ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ಮುಖಂಡರು ಬಿಜೆಪಿ ಸೇರ್ಪಡೆಯಾದರು.
ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಜೆಡಿಎಸ್ ಮುಖಂಡ ಕೋನಪ್ಪರೆಡ್ಡಿ, ಚಿಂತಾಮಣಿ ಕ್ಷೇತ್ರದ ಜಿ.ಎನ್. ವೇಣುಗೋಪಾಲ್, ವಾಣಿ ಕೃಷ್ಣಾರೆಡ್ಡಿ, ಬಮೂಲ್ ನಿರ್ದೇಶಕ ಶ್ರೀನಿವಾಸ್, ಜಿ.ಪಂ. ಮಾಜಿ ಸದಸ್ಯ ಪಿ.ಎಸ್. ಸುಬ್ಬಾರೆಡ್ಡಿ ಅವರು ಇಂದು ಬಿಜೆಪಿ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಒಂದು ಕುಟುಂಬ ಇದ್ದ ಹಾಗೆ. ಇಂದು ಪಕ್ಷಕ್ಕೆ ಸೇರಿದ ಎಲ್ಲರನ್ನೂ ಇಲ್ಲಿ ಗೌರವದಿಂದ ನೋಡಿಕೊಳ್ಳುತ್ತೇವೆ. ಎಲ್ಲಾ ರಾಜ್ಯಗಳಲ್ಲಿ ಸದೃಢವಾಗಿರುವ, ಭವಿಷ್ಯವಿರುವ ಪಕ್ಷ ಬಿಜೆಪಿ. ಬಿಜೆಪಿಗೆ ಬರುವವರ ಭವಿಷ್ಯವೂ ಉತ್ತಮವಾಗುತ್ತದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಅಭಿವೃದ್ಧಿ ಆಗುತ್ತಿವೆ. ಈ ಎರಡೂ ಕಡೆಯೂ ನಾವೇ ಪ್ರಬಲರು ಅಂತ ಕಾಂಗ್ರೆಸ್, ಜೆಡಿಎಸ್ ಅಂದುಕೊಂಡಿದ್ದಾರೆ. ಎರಡೂ ಜಿಲ್ಲೆಗಳಲ್ಲೂ ರಾಜಕೀಯವಾಗಿ ದೊಡ್ಡ ಬದಲಾವಣೆ ಆಗುತ್ತಿದೆ. 2023 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ನವರು ಹತಾಶೆಯಾಗಿ ಏನೇನೋ ಭರವಸೆ ಕೊಡುತ್ತಿದ್ದಾರೆ. ಕಾಂಗ್ರೆಸ್ ನವರ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


