ಬೆಂಗಳೂರು ನಗರ ಟ್ರಾಫಿಕ್ ನಿರ್ವಹಣೆ ವೈಫಲ್ಯವನ್ನು ನಿವಾರಿಸಲು ರಾಜ್ಯ ಸರ್ಕಾರವು ಟ್ರಾಫಿಕ್ ನಿರ್ವಹಣೆಗಾಗಿ ನಗರ ಪೊಲೀಸ್ ವಿಭಾಗದಲ್ಲಿ ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಿ ಮೊದಲ ಅಧಿಕಾರಿಯಾಗಿ ಎಡಿಜಿಪಿ ಎಂ.ಎ.ಸಲೀಂ ಅವರನ್ನು ನೇಮಕಗೊಳಿಸಿದೆ.
ನಗರ ಪೊಲೀಸ್ ಕಮಿಷನರ್ ಅಧೀನದಲ್ಲಿ ಡಿಐಜಿ ದರ್ಜೆಯ ಐಪಿಎಸ್ ಅಧಿಕಾರಿ ಟ್ರಾಫಿಕ್ ವಿಭಾಗದ ಹೊಣೆ ಹೊತ್ತುಕೊಂಡಿದ್ದರು. ಈವರೆಗೆ ಈ ಹುದ್ದೆ ನಿರ್ವಹಿಸುತ್ತಿದ್ದ ಜಂಟಿ ಪೊಲೀಸ್ ಕಮಿಷನರ್ ಬಿ.ಆರ್.ರವಿಕಾಂತೇಗೌಡ ಅವರನ್ನು ಇದೀಗ ಸಿಐಡಿಯ ಡಿಐಜಿ ಆಗಿ ವರ್ಗಾಯಿಸಲಾಗಿದೆ.ಟ್ರಾಫಿಕ್ ವಿಭಾಗದ ವಿಶೇಷ ಕಮಿಷನರ್ ಆಗಿರುವ ಎಂ.ಎ.ಸಲೀಂ ಅವರು ಈ ಹಿಂದೆ ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿ ಕೆಲಸ ಮಾಡಿದ್ದರು.
11 ಐಪಿಎಸ್ ಅಧಿಕಾರಿಗಳ ವರ್ಗಾವಣೆ: 11 ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಎಂ.ಅಬ್ದುಲ್‌ಸಲೀಂ (ವಿಶೇಷ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ), ಉಮೇಶ್‌ಕುಮಾರ್(ಹೆಚ್ಚುವರಿ ಪೊಲೀಸ್‌ಮಹಾನಿರ್ದೇಶಕ ಆಡಳಿತ ವಿಭಾಗ), ದೇವಜ್ಯೋತಿ ರೇ (ಐಜಿಪಿ, ಕುಂದುಕೊರತೆ ಮತ್ತು ಮಾನವ ಹಕ್ಕುಗಳ ವಿಭಾಗ), ರಮಣ ಗುಪ್ತ (ಜಂಟಿ ಪೊಲೀಸ್‌ಕಮಿಷನರ್, ಗುಪ್ತಚರ ವಿಭಾಗ, ಬೆಂಗಳೂರು ನಗರ), ಬಿ.ಆರ್. ರವಿಕಾಂತೇಗೌಡ (ಡಿಐಜಿ, ಸಿಐಡಿ).ಬಿ.ಎಸ್. ಲೋಕೇಶ್‌ಕುಮಾರ್(ಡಿಐಜಿ, ಬಳ್ಳಾರಿ ವಲಯ), ಚಂದ್ರಗುಪ್ತ– ಡಿಐಜಿ (ಪಶ್ಚಿಮ ವಲಯ, ಮಂಗಳೂರು), ಶರಣಪ್ಪ ಎಸ್.ಡಿ. (ಜಂಟಿ ಕಮಿಷನರ್, ಅಪರಾಧ ವಿಭಾಗ, ಬೆಂಗಳೂರು ನಗರ), ಎಂ.ಎನ್. ಅನುಚೇತ್(ಜಂಟಿ ಕಮಿಷನರ್, ಸಂಚಾರ ವಿಭಾಗ, ಬೆಂಗಳೂರು ನಗರ), ರವಿ ಡಿ. ಚನ್ನಣ್ಣನವರ್(ವ್ಯವಸ್ಥಾಪಕ ನಿರ್ದೇಶಕ, ಕಿಯೋನಿಕ್ಸ್), ಬಿ.ರಮೇಶ್(ಪೊಲೀಸ್‌ಕಮಿಷನರ್, ಮೈಸೂರು ನಗರ).
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


