ಕೊರಟಗೆರೆ: ಡಾಂಬರು ತುಂಬಿದ ಡ್ರಮ್ ಟ್ರಾಕ್ಟರ್ ನಿಂದ ಕೆಳಕ್ಕೆ ಉರುಳಿ ಬಿದ್ದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಸೇರಿದಂತೆ ಇಬ್ಬರ ಕಣ್ಣುಗಳಿಗೆ ಡಾಂಬಾರು ತಗುಲಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.
ಕೊರಟಗೆರೆ ಇಂದ ಮಧುಗಿರಿ ಕಡೆಗೆ ಆಟೋದಲ್ಲಿ ತೆರಳುತ್ತಿದ್ದ ಪ್ರಯಾಣಿಕ ಮೇಲೆ ಟ್ರಾಕ್ಟರ್ ನಿಂದ ಡಾಂಬಾರು ಡ್ರಮ್ ಉರುಳಿ ಬಿದ್ದಿದ್ದು, ಪರಿಣಾಮವಾಗಿ ಪ್ರಯಾಣಿಕರ ಕಣ್ಣುಗಳಿಗೆಯೇ ಡಾಂಬಾರು ತಾಗಿದ್ದು, ತಕ್ಷಣವೇ ಅವರನ್ನು ಕೊರಟಗೆರೆ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ತಹಶೀಲ್ದಾರ್ ನಾಹಿದಾ ಜಂ ಜಂ, ಮಾಧ್ಯಮಗಳ ಜೊತೆಗೆ ಮಾತನಾಡಿ, ಸುಮಾರು 11:30ರ ವೇಳೆ ಈ ಅನಾಹುತವಾಗಿದೆ. ಕೊರಟಗೆರೆಯಿಂದ ಮಧುಗಿರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ರೋಡಿಗೆ ಡಾಂಬಾರು ಹಾಕುತ್ತಿದ್ದ ವೇಳೆ ಒಂದು ಟಿನ್ ಉರುಳಿ ಬಿದ್ದು, ಆಟೋದಲ್ಲಿದ್ದವರ ಕಣ್ಣೊಳಗೆ ಡಾಂಬಾರು ಹೋಗಿದೆ. ತಕ್ಷಣ ಸರ್ಕಾರಿ ಆಸ್ಪತ್ರೆಗೆ ಅವರನ್ನು ಸಾಗಿಸಲಾಗಿದೆ ಎಂದರು.
ಆಟೋದಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಮತ್ತು ಮಗಳು ಇಬ್ಬರ ಕಣ್ಣೊಳಗೂ ಟಾರು ಹೋಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತುಮಕೂರಿಗೆ ಕಳುಹಿಸಲಾಗಿದೆ. ಘಟನೆ ಬಗ್ಗೆ ಟಾರ್ ಹಾಕುತ್ತಿದ್ದ ಕಾಂಟ್ರಾಕ್ಟರ್ ಜೊತೆಗೆ ನಾವು ಮಾತನಾಡಿದ್ದೇವೆ. ಗಾಯಾಳುಗಳಿಗೆ ನಷ್ಟ ಪರಿಹಾರ ನೀಡುವಂತೆ ಮತ್ತು ಇನ್ನು ಮುಂದೆ ಇಂತಜಹ ಘಟನೆ ನಡೆದರೆ ನಮ್ಮ ಪರವಾನಿಗೆ ರದ್ದುಪಡಿಸಬಹುದು ಎನ್ನುವ ಮುಚ್ಚಳಿಕೆ ಬರೆದುಕೊಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5