಅದರಲ್ಲಿ ಹೆಂಗಸರು ಸಹ ಬಹುತೇಕ ಸಮ ಪ್ರಮಾಣದಲ್ಲಿ ಇದ್ದರು. ಕೆಲವರು ನೆಲದ ಮೇಲೆ, ಸ್ವಲ್ಪ ಜನ ಅಲ್ಲಿದ್ದ ಸಿಮೆಂಟ್ ಇಟ್ಟಿಗೆಗಳ ಮೇಲೆ, ಹಲವರು ಪ್ಲಾಸ್ಟಿಕ್ ಚೀಲಗಳ ಮೇಲೆ ಕುಳಿತು ತದೇಕ ಚಿತ್ತದಿಂದ ಮೇಸ್ತ್ರಿ ಎಣಿಸುವ ದುಡ್ಡನ್ನೇ ನೋಡುತ್ತಾ ಕುಳಿತಿದ್ದರು. ಒಂದಿಬ್ಬರು ಎಲೆ ಅಡಿಕೆ, ಮತ್ತಿಬ್ಬರು ಸಿಗರೇಟು, ಇನ್ನಿಬ್ಬರು ವಿಮಲ್ ಅಡಿಕೆ ಪುಡಿ ಹಾಕುತ್ತಾ ಹಣವನ್ನೇ ದಿಟ್ಟಿಸುತ್ತಿದ್ದರು. ಹೆಣ್ಣು ಮಗಳೊಬ್ಬರು ಮಗುವಿಗೆ ಹಾಲು ಕುಡಿಸುತ್ತಿದ್ದರೆ ಮತ್ತೊಂದು ಹೆಂಗಸು ತಲೆ ಬಾಚಿಕೊಳ್ಳುತ್ತಾ ಹಣವನ್ನೇ ನೋಡುತ್ತಿತ್ತು. ಅಲ್ಲಿ ಒಬ್ಬಬ್ಬರಿಗೆ ಅಂದಾಜು ಸುಮಾರು 3 ರಿಂದ 5…
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 Provided by ಮೇಷ ರಾಶಿ: ಮೇಷ ರಾಶಿಯ ಜನರು ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಾರೆ ಗುತ್ತಿಗೆ ವ್ಯವಹಾರದಲ್ಲಿ ಎಡವು ಬೀಳುವ ಸಾಧ್ಯತೆ ಇದೆ ಎಚ್ಚರ!! ಮಿಥುನ ರಾಶಿ: ಮಿಥುನ ರಾಶಿಯ ಜನರು ಅಪರಿಚಿತ ವ್ಯಕ್ತಿಗಳ ನಡುವೆ ತಾಳ್ಮೆಯಿಂದ ವರ್ತಿಸುವುದನ್ನು ಕಲಿಯಿರಿ. ಐಸ್ ಕ್ರೀಮ್ ತಂಪು ಪಾನೀಯ…
‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಂದನ್ ಶೆಟ್ಟಿ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದರ ಟೈಟಲನ್ನು ಇಂದು ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಮುದ್ದು ರಾಕ್ಷಸಿ’ ಎಂಬ ಟೈಟಲ್ ಇಡಲಾಗಿದ್ದು, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪುನೀತ್ ಶ್ರೀನಿವಾಸ್ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಲ್ ಮೋಹನ್ ಕುಮಾರ್ ನಿರ್ಮಾಣ ಮಾಡಿದ್ದು, ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಸಚಿನ್ ಜಗದೇಶ್ವರನ್ ಸಂಭಾಷಣೆ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿನೋದ್ ಅವರ ಸಾಹಸ ನಿರ್ದೇಶನ, ಧನು ಹಾಗೂ ಸಂತೋಷ್ ನೃತ್ಯ ನಿರ್ದೇಶನ, ಹಾಗೂ ಏ ಕರುಣಾಕರ್ ಅವರ ಛಾಯಾಗ್ರಾಣವಿದೆ. ‘ಮುದ್ದು ರಾಕ್ಷಸಿ ‘ ಟೈಟಲ್ ಭಿನ್ನವಾಗಿದ್ದು, ಜನರಲ್ಲಿ ಕೌತುಕ ಮೂಡಿಸಿದೆ. ಇದರಲ್ಲಿ ಒಂದು ಡಿಫರೆಂಟ್ ಆದ ರೊಮ್ಯಾಂಟಿಕ್ ಪ್ರೇಮ್ ಕಹಾನಿ ಇರಲಿದೆ. ಸೈಕೋಥ್ರಿಲ್ಲರ್ ಕಥಾಹಂದರ ಪ್ರಮುಖವಾಗಿ ಇರಲಿದೆ. ಮೊದಲು ಈ ಸಿನಿಮಾಕ್ಕೆ…
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿರುವ ಉಚಿತ ಹೊಲಿಗೆ ಯಂತ್ರ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು. ಈ ಯೋಜನೆಯಡಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತದೆ ಮತ್ತು ಅವರಿಗೆ ಹೊಲಿಗೆ ತರಬೇತಿಯನ್ನೂ ನೀಡಲಾಗುತ್ತದೆ. ಇದರೊಂದಿಗೆ ಮಹಿಳೆಯರು ಮನೆಯಲ್ಲಿಯೇ ಇದ್ದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಮತ್ತು ಅಪ್ಲಿಕೇಶನ್ ಪ್ರಕ್ರಿಯೆಯ ಕುರಿತು ನಾವು ಇಲ್ಲಿ ನಿಮಗೆ ವಿವರವಾಗಿ ಹೇಳುತ್ತೇವೆ. ಉಚಿತ ಹೊಲಿಗೆ ಯಂತ್ರ ಯೋಜನೆ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಉಚಿತ ಹೊಲಿಗೆ ಯಂತ್ರ ಯೋಜನೆಯ ಉದ್ದೇಶವಾಗಿದೆ. ಇದರ ಅಡಿಯಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುವುದಲ್ಲದೆ, ಅವರಿಗೆ ಹೊಲಿಗೆಗೆ ಅಗತ್ಯವಾದ ತರಬೇತಿಯನ್ನು ಸಹ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನವು 20 ರಿಂದ 40 ವರ್ಷ ವಯಸ್ಸಿನ ಮಹಿಳೆಯರಿಗೆ, ವಿಶೇಷವಾಗಿ ಬಡ ಮತ್ತು ದುರ್ಬಲ ಕುಟುಂಬಗಳ ಮಹಿಳೆಯರಿಗೆ ಲಭ್ಯವಿದೆ. ಯೋಜನೆಯ ಲಾಭವನ್ನು ಆರ್ಥಿಕವಾಗಿ ದುರ್ಬಲ ಮತ್ತು ವಿಶೇಷ ಚೇತನ ಮಹಿಳೆಯರಿಗೆ ಮೊದಲು ನೀಡಲಾಗುತ್ತದೆ. ಉಚಿತ ಹೊಲಿಗೆ ಯಂತ್ರ…
ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್.ಶ್ರೀನಿವಾಸ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಇವರಿಗೆ 85 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾನುಗೋಡು ಗ್ರಾಮದಲ್ಲಿ1939ರ ಫೆಬ್ರವರಿ 5ರಂದು ಜನಿಸಿದ ಕೆ.ಎಚ್. ಶ್ರೀನಿವಾಸ್ ಇಂಗ್ಲೀಷ್ ಎಂಎ ಜೊತೆಗೆ ಕಾನೂನು ಪದವಿ ಪಡೆದಿದ್ದರು. ಶ್ರೀನಿವಾಸ್ ಮೊದಲು ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಶ್ರೀನಿವಾಸ್, ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ, ಕೃಷಿಕರೂ ಆಗಿದ್ದರು. ಕವಿಯಾಗಿ, ಲೇಖಕರಾಗಿ ಹಲವು ಮಹತ್ವದ ಕೃತಿಗಳನ್ನು ನೀಡಿದ್ದ ಅವರು, ಸಿನೆಮಾದಲ್ಲೂ ಅಭಿನಯಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು.…
ಅಮೆರಿಕ ಮೂಲದ ವೈದ್ಯರೊಬ್ಬರು ಬೇಯಿಸದ ಅಥವಾ ಅರ್ಧ ಬೇಯಿಸಿದ ಹಂದಿಮಾಂಸವನ್ನು ಸೇವಿಸುವುದರಿಂದ ಉಂಟಾಗುವ ಅಪಾಯವನ್ನು ತಿಳಿಸಿದ್ದಾರೆ. ಯುನಿವರ್ಸಿಟಿ ಆಫ್ ಫ್ಲೋರಿಡಾ ಹೆಲ್ತ್ ಜಾಕ್ಸನ್ವಿಲ್ಲೆಯ ಡಾ.ಸ್ಯಾಮ್ಘಾಲಿ ಅವರು ವೈದ್ಯಕೀಯ ತುರ್ತುಸ್ಥಿತಿ ಹಾಗೂ ರೋಗಗಳ ಬಗೆ ಎಲ್ಲರಿಗೂ ತಿಳಿದಿರಲಿ ಎಂಬ ಕಾರಣಕ್ಕೆ ಹಲವು ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಡಾ.ಘಾಲಿ ಸೋಂಕಿನಿಂದ ಬಳಲುತ್ತಿರುವ ರೋಗಿಯೊಬ್ಬರ ಸಿಟಿ ಸ್ಕ್ಯಾನ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವ್ಯಕ್ತಿಯು ಪೋರ್ಕ್ ಟೇಪ್ವರ್ಮ್ನ ಲಾರ್ವಾ ಸಿಸ್ಟ್ಗಳಿಂದ ನರಳುತ್ತಿದ್ದಾನೆ. ಇದರ ವೈಜ್ಞಾನಿಕ ಹೆಸರು ಟೇನಿಯಾ ಸೋಲಿಯಮ್ ಎಂದು ವಿವರಿಸಿದ್ದಾರೆ. ಇದು ಬೇಯಿಸದ ಹಂದಿಮಾಂಸದಲ್ಲಿ ಕಂಡುಬರುವ ಸೋಂಕಾಗಿದೆ. ಇದನ್ನು ಸೇವಿಸುವ ಮೂಲಕ ಮನುಷ್ಯರು T. Solium ಸೋಂಕಿಗೆ ಒಳಗಾಗುತ್ತಾರೆ ಎಂದು ವಿವರಿಸಿದ್ದಾರೆ. ಇದನ್ನು ಸೇವಿಸಿದ 5 ರಿಂದ 12 ವಾರಗಳ ನಂತರ ಈ ಸೋಂಕು ಜೀರ್ಣಾಂಗವ್ಯೂಹದೊಳಗೆ ಪ್ರೌಢವಸ್ಥೆಯ ಟೇಪ್ವರ್ಮ್ಗಳಾಗಿ ವಿಕಸನಗೊಳ್ಳುತ್ತವೆ. ಇದನ್ನು ಕರುಳಿನ ಟೇನಿಯಾಸಿಸ್ ಎಂದು ಕರೆಯಲಾಗುತ್ತದೆ. ಕೆಲವರಲ್ಲಿ ಇದು ಮೆದುಳಿಗೆ ಸಾಗಿ ಮೆದುಳಿನ ಅಂಗಾಂಶದಲ್ಲಿ ಟೇಪ್ವರ್ಮ್ ಅನ್ನು ರಚಿಸುತ್ತದೆ. ಇದರಿಂದ ತಲೆನೋವು ಸೇರಿ…
ಪಾವಗಡ: ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ 2024–25 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಬಾಲಕರ ಫುಟ್ಬಾಲ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಹೆಸರಾಂತ ವಾಸವಿ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಈ ಸಾಧನೆಗೆ ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಪ್ರೇಮಯೋಗಿ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳಾದ ಶ್ರೀನಿವಾಸ್, ಪ್ರಾಂಶುಪಾಲ ಸತ್ಯನಾರಾಯಣ ರೆಡ್ಡಿ, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರಾದ ಶ್ರೀನಿವಾಸ್, ಸಹ ಶಿಕ್ಷಕರು, ಪೋಷಕರು ಸೇರಿ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ನವದೆಹಲಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತನ್ನ ಸ್ಪರ್ಧೆ ಖಚಿತ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ. ಅಭ್ಯರ್ಥಿ ಆಯ್ಕೆಯ ಕುರಿತಾಗಿ ಬಿಜೆಪಿ, ಜೆಡಿಎಸ್ ನಾಯಕರು ಸಮಾಲೋಚನೆ ನಡೆಸಿದ್ದಾರೆ. ತಮ್ಮನ್ನೇ ಕಣಕ್ಕೆ ಇಳಿಸಬೇಕೆಂದು ಸಿ.ಪಿ. ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮನವೊಲಿಸಬೇಕೆಂದು ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ದೆಹಲಿ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಭೆ ನಡೆಸಿದ್ದು, ಈ ಬಾರಿ ಯೋಗೇಶ್ವರ್ ಗೆ ಅವಕಾಶ ನೀಡಬೇಕೆಂದು ಮನವಿ ಮಾಡಲಾಗಿದೆ. ಇದಕ್ಕೆ ಕುಮಾರಸ್ವಾಮಿ ಒಪ್ಪಿಲ್ಲ. ಬಿಜೆಪಿ ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಟಿಕೆಟ್ ಸಿಗಲಿ, ಬಿಡಲಿ ಸ್ಪರ್ಧೆಯಂತೂ ನಿಶ್ಚಿತವೆಂದು ಸಿ.ಪಿ. ಯೋಗೇಶ್ವರ್ ಹೇಳಿದ್ದು, ನಾಯಕರ ಮುಂದೆ ಮೂರು ಆಯ್ಕೆಗಳನ್ನು ಇಟ್ಟಿದ್ದಾರೆ. ಬಿಜೆಪಿಯಿಂದ ಸ್ಪರ್ಧೆಗೆ ಟಿಕೆಟ್ ನೀಡಬೇಕು. ಒಂದು ವೇಳೆ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದಾದಲ್ಲಿ ನಾನೇ…