ಸರಗೂರು: ವಿವಾಹದ ಹೆಸರಿನಲ್ಲಿ ಸಾಲ ಮಾಡಿ ಮದುವೆ ಮಾಡುವುದನ್ನು ತಪ್ಪಿಸಲು ಸಾಮೂಹಿಕ ವಿವಾಹ ಉತ್ತಮ ನಡೆ. ಸಾಮೂಹಿಕ ವಿವಾಹ ಏರ್ಪಡಿಸುವುದರಿಂದ ಬಡವ–ಬಲ್ಲಿದ, ಜಾತಿ, ಧರ್ಮದ ಸಂಕೋಲೆಯಿಂದ ಹೊರ ಬರಲು ಸಹಾಯವಾಗುತ್ತದೆ. ಭಾವೈಕ್ಯ ಬಿಂಬಿಸುವ ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಮಠಗಳಲ್ಲಿ ನಡೆಯಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಬಿಡಗಲು ಗ್ರಾಮದ ವಿರಕ್ತ ಮಠದಲ್ಲಿ ಶುಕ್ರವಾರದಂದು ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಒಂದು ಜತೆ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿದರು.
ನಮ್ಮ ತಾಲೂಕಿನ ವಿರಕ್ತ ಮಠದಲ್ಲಿ ಮೂರನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ ಮಠದ ಮಹದೇವಸ್ವಾಮಿಗಳುರವರಿಗೆ ವಂದನೆಗಳು ಸಲ್ಲುತ್ತವೆ ಎಂದರು.
ಮಠದ ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಮೂಹಿಕ ವಿವಾಹ ಹಾಗೂ ದಾಸೋಹ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಅವರ ಕೆಲಸಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಗುಂಡ್ಲುಪೇಟೆ ತಾಲೂಕಿನ ಶಾಸಕ ಗಣೇಶ ಪ್ರಸಾದ್, ಮಠಮಾನ್ಯಗಳಲ್ಲಿನಡೆಯುವ ಸಾಮೂಹಿಕ ಮದುವೆಗಳಲ್ಲಿವಿವಾಹವಾಗುವ ನವದಂಪತಿಗಳು ಪುಣ್ಯವಂತರು, ನವ ದಂಪತಿಗಳಿಗೆ ಅನೇಕ ಸ್ವಾಮೀಜಿಗಳು ಬಂದು ಆರ್ಶಿವಾದ ಮಾಡುತ್ತಾರೆ. ಆಶೀರ್ವಾದ ಪಡೆದ ನೀವುಗಳು ಪುಣ್ಯವಂತರು ಎಂದರು.
ಅವರು ಮದುವೆಯೆಂಬುದು ಎರಡು ವ್ಯಕ್ತಿಗಳ ಎರಡು ಮನಸ್ಸುಗಳ ಮಿಲನವೆ ಮದುವೆ, ಆದರಿಂದ್ದ ಮದುವೆಯು ಸ್ವರ್ಗಲೋಕದಲ್ಲಿಯೆ ನಿಶ್ಚಿಯವಾಗಿರುತ್ತದೆ ಎಂಬುದು ನಮ್ಮ ಹಿರಿಯರ ಭಾವನೆ ಆದರಿಂದ್ದ ಚನ್ನಾಗಿ ಬಾಳಿ ಸಮಾಜಕ್ಕೆ ಬೇಕಾಗಿರುವ ಉತ್ತಮ ನಾಗರಿಕರಾಗಿ ಜೀವನ ನಡಿಸಿ ಎಂದು ಹೇಳಿದರು.
ವಿರಕ್ತ ಮಠದ ಮಹದೇವಸ್ವಾಮಿಗಳು ಮಾತನಾಡಿ, ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಹೆಚ್ಚಿನ ಮಹತ್ವವಿದೆ. ಇಲ್ಲಿನ ಧಾರ್ಮಿಕ ಸಂಸ್ಕಾರಗಳು ವಿಶ್ವಕ್ಕೆ ಮಾದರಿಯಾಗಿವೆ. ನವಜೋಡಿಗಳು ಮುಂದಿನ ಬದುಕಿನಲ್ಲಿ ಪರಸ್ಪರ ಅರಿತು ಬಾಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾದಾಪುರ ಮಠದ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಸ್ವಾಮೀಜಿ, ಉದ್ಯಮಿ ಯು.ಎಸ್.ಶೇಖರ್, ಮೈಮುಲ್ ಅಧ್ಯಕ್ಷ ಈರೇಗೌಡ,ಅಭಾವಿಲಿಂ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಕೆ.ಎಸ್. ವೀರಭದ್ರಪ್ಪ, ಕೋಟೆ ತಾಲೂಕು ಘಟಕದ ಅಧ್ಯಕ್ಷ ಎಸ್.ರುದ್ರಪ್ಪ, ಪಪಂ ಅಧ್ಯಕ್ಷೆ ಚೈತ್ರ ಸ್ವಾಮಿ, ಸದಸ್ಯರಾದ ಶ್ರೀನಿವಾಸ, ಚೆಲುವ ಕೃಷ್ಣ,ಮುಖಂಡರಾದ ಸಿ ಕೆ ಗಿರೀಶ್, ಗಿರಿ ಕುಮಾರ್, ಗಿರೀಶ್, ಡಿ ಸಿ ಮಹೇಶ್, ರಾಜಪ್ಪ, ಸಿದ್ದಪ್ಪ ಇನ್ನೂ ಮುಖಂಡರು ಸೇರಿದಂತೆ ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


