ತುರುವೇಕೆರೆ: ಸರ್ಕಾರದಿಂದ ಆಟೋ ಚಾಲಕರಿಗೆ ಸಿಗುವ ಸವಲತ್ತುಗಳನ್ನು ನಿಮಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲ್ಲೂಕಿನ ಲೈಸೆನ್ಸ್ ಇಲ್ಲದ ಆಟೋ ಚಾಲಕರಿಗೆ ಲೈಸೆನ್ಸ್ ಮತ್ತು ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು, ಈಗ ನನ್ನ ಸ್ವಂತ ಖರ್ಚಿನಿಂದ 53 ಚಾಲಕರಿಗೆ ಲೈಸೆನ್ಸ್ ಮತ್ತು 80 ಚಾಲಕರಿಗೆ ಸಮವಸ್ತ್ರ ವಿತರಿಸಲಾಗುತ್ತಿದೆ. ನಿಮ್ಮ ಆಟೋಗಳಿಗೆ ಕಡ್ಡಾಯವಾಗಿ ಇನ್ಸೂರೆನ್ಸ್ ಮಾಡಿಸಿ, ನಿಮ್ಮ ಕಷ್ಟಗಳ ಬಗ್ಗೆ ನನಗೆ ಅರಿವಿದೆ, ನಿಮ್ಮ ಜೊತೆ ನಾನಿರುತ್ತೇನೆ ಎಂದು ಧೈರ್ಯ ಹೇಳಿದರು.
ನಿಮ್ಮ ಬಳಿ ಅಗತ್ಯ ಪರವಾನಗಿ ಮತ್ತು ದಾಖಲೆಗಳನ್ನು ಹೊಂದಿ, ಪೊಲೀಸರಿಂದ ಬೀಳುವ ಫೈನ್ ಗಳಿಂದ ದೂರವಿರಿ. ಯಾವುದೇ ತರನಾದ ದಂಡವನ್ನು ಕಟ್ಟದ ರೀತಿಯಲ್ಲಿ ಅಗತ್ಯ ಧಾಖಲೆ ಇಟ್ಟುಕೊಳ್ಳಿ. ಇನ್ಸೂರೆನ್ಸ್ ಅನ್ನು ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸರ್ಕಾರದಿಂದ ಮತ್ತು ನಿಗಮದಿಂದ ಬರುವ ಸವಲತ್ತುಗಳನ್ನು ತಲುಪಿಸಲಾಗುವುದು. ಈಗ ಸರ್ಕಾರದಿಂದ ಎರಡು ಆಟೋಗಳನ್ನೂ ಕೊಡಲು ವ್ಯವಸ್ಥೆ ಮಾಡಿದ್ದೇನೆ. ನಾನು ಸುಳ್ಳು ಆಶ್ವಾಸನೆ ಕೊಡುವುದಿಲ್ಲ, ನಿವೇಶನಗಳನ್ನು ಸರ್ಕಾರದಿಂದ ಈಗ ಕೊಡಲು ಸಾಧ್ಯವಿಲ್ಲ ಮುಂದೆ ನೋಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷ ಗಂಗಾಧರ್, ಮುಖಂಡರಾದ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಚಿದಾನಂದ್, ಸುರೇಶ, ಸುಬ್ಬಣ್ಣ, ನವೀನ್ ಬಾಬು ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1