ತುಮಕೂರು: ಪ್ರಸ್ತುತ ಬದಲಾಗುತ್ತಿರುವ ಮಾಡ್ರನ್ ಜಗತ್ತಿನಲ್ಲಿ ಡ್ರಗ್ಸ್ ಬಳಕೆ ಪಿಡುಗಾಗಿ ಪರಿಣಮಿಸಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ರೀತಿ ತುಮಕೂರಿನಲ್ಲಿ ಜಾಗೃತಿ ನಡಿಗೆ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ತಿಳಿಸಿದ್ದಾರೆ.
ನಮ್ಮ ಪೊಲೀಸ್ ನಮ್ಮ ಹೆಮ್ಮೆ ಧ್ಯೇಯ ವಾಕ್ಯದಡಿ, ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಡ್ರಗ್ಸ್ ಮತ್ತು ಸೈಬರ್ ವಂಚನೆ ವಿರುದ್ಧ ಜಾಗೃತಿ ನಡಿಗೆ ಆಯೋಜಿಸಲಾಗಿತ್ತು. 1,500 ಮಂದಿ ಪೊಲೀಸ್ ಸಿಬ್ಬಂದಿಗಳು, ವಿದ್ಯಾಥಿಗಳು, ಕ್ರೀಡಾಪಟುಗಳು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಮೊದಲ 50 ಮಂದಿಗೆ ಮೆಡಲ್ ಗಳನ್ನು ಕೊಡಲಾಯಿತು. ಜಾಗೃತಿ ನಡಿಗೆಯಲ್ಲಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಕೂಡ ಸಕ್ರಿಯವಾಗಿ ಪಾಲ್ಗೊಂಡರು.
ನಮ್ಮ_ಪೋಲಿಸ್_ನಮ್ಮ_ಹೆಮ್ಮೆಎಂಬ ದ್ಯೇಯ ವಾಕ್ಯ ದೊಂದಿಗೆ “TUMAKURU RUN–5K & 10K” ಇಂದು ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಿಂದ ಬೆಳಗ್ಗೆ 7 ಗಂಟೆಗೆ ಏರ್ಪಡಿಸಿದ್ದು ಓಟವನ್ನು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ರವರು ಉದ್ಘಾಟಿಸಿದರು.
ಎಸ್.ಎಸ್. ಸರ್ಕಲ್, ಟೌನ್ ಹಾಲ್ ಸರ್ಕಲ್, ಕಾಲ್ಟಾಕ್ಸ್ ಸರ್ಕಲ್, ಮಂಡಿ ಪೇಟೆ, ಚರ್ಚ್ ಸರ್ಕಲ್ ಮುಖಾಂತರ ಗಾಜಿನ ಮನೆಯ ಬಳಿ ಮುಕ್ತಾಯಗೊಂಡಿತು. ಈ ಮ್ಯಾರಥಾನ್ ನಲ್ಲಿ ಜಿಲ್ಲೆಯ ಓಟಗಾರರು, KSRP ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ತುಮಕೂರಿನ ಸಾರ್ವಜನಿಕರು ಭಾಗವಹಿಸಿದ್ದರು, ವಿಜಯಶಾಲಿ ಓಟಗಾರರಿಗೆ ಪದಕವನ್ನು ವಿತರಿಸಲಾಯಿತು. ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ ನಡೆದಿದ್ದ ಈ ಮ್ಯಾರಥಾನ್ ನಲ್ಲಿ ಹೆಚ್ಚವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ ಮತ್ತು ಅಬ್ದುಲ್ ಖಾದರ್ ,ಹಾಗೂ ಜಿಲ್ಲೆಯ ಪೊಲೀಸ್ ಉಪಾಧೀಕ್ಷಕರುಗಳು ,ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4