ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ ಆರ್ ಪಿ) ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ, ಕೇಂದ್ರ ರೈಲ್ವೆ ಸಚಿವಾಲಯ ಮತ್ತು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (ಕೆ-ರೈಡ್) ಅಧಿಕಾರಿಗಳು ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
2018ರಲ್ಲಿ ರಾಷ್ಟ್ರೀಯ ಉಪನಗರ ರೈಲು ನೀತಿ ಜಾರಿಗೊಳಿಸಿದ ಬಳಿಕ ದೇಶದ ಮೊದಲ ಯೋಜನೆಯಾಗಿ ಬಿಎಸ್ ಆರ್ ಪಿಯನ್ನು ರೂಪಿಸಲಾಗಿತ್ತು.
ಮುಂದಿನ ಐದು ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ತರಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಹಿರಂಗಪಡಿಸಿದ್ದಾರೆ.
ಪ್ರಸ್ತುತ, ಪ್ರತಿ ವರ್ಷ 800 ಕೋಟಿ ಪ್ರಯಾಣಿಕರು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದು, ಈ ಸಾಮರ್ಥ್ಯವನ್ನು 1000 ಕೋಟಿಗೆ ಹೆಚ್ಚಿಸಲು ಹೊಸ ರೈಲುಗಳನ್ನು ಒದಗಿಸಲಾಗುವುದು ಎಂದು ಅವರು ಮಾಧ್ಯಮಗಳ ಸಮ್ಮುಖದಲ್ಲಿ ಹೇಳಿದರು.
ಪ್ರಸ್ತುತ ರೈಲ್ವೆಯಲ್ಲಿ 69,000 ಹೊಸ ಕೋಚ್‌ಗಳು ಲಭ್ಯವಿವೆ. ಹೊಸ ರೈಲುಗಳನ್ನು ಸಿದ್ಧಪಡಿಸುತ್ತೇವೆ ಮತ್ತು ರೈಲ್ವೆ ವ್ಯವಸ್ಥೆಯನ್ನು ಸುಧಾರಿಸುತ್ತೇವೆ ಎಂದು ವೈಷ್ಣವ್ ಹೇಳಿದರು.


