ಪಾವಗಡ: ಜಮ್ಮು–ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ಉಗ್ರರು ಅಟ್ಟಹಾಸ ಮೆರೆದಿದ್ದು ದಾಳಿಯಲ್ಲಿ ಸುಮಾರು 27 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು.
ಈ ಹಿನ್ನಲೆಯಲ್ಲಿ ಭಾರತ ದೇಶಾದ್ಯಂತ ಆಕ್ರೋಶದ ಜ್ವಾಲೆ ಒತ್ತಿ ಉರಿಯುತ್ತಿದ್ದು, ಅದರಂತೆ ಪಾವಗಡ ಪಟ್ಟಣದಲ್ಲಿ ಭಾರತೀಯ ಜನತಾ ಭಾರತಿ ಪಾರ್ಟಿ ಬಜರಂಗದಳ ಸಂಘಟನೆಯಿಂದ ಜಂಟಿಯಾಗಿ ಪ್ರತಿಭಟನೆ ನಡೆಸಿ ಜಿಹಾದಿಗಳ ವಿರುದ್ಧ ದಿಕ್ಕಾರ ಕೂಗಿದ್ದಾರೆ.
ಬುಧವಾರ ಸಂಜೆ 6:30 ಸಂದರ್ಭದಲ್ಲಿ ಪಟ್ಟಣದ ಶನಿ ಮಹಾತ್ಮ ವೃತ್ತದಲ್ಲಿ ಮೇಣದಬತ್ತಿ ಬೆಳಕಿ ಮೇಣದಬತ್ತಿ ಬೆಳಗಿಸಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದ್ದು, ಇದಕ್ಕೂ ಮೊದಲು ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಹನುಮಂತ ರಾಯಪ್ಪ, ರವಿ ಪಾವಗಡ ಬಿಜೆಪಿ ಮಂಡಲದ ಅಧ್ಯಕ್ಷ ದೊಡ್ಡ ಹಳ್ಳಿ ಅಶೋಕ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಬಜರಂಗದಳದ ಜಿಲ್ಲಾ ಪ್ರಮುಖ ಸುಮನ್, ತಾಲೂಕು ಪ್ರಮುಖ ರವಿ, ಶ್ರೀರಾಮಸೇನೆಯ ಕಾವಲಗೆರೆ ರಾಮಾಂಜಿ, ತಾಳೆಮರದಹಳ್ಳಿ ಮಂಜುನಾಥ್, ತರಕಾರಿ ಕೃಷ್ಣಪ್ಪ, ಮುಖಂಡರಾದ ಗೋಲ್ಡನ್ ಮಂಜು, ಮಂಜು ವಾಸು, ಸರೋಜಮ್ಮ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ನಂದೀಶ್ ನಾಯ್ಕ ಪಿ., ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW