ಬೆಂಗಳೂರು ವಿಶ್ವವಿದ್ಯಾಲಯ ಎಂಸಿಎ, ಎಂ. ಟೆಕ್ ಕೋರ್ಸ್ಗಳ ಬೋಧನೆಗೆ ಅವಶ್ಯವಿರುವ 7 ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಪಿಎಚ್. ಡಿ, ನೆಟ್ ಮತ್ತು ಪ್ಲೆಟ್ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಿದೆ. ಗೌರವ ಧನ ಕೂಡ ಮಾಸಿಕ 43,520 ರೂ. ಗಳಿಂದ 49,920 ರೂ. ಗಳವರೆಗೆ ನಿಗದಿ ಮಾಡಿದೆ.
ಅರ್ಜಿಗಳನ್ನು ಡಿ.4ರೊಳಗೆ ಸಮನ್ವಯಾಧಿಕಾರಿ, ಎಂಸಿಎ ವಿಭಾಗ, ಸೈಕಾಲಜಿ ಕಟ್ಟಡ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056 ಈ ವಿಳಾಸಕ್ಕೆ ಕಳುಹಿಸಬಹುದು.


