ಬೀದರ್: ಆಟೋದಲ್ಲಿ ಬ್ಯಾಗ್ ಮರೆತು ಹೋಗಿದ್ದ ವ್ಯಕ್ತಿಯೊಬ್ಬರು ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಸಹಾಯದೊಂದಿಗೆ ಆಟೋವನ್ನು ಪತ್ತೆ ಹಚ್ಚಿದ ಘಟನೆ ನಡೆದಿದ್ದು, ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಬ್ಯಾಗ್ ನ್ನು ಆಟೋ ಚಾಲಕ ವಾರಸುದಾರರಿಗೆ ವಾಪಸ್ ನೀಡಿ, ಪ್ರಾಮಾಣಿಕತೆ ಮೆರೆದಿದ್ದಾರೆ.
ಬೀದರ್ ನಿವಾಸಿಯೊಬ್ಬರು ಯಶವಂತಪೂರದಿಂದ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದು, ರೈಲ್ವೆ ನಿಲ್ದಾಣದಿಂದ ನ್ಯೂ ಆದರ್ಶ ಪ್ರಯಾಣಿಸಿದ್ದರು. ಈ ವೇಳೆ ತಮ್ಮ ಬ್ಯಾಗನ್ನು ಆಟೋದಲ್ಲಿ ಮರೆತು ಮನೆಗೆ ಹೋಗಿದ್ದಾರೆ. ಮನೆಗೆ ಹೋದ ವೇಳೆ ಬ್ಯಾಗ್ ಮರೆತಿರುವುದು ಅರಿವಾಗಿದೆ. ತಕ್ಷಣವೇ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಅಳವಡಿಸಿರುವ AI ಸಿ.ಸಿ.ಟಿವಿ ಕಮಾಂಡ್ ಸೆಂಟರ್ ಗೆ ಬಂದು AI ಸಿ.ಸಿ. ಟಿವಿ ಕಮಾಂಡ್ ಸೆಂಟರ್ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹರ್ಷವರ್ಧನ ರವರಿಗೆ ಮಾಹಿತಿ ನೀಡಿದ್ದಾರೆ.
ಹರ್ಷವರ್ಧನ್ ಅವರು ಆಟೋವನ್ನು ಪತ್ತೆ ಹಚ್ಚಿ ಆಟೋವನ್ನು ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ, ವಾರಸುದಾರರ ಬ್ಯಾಗನ್ನು ಆಟೋ ಚಾಲಕರ ಮುಖಾಂತರ ಬ್ಯಾಗಿನ ವಾರಸುದಾರರಿಗೆ ಹಸ್ತಾಂತರಿಸಿದರು.
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಹಾಗೂ AI ಸಿಬ್ಬಂದಿ ಹರ್ಷವರ್ಧನ ಅವರಿಗೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಅರವಿಂದ್ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



