30 ವರ್ಷದ ಹಿಂದೆ ಶೈತ್ಯೀಕರಿಸಲಾಗಿದ್ದ ಭ್ರೂಣದಿಂದ ಯುಎಸ್ ನ ರಾಚೆಲ್ ರಿಡ್ಜ್‌ವೇ ಮತ್ತು ಫಿಲಿಪ್ ರಿಡ್ಜ್‌ವೇ ದಂಪತಿ ಅವಳಿ ಮಕ್ಕಳನ್ನು ಪಡೆದು ಸುದ್ದಿಯಾಗಿದ್ದಾರೆ.
ಅಮೇರಿಕಾದ ಒರೆಗಾನ್ ದಂಪತಿಗೆ ಜನಿಸಿದ ಮಕ್ಕಳು ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಹಿಂದಿನ ದಾಖಲೆಯಲ್ಲಿ ಮೊಲ್ಲಿ ಗಿಬ್ಸನ್ 27 ವರ್ಷ ಸಂಗ್ರಹವಾಗಿದ್ದ ಭ್ರೂಣದಿಂದ 2020 ರಲ್ಲಿ ಅವಳಿ ಮಕ್ಕಳನ್ನು ಪಡೆದಿದ್ದರು.
ಸದ್ಯ ಒರೆಗಾನ ದಂಪತಿಗೆ ಜನಿಸಿದ ಮಕ್ಕಳನ್ನು ವಿಶ್ವದ ಅತ್ಯಂತ ಹಳೆಯ ಮಕ್ಕಳು ಎಂದು ಕರೆಯಲಾಗುತ್ತಿದೆ. ಹೆಣ್ಣು ಮಗು ಲಿಡಿಯಾ 5 ಪೌಂಡ್, 11 ಔನ್ಸ್, (2.5 ಕೆಜಿ) ಗಂಡು ಮಗು ತಿಮೋತಿ 6 ಪೌಂಡ್, 7 ಔನ್ಸ್ (2.92 ಕೆಜಿ) ತೂಕವಿತ್ತು. ಈಗಾಗಲೇ 8, 6, 3 ಮತ್ತು 2 ವರ್ಷ ನಾಲ್ಕು ಮಕ್ಕಳನ್ನು ಹೊಂದಿರುವ ರಿಡ್ಜ್‌ವೇಸ್ ದಾನ ಪಡೆದ ಭ್ರೂಣಗಳನ್ನು ಬಳಸಿಕೊಂಡು ಹೆಚ್ಚಿನ ಮಕ್ಕಳನ್ನು ಪಡೆದಿದ್ದಾರೆ.
ದಾನಿಗಳಿಂದ ಭ್ರೂಣಗಳನ್ನು ಏಪ್ರಿಲ್ 22, 1992 ರಂದು ಫ್ರೀಜ್ ಮಾಡಲಾಗಿತ್ತು, 2007 ರವರೆಗೆ ವೆಸ್ಟ್ ಕೋಸ್ಟ್ ಫರ್ಟಿಲಿಟಿ ಲ್ಯಾಬ್‌ನಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿ ಇತ್ತು, ಹದಿನೈದು ವರ್ಷಗಳ ನಂತರ, ಹೆಪ್ಪುಗಟ್ಟಿದ ಭ್ರೂಣಗಳು ಲಿಡಿಯಾ ಮತ್ತು ತಿಮೋತಿ ಜನ್ಮಕ್ಕೆ ಕಾರಣವಾಗಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


