ಕೊರಟಗೆರೆ : ಸರ್ಕಾರಿ ಜಾಗಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟರೆ ಅದು ಮುಂದಿನ ದಿನಗಳಲ್ಲಿ ಪ್ರಯೋಜನಕಾರಿಯಾಗುತ್ತದೆ ಎಂದು ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ಪಟ್ಟಣದ ತಾಲೂಕು ಕಛೇರಿಯಲ್ಲಿ 9 ನೇ ಬಗರ್ ಹುಕ್ಕುಂ ಸಭೆ ನಡೆಸಿ ಮಾತನಾಡಿ, ಇಂದು ನಡೆದ ಸಭೆಯಲ್ಲಿ ಮೂರು ತಾಲ್ಲೂಕಿನ ತಹಶೀಲ್ದಾರರು, ಅವರ ಅಧಿಕಾರಿ ಸಿಬ್ಬಂದಿಗಳು,ಅರಣ್ಯ ಇಲಾಖಾ ಅಧಿಕಾರಿಗಳು, ಬಗರ್ ಹುಕ್ಕುಂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದು, ತುಮಕೂರು ತಾಲ್ಲೂಕಿನ 39 ಅರ್ಜಿ, ಮಧುಗಿರಿ ತಾಲ್ಲೂಕಿನ 13, ಕೊರಟಗೆರೆ ತಾಲ್ಲೂಕಿನ 114 ಅರ್ಜಿಗಳನ್ನು ಕುಲಾಂಕುಶವಾಗಿ ಚರ್ಚೆ ನಡೆಸಿ ತಿರ್ಮಾನ ತೆಗೆದುಕೊಂಡು ವಿಲೇವಾರಿ ಮಾಡಲಾಗಿದೆ. ಕೆಲವು ಅರ್ಜಿಗಳು ಹಿಂದಿನ ಸಭೆಯಲ್ಲಿ ತಿರಸ್ಕಾರ ಹಾಗಿದ್ದು ಆ ಅರ್ಜಿಗಳು ಉಪವಿಭಾಗಾಧಿಕಾರಿಗಳಿಗೆ ಮರು ಅರ್ಜಿ ಸಲ್ಲಿಸಿದ್ದು, ಅಂತಹವುಗಳನ್ನು ಪರಿಶೀಲನೆ ಮಾಡಿ ವಿಲೇವಾರಿ ಮಾಡಲು ಚರ್ಚೆ ಮಾಡಿ ಸೂಕ್ತ ಆದೇಶ ನೀಡಲು ತಹಶೀಲ್ದಾರರುಗಳಿಗೆ ತಿಳಿಸಲಾಗಿದೆ ಎಂದರು.
ಈ ಸಭೆಯಲ್ಲಿ ಹಲವು ಅರ್ಜಿಗಳ ಪರಿಶೀಲನೆ ಮಾಡಿ ಅದರಲ್ಲಿ ಅನುಭವವಿಲ್ಲದ, ಸರ್ಕಾರ ಅದೇಶಕ್ಕಿಂತ ಹೆಚ್ಚು ಮಂಜೂರಿ ಜಮೀನನ್ನು ಹೊಂದಿರುವವರು, ಹೆಚ್ಚು ಜಮೀನು ಇದ್ದು ಅರ್ಜಿಸಲ್ಲಿಸಿದವರ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದು, ಅವುಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಶಾಲೆ, ಆಸ್ಪತ್ರೆ, ಸಮುದಾಯಭವನ, ಊರಿನಿಂದ ಹೊರಗಿದ್ದರೆ ಅಗತ್ಯವಿದ್ದರೆ ಸ್ಮಶಾನ ಸೇರಿದಂತೆ ಇತರೆ ಜನರ ಉಪಯೋಗಕ್ಕೆ ಸರ್ಕಾರಿ ಜಮಿನನ್ನು ಕಾಯ್ದಿರಿಸಿ ಪಿಡಿಓಗಳಿಗೆ ಸೂಚನೆ ನೀಡಲಾಗುವುದು, ತುಮಕೂರು ತಾಲೂಕು ವಸಂತನರಸಾಪುರ ಕೈಗಾರಿಕಾ ಕೇಂದ್ರ ಬಳಿ ಸರ್ಕಾರಿ ಜಮೀನು ಮಂಜೂರಿಗೆ ಸಲ್ಲಿಸಿರುವ ಅರ್ಜಿಗಳ ಸ್ಥಳ ಪರಿಶೀಲನೆಯನ್ನು ಜನವರಿ 3 ರಂದು ಸಮಿತಿಯೊಂದಿಗೆ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೋಳ್ಳಲಾಗುವುದು ಎಂದರು.
ಈ ಸಭೆಯಲ್ಲಿ ಕೊರಟಗೆರೆ ತಹಶೀಲ್ದಾರ್ ನಾಹೀದ ಜಮ್ ಜಮ್,ತುಮಕೂರು ತಹಶೀಲ್ದಾರ್ ಸಿದ್ದೇಶ್,ಮಧುಗಿರಿ ಶಹಶೀಲ್ದಾರ್ ಸುರೇಶ್ ಅಚಾರ್,ಅರಣ್ಯಾಧಿಕಾರಿ ಸುರೇಶ್, ಗ್ರೇಡ್ 2 ತಹಶೀಲ್ದಾರ್ ನರಸಿಂಹಮೂರ್ತಿ ಬಗರ್ ಹಕ್ಕುಂ ಸಮಿತಿ ಸದಸ್ಯರುಗಳಾದ ಸಿ.ಎಸ್.ಹನುಮಂತರಾಜು, ಹೇಮಲತ,ದೇವರಾಜು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz


