ತುಮಕೂರು: 7 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ.(ಪೋಕ್ಸೋ) 20 ವರ್ಷಗಳ ಸಜೆ ಮತ್ತು 75000 ರೂಪಾಯಿ ದಂಡ ವಿಧಿಸಿದೆ.
ಪಾವಗಡ ತಾಲ್ಲೂಕು ದೊಮ್ಮತ್ತಮರಿ ಗ್ರಾಮ ವ್ಯಾಪ್ತಿಯ ಯಲಗಾನಗುಟ್ಟೆ ಮಜರೆ ಗ್ರಾಮ ನಿವಾಸಿ ಕೃಷ್ಣಮೂರ್ತಿ ಎಂಬಾತ ದಿನಾಂಕ 30–07–2021ರಂದು ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ 7 ವರ್ಷದ ಬಾಲಕಿ ತನ್ನ ತಮ್ಮನ ಜೊತೆಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ವೇಳೆ ನೇರಳೆ ಹಣ್ಣು ಕೊಡುವ ನೆಪದಲ್ಲಿ ಇಬ್ಬರನ್ನೂ ತನ್ನ ಮನೆಯ ಪಕ್ಕದಲ್ಲಿರುವ ನೇರಳೆ ಮರದ ಬಳಿ ಕರೆದೊಯ್ದು ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತನಿಖಾಧಿಕಾರಿಗಳಾದ ಲಕ್ಷ್ಮೀಕಾಂತ್ ಎಸ್. ಅವರು ದೋಷರೋಪಣ ಪಟ್ಟಿ ಕಲಂ 376 ಐಪಿಸಿ ಕಲಂ6 ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯದ ವಿಚಾರಣೆಯಲ್ಲಿ ಕೃಷ್ಣಮೂರ್ತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು ರುಜುವಾತಾದ ಕಾರಣ ಅಧಿಕ ಸತ್ರ ನ್ಯಾಯಾಲಯದ ಎಫ್.ಟಿ.ಎಸ್.ಸಿ.(ಪೋಕ್ಸೋ) ಗೌರವಾನ್ವಿತ ನ್ಯಾಯಾಧೀಶರಾದ ಸಂಧ್ಯಾ ರಾವ್ ಪಿ. ಅಪರಾಧಿಗೆ 20 ವರ್ಷಗಳ ಜೈಲುವಾಸ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ ಸಂತ್ರಸ್ತ ಬಾಲಕಿಗೆ 70 ಸಾವಿರ ರೂಪಾಯಿ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ರೂಪಾಯಿಗಳ ಪರಿಹಾರ ಸೇರಿದಂತೆ ಒಟ್ಟು 4 ಲಕ್ಷದ 70 ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy