nammatumakuru

    Subscribe to Updates

    Get the latest creative news from FooBar about art, design and business.

    What's Hot

    ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾಮ ಪಂಚಾಯಿತಿಗಳ ಸೇರ್ಪಡೆ: ಸಚಿವ ಸಂಪುಟದಿಂದ ಅನುಮೋದನೆ

    December 30, 2025

    ಬೀದರ್: ಸಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ — ಜೀವ ಉಳಿಸುವ ಕಾರ್ಯಕ್ಕೆ ಚಾಲನೆ

    December 30, 2025

    ಕನ್ನಡ ಸಾಹಿತ್ಯ ಸಮ್ಮೇಳನ ಕರುನಾಡ ಬೆಳವಣಿಗೆಗೆ ದಿಕ್ಸೂಚಿ: ಸಚಿವ ಡಾ.ಜಿ. ಪರಮೇಶ್ವರ್

    December 30, 2025
    Facebook Twitter Instagram
    ಟ್ರೆಂಡಿಂಗ್
    • ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾಮ ಪಂಚಾಯಿತಿಗಳ ಸೇರ್ಪಡೆ: ಸಚಿವ ಸಂಪುಟದಿಂದ ಅನುಮೋದನೆ
    • ಬೀದರ್: ಸಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ — ಜೀವ ಉಳಿಸುವ ಕಾರ್ಯಕ್ಕೆ ಚಾಲನೆ
    • ಕನ್ನಡ ಸಾಹಿತ್ಯ ಸಮ್ಮೇಳನ ಕರುನಾಡ ಬೆಳವಣಿಗೆಗೆ ದಿಕ್ಸೂಚಿ: ಸಚಿವ ಡಾ.ಜಿ. ಪರಮೇಶ್ವರ್
    • ಹೊಸ ವರ್ಷಾಚರಣೆ: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ
    • ಎತ್ತಿನಹೊಳೆ ಯೋಜನೆ ಬಗ್ಗೆ ಅಸೂಯೆ: ಕೇಂದ್ರ ಸರ್ಕಾರದಿಂದ ಅಡ್ಡಿ:  ಮುರಳೀಧರ ಹಾಲಪ್ಪ ಕಿಡಿ
    • ತುರುವೇಕೆರೆ | ಕುಡಿಯುವ ನೀರಿಗಾಗಿ ಗ್ರಾಪಂ ಎದುರು ಪ್ರತಿಭಟನೆ
    • ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ಖಂಡಿಸಿ ಅಂಬೇಡ್ಕರ್ ಸೇನೆ ಪ್ರತಿಭಟನೆ
    • ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಬಾಳಲ್ಲಿ ದುರಂತ!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಜೆಟ್  ಮೇಲೆ  ವಿಕಲಚೇತನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ:  ಎಂ.ಪಿ. ನಟೇಶ್ ಕುಮಾರ್
    ತುರುವೇಕೆರೆ March 12, 2022

    ಬಜೆಟ್  ಮೇಲೆ  ವಿಕಲಚೇತನರು ಇಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ:  ಎಂ.ಪಿ. ನಟೇಶ್ ಕುಮಾರ್

    By adminMarch 12, 2022No Comments2 Mins Read
    thuruvecare

    ತುರುವೇಕೆರೆ: ಬಜೆಟ್ ಮೇಲಿನ ವಿಕಲಚೇತನ ನಿರೀಕ್ಷೆ ಹುಸಿಯಾಗಿದೆ. ವಿಕಲಚೇತನರ ಜನಸಂಖ್ಯೆ ಅನುಗುಣವಾಗಿ ವಿಕಲಚೇತನರ ಅಭಿವೃದ್ಧಿಗಾಗಿ ನಿಗಮ  ಸ್ಥಾಪಿಸಬೇಕೆಂದು ಶ್ರೀವಿವೇಕಾನಂದ ಅಂಗವಿಕಲರ ಸಂಘದ ಕಾರ್ಯದರ್ಶಿ ಎಂ.ಪಿ. ನಟೇಶ್ ಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮುಖ್ಯಮಂತ್ರಿಗಳಾದ ಬಸವರಾಜ ಎಸ್.ಬೊಮ್ಮಾಯಿ  ಮಂಡಿಸಿರುವ ರಾಜ್ಯ ಬಜೆಟ್ ಬಗ್ಗೆ ವಿಕಲಚೇತನರಿಗೆ ಅನೇಕ ನಿರೀಕ್ಷೆಗಳಿದ್ದವು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ವಿಕಲಚೇತನರ ಬಗ್ಗೆ ಒಲವು ತೋರಿ, ಅನೇಕ ಭರವಸೆಗಳೊಂದಿಗೆ ನಿರೀಕ್ಷೆಯಲ್ಲಿದ್ದವರಿಗೆ ಬಹಳ ನೋವಾಗಿದೆ. ಶೇ. 75%ಹೆಚ್ಚು ಮನೋವೈಕಲ್ಯ ಹೊಂದಿದ್ದವರಿಗೆ 1,400 ರೂ. ಗಳಿಂದ,  2,000 ರೂ.ಗಳಿಗೆ ಮಾಶಾಸನ ಹೆಚ್ಚಿಸುವ ಭರವಸೆ ಮತ್ತು ಬಸ್ ಪಾಸ್ ಪ್ರಸ್ತುತ ದರದಲ್ಲಿಯೇ ಹೆಚ್ಚಿನ ದೂರದ ಪ್ರಯಾಣ ನೀಡುವುದರ ಮೂಲಕ ಅನೇಕ ಸೌಲಭ್ಯಗಳನ್ನು ಒದಗಿಸುವ ನಿರೀಕ್ಷೆಗಳು ಹುಸಿಯಾಗಿವೆ.


    Provided by
    Provided by

    ಸದನದಲ್ಲಿ ರಾಜ್ಯದ ಎಲ್ಲಾ ಶಾಸಕರು ತಮ್ಮ ವೇತನವನ್ನು ಹೆಚ್ಚಿಸಿಕೊಂಡರು. ಆದರೆ ಅಂಗವಿಕಲರ ಸಮಸ್ಯೆಯ ಬಗ್ಗೆ ಯಾರು ಪರಿಗಣಿಸಲಿಲ್ಲ. ಶೇ.75% ಮತ್ತು 25%ನ ತಾರತಮ್ಯವನ್ನು ಹೋಗಲಾಡಿಸಬೇಕು. ಗ್ರಾಮೀಣ ಪ್ರದೇಶದ ಪುನರ್ವಸತಿ ಕೇಂದ್ರಗಳ ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸಬೇಕು. ಸಮಾಜದಲ್ಲಿ ತಂದೆ-ತಾಯಿಗೆ ಬೇಡವಾದ ಕಟ್ಟಕಡೆಯ ವ್ಯಕ್ತಿಗಳೆಂದರೆ ವಿಕಲಚೇತನರಾಗಿದ್ದೇವೆ.  ವಿಕಲಚೇತನರ ಆರ್ಥಿಕ ಸಬಲೀಕರಣ ಸೇರಿದಂತೆ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಪ್ರಯತ್ನ ಮಾಡದೇ ಇರುವುದು ಖಂಡನೀಯವಾಗಿದೆ. ಸ್ಥಳೀಯ ಶಾಸಕರು ಸಹ ವಿಕಲಚೇತನರ ಅನುದಾನದಲ್ಲಿ ದೊರೆಯುವ ಯಾವುದೇ ಸೌಲಭ್ಯಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ.  ಈ ಸಂಬಂಧ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ವಿಕಲಚೇತನರ ಜೊತೆಗೂಡಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

    ಸಂಘದ ಸಹಕಾರ್ಯದರ್ಶಿ ಎಸ್. ಗುರುಲಿಂಗಮೂರ್ತಿ ಮತ್ತು ಖಜಾಂಚಿ ವಿ.ಎಸ್. ಲಕ್ಷ್ಮಿಕಾಂತ್ ಮಾತನಾಡಿ, ತೈಲ ಬೆಲೆ ಏರಿಕೆ ಮತ್ತು ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ  ದುಡಿಯುವ ಮಧ್ಯಮ ಮತ್ತು ಕಾರ್ಮಿಕ ವರ್ಗ ಜೀವನ ನಡೆಸಲು ಹೈರಾಣಾಗಿದೆ. ಇಂತಹ ಸಂದರ್ಭದಲ್ಲಿ ಮಾಶಾಸನದ ಮೇಲೆ ಅವಲಂಬಿತರಾಗಿರುವ ವಿಕಲಚೇತನರ ಮಾಶಾಸನ ಹೆಚ್ಚಳ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ವಿಕಲಚೇತನರ ನ್ಯಾಯೋಚಿತ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳಾದ ಬಸವರಾಜು ಎಸ್. ಬೊಮ್ಮಾಯಿ ಅವರು ಮುಂದಾಗಬೇಕು. ತಾಲೂಕಿನಲ್ಲಿ ಕೋವಿಡ್ ನಂತಹ ಪರಿಸ್ಥಿತಿಯಲ್ಲಿಯೂ ಸಹ ನಮಗೆ ಸ್ಥಳೀಯ ಶಾಸಕರಾಗಲಿ, ಯಾವುದೇ ಜನಪ್ರತಿನಿಧಿಗಳಾಗಲಿ ನೆರವಾಗಿಲ್ಲ ಎಂದು ದೂರಿದರು.

    ಸುದ್ದಿಗೋಷ್ಠಿಯಲ್ಲಿ ಗೌರವಾಧ್ಯಕ್ಷರಾದ ಮಹಾಲಿಂಗಪ್ಪ, ಅಧ್ಯಕ್ಷರಾದ ಟಿ.ಎಲ್.ನಾಗರಾಜು ಉಪಾಧ್ಯಕ್ಷರಾದ ರವಿಕುಮಾರ್.,  ನಿರ್ದೇಶಕರುಗಳಾದ ಕೃಷ್ಣಮೂರ್ತಿ, ಲತಾ ಕುಮಾರ್, ಶಿವಬಸವಯ್ಯ,  ಮಂಗಳ ಗೌರಮ್ಮ, ಸಂತೋಷ್ ಕುಮಾರ್, ಶಾಂತಕುಮಾರ್, ರಮೇಶ್, ಮಹೇಶ್, ಮುಗಳೂರು ಪರಮೇಶ್ ಸೇರಿದಂತೆ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲಾ ವಿ.ಆರ್. ಡಬ್ಲ್ಯೂ./ ಯೂ.ಆರ್. ಡಬ್ಲ್ಯೂ./ ಎಂ.ಆರ್.ಡಬ್ಲ್ಯೂ. ಕಾರ್ಯಕರ್ತರು ಪಾಲ್ಗೊಂಡಿದ್ದರು.

    ವರದಿ: ಸಚಿನ್ ಮಾಯಸಂದ್ರ.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ತುರುವೇಕೆರೆ | ಕುಡಿಯುವ ನೀರಿಗಾಗಿ ಗ್ರಾಪಂ ಎದುರು ಪ್ರತಿಭಟನೆ

    December 30, 2025

    ತುರುವೇಕೆರೆ ಪೊಲೀಸ್ ಠಾಣೆಗೆ ದಕ್ಷ IPS ಅಧಿಕಾರಿ ದಿ.ಡಾ.ಕೆ.ಮಧುಕರ್ ಶೆಟ್ಟಿ ಭಾವ ಚಿತ್ರ ಕೊಡುಗೆ

    December 30, 2025

    ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಆಕ್ರೋಶ: ತುರುವೇಕೆರೆಯಲ್ಲಿ ಕೆಎಸ್ ಆರ್‌ ಟಿಸಿ ಬಸ್ ತಡೆದು ಪ್ರತಿಭಟನೆ

    December 30, 2025

    Leave A Reply Cancel Reply

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ತುಮಕೂರು ಮಹಾನಗರ ಪಾಲಿಕೆಗೆ 14 ಗ್ರಾಮ ಪಂಚಾಯಿತಿಗಳ ಸೇರ್ಪಡೆ: ಸಚಿವ ಸಂಪುಟದಿಂದ ಅನುಮೋದನೆ

    December 30, 2025

    ತುಮಕೂರು: ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯನ್ನು ವಿಸ್ತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ…

    ಬೀದರ್: ಸಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ರಕ್ತದಾನ ಶಿಬಿರ — ಜೀವ ಉಳಿಸುವ ಕಾರ್ಯಕ್ಕೆ ಚಾಲನೆ

    December 30, 2025

    ಕನ್ನಡ ಸಾಹಿತ್ಯ ಸಮ್ಮೇಳನ ಕರುನಾಡ ಬೆಳವಣಿಗೆಗೆ ದಿಕ್ಸೂಚಿ: ಸಚಿವ ಡಾ.ಜಿ. ಪರಮೇಶ್ವರ್

    December 30, 2025

    ಹೊಸ ವರ್ಷಾಚರಣೆ: ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

    December 30, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.