ಕಣ್ಣೂರು: : ಬಾಂಬ್ ಇದ್ದ ಐಸ್ ಕ್ರೀಮ್ ಬಾಲ್ ಸ್ಫೋಟಗೊಂಡು, 7ನೇ ತರಗತಿ ಬಾಲಕ ಗಾಯಗೊಂಡ ಘಟನೆ ಕಣ್ಣೂರಿನ ಧರ್ಮಡೋಮ್ ನಲ್ಲಿ ನಡೆದಿದೆ.
ಮೈದಾನದಲ್ಲಿ ಆಟವಾಡುತಿದ್ದ ವಿದ್ಯಾರ್ಥಿಗಳಿಗೆ ಮೂರು ಐಸ್ ಕ್ರಿಮ್ ಬಾಲ್ ಗಳು ದೊರಕ್ಕಿದ್ದು, ವಿದ್ಯಾರ್ಥಿಗಳು ಅದನ್ನು ತೆಗೆದುಕೊಂಡು ಆಟವಾಡುತ್ತಿದ್ದರು. ಆ ವೇಳೆ ಬಾಂಬ್ ಇದ್ದ ಒಂದು ಬಾಲ್ ಸ್ಫೋಟಿಸಿದೆ ಎನ್ನಲಾಗಿದೆ.
ಬಾಂಬ್ ಸ್ಫೋಟಗೊಂಡ ಪರಿಣಾಮ ಬಾಲಕ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಂಬ್ ನಿಷ್ಕ್ರಿಯ ತಜ್ಞರು, ಇನ್ನೆರಡು ಸ್ಫೋಟಕಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700