ಬಾಗಲಕೋಟೆ : ರಜೆ ಮೇಲೆ ಬಂದಿದ್ದ ಯೋಧನ ತನ್ನ ಬಾಮೈದನಿಂದಲೇ ಕೊಲೆಯಾಗಿದ್ದಾನೆ. 25 ವರ್ಷದ ಕರಿಸಿದ್ದಪ್ಪ ಕಳಸದ ಕೊಲೆಯಾದ ಯೋಧ. ಕರಿಸಿದ್ದಪ್ಪ ಕಳಸದನನ್ನು ಅವರ ಬಾಮೈದ ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ಧರಿಗೌಡ ದೂಳಪ್ಪನವರ ಎಂದು ಗುರುತಿಸಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ಘಟನೆ ನಡೆದಿದೆ.
ರಾಜಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಕರಿಸಿದ್ದಪ್ಪ ಕಳಸದ , ಕಳೆದ ನಾಲ್ಕು ದಿನದ ಹಿಂದೆ ರಜೆಯ ಮೇಲೆ ಊರಿಗೆ ಬಂದಿದ್ದ. ಈ ವೇಳೆ ತನ್ನ ಪತ್ನಿ ಜೊತೆ ಯೋಧ ಜಗಳವಾಡಿದ್ದಾನೆ. ಪತಿ ತನ್ನೊಂದಿಗೆ ಜಗಳವಾಡಿರುವ ವಿಚಾರವನ್ನು ಪತ್ನಿ ಆಕೆಯ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾಳೆ.
ರಜೆ ಮೇಲೆ ಬಂದಿದ್ದ ಯೋಧ ಊಟ ಮಾಡುವ ವೇಳೆ ಪತ್ನಿ ಜೊತೆ ಜಗಳವಾಡಿದ್ದಾನೆ. ಈ ವಿಚಾರಕ್ಕೆ ಯೋಧನ ಬಾಮೈದ ಕೋಪಗೊಂಡಿದ್ದಾನೆ. ತನ್ನ ಸಹೋದರಿಗೆ ಕಿರುಕುಳ ನೀಡುತ್ತೀಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹೀಗೆ ಮಾತಿಗೆ ಮಾತು ಬೆಳೆದು ಜಗಳ ಚಾಕು ಇರಿತದವರೆಗೆ ತಲುಪಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೆರೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಚಾಕು ಇರಿತಕ್ಕೊಳಗಾದ ಯೋಧ ಕರಿಸಿದ್ದಪ್ಪ ಕಳಸದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಯೋಧ ಕರಿಸಿದ್ದಪ್ಪ ಕಳಸದ ಎರಡು ವರ್ಷದ ಹಿಂದೆ ವಿದ್ಯಾ ಎಂಬುವಳ ಜೊತೆ ಲವ್ ಮ್ಯಾರೇಜ್ ಆಗಿದ್ದ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


