ತಿಂಗಳಿಗೆ 3 ಸಾವಿರ ರೂಪಾಯಿ ಸಂಬಳಕ್ಕಾಗಿ ಟೀಚರ್ ಆಗಿ ಕೆಲಸ ಮಾಡಿದ್ದೆ ಎಂದು ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದಾರೆ.
ನವ್ಯಾ ನವೇಲಿ ನಂದಾ ಅವರ ವಾಟ್ ದ ಹೆಲ್ ನವ್ಯಾ ಕಾರ್ಯಕ್ರಮದಲ್ಲಿ ಹಣಕಾಸಿನ ವ್ಯವಹಾರ ಹಾಗೂ ತಮ್ಮ ಸಂಬಂಧಗಳ ಕುರಿತು ಮೊದಲ ಬಾರಿ ಶ್ವೇತಾ ಬಚ್ಚನ್ ಬಹಿರಂಗಪಡಿಸಿದ್ದಾರೆ.
ನನಗೆ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವ ಕುರಿತು ತಾಯಿ ಜಯಾ ಬಚ್ಚನ್ ತಿಳುವಳಿಕೆ ನೀಡದೇ ಇರುವುದಕ್ಕೆ ಶ್ವೇತಾ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ.
ಪ್ರಸ್ತುತ ಅಂಕಣಗಾರ್ತಿ, ಉದ್ಯಮಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಶ್ವೇತಾ ಬಚ್ಚನ್, ಮದುವೆ ನಂತರದ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಕಿಂಗರ್ ಗಾರ್ಡನ್ ನಲ್ಲಿ ಸಹಾಯಕ ಅಧ್ಯಾಪಕಿಯಾಗಿ ಕೆಲಸ ಮಾಡುವಾಗ ಬರುತ್ತಿದ್ದ ತಿಂಗಳಿಗೆ 3 ಸಾವಿರ ಸಂಬಳದಲ್ಲಿ ಖರ್ಚು ನಿಭಾಯಿಸುವುದು ಎಷ್ಟು ಕಷ್ಟ ಎಂದು ಹೇಳಿದರು.
ಕಾಲೇಜು ದಿನಗಳಲ್ಲಿ ನಾನು ತಮ್ಮ ಅಭಿಷೇಕ್ ಬಚ್ಚನ್ ಅವರಿಂದ ಸಾಲ ಪಡೆಯುತ್ತಿದ್ದೆ. ಕಾಲೇಜು ಮಾತ್ರವಲ್ಲದೇ ಶಾಲೆಗೆ ಹೋಗುವಾಗಲೂ ತಮ್ಮನಿಂದ ಹಣ ಪಡೆಯುತ್ತಿದ್ದೆ. ಅದು ಕೇವಲ ಹೊರಗಡೆ ತಿನ್ನಲು ಎಂದು ಅವರು ವಿವರಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz