ತುಮಕೂರು: ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಬಾಲಕಿಯರನ್ನು ಸರ್ಕಾರಿ ಬಸ್ ಚಾಲಕರೊಬ್ಬರು ರಕ್ಷಿಸಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ನಡೆದಿದೆ.
18 ವರ್ಷದ ಸುಷ್ಮಾ ಹಾಗೂ 9 ವರ್ಷದ ಮಂಜುಳ ಎಂಬವರು ತಾಯಿಯೊಂದಿಗೆ ಬಟ್ಟೆ ತೊಳೆಯಲು ಹಂದಿಕುಂಟೆ ಅಗ್ರಹಾರ ಕೆರೆ ಬಳಿಗೆ ತೆರಳಿದ್ದ ವೇಳೆ ಸುಷ್ಮಾ ಮತ್ತು ಮಂಜುಳ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ.
ಮಕ್ಕಳು ಕೆರೆಗೆ ಬಿದ್ದದ್ದನ್ನು ಕಂಡು ಗಾಬರಿಯಿಂದ ತಾಯಿ ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಇದೇ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಸರ್ಕಾರಿ ಬಸ್ ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿ, ಕೆರೆಗೆ ಹಾರಿ ಇಬ್ಬರು ಬಾಲಕಿಯರನ್ನೂ ರಕ್ಷಿಸಿದ್ದಾರೆ.
ಬಸ್ ಚಾಲಕ ಮಂಜುನಾಥ್ ಅವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಯಕ್ಕೆ ಸರಿಯಾಗಿ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಇಬ್ಬರು ಬಾಲಕಿಯರ ಜೀವ ರಕ್ಷಿಸುವ ಮೂಲಕ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮಂಜುನಾಥ್ ಅವರು ಚಲಾಯಿಸುತ್ತಿದ್ದ ಬಸ್ ಶಿರಾದಿಂದ ನಾಗಪ್ಪನಹಳ್ಳಿ ಕಡೆಗೆ ಸಾಗುತ್ತಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1