ಛತ್ತೀಸ್‌ಗಢ : ಎಂಟು ವರ್ಷದ ಬಾಲಕನೊಬ್ಬ ನಾಗರ ಹಾವನ್ನು ಕಚ್ಚಿ ಸಾಯಿಸಿದ್ದ ವಿಚಿತ್ರ ಘಟನೆ ಜಶ್‌ಪುರ ಜಿಲ್ಲೆಯ ಪಂದರ್‌ಪಾಡ್ ಎಂಬ ಗ್ರಾಮದಲ್ಲಿ ನಡೆದಿದೆ.
ದೀಪಕ್ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ವಿಷಪೂರಿತ ನಾಗರಹಾವು ಕೈಗೆ ಸುತ್ತಿಕೊಂಡಿತ್ತು.ದೀಪಕ್ ಕೈಗೆ ನಾಗರಹಾವು ಕಚ್ಚಿದೆಯಂತೆ. ಹಾವಿನ ಹಿಡಿತವನ್ನು ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಬಾಲಕನೂ ಹಾವಿಗೆ ಎರಡು ಬಾರಿ ಕಚ್ಚಿದ್ದಾನೆ. ಕೂಡಲೇ ಹಾವು ಹಿಡಿತ ಸಡಿಲಿಸಿದೆ.
ಕುಟುಂಬದವರು ಹಾವಿನ ಕಡಿತಕ್ಕೊಳಗಾದ ಬಾಲಕನನ್ನು ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ ದೀಪಕ್‌ನಲ್ಲಿ ಯಾವುದೇ ರೋಗಲಕ್ಷಣಗಳಿರಲಿಲ್ಲ. ಹಾವು ಕಚ್ಚಿದಾಗ ವಿಷ ಬಿಡುಗಡೆಯಾಗಿರಲಿಲ್ಲ, ಹಾಗಾಗಿ ಬಚಾವ್ ಆಗಿದ್ದಾನೆ.
ಮನುಷ್ಯರಿಂದ ಕಡಿತಕ್ಕೊಳಗಾಗಿ ಹಾವು ಸಾಯುವುದು ಅತ್ಯಂತ ಅಪರೂಪದ ಪ್ರಕರಣ. ಜಶ್ಪುರ್ ಜಿಲ್ಲೆಯಲ್ಲಿ ಈವರೆಗೂ ಇಂತಹ ಘಟನೆ ನಡೆದಿರಲಿಲ್ಲವಂತೆ. ಜಶ್ಪುರ್ ಬುಡಕಟ್ಟು ಜಿಲ್ಲೆಯಾಗಿದ್ದು, ಇದನ್ನು ಸರ್ಪಗಳ ವಾಸಸ್ಥಾನ ಎಂದೂ ಕರೆಯುತ್ತಾರೆ. ಇಲ್ಲಿ 200ಕ್ಕೂ ಹೆಚ್ಚು ಜಾತಿಯ ಹಾವುಗಳಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz