ಬೆಂಗಳೂರು: ತನ್ನಿಂದ ಅಂತರ ಕಾಯ್ದುಕೊಂಡ ಪ್ರಿಯತಮೆಯನ್ನು ಪ್ರಿಯಕರ ಹೊಟೇಲ್ ಗೆ ಕರೆಸಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ.
36 ವರ್ಷದ ಮಹಿಳೆ ಹರಿಣಿ ಹತ್ಯೆಗೀಡಾದ ಮಹಿಳೆಯಾಗಿದ್ದಾರೆ. 25 ವರ್ಷದ ಆರೋಪಿ ಯಶಸ್ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ.
ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಯಶಸ್ ಹರಿಣಿಯನ್ನು ಹತ್ಯೆ ಮಾಡಿದ್ದಾನೆ. ಇವರಿಬ್ಬರೂ ಕೆಂಗೇರಿ ನಿವಾಸಿಗಳು ಎಂಬುದು ತಿಳಿದುಬಂದಿದೆ.
ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ದೂರ ಉಳಿದಿದ್ದರು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW