ಕುಡಿದ ಜ್ಯೂಸ್ ಬೀಲ್ ಕೇಳಿದ್ದಕ್ಕೆ ಬೇಕರಿ ಮಾಲೀಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಿನ್ನೆ ರಾತ್ರಿ 11: 00 ಗಂಟೆಗೆ ನಗರದ ಕೆ ಪಿ ಅಗ್ರಹಾರದ ಬೇಕರಿಯಲ್ಲಿ ಪುಡಿ ರೌಡಿ ಅಟ್ಟಹಾಸ ಮೆರೆದಿದ್ದಾನೆ. ಸ್ವಾಮೀಗೌಡ ಎಂಬುವರಿಗೆ ಸೇರಿದ ಬೇಕರಿಯಲ್ಲಿ ಕುಡಿದ ಜ್ಯೂಸಿಗೆ ಬಿಲ್ಲು ಕೇಳಿದ್ದಕ್ಕೆ ಮಾಲೀಕರ ಮೇಲೆ ಹಲ್ಲೆಗೆ ಯತ್ನ ಮಾಡಿದ್ದಾನೆ.
ಮಾಮೂಲಿಗಾಗಿ ಬೇಡಿಕೆ ಇಟ್ಟು ಬೆದರಿಕೆ ಹಾಕುತ್ತಿದ್ದರೆಂಬ ಆರೋಪ ಕೇಳಿಬಂದಿದ್ದು, ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೇಕರಿಗೆ ಬರೋದು ಏನು ಬೇಕು ಅದೆ ತಿಂದು ಹಣ ಕೊಡದೆ ಹೋಗೋದೇ ಪುಡಿ ರೌಡಿಯ ಕೆಲಸವಾಗಿದ್ದು, ನಿನ್ನೆ ರಾತ್ರಿ ಕೂಡ ಬೇಕರಿಗೆ ಹೋಗಿದ್ದನು. ಈ ವೇಳೆ ಬೇಕರಿಯಲ್ಲಿ ಬೇಕಾದದ್ದನ್ನ ಆರ್ಡರ್ ಮಾಡಿ ತಿಂದಿದ್ದಾನೆ. ನಂತರ ಹಣ ಕೇಳಿದ ಬೇಕರಿ ಮಾಲೀಕರಿಗೆ ಡ್ರಾಗರ್ ತೋರಿಸಿ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದಾನೆ.
ಸದ್ಯ ಘಟನೆ ಸಂಬಂಧ ಕೆ. ಪಿ ಅಗ್ರಹಾರ ಠಾಣೆಗೆ ಬೇಕರಿ ಮಾಲೀಕ ದೂರು ನೀಡಿದ್ದಾರೆ. ಕೆ. ಪಿ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


