ಬನ್ನೇರುಘಟ್ಟ ಬಳಿಯ ತುರಹಳ್ಳಿ ಅರಣ್ಯದಿಂದ ನಾಲ್ಕು ಚಿರತೆಗಳು ರಾಜಧಾನಿ ಬೆಂಗಳೂರಿನ ಹಲವೆಡೆ ಕಾಣಿಸಿಕೊಂಡಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ.
ತುರಹಳ್ಳಿ ಅರಣ್ಯದಿಂದ ನಾಲ್ಕು ಚಿರತೆಗಳು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಓಡಾಡುತ್ತಿದ್ದು, ಅರಣ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದು, ಬೋನ್ ಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕೆಂಗೇರಿ, ಕುಂಬಳಗೂಡು, ಉತ್ತರಹಳ್ಳಿ ಹಾಗೂ ದೇವನಹಳ್ಳಿ ಬಳಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಸಿಸಿಟಿವಿಗಳಲ್ಲಿ ಚಿರತೆ ಓಡಾಡುತ್ತಿರುವುದು ಕಂಡು ಬಂದಿದೆ.
ಕೆಂಗೇರಿ ಬಳಿಯ ಜಿಂಕೆಯನ್ನು ಚಿರತೆ ಬೇಟೆಯಾಡಿದ್ದು, ಸ್ಥಳೀಯರು ಸತ್ತಿರುವ ಜಿಂಕೆಯನ್ನು ಪ್ರದರ್ಶಿಸಿದ್ದಾರೆ. ಕೆಂಗೇರಿಯ ಬಿಡಿಎ ಬಡಾವಣೆಗಳ ಬಳಿ ಚಿರತೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿದೆ. ಇದೇ ವೇಳೆ ದೇವನಹಳ್ಳಿಯ ಕಾರ್ಖಾನೆಯೊಂದರ ಬಳಿ ಪತ್ತೆಯಾಗಿದ್ದರೆ,
ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು 5 ಸಿಬ್ಬಂದಿಯ ತಂಡವನ್ನು ರಚಿಸಿದ್ದು, ನಾಯಿ ಮರಿಯನ್ನು ಕಟ್ಟಿಹಾಕಿ ಚಿರತೆಗಳನ್ನು ಬೋನಿಗೆ ಕೆಡವಲು ಕಾರ್ಯಾಚರಣೆ ಆರಂಭವಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


